ಚಿಕನ್ಪಾಕ್ಸ್​ ಲಸಿಕೆ ಸಂಶೋಧಕ ಡಾ.ಮಿಚಿಯಾಕಿ ಜನ್ಮದಿನ: ಡೂಡಲ್​ ಮೂಲಕ ಗೂಗಲ್​ ಗೌರವ

ಚಿಕನ್ಪಾಕ್ಸ್ ರೋಗದ ವಿರುದ್ಧ ಮೊದಲ ಲಸಿಕೆ ಕಂಡುಹಿಡಿದ  ಜಪಾನಿನ ವೈರಲಾಜಿಸ್ಟ್(virologist)​ ಡಾ. ಮಿಚಿಯಾಕಿ ತಕಾಹಶಿ ಅವರ ಜನ್ಮದಿನದವಾದ ಇಂದು (ಫೆ.17) ಗೂಗಲ್​ ವಿಶೇಷ ಡೂಡಲ್ ರಚಿಸಿ ಗೌರವಿಸಿದೆ.

ಚಿಕನ್ಪಾಕ್ಸ್​ ಲಸಿಕೆ ಸಂಶೋಧಕ ಡಾ.ಮಿಚಿಯಾಕಿ ಜನ್ಮದಿನ: ಡೂಡಲ್​ ಮೂಲಕ ಗೂಗಲ್​ ಗೌರವ
ಗೂಗಲ್​ ಡೂಡಲ್​
Follow us
TV9 Web
| Updated By: Pavitra Bhat Jigalemane

Updated on:Feb 17, 2022 | 11:08 AM

ಚಿಕನ್ಪಾಕ್ಸ್ (chickenpox)​ ರೋಗದ ವಿರುದ್ಧ ಮೊದಲ ಲಸಿಕೆ ಕಂಡುಹಿಡಿದ  ಜಪಾನಿನ ವೈರಲಾಜಿಸ್ಟ್(virologist)​ ಡಾ. ಮಿಚಿಯಾಕಿ ತಕಾಹಶಿ(Michiaki Takahashi) ಅವರ ಜನ್ಮದಿನದವಾದ ಇಂದು (ಫೆ.17) ಗೂಗಲ್​ ವಿಶೇಷ ಡೂಡಲ್ (Google Doodle)​ ರಚಿಸಿದೆ. ಡಾ. ಮಿಚಿಯಾಕಿ ಅವರ 94ನೇ ಜನ್ಮದಿನದ ಪ್ರಯುಕ್ತ ಗೂಗಲ್​ ಡೂಡಲ್​ ಮೂಲಕ  ಗೌರವ ಸಲ್ಲಿಸಿದೆ. ಈ ಡೂಡಲ್​ಅನ್ನು ಜಪಾನೀ ಕಲಾವಿದ ಟಟ್ಸುರೊ ಕಿಯುಚಿ ಎನ್ನುವವರು ಚಿತ್ರಿಸಿದ್ದಾರೆ. ಡೂಡಲ್​ನಲ್ಲಿ ಮಿಚಿಯಾಕಿ ಅವರು ಕೆಲಸದಲ್ಲಿ ತೊಡಗಿಕೊಂಡಿರುವುದನ್ನು ಕಾಣಬಹುದು. ಅವರು ಅಧ್ಯಯನಕ್ಕಾಗಿ ಸೂಕ್ಷ್ಮ ದರ್ಶಕ ಬಳಸುತ್ತಿರುವುದು,  ಮಗುವಿನ ತೋಳಿಗೆ ಬ್ಯಾಂಡ್​ ಹಾಕುವುದನ್ನು ಡೂಡಲ್​ನಲ್ಲಿ ಕಾಣಬಹದು.

ಡಾ. ಮಿಚಿಯಾಕಿ 1928ರಲ್ಲಿ ಜಪಾನ್​ನ ಒಸಾಕಾ ನಗರದಲ್ಲಿ ಜನಿಸಿದರು. ಮೈಕ್ರೋಬಿಯಲ್​ ಡಿಸೀಸ್​ ಸಂಶೋಧನಾ ಸಂಸ್ಥೆಗೆ ಸೇರಿ 1959ರಲ್ಲಿ ವೈದ್ಯಕೀಯ ಪದವಿ ಪಡೆದರು.  1974ರಲ್ಲಿ ಇವರು ಚಿಕನ್ಪಾಕ್ಸ್​ಗೆ ಕಾರಣವಾಗುವ ವರಿಸೆಲ್ಲಾ ವೈರಸ್​ಅನ್ನು ತಡೆಗಟ್ಟಲು ಮೊದಲ ಲಸಿಕೆಯನ್ನು ಕಂಡುಹಿಡಿದರು.  ಇಮ್ಯುನೊಕೊಪ್ರೊಮೈಸ್ಡ್​ ರೋಗಿಗಳನ್ನು ಸಂಶೋಧನೆಗೆ ಒಳಪಡಿಸುವ ಮೂಲಕ ಲಸಿಕೆಯ ಪರಿಣಾಮಕತ್ವವನ್ನು ಸಾಬೀತು ಮಾಡಲಾಯಿತು.  ನಂತರ ವಿಶ್ವ ಆರೋಗ್ಯ ಸಂಸ್ಥೆಯು ಅನುಮೋದನೆ ನೀಡಿದ ಬಳಿಕ ಮೈಕ್ರೋಬಿಯಲ್​ ರೋಗಗಳ ಸಂಶೋಧನಾ ಪ್ರತಿಷ್ಠಾನವು 1986ರಲ್ಲಿ ಲಸಿಕೆಯನ್ನು ಬಳಕೆಗೆ ಹೊರತಂದಿತು.

ಜಗತ್ತಿನ 80ಕ್ಕೂ ಹೆಚ್ಚು ದೇಶಗಳು ಚಿಕನ್ಪಾಕ್ಸ್​ಗೆ ಜೀವರಕ್ಷಕವಾಗಿ ಇವರ ಲಸಿಕೆಯನ್ನು ಬಳಸಿಕೊಂಡಿದೆ. ಪ್ರತೀ ವರ್ಷ ಲಕ್ಷಾಂತರ ಮಕ್ಕಳಿಗೆ ಈ ಲಸಿಕೆ ನೀಡಿ ಚಿಕನ್ಪಾನಕ್ಸ್​ನಿಂದ ರಕ್ಷಿಸಲಾಗುತ್ತದೆ. ಡಾ.ಮಿಚಿಯಾಕಿ 2013ರಲ್ಲಿ ನಿಧನರಾದರು.

ಇದನ್ನೂ ಓದಿ:

48 ಗಂಟೆಗಳ ಕಾಲ ಪ್ಲಾಸ್ಟಿಕ್​ ಕ್ಯಾನ್​ನಲ್ಲಿ ತಲೆ ಸಿಲುಕಿ ಒದ್ದಾಡುತ್ತಿದ್ದ ಚಿರತೆ ಮರಿಯ ರಕ್ಷಣೆ

Published On - 11:03 am, Thu, 17 February 22

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್