Viral Video: ಪೊಲೀಸ್ ಅಧಿಕಾರಿಯನ್ನು ಕೊಂದ ಕೈದಿಗೆ ಚುಂಬಿಸಿದ ಜಡ್ಜ್; ವಿಡಿಯೋ ವೈರಲ್

ನ್ಯಾಯಾಧೀಶೆಯಾಗಿರುವ ಮೇರಿಯಲ್ ಸೌರೆಜ್ ಒಂದು ವಾರದ ಹಿಂದೆ ನಡೆದ ವಿಚಾರಣೆಯಲ್ಲಿ ಬೇರೆ ನ್ಯಾಯಮೂರ್ತಿಗಳು ಬುಸ್ಟೋಸ್‌ಗೆ ಜೀವಾವಧಿ ಶಿಕ್ಷೆ ನೀಡುವಂತೆ ಘೋಷಿಸಿದ್ದರೆ ಸೌರೆಜ್ ಮಾತ್ರ ಜೀವಾವಧಿ ಶಿಕ್ಷೆ ನೀಡದಂತೆ ಮತ ಹಾಕಿದ್ದರು.

Viral Video: ಪೊಲೀಸ್ ಅಧಿಕಾರಿಯನ್ನು ಕೊಂದ ಕೈದಿಗೆ ಚುಂಬಿಸಿದ ಜಡ್ಜ್; ವಿಡಿಯೋ ವೈರಲ್
ಕೈದಿಗೆ ಕಿಸ್ ಮಾಡಿದ ಜಡ್ಜ್

ಪೊಲೀಸ್ ಅಧಿಕಾರಿಯನ್ನು ಕೊಂದಿದ್ದಕ್ಕೆ ಶಿಕ್ಷೆಗೊಳಗಾದ ಕೈದಿಯನ್ನು ಅರ್ಜೆಂಟೀನಾದ ನ್ಯಾಯಾಧೀಶೆಯೊಬ್ಬರು ಚುಂಬಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಹರಿದಾಡಿದ ಹಿನ್ನೆಲೆಯಲ್ಲಿ ಈ ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಡೈಲಿ ಮೇಲ್ ಪ್ರಕಾರ, ಮಹಿಳಾ ಜಡ್ಜ್ ಮೇರಿಯಲ್ ಸೌರೆಜ್ ಡಿಸೆಂಬರ್ 29ರಂದು ಜೈಲಿನಲ್ಲಿ ಅಪರಾಧಿ ಕ್ರಿಸ್ಟಿಯನ್ ‘ಮಾಯ್’ ಬುಸ್ಟೋಸ್ ಅನ್ನು ಚುಂಬಿಸುತ್ತಿರುವ ವಿಡಿಯೋ ವೈರಲ್ ಆಗಿದೆ.

ಅಂದಹಾಗೆ, ಚುಬುಟ್ ಪ್ರಾಂತ್ಯದ ನ್ಯಾಯಾಧೀಶೆಯಾಗಿರುವ ಮೇರಿಯಲ್ ಸೌರೆಜ್ ಒಂದು ವಾರದ ಹಿಂದೆ ನಡೆದ ವಿಚಾರಣೆಯಲ್ಲಿ ಬೇರೆ ನ್ಯಾಯಮೂರ್ತಿಗಳು ಬುಸ್ಟೋಸ್‌ಗೆ ಜೀವಾವಧಿ ಶಿಕ್ಷೆ ನೀಡುವಂತೆ ಘೋಷಿಸಿದ್ದರೆ ಸೌರೆಜ್ ಮಾತ್ರ ಬುಸ್ಟೋಸ್​ಗೆ ಜೀವಾವಧಿ ಶಿಕ್ಷೆ ನೀಡದಂತೆ ಮತ ಹಾಕಿದ್ದರು. ಅದರ ಬೆನ್ನಲ್ಲೇ ಇದೀಗ ಅದೇ ಕೈದಿಗೆ ಜಡ್ಜ್​ ಮುತ್ತು ನೀಡುತ್ತಿರುವ ವಿಡಿಯೋ ವೈರಲ್ ಆಗಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ.

2009ರಲ್ಲಿ ಪೋಲೀಸ್ ಅಧಿಕಾರಿ ಲಿಯಾಂಡ್ರೊ ರಾಬರ್ಟ್ಸ್ ಹತ್ಯೆಗೆ ಕ್ರಿಸ್ಟಿಯನ್ ಬುಸ್ಟೋಸ್ ಜೀವಾವಧಿ ಶಿಕ್ಷೆಯನ್ನು ನೀಡಬೇಕೆ ಎಂದು ನಿರ್ಧರಿಸಲು ಮತ ಚಲಾಯಿಸುತ್ತಿದ್ದ ನ್ಯಾಯಾಧೀಶರ ಸಮಿತಿಯ ಭಾಗವಾಗಿ ಜಡ್ಜ್ ಸೌರೆಜ್ ಕೂಡ ಇದ್ದರು. ಆ ಸಮಿತಿಯಲ್ಲಿ ಮೇರಿಯಲ್ ಸೌರೆಜ್ ಆ ಕೈದಿಗೆ ಜೀವಾವಧಿ ಶಿಕ್ಷೆ ನೀಡದಂತೆ ಮತ ಚಲಾಯಿಸಿದ ಏಕೈಕ ನ್ಯಾಯಾಧೀಶರಾಗಿದ್ದರು. ಪೋಲೀಸರಿಗೆ ಮಾರಣಾಂತಿಕವಾಗಿ ಗುಂಡು ಹಾರಿಸಿರುವುದಾಗಿ ಈಗಾಗಲೇ ಒಪ್ಪಿಕೊಂಡಿರುವ ಆರೋಪಿಗೆ ಕಡಿಮೆ ಶಿಕ್ಷೆ ನೀಡಬೇಕೆಂದು ಅವರು ಒತ್ತಾಯಿಸಿದ್ದರು. ಆಕೆಯ ಭಿನ್ನಾಭಿಪ್ರಾಯದ ಮತದ ಹೊರತಾಗಿಯೂ ಅಧಿಕಾರಿ ರಾಬರ್ಟ್ಸ್​ ಅವರನ್ನು ಹತ್ಯೆ ಮಾಡಿದ್ದಕ್ಕೆ ಬುಸ್ಟೋಸ್​ಗೆ ಜೀವಾವಧಿ ಶಿಕ್ಷೆ ಘೋಷಿಸಲಾಗಿತ್ತು.

ನ್ಯಾಯಾಧೀಶರು ಜೈಲಿನಲ್ಲಿ ಕೈದಿ ಬುಸ್ಟೋಸ್​ನನ್ನು ಚುಂಬಿಸುತ್ತಿರುವುದು ಕ್ಯಾಮೆರಾದಲ್ಲ ಸೆರೆಯಾಗಿತ್ತು. ಅವರನ್ನು ಗುರುತಿಸಿದ ಅಧಿಕಾರಿಯೊಬ್ಬರು ಈ ವಿಷಯದ ಕುರಿತು ತನ್ನ ಮೇಲಧಿಕಾರಿಗಳಿಗೆ ವರದಿ ಮಾಡಿದ್ದರು. ಆದರೆ ಜಡ್ಜ್ ಸೌರೆಜ್ ತನ್ನ ಕಡೆಯಿಂದ ಯಾವುದೇ ತಪ್ಪಾಗಿಲ್ಲ ಎಂದು ಹೇಳಿದ್ದಾರೆ.

“ನನಗೆ ಈ ವ್ಯಕ್ತಿಯೊಂದಿಗೆ ಯಾವುದೇ ಭಾವನಾತ್ಮಕ ಸಂಬಂಧವಿಲ್ಲ. ನಾನು ಅವನ ಬಗ್ಗೆ ಪುಸ್ತಕವನ್ನು ಬರೆಯುತ್ತಿದ್ದೇನೆ. ನಮ್ಮ ಸಂಬಂಧವು ಕೆಲಸದ ಸಂಬಂಧವಾಗಿದೆ” ಎಂದು ಆಕೆ ಹೇಳಿದ್ದರು. ಅದೇ ರೀತಿ ಕೈದಿ ಸೌರೆಜ್ ಕೂಡ ತನಗೆ ಜಡ್ಜ್ ಚುಂಬಿಸಿದ ಪ್ರಕರಣವನ್ನು ನಿರಾಕರಿಸಿದ್ದಾರೆ. ನಾವು ಬಹಳ ಕ್ಲೋಸ್ ಆಗಿ ಮಾತನಾಡುತ್ತಿದ್ದೆವು. ಅದನ್ನೇ ತಪ್ಪಾಗಿ ಗ್ರಹಿಸಲಾಗಿದೆ ಎಂದು ಆತ ಹೇಳಿದ್ದಾನೆ.

ಇದನ್ನೂ ಓದಿ: Viral Video: ಬೆಲ್ಲಿ ಡ್ಯಾನ್ಸ್ ಮಾಡಿದ್ದಕ್ಕೆ ಶಾಲೆಯಿಂದ ಸಸ್ಪೆಂಡ್ ಆದ ಟೀಚರ್; ಗಂಡನಿಂದಲೂ ಡೈವೋರ್ಸ್

Viral News: ಕೃಷ್ಣನ ವಿಗ್ರಹದ ಮುರಿದ ಕೈಗೆ ಬ್ಯಾಂಡೇಜ್ ಹಾಕಿ; ಅರ್ಚಕನ ಬೇಡಿಕೆಗೆ ವೈದ್ಯರು ಶಾಕ್!

Published On - 2:22 pm, Thu, 13 January 22

Click on your DTH Provider to Add TV9 Kannada