48 ಗಂಟೆಗಳ ಕಾಲ ಪ್ಲಾಸ್ಟಿಕ್ ಕ್ಯಾನ್ನಲ್ಲಿ ತಲೆ ಸಿಲುಕಿ ಒದ್ದಾಡುತ್ತಿದ್ದ ಚಿರತೆ ಮರಿಯ ರಕ್ಷಣೆ
ಚಿರತೆ ಮರಿಯೊಂದು ಆಕಸ್ಮಿಕವಾಗಿ ನೀರಿನ ಕ್ಯಾನ್ನೊಳಗೆ ತಲೆಯನ್ನು ಸಿಲುಕಿಕೊಂಡು ಬರೋಬ್ಬರಿ 48 ಗಂಟೆಗಳ ಕಾಲ ನೋವನ್ನು ಅನುಭವಿಸಿದ್ದು, ರಕ್ಷಣೆ ಮಾಡಿದ ಘಟನೆ ನಡೆದಿದೆ. ಥಾಣೆ ಜಿಲ್ಲೆಯ ಬದ್ಲಾಪುರ ಗ್ರಾಮದಲ್ಲಿ ಘಟನೆ ನಡೆದಿದೆ.
ಚಿರತೆ ಮರಿಯೊಂದು (Leopard Cube) ಆಕಸ್ಮಿಕವಾಗಿ ನೀರಿನ ಕ್ಯಾನ್( Water Can)ನೊಳಗೆ ತಲೆಯನ್ನು ಸಿಲುಕಿಕೊಂಡು ಬರೋಬ್ಬರಿ 48 ಗಂಟೆಗಳ ಕಾಲ ನೋವನ್ನು ಅನುಭವಿಸಿದ್ದು, ರಕ್ಷಣೆ ಮಾಡಿದ ಘಟನೆ ನಡೆದಿದೆ. ಥಾಣೆ (Thane) ಜಿಲ್ಲೆಯ ಬದ್ಲಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಚಿರತೆಯ ಮರಿಯನ್ನು ಗ್ರಾಮಸ್ಥರು ಮತ್ತು ಅರಣ್ಯ ಅಧಿಕಾರಿಗಳ ಸಹಾಯದಿಂದ ರಕ್ಷಿಸಲಾಗಿದೆ. ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Irresponsible behaviour of tourist and people venturing into forest to party is posing a grave threat to the wild animals. A Leopard with its head stuck inside a plastic jar was spotted near Badlapur in Thane district. @MahaForest has begun the search operation. @AUThackeray pic.twitter.com/2O0CIYcSYT
— Ranjeet Jadhav (@ranjeetnature) February 15, 2022
ಬದ್ಲಾಪುರ ಗ್ರಾಮದ ದಾರಿ ಮಧ್ಯೆ ಚಿರತೆಯ ಮರಿ ನೀರಿನ ಕ್ಯಾನ್ನೊಳಗೆ ತಲೆ ಸಿಲುಕಿ ಒದ್ದಾಡುತ್ತಿರುವುದನ್ನು ಕಂಡು ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಅಧಿಕಾರಿಗಳು ಅದಾಗಲೆ ಉಸಿರಾಡಲು ಕಷ್ಟಪಡುತ್ತಿದ್ದ ಎರಡು ದಿನಗಳಿಂದ ಆಹಾರ ಸೇವಿಸದೆ ನೀರಿನ ಕ್ಯಾನ್ನನೊಳಗೆ ತಲೆಸಿಲುಕಿ ಒದ್ದಾಡುತ್ತಿದ್ದ ಚಿರತೆಯನ್ನು ಕಂಡು ಮೊದಲು ಸೆರೆಹಿಡಿದಿದ್ದಾರೆ. ನಂತರ ಅದನ್ನು ಕಟ್ಟಿ ಹಾಕಿ ತಲೆಗೆ ಸಿಲುಕಿದ್ದ ಪ್ಲಾಸ್ಟಿಕ್ ಕ್ಯಾನ್ಅನ್ನು ಹೊರತೆಗೆದಿದ್ದಾರೆ.
ಚಿರತೆಯನ್ನು ಸೆರೆಹಿಡಿಯಲು ಡಾರ್ಟ್ ಅನ್ನು ಬಳಸಲಾಗಿದೆ. ನಂತರ ಅದರ ತಲೆಗೆ ಸಿಲುಕಿದ್ದ ಕ್ಯಾನ್ನಅನ್ನು ತೆಗೆಯಲಾಗಿದೆ. ಅದು ಗಂಡು ಚಿರತೆಯಾಗಿದೆ. ಆಹಾರವಿಲ್ಲದೆ ದಣಿದ ಚಿರತೆಗೆ ಚಿಕಿತ್ಸೆ ನೀಡಿ ಕಾಡಿಗೆ ಬಿಡಲಾಗುವುದು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ಚಿರತೆ ಪ್ಲಾಸ್ಟಿಕ್ ಕ್ಯಾನ್ನಲ್ಲಿ ಸಿಲುಕಿ ಒದ್ದಾಡುತ್ತಿರುವ ಹಾಗೂ ಅರಣ್ಯ ಅಧಿಕಾರಿಗಳನ್ನು ಅದನ್ನು ರಕ್ಷಣೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರ ವೀಡಿಯೋವನ್ನು ರಂಜೀತ್ ಜಾದವ್ ಎನ್ನುವವರು ಹಂಚಿಕೊಂಡಿದ್ದು, ಚಿರತೆ ಮರಿಯನ್ನು ರಕ್ಷಿಸಿದ್ದಕ್ಕೆ ನೆ್ಟ್ಟಿಗರು ಶ್ಲಾಘಿಸಿದ್ದಾರೆ.
ಇದನ್ನೂ ಓದಿ:
Viral News: 42 ಲಕ್ಷ ರೂ. ವೆಚ್ಚದಲ್ಲಿ ಕೃಷ್ಣನ ದೇವಸ್ಥಾನ ಕಟ್ಟಿಸಿ ಸಾಮರಸ್ಯ ಮೆರೆದ ಮುಸ್ಲಿಂ ಉದ್ಯಮಿ