Viral Video: ‘ಕೆ ಹೆಂಡಿ ಹುಂಡಿ ಸಿ’ ಹಾಡಿಗೆ ನೃತ್ಯ ಮಾಡಿದ ಗಗನಸಖಿ; ವಿಡಿಯೋ ಕಂಡು ನೆಟ್ಟಿಗರು ಹೇಳಿದ್ದೇನು ಗೊತ್ತಾ?​

ಗಗನಸಖಿ ಉಮಾ ಮೀನಾಕ್ಷಿ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಕೆ ಹೆಂಡಿ ಹುಂಡಿ ಸಿ ಹಾಡಿಗೆ ನೃತ್ಯ ಮಾಡಿದ್ದು, ದಿಲ್ ತೇರಾ ಜಬ್ ಟುಟುಗಾ ಟು ಪಟಾ ಲಗುಗಾ ಎಂಬ ಶಿರ್ಷಿಕೆಯೊಂದಿಗೆ ಉಮಾ ವಿಡಿಯೋ ಹಂಚಿಕೊಂಡಿದ್ದಾರೆ.

Viral Video: 'ಕೆ ಹೆಂಡಿ ಹುಂಡಿ ಸಿ' ಹಾಡಿಗೆ ನೃತ್ಯ ಮಾಡಿದ ಗಗನಸಖಿ; ವಿಡಿಯೋ ಕಂಡು ನೆಟ್ಟಿಗರು ಹೇಳಿದ್ದೇನು ಗೊತ್ತಾ?​
ಗಗನಸಖಿ ಉಮಾ ಮೀನಾಕ್ಷಿ
Follow us
TV9 Web
| Updated By: preethi shettigar

Updated on:Feb 14, 2022 | 1:00 PM

ಸಾಮಾಜಿಕ ಜಾಲತಾಣಗಳಲ್ಲಿ(Social media) ಒಂದಿಲ್ಲಾ ಒಂದು ವಿಡಿಯೋ ವೈರಲ್(Viral video)​ ಆಗುತ್ತಲೇ ಇರುತ್ತದೆ. ಈ ಹಿಂದೆ ಖಾಲಿ ವಿಮಾನದಲ್ಲಿ ಮನಿಕೆ ಮಗೆ ಹಿತೆಗೆ ಹಾಡಿಗೆ ನೃತ್ಯ ಮಾಡಿ ಇಂಡಿಗೋ ಗಗನಸಖಿ ವೈರಲ್ ಆಗಿದ್ದರು. ಅಲ್ಲಿಂದೀಚೆಗೆ ಇದು ಒಂದು ಟ್ರೆಂಡ್(Trend) ಆಗಿ ಮಾರ್ಪಟ್ಟಿದೆ. ಏಕೆಂದರೆ ಗಗನಸಖಿಯರು ಜನಪ್ರಿಯ ಹಾಡುಗಳಿಗೆ ನೃತ್ಯ ಮಾಡುವ ಹಲವಾರು ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳಲು ಆರಂಭವಾಗಿದೆ. ಸದ್ಯ ಈ ಟ್ರೆಂಡ್‌ಗೆ ಅನುಗುಣವಾಗಿ, ಸ್ಪೈಸ್‌ಜೆಟ್ ಗಗನಸಖಿ ಉಮಾ ಮೀನಾಕ್ಷಿ ಅವರು ತಮ್ಮ ನೃತ್ಯದ ವಿಡಿಯೋ ಪೋಸ್ಟ್​ ಮಾಡಿದ್ದಾರೆ. ಈ ಹಿಂದೆ ಕೂಡ ಉಮಾ ಮೀನಾಕ್ಷಿ ಅನೇಕ ಹಾಡುಗಳಿಗೆ ನೃತ್ಯ ಮಾಡಿ ವೈರಲ್ ಆಗಿದ್ದರು. ಸದ್ಯ ವಿಮಾನ ನಿಲ್ದಾಣದಲ್ಲಿ ಎಪಿ ಧಿಲ್ಲೋನ್ ಅವರ ಎಕ್ಸ್‌ಕ್ಯೂಸಸ್ ಹಾಡಿಗೆ ನೃತ್ಯ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಗಗನಸಖಿ ಉಮಾ ಮೀನಾಕ್ಷಿ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಕೆ ಹೆಂಡಿ ಹುಂಡಿ ಸಿ ಹಾಡಿಗೆ ನೃತ್ಯ ಮಾಡಿದ್ದು, ದಿಲ್ ತೇರಾ ಜಬ್ ಟುಟುಗಾ ಟು ಪಟಾ ಲಗುಗಾ ಎಂಬ ಶಿರ್ಷಿಕೆಯೊಂದಿಗೆ ಉಮಾ ವಿಡಿಯೋ ಹಂಚಿಕೊಂಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಜತೆಗೆ ಹೊಸ ಟ್ರೆಂಡ್ ಅನ್ನು ಪ್ರಾರಂಭಿಸಿದೆ.

ವೀಡಿಯೊದಲ್ಲಿ ಗಗನಸಖಿ ಉಮಾ ಮೀನಾಕ್ಷಿ ಅವರು ಅತ್ಯಂತ ಆತ್ಮವಿಶ್ವಾಸದಿಂದ ವಿಮಾನ ನಿಲ್ದಾಣದಲ್ಲಿ ರ್ಯಾಪರ್ ಹಾಡಿಗೆ ನೃತ್ಯ ಮಾಡುತ್ತಿದ್ದಾರೆ. ತನ್ನ ಕೆಂಪು ಸಮವಸ್ತ್ರವನ್ನು ಧರಿಸಿಯೇ ಹಾಡಿಗೆ ತಕ್ಕಂತೆ ಹೆಜ್ಜೆ ಹಾಕಿದ್ದಾರೆ.

View this post on Instagram

A post shared by UMA MEENAKSHI (@yamtha.uma)

ವೀಡಿಯೊ ವೈರಲ್ ಆಗಿದ್ದು, 1.3 ಮಿಲಿಯನ್ ವ್ಯೂವ್ಸ್​ ಆಗಿದೆ. ಅನೇಕರು ತಮ್ಮ ಕಮೆಂಟ್​ ಮೂಲಕ ಈ ವಿಡಿಯೋಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ನೆಟ್ಟಿಗರು ಉಮಾ ಅವರ ನೃತ್ಯವನ್ನು ಇಷ್ಟಪಟಿದ್ದಾರೆ. ಅದ್ಭುತ ನೃತ್ಯ ಎಂದು ಒಬ್ಬರು ಕಮೆಂಟ್​ ಮಾಡಿದರೆ, ತುಂಬಾ ತುಂಬಾ ಚೆನ್ನಾಗಿದೆ ಎಂದು ಮತ್ತೊಬ್ಬರು ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ:

Viral Video: ಸಲೂನ್​ಗೆ ಬಂದ ಕೋತಿ ಟ್ರಿಮ್ಮರ್​ಗೆ ಮುಖವೊಡ್ಡಿದ ವೈರಲ್​ ವಿಡಿಯೋ ನೋಡಿ

Viral Video: ವಿದ್ಯಾರ್ಥಿನಿಯ ಮಗುವನ್ನು ಎತ್ತಿಕೊಂಡು ಪಾಠ ಮಾಡಿದ ಪ್ರೊಪೆಸರ್​: ವಾವ್​​ ಎಂದ ನೆಟ್ಟಿಗರು

Published On - 12:59 pm, Mon, 14 February 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್