AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದ್ದಕ್ಕಿದ್ದ ಹಾಗೆ ಆಗಸದಿಂದ ನೆಲಕ್ಕೆ ಬಿದ್ದ ನೂರಾರು ಹಕ್ಕಿಗಳು: ವಿಡಿಯೋ ವೈರಲ್​

ಇದಕ್ಕಿದ್ದ ಹಾಗೇ ನೂರಾರು ಪಕ್ಷಿಗಳು ಆಕಾಶದಿಂದ ನೆಲಕ್ಕೆ ಬಿದ್ದ  ಘಟನೆ ಮೆಕ್ಸಿಕನ್​ ನಗರದಲ್ಲಿ ನಡೆದಿದೆ. ಹಳದಿ ಬಣ್ಣದ ತಲೆಯುಳ್ಳ ಕಪ್ಪು ಹಕ್ಕಿಗಳ ಹಿಂಡು ಒಂದೇ ಸಲಕ್ಕೆ ನೆಲಕ್ಕೆ ಬಿದ್ದಿವೆ. ಇದರ ವಿಡಿಯೋ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಇದ್ದಕ್ಕಿದ್ದ ಹಾಗೆ ಆಗಸದಿಂದ ನೆಲಕ್ಕೆ ಬಿದ್ದ ನೂರಾರು ಹಕ್ಕಿಗಳು: ವಿಡಿಯೋ ವೈರಲ್​
TV9 Web
| Updated By: Pavitra Bhat Jigalemane|

Updated on: Feb 16, 2022 | 1:46 PM

Share

ಇದಕ್ಕಿದ್ದ ಹಾಗೇ ನೂರಾರು ಪಕ್ಷಿಗಳು (Birds) ಆಕಾಶದಿಂದ ನೆಲಕ್ಕೆ ಬಿದ್ದ  ಘಟನೆ ಮೆಕ್ಸಿಕನ್ (Mexican)​ ನಗರದಲ್ಲಿ ನಡೆದಿದೆ. ಹಳದಿ ಬಣ್ಣದ ತಲೆಯುಳ್ಳ ಕಪ್ಪು ಹಕ್ಕಿಗಳ ಹಿಂಡು ಒಂದೇ ಸಲಕ್ಕೆ ನೆಲಕ್ಕೆ ಬಿದ್ದಿವೆ. ಇದರ ವಿಡಿಯೋ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.  ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಸದ್ಯ ನೂರಾರು ಹಕ್ಕಿಗಳು ಒಮ್ಮೆಲೆ ಬೀಳುವ ಭಯಾನಕ ವಿಡಿಯೋ ವೈರಲ್ (Video Viral)  ಆಗಿದೆ. ಪಕ್ಷಿಗಳ ಹಿಂಡು ಒಂದೇ ಸಲಕ್ಕೆ ಭೂಮಿಗೆ ಬಿದ್ದ ಪರಿಣಾಮ ಹಲವಾರು ಹಕ್ಕಿಗಳು ಸಾವನ್ನಪ್ಪಿವೆ ಎಂದು ಹೇಳಲಾಗಿದೆ.

ಫೆ.7ರಂದು ಓ ಘಟನೆ ನಡೆದಿದ್ದು, ರಸ್ತೆ ಬದಿಯಲ್ಲಿ ಪಕ್ಷಿಗಳು ಮೃತಪಟ್ಟು ಬಿದ್ದಿರುವುದು ಕಾಣಸಿಗುತ್ತಿದ್ದವು ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಅಲ್ಲದೆ 100ಕ್ಕೂ ಪಕ್ಷಿಗಳ ಮೃತದೇಹ ದೊರಕಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. 5ಜಿ ತಂತ್ರಜ್ಞಾನವೇ ಈ ರೀತಿ ಪಕ್ಷಿಗಳ ಮಾರಣಹೋಮ ನಡೆಯಲು ಕಾರಣ ಎಂದು  ಹಲವರು ದೂರಿದ್ದಾರೆ.ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ವಿಜ್ಞಾನಿಗಳು ಪಕ್ಷಿಗಳ ಸಾವಿಗೆ ಕಾರಣ ಹುಡುಕುತ್ತಿದ್ದಾರೆ. ಈ ಕುರಿತು ರಾಯಿಟರ್ಸ್​ ಸುದ್ದಿ ಸಂಸ್ಥೆ ವಿಡಿಯೋವನ್ನು ಹಂಚಿಕೊಂಡಿದೆ.

ಈ ಕುರಿತು ಮೆಕ್ಸಿಕೋದ ಪರಿಸರಶಾಸ್ತ್ರಜ್ಞ ಡಾ. ರಿಚರ್ಡ್​ ಮಾತನಾಡಿ, ಗಿಡುಗದಂತಹ ದೈತ್ಯ ಪಕ್ಷಿ ಈ ಹಕ್ಕಿಗಳ ಹಿಂಡನ್ನು ಅಟ್ಟಿಸಿಕೊಂಡು ಬಂದ ಕಾರಣ ಈ ರೀತಿ ಆಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಒದಿ:

Viral Video: ಕಚ್ಚಾ ಬಾದಮ್ ಹಾಡಿಗೆ ನೃತ್ಯ ಮಾಡಿದ ‘ದಿ ಗ್ರೇಟ್ ಖಲಿ’; ವೈರಲ್​ ವಿಡಿಯೋ ಕಂಡು ನೆಟ್ಟಿಗರು ಹೇಳಿದ್ದೇನು ಗೊತ್ತಾ?