ಪುಷ್ಪ ಚಿತ್ರದ ಸಾಮಿ ಸಾಮಿ ಹಾಡಿಗೆ ಸಖತ್ ಸ್ಟೆಪ್ ಹಾಕಿದ ಗರ್ಭಿಣಿ: ವಿಡಿಯೋ ವೈರಲ್
ದಿ ಮಾಡರ್ನ್ ಸಿಂಗ್ಸ್ ಎನ್ನುವ ಇನ್ಸ್ಟಾಗ್ರಾಮ್ ಖಾತೆ ಈ ವಿಡಿಯೋವನ್ನು ಹಂಚಿಕೊಂಡಿದೆ. ವಿಡಿಯೋ ನೋಡಿ ನೆಟ್ಟಿಗರು ಮೆಚ್ಚಿಕೊಂಡಿದ್ದು, ಪುಷ್ಪ ಚಿತ್ರದ ಹಾಡಿನ ಕ್ರೇಜ್ ನೋಡಿ ದಂಗಾಗಿದ್ದಾರೆ.
ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ(Rashmika Mandanna) ಹಾಗೂ ಅಲ್ಲು ಅರ್ಜುನ್ (Allu Arjun) ನಟನೆಯ ಪುಷ್ಪ(Pushpa) ಚಿತ್ರದ ಹಾಡುಗಳ ಬಗೆಗಿನ ಕ್ರೇಜ್ ಇನ್ನೂ ಮುಗಿದಿಲ್ಲ. ಚಿತ್ರ ಬಿಡುಗಡೆಯಾಗಿ ಎರಡು ವಾರಗಳೇ ಕಳೆದಿದ್ದರೂ ಹಾಡುಗಳು ಮಾತ್ರ ಇನ್ನೂ ಸಖತ್ ಸುದ್ದಿಯಲ್ಲಿವೆ. ಇದೀಗ ಗರ್ಭಿಣಿಯೊಬ್ಬಳು ಪುಷ್ಟ ಚಿತ್ರದ ಸಾಮಿ ಸಾಮಿ ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಗರ್ಭಿಣಿಯ ಡ್ಯಾನ್ಸ್ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಚಿತ್ರದ ಹಾಡುಗಳು ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಸದ್ದು ಮಾಡುತ್ತಿದೆ ಎನ್ನುವುದಕ್ಕೆ ಈ ವಿಡಿಯೋ ಒಂದು ಉದಾಹರಣೆಯಾಗಿದೆ. ಮಹಿಳೆಯನ್ನು ಆಕ್ಲೆಂಡ್ ಮೂಲದವರೆಂದು ಗುರುತಿಸಲಾಗಿದೆ.
View this post on Instagram
ಅಬ್ಬೆ ಸಿಂಗ್ ಎನ್ನುವ ಈ ಮಹಿಳೆ ಭಾರತದ ಮನಿ ಸಿಂಗ್ ಎನ್ನುವವರನ್ನು ವಿವಾಹವಾಗಿದ್ದರು. ಇದೀಗ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಅಬ್ಬೇ ಅವರು ಪುಷ್ಟ ಚಿತ್ರದ ಹಾಡಿಗೆ ಮಾರುಹೋಗಿದ್ದು, ಪಿಂಕ್ ಕಲರ್ ಗೌನ್ ಹಾಗೂ ಬಿಳಿ ಬಣ್ಣದ ಶೂ ತೊಟ್ಟು ಸಖತ್ ಸ್ಟೆಪ್ ಹಾಕಿದ್ದಾರೆ.
ದಿ ಮಾಡರ್ನ್ ಸಿಂಗ್ಸ್ ಎನ್ನುವ ಇನ್ಸ್ಟಾಗ್ರಾಮ್ ಖಾತೆ ಈ ವಿಡಿಯೋವನ್ನು ಹಂಚಿಕೊಂಡಿದೆ. ವಿಡಿಯೋ ನೋಡಿ ನೆಟ್ಟಿಗರು ಮೆಚ್ಚಿಕೊಂಡಿದ್ದು, ಪುಷ್ಪ ಚಿತ್ರದ ಹಾಡಿನ ಕ್ರೇಜ್ ನೋಡಿ ದಂಗಾಗಿದ್ದಾರೆ. ಸದ್ಯ ವಿಡಿಯೋ 60 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದು, ಮೆಚ್ಚುಗೆಯ ಕಾಮೆಂಟ್ಗಳನ್ನು ಪಡೆದಿದೆ.
ಇದನ್ನೂ ಓದಿ:
ಚಿಕನ್ಪಾಕ್ಸ್ ಲಸಿಕೆ ಸಂಶೋಧಕ ಡಾ.ಮಿಚಿಯಾಕಿ ಜನ್ಮದಿನ: ಡೂಡಲ್ ಮೂಲಕ ಗೂಗಲ್ ಗೌರವ