AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕಚ್ಚಾ ಬಾದಮ್ ಹಾಡಿಗೆ ನೃತ್ಯ ಮಾಡಿದ ‘ದಿ ಗ್ರೇಟ್ ಖಲಿ’; ವೈರಲ್​ ವಿಡಿಯೋ ಕಂಡು ನೆಟ್ಟಿಗರು ಹೇಳಿದ್ದೇನು ಗೊತ್ತಾ?

ಇತ್ತೀಚೆಗಷ್ಟೇ ಬಿಡುಗಡೆಯಾದ ಕಚ್ಚಾ ಬಾದಮ್ ಹಾಡು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್​ ಸೃಷ್ಟಿ ಮಾಡಿದೆ. ಈ ಹಾಡಿಗೆ ದೊಡ್ಡ ದೊಡ್ಡ ಸ್ಟಾರ್​ಗಳು ಕೂಡ ನೃತ್ಯ ಮಾಡಿದ್ದಾರೆ. ಸದ್ಯ ಖಲಿ ಕೂಡ ಈ ಹಾಡಿಗೆ ಮನಸೋತಿದ್ದಾರೆ. ತಮ್ಮದೇ ಶೈಲಿಯಲ್ಲಿ ಕಚ್ಚಾ ಬಾದಮ್​ ಹಾಡಿಗೆ ನೃತ್ಯ ಮಾಡಿರುವ ಖಲಿ, ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

Viral Video: ಕಚ್ಚಾ ಬಾದಮ್ ಹಾಡಿಗೆ ನೃತ್ಯ ಮಾಡಿದ 'ದಿ ಗ್ರೇಟ್ ಖಲಿ'; ವೈರಲ್​ ವಿಡಿಯೋ ಕಂಡು ನೆಟ್ಟಿಗರು ಹೇಳಿದ್ದೇನು ಗೊತ್ತಾ?
ದಿ ಗ್ರೇಟ್ ಖಲಿ
TV9 Web
| Updated By: preethi shettigar|

Updated on:Feb 16, 2022 | 12:26 PM

Share

ಡಬ್ಲ್ಯುಡಬ್ಲ್ಯುಇ(WWE) ಮಾಜಿ ಕುಸ್ತಿಪಟು ದಿ ಗ್ರೇಟ್ ಖಲಿ ಸದ್ಯ ಕಚ್ಚಾ ಬಾದಮ್ ಹಾಡಿಗೆ ಹೆಜ್ಜೆ ಹಾಕಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಕಚ್ಚಾ ಬಾದಮ್ ಹಾಡು ಸದ್ಯ ಎಲ್ಲೆಡೆ ವೈರಲ್(Viral)​ ಆಗುತ್ತಿದ್ದು, ಸೆಲೆಬ್ರಿಟಿಗಳಿಂದ ಹಿಡಿದು ಪ್ರತಿಯೊಬ್ಬರು ಈ ಹಾಡಿಗೆ ನೃತ್ಯ ಮಾಡುತ್ತಿದ್ದಾರೆ. ಅದರಂತೆ ದಲೀಪ್ ಸಿಂಗ್ ರಾಣಾ ಕೂಡ ಈ ಟ್ರೆಂಡ್​ ಅನ್ನು ಫಾಲೋ ಮಾಡಿದ್ದಾರೆ. ಮಾಜಿ ಕುಸ್ತಿಪಟು ದಲೀಪ್ ಸಿಂಗ್ ರಾಣಾ (ದಿ ಗ್ರೇಟ್ ಖಲಿ) ಕಳೆದ ಗುರುವಾರ (ಫೆಬ್ರವರಿ 10) ಭಾರತೀಯ ಜನತಾ ಪಕ್ಷಕ್ಕೆ (BJP) ಸೇರಿದ್ದಾರೆ. ಪಂಜಾಬ್ ವಿಧಾನಸಭಾ ಚುನಾವಣೆಗೆ ಕೆಲ ದಿನಗಳಿರುವಾಗ ಖಲಿ ಅವರನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಂಡಿದ್ದು, ಪಂಜಾಬ್ ಚುನಾವಣೆಯಲ್ಲಿ ಟಿಕೆಟ್ ನೀಡಬಹುದು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಇತ್ತೀಚೆಗಷ್ಟೇ ಬಿಡುಗಡೆಯಾದ ಕಚ್ಚಾ ಬಾದಮ್ ಹಾಡು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್​ ಸೃಷ್ಟಿ ಮಾಡಿದೆ. ಈ ಹಾಡಿಗೆ ದೊಡ್ಡ ದೊಡ್ಡ ಸ್ಟಾರ್​ಗಳು ಕೂಡ ನೃತ್ಯ ಮಾಡಿದ್ದಾರೆ. ಸದ್ಯ ಖಲಿ ಕೂಡ ಈ ಹಾಡಿಗೆ ಮನಸೋತಿದ್ದಾರೆ. ತಮ್ಮದೇ ಶೈಲಿಯಲ್ಲಿ ಕಚ್ಚಾ ಬಾದಮ್​ ಹಾಡಿಗೆ ನೃತ್ಯ ಮಾಡಿರುವ ಖಲಿ, ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಖಲಿಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದ್ದು, 1.25 ಲಕ್ಷಕ್ಕೂ ಹೆಚ್ಚು ಮಂದಿ ಇದನ್ನು ಲೈಕ್ ಮಾಡಿದ್ದಾರೆ. ಈ ವೀಡಿಯೊದಲ್ಲಿ ಖಲಿ ಸೂಟ್ ಮತ್ತು ಕ್ಯಾಪ್ ಧರಿಸಿ ಹಾಸಿಗೆಯ ಮೇಲೆ ಮಲಗಿ ನೃತ್ಯ ಆರಂಭ ಮಾಡಿದ್ದು, ಕೊನೆಗೆ ಹಾಸಿಗೆ ಮೇಲೆ ಕುಳಿತು ಲಿಪಿ ಸಿಂಕ್​ ಮಾಡಿದ್ದಾರೆ.

ಖಲಿ ಮಾತ್ರವಲ್ಲ, ಈ ಮೊದಲು ಬಾಲಿವುಡ್‌ನ ಖ್ಯಾತ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಕೂಡ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇನ್ನೂ ಶೂಟರ್ ದಾಡಿ ಎಂದು ಜನಪ್ರಿಯವಾಗಿರುವ ಪ್ರಕಾಶಿ ತೋಮರ್ ಅವರು ತಮ್ಮ ಮೊಮ್ಮಗಳ ಜೊತೆ ಈ ಹಾಡಿಗೆ ನೃತ್ಯ ಮಾಡಿದ್ದಾರೆ. ಸದ್ಯ ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ಟಾಪ್ ಟ್ರೆಂಡ್​ನಲ್ಲಿದೆ. ಪಶ್ಚಿಮ ಬಂಗಾಳದ ಭೂಬನ್ ಬಡ್ಯಾಕರ್ ಎಂಬ ಸರಳ ಕಡಲೆಕಾಯಿ ಮಾರಾಟಗಾರ ಹಾಡಿರುವ ‘ಕಚ್ಚಾ ಬಾದಮ್’ ಹಾಡು ರಾತ್ರೋರಾತ್ರಿ ಜನಪ್ರಿಯವಾಗಿದೆ.

ಇದನ್ನೂ ಓದಿ: ಮತ್ತೆ ಭಾರತೀಯರ ಕೆಂಗಣ್ಣಿಗೆ ಗುರಿಯಾದ ಅಮೇಜಾನ್​; ಟ್ವಿಟರ್​ನಲ್ಲಿ ಟ್ರೆಂಡ್​ ಆಗ್ತಿದೆ Boycott Amazon ಹ್ಯಾಷ್​ಟ್ಯಾಗ್

Viral News: ವಧು-ವರರ ಜೊತೆ ಫೋಟೋ ತೆಗೆಸಿಕೊಳ್ಳಲು ಹೋಗಿ ಮದುವೆ ಮಂಟಪದಿಂದ ಹಣ, ಒಡವೆ ಕದ್ದ ಕಳ್ಳ!

Published On - 12:14 pm, Wed, 16 February 22