AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ವಿದ್ಯಾರ್ಥಿನಿಯ ಮಗುವನ್ನು ಎತ್ತಿಕೊಂಡು ಪಾಠ ಮಾಡಿದ ಪ್ರೊಪೆಸರ್​: ವಾವ್​​ ಎಂದ ನೆಟ್ಟಿಗರು

ವಿಡಿಯೋದಲ್ಲಿ ಪ್ರೊಪೆಸರ್​ ಒಬ್ಬರು ತಮ್ಮ ವಿದ್ಯಾರ್ಥಿನಿಯ ಪುಟ್ಟ ಮಗುವನ್ನು ಎತ್ತಿಕೊಂಡು ಬೋರ್ಡ್​ ನೋಡುತ್ತಾ ವಿವರಿಸುತ್ತಿರುವುದನ್ನು ಕಾಣಬಹುದು. ಈ ವೇಳೆ ವಿದ್ಯಾರ್ಥಿನಿ ಆರಾಮವಾಗಿ ಕುಳಿತು ನೋಟ್ಸ್​ ಬರೆದುಕೊಳ್ಳುತ್ತಿದ್ದಳು ಎನ್ನಲಾಗಿದೆ.

Viral Video: ವಿದ್ಯಾರ್ಥಿನಿಯ ಮಗುವನ್ನು ಎತ್ತಿಕೊಂಡು ಪಾಠ ಮಾಡಿದ ಪ್ರೊಪೆಸರ್​: ವಾವ್​​ ಎಂದ ನೆಟ್ಟಿಗರು
ಮಗುವನ್ನು ಎತ್ತಿಕೊಂಡಿರುವ ಪ್ರೊಪೆಸರ್​
TV9 Web
| Edited By: |

Updated on: Feb 08, 2022 | 4:09 PM

Share

ಕೆಲವು ದಿನಗಳ ಹಿಂದೆ ಟಿವಿ ಆ್ಯಂಕರ್ (Anchor)​ ಒಬ್ಬರು ತಮ್ಮ 3 ತಿಂಗಳ ಮಗುವನ್ನು ಎತ್ತಿಕೊಂಡು ನೇರಪ್ರಸಾರ ಕಾರ್ಯಕ್ರಮದಲ್ಲಿ ಹವಾಮಾನ ವರದಿ ನೀಡಿದ ಘಟನೆಯ ವಿಡಿಯೋ ವೈರಲ್​ ಆಗಿತ್ತು. ಅದರ ಬಳಿಕ ಈಗ ಕಾಲೇಜಿನ ಪ್ರೊಪೆಸರ್ (Professor)​ ಒಬ್ಬರು ತಮ್ಮ ವಿದ್ಯಾರ್ಥಿನಿಯ ಪುಟ್ಟ ಮಗುವನ್ನು ಎತ್ತಿಕೊಂಡು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿರುವ ವಿಡಿಯೋ ವೈರಲ್​ ಆಗಿದೆ ಸದ್ಯ ವಿಡಿಯೋವನ್ನು ಮಹಿಳೆಯೊಬ್ಬರು ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್​ನಲ್ಲಿ (Instagram) ವಿಡಿಯೋ ವೈರಲ್​ ಆಗಿದೆ.

ವಿಡಿಯೋದಲ್ಲಿ ಪ್ರೊಪೆಸರ್​ ಒಬ್ಬರು ತಮ್ಮ ವಿದ್ಯಾರ್ಥಿನಿಯ ಪುಟ್ಟ ಮಗುವನ್ನು ಎತ್ತಿಕೊಂಡು ಬೋರ್ಡ್​ ನೋಡುತ್ತಾ ವಿವರಿಸುತ್ತಿರುವುದನ್ನು ಕಾಣಬಹುದು. ಈ ವೇಳೆ ವಿದ್ಯಾರ್ಥಿನಿ ಆರಾಮವಾಗಿ ಕುಳಿತು ನೋಟ್ಸ್​ ಬರೆದುಕೊಳ್ಳುತ್ತಿದ್ದಳು ಎನ್ನಲಾಗಿದೆ. ಮಗು ಕೂಡ ಪ್ರೊಪೆಸರ್​ ಮುಖವನ್ನು ಪುಟ್ಟ ಕೈಗಳಿಂದ ಮುಟ್ಟುತ್ತಿರುವುದನ್ನು ಕಾಣಬಹುದು. ಇನ್ನು ಹಿಂದೂಸ್ತಾನ್​ ಟೈಮ್ಸ್​ ವರದಿಯ ಪ್ರಕಾರ, ಪ್ರೊಪೆಸರ್​ ಮಗುವನ್ನು ಸಂಬಾಳಿಸಿಕೊಂಡು, ವಿದ್ಯಾರ್ಥಿಗಳನ್ನು ತಮ್ಮ ಪಾಠದೆಡೆಗೆ ಸೆಳೆದುಕೊಂಡು, ವಿದ್ಯಾರ್ಥಿನಿ ಪಾಠದೆಡೆಗೆ ಗಮನ ನೀಡುವಂತೆ ತರಗತಿಯನ್ನು ಮುಂದುವರೆಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ವಿಡಿಯೋವನ್ನು ಹಂಚಿಕೊಂಡು ಕೆಲವು ದಿನಗಳಾಗಿದ್ದು 5 ಲಕ್ಷಕ್ಕೂ ಹೆಚ್ಚು ಲೈಕ್ಸ್​ಗಳನ್ನು ಗಳಿಸಿದೆ. ವಿಡಿಯೋ ನೋಡಿ ನೆಟ್ಟಿಗರು  ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಇದು ನಂಬಲಸಾಧ್ಯ ಎಂದು ಕಾಮೆಂಟ್​ ಮಾಡಿದರೆ ಇನ್ನು ಕೆಲವರು,  ಪ್ರೊಪೆಸೆರ್​ ಅವರು ವಿದ್ಯಾರ್ಥಿನಿಯ ಮಗುವನ್ನು ಎತ್ತಿಕೊಂಡು ಗಡಿಬಿಡಿಯಿಲ್ಲದೆ ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ಮಾಡುತ್ತಿರುವುದಕ್ಕೆ ಅಭಿನಂದಿಸಿದ್ದಾರೆ.

ಇದನ್ನೂ ಓದಿ:

ಲೇಸ್​ ಪ್ಯಾಕ್​ ಕವರ್​ನ್ನು ಸೀರೆಯಂತೆ ಹೊಲಿದು ಧರಿಸಿದ ಯುವತಿ; ವಿಡಿಯೋ ವೈರಲ್​

ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ