Viral News: ಉದ್ಯೋಗಿಗಳಿಗೆ ಧನ್ಯವಾದ ಹೇಳಲು 1 ಕೋಟಿ ರೂ.ಗಳ ಟೂರ್ ಪ್ಯಾಕೇಜ್ ನೀಡಿದ ಕಂಪನಿ
ನೇಮಕಾತಿ ಕಂಪನಿಯೊಂದು ಉದ್ಯೋಗಿಗಳಿಗೆ ಧನ್ಯವಾದ ಹೇಳಲು 1 ಕೋಟಿ ರೂ.ಗಳ ಪ್ಯಾಕೆಜ್ ನೀಡಿ 4 ದಿನ ಕೆಲಸಕ್ಕೆ ರಜೆ ನೀಡುತ್ತಿದೆ. ಸದ್ಯ ಈ ವಿಚಾರ ಜಗತ್ತಿನೆಲ್ಲೆಡೆ ವೈರಲ್ ಆಗಿದೆ.
ಕೊರೊನಾ (Corona) ಸಂದರ್ಭದಲ್ಲಿ ಲಾಕ್ಡೌನ್ (Lock Dwon) ವೇಳೆ ಜಗತ್ತಿನಾದ್ಯಂತ ಅನೇಕ ಕಂಪನಿಗಳು ವರ್ಕ್ ಫ್ರಾಮ್ ಹೋಮ್ ನೀಡಿದ್ದವು. ಉದ್ಯೋಗಿಗಳ ಹಿತ ದೃಷ್ಟಿಯಿಂದ ಮನೆಯಿಂದಲೇ ಬರಪೂರ ಕೆಲಸ ಮಾಡಿಸಿಕೊಂಡಿವೆ. ಇದೀಗ ಯುಕೆ ಮೂಲದ ಕಂಪನಿಯೊಂದು ಉದ್ಯೋಗಿಗಳು ಕೊರೊನಾ ಸಾಂಕ್ರಾಮಿಕ ವೇಳೆ ಉತ್ತಮ ಕೆಲಸ ಮಾಡಿದ್ದಕ್ಕಾಗಿ ಕಂಪನಿಯ ಉದ್ಯೋಗಿಗಳಿಗೆ 4 ದಿನಗಳ ರಜಾ ನೀಡುತ್ತಿದ್ದು ಟ್ರಿಪ್ ಪ್ಲಾನ್ (Trip Plan) ಕೂಡ ಮಾಡಿದೆ. ಇದಕ್ಕೆ ಕಂಪನಿ ಬರೋಬ್ಬರಿ 1 ಕೋಟಿ ರೂ ಗೂ ಹೆಚ್ಚು ಖರ್ಚು ಮಾಡುತ್ತಿದೆ ಎಂದು ಬಿಬಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಒಟ್ಟು 55 ಉದ್ಯೋಗಿಗಳಿಗೆ ರಜೆ ನೀಡಿ ಕೆಲಸ ಮಾಡಿದ್ದಕ್ಕೆ ಧನ್ಯವಾದ ಹೇಳುತ್ತಿದೆ. ಸದ್ಯ ಈ ವಿಚಾರ ಜಗತ್ತಿನಾದ್ಯಂತ ಹರಡಿದ್ದು ವೈರಲ್ ಆಗಿದೆ.
Yolk Folk are off to Tenerife! That’s everyone. Not just the top billers but EVERYONE.
The 50+ recruiters across our 8 markets All of our support teams Our new hires in 2022
Our purpose is building a culture where everyone wins! Which means no one can be left behind #yolkfolk pic.twitter.com/X9El5OPwNw
— Yolk Recruitment (@Yolk_Recruit) February 3, 2022
ವೇಲ್ಸ್ನ ರಾಜಧಾನಿ ಕಾರ್ಡಿಫ್ನಲ್ಲಿರುವ ( ಯುಕೆ ಮೂಲದ ಕಂಪನಿ ಈ ಆಫರ್ ನೀಡುತ್ತಿದೆ. ಯೋಲ್ಕ್ ಪೋಕ್ ( Yolk Folk) ಎನ್ನುವ ನೇಮಕಾತಿ ಕಂಪನಿಯು ತನ್ನ ಉದ್ಯೋಗಿಗಳಿಗಾಗಿ ಈ ಯೋಜನೆ ರೂಪಿಸಿದ್ದು ಎಲ್ಲಾ ಉದ್ಯೋಗಿಗಳನ್ನು ಅತಿದೊಡ್ಡ ಜನ ಸಮೂಹ ಹೊಂದಿರುವ ದ್ವೀಪವಾದ ಟೆನೆರೈಫ್ಗೆ (Tenerife) ಕರೆದೊಯ್ಯುತ್ತಿದೆ. ಈ ಕುರಿತು ಕಂಪನಿಯ ಕಮರ್ಷಿಯಲ್ ಆಫಿಸರ್ ಮಾತನಾಡಿ, 2020 ಎಲ್ಲರಿಗೂ ಕಷ್ಟದ ದಿನಗಳಾಗಿತ್ತು. ಈ ಸಮಯದಲ್ಲಿಯೂ ನಮ್ಮ ಉದ್ಯೋಗಿಗಳು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಸಂಸ್ಥೆಯ ಏಳಿಗೆಗೆ ಕಾರಣವಾಗಿದ್ದಾರೆ. ಇದೀಗ ಅವರಿಗೆ ಧನ್ಯವಾದ ಹೇಳುವ ಸಮಯ ಬಂದಿದೆ. ಹೀಗಾಗಿ ಈ ಆಫರ್ ನೀಡಿದ್ದೇವೆ ಎಂದಿದ್ದಾರೆ.
ಎಪ್ರಿಲ್ 1 ರಂದು ನಾಲ್ಕು ದಿನಗಳ ಕಾಲ ಉದ್ಯೋಗಿಗಳನ್ನು ಎಂಜಾಯ್ ಮಾಡಲು ಟೆನೆರೈಫ್ಗೆ ಕರೆದೊಯ್ಯಲಾಗುತ್ತಿದೆ ಎಂದು ಸುದ್ದಿ ವರದಿ ಮಾಡಿದೆ. ಇನ್ನು ಕಂಪನಿಯ ಈ ಆಫರ್ ನೋಡಿ ಜಗತ್ತಿನಾದ್ಯಂತ ಜನರು ಬೆರಗುಗೊಂಡಿದ್ದಾರೆ. ಕೊರೊನಾ ಬಂದು ಕಂಪನಿಗಳು ನಷ್ಟದಲ್ಲಿವೆ ಎಂದು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುತ್ತಿರುವ, ಹೊಸ ಉದ್ಯೋಗ ದೊರಕದ ಸಂದರ್ಭದಲ್ಲಿ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ಎಂಜಾಯ್ ಮಾಡಲು ಟ್ರಿಪ್ ಪ್ಲಾನ್ ಮಾಡಿ ಅದಕ್ಕೆ 1 ಕೋಟಿ ರೂ ಗೂ ಹೆಚ್ಚು ವ್ಯಯಿಸುತ್ತಿರುವುದನ್ನು ಕಂಡು ಅಚ್ಚರಿಗೊಂಡಿದ್ದಾರೆ. ಸದ್ಯ ಈ ವಿಚಾರ ಎಲ್ಲೆಡೆ ವೈರಲ್ ಆಗದೆ.
ಇದನ್ನೂ ಓದಿ:
Shocking News: ಸೂಪರ್ ಹೀರೋ ಕಾಪಾಡುತ್ತಾನೆಂಬ ನಂಬಿಕೆಯಿಂದ ಟೆರೇಸ್ನಿಂದ ಕೆಳಗೆ ಜಿಗಿದು ಸಾವನ್ನಪ್ಪಿದ ಬಾಲಕ
Published On - 9:49 am, Wed, 9 February 22