ತನ್ನಮ್ಮನನ್ನೇ ಬೆಚ್ಚಿಬೀಳಿಸಿದ ಹುಲಿ ಮರಿ: ಕ್ಯೂಟ್ ವಿಡಿಯೋ ವೈರಲ್
ವಿಡಿಯೋ ನೋಡಿದ ಬಳಕೆದಾರರೊಬ್ಬರು, ತಾಯಿ ಹುಲಿ ಮರಿಗೆ ಬೇಟೆಯ ಪ್ರವೃತ್ತಿಯನ್ನು ಹೇಳಿಕೊಡುತ್ತಿದೆ ಎಂದಿದ್ದಾರೆ. ಇನ್ನೂ ಕೆಲವರು ತಾಯಿ ಮತ್ತು ಮರಿಯ ತುಂಟಾಟವನ್ನು ನೋಡಿ ಮೆಚ್ಚುಗೆ ವ್ಯಕ್ಪಡಿಸಿದ್ದಾರೆ.
ತಾಯಿಯೊಂದಿಗಿನ ಬಂಧ ಯಾರಲ್ಲೇ ಆಗಲಿ ಅದು ಅಪರೂಪವಾದದ್ದು, ಮಾನವರೇ ಇರಲಿ, ಪ್ರಾಣಿಗಳೇ ಇರಲಿ ತಾಯಿಯ ಮಗುವಿನ ನಿಷ್ಕಲ್ಮಶ ಪ್ರೀತಿ,ಅವರ ನಡುವಿನ ಬಂಧ, ತುಂಟಾಟ ಚೇಷ್ಟೆಗಳು ಪದಗಳಿಗೆ ನಿಲುಕದ್ದು. ಇಲ್ಲೊಂದು ಬಿಳಿ ಹುಲಿಯ (White Tiger Cub) ಮರಿಯೊಂದು ತಾಯಿಯನ್ನು ಓಡಿಬಂದು ಹೆಸರಿಸುವ ಕ್ಯೂಟ್ ವಿಡಿಯೋ ವೈರಲ್(Viral Video) ಆಗಿದೆ. ಟ್ವಿಟರ್ನಲ್ಲಿ ಇದರ ವಿಡಿಯೋ ಸಖತ್ ವೈರಲ್ ಆಗಿದೆ. Yoda4ever ಎನ್ನುವ ಟ್ವಿಟರ್(Twitter) ಬಳಕೆದಾರರು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋ ಹಂಚಿಕೊಂಡಾಗಿನಿಂದ ಈ ವರೆಗೆ 1 ಮಿಲಿಯನ್ ಗೂ ಹೆಚ್ಚು ವೀಕ್ಷಣೆ ಪಡೆದಿದೆ.
Tiger cub sneaks up on its mom.?? pic.twitter.com/kn7YsZsMpC
— ?o̴g̴ (@Yoda4ever) February 16, 2022
ವಿಡಿಯೋದಲ್ಲಿ ತಾಯಿಯ ಹುಲಿಯೊಂದು ನಿಂತಿರುವುದನ್ನು ಕಾಣಬಹುದು. ಪಕ್ಕದಲ್ಲಿ ಪುಟ್ಟ ಮರಿಯೊಂದು ಬಂದು ದುತ್ತೆಂದು ನಿಲ್ಲುತ್ತದೆ. ಆಗ ತಾಯಿ ಹುಲಿ ಹೆದರಿ ನಿಂತಲ್ಲೇ ಬೀಳುತ್ತದೆ. ಈ ಕ್ಯೂಟ್ ವಿಡಿಯೋ ನೋಡಿ ನೆಟ್ಟಿಗರು ಮನಸೋತಿದ್ದಾರೆ. ವಿಡಿಯೋ ನೋಡಿದ ಬಳಕೆದಾರರೊಬ್ಬರು, ತಾಯಿ ಹುಲಿ ಮರಿಗೆ ಬೇಟೆಯ ಪ್ರವೃತ್ತಿಯನ್ನು ಹೇಳಿಕೊಡುತ್ತಿದೆ ಎಂದಿದ್ದಾರೆ. ಇನ್ನೂ ಕೆಲವರು ತಾಯಿ ಮತ್ತು ಮರಿಯ ತುಂಟಾಟವನ್ನು ನೋಡಿ ಮೆಚ್ಚುಗೆ ವ್ಯಕ್ಪಡಿಸಿದ್ದಾರೆ.
ಇದನ್ನೂ ಓದಿ:
ಪುಷ್ಪ ಚಿತ್ರದ ಸಾಮಿ ಸಾಮಿ ಹಾಡಿಗೆ ಸಖತ್ ಸ್ಟೆಪ್ ಹಾಕಿದ ಗರ್ಭಿಣಿ: ವಿಡಿಯೋ ವೈರಲ್