Viral Video: ನರಿಗಾಗಿ ಬ್ಯಾಂಜೋ ವಾದ್ಯ ನುಡಿಸಿದ ಯುವಕ: ತಲೆಯಲ್ಲಾಡಿಸುತ್ತಾ ಆನಂದಿಸಿದ ನರಿ

ಇಲ್ಲೊಬ್ಬ ಯುವಕ ಬ್ಯಾಂಜೊ ಎನ್ನುವ ತಂತಿ ವಾದ್ಯವನ್ನು ನರಿಗೋಸ್ಕರ ನುಡಿಸಿದ್ದಾನೆ. ಮರದ ವಾದ್ಯದಲ್ಲಿ ವ್ಯಕ್ತಿ ನರಿಗೋಸ್ಕರ ಸಂಗೀತ ನುಡಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ.

Viral Video: ನರಿಗಾಗಿ ಬ್ಯಾಂಜೋ ವಾದ್ಯ ನುಡಿಸಿದ ಯುವಕ: ತಲೆಯಲ್ಲಾಡಿಸುತ್ತಾ ಆನಂದಿಸಿದ ನರಿ
ಸಂಗೀತ ಕೇಳುತ್ತಿರುವ ನರಿ
Follow us
TV9 Web
| Updated By: Pavitra Bhat Jigalemane

Updated on: Feb 16, 2022 | 5:15 PM

ಸಂಗೀತಕ್ಕೆ(Music) ಒಲಿಯದ ಜೀವವಿಲ್ಲ. ಮನಸೋಲದ  ಜೀವಿಯಿಲ್ಲ. ಹೌದು ಸಂಗೀತ ಎಂತಹವರನ್ನು ಬೇಕಾದರೂ ಆಕರ್ಷಿಸುವ ಶಕ್ತಿ ಹೊಂದಿದೆ. ಪ್ರಾಣಿಗಳನ್ನೂ ಸೆಳೆಯುವ ಗುಣ ಸಂಗೀತಕ್ಕಿದೆ. ಇಲ್ಲೊಬ್ಬ ಯುವಕ ಬ್ಯಾಂಜೊ (Banjo) ಎನ್ನುವ ತಂತಿ ವಾದ್ಯವನ್ನು ನರಿ (Fox)ಗೋಸ್ಕರ ನುಡಿಸಿದ್ದಾನೆ. ಮರದ ವಾದ್ಯದಲ್ಲಿ ವ್ಯಕ್ತಿ ನರಿಗೋಸ್ಕರ ಸಂಗೀತ ನುಡಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ಈ ಘಟನೆ ಕೊಲಾರಾಡೋದಲ್ಲಿ(Colorado) ನಡೆದಿದೆ. ಇದರ ವಿಡಿಯೋ ನೋಡಿ ನೆಟ್ಟಿಗರು ದಂಗಾಗಿದ್ದಾರೆ.

View this post on Instagram

A post shared by Good News Dog (@goodnewsdog)

ವಿಡಿಯೋವನ್ನು ಗುಡ್​ ನ್ಯೂಸ್​ ಮೂವ್​​ಮೆಂಟ್​ ಹಂಚಿಕೊಂಡಿದೆ. ಆ್ಯಂಡಿ ಥ್ರೋನ್​ ಎನ್ನುವ ವ್ಯಕ್ತಿ ಗುಡ್ಡದ ಮೇಲೆ ನಿಂತು ಬ್ಯಾಂಜೊ ನುಡಿಸಿದ್ದಾರೆ. ವಿಡಿಯೋದಲ್ಲಿ ವ್ಯಕ್ತಿ ಬ್ಯಾಂಜೊವನ್ನು ಗುಡ್ದದ ಮೇಲೆ ನಿಂತು  ನುಡಿಸುವುದನ್ನು ಕಾಣಬಹುದು. ಈ ವೇಳೆ ನರಿ ತಲೆಯಾಡಿಸುತ್ತಾ ಆತನ ಎದುರು ನಿಲ್ಲುವುದನ್ನು ಕಾಣಬಹುದು. ವಿಡಿಯೋ ನೋಡಿ ಇನ್ಸ್ಟಾಗ್ರಾಮ್ ಬಳಕೆದಾರರು ಪುಳಕಗೊಂಡಿದ್ದಾರೆ.  ಸದ್ಯ ಸಾಮಾಜಿಕ ಜಾಲತಾಣದ ಬಳಕೆದಾರರ ಮನಗೆದ್ದ ವಿಡಿಯೋ 9.5 ಮಿಲಿಯನ್​ ವೀಕ್ಷಣೆ ಪಡೆದಿದೆ.

ಈ ಹಿಂದೆ ಮೃಗಾಲಯವೊಂದರಲ್ಲಿ ಮಹಿಳೆಯೊಬ್ಬರು ವಯಲಿನ್​ ನುಡಿಸುತ್ತಾ ಕುಳಿತುಕೊಂಡಾಗ ಆಕೆಯ ಸುತ್ತಲೂ ಜಿಂಕೆಗಳು ಬಂದು ನಿಲ್ಲುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ನರಿಗಾಗಿ ಸಂಗೀತ ನುಡಿಸಿದ ವಿಡಿಯೋ ವೈರಲ್​ ಆಗಿದೆ.

ಇದನ್ನೂ ಓದಿ:

Video: ಪ್ಲಾಸ್ಟಿಕ್​, ಪೇಪರ್​​ನಿಂದ ತಯಾರಿಸಿದ ಕೃತಕ ಮೀನಿಗೆ ಮಾನವ ಹೃದಯ ಸ್ನಾಯು ಜೀವಕೋಶ; ಪಟಪಟನೆ ಬಾಲ ಬಡಿಯುವ ಫಿಶ್​ ಇಲ್ಲಿದೆ ನೋಡಿ !

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್