viral video : ರಸ್ತೆಯಲ್ಲಿ ಚಿಕ್ಕಿ, ಗಜಕ ಮಾರುತ್ತಿದ್ದ ಅಜ್ಜನಿಗೆ ಬಂತು 4.3 ಮಿಲಿಯನ್ ಮೆಚ್ಚುಗೆ

ದೆಹಲಿಯಲ್ಲಿ ಒಬ್ಬ ವೃದ್ದ ವ್ಯಾಪಾರಿ, ತನ್ನ ಒಂದು ಹೊತ್ತಿನ ಊಟಕ್ಕಾಗಿ ಜನರಿಗೆ ತನ್ನಲ್ಲಿರುವ ಆಹಾರಗಳನ್ನು ಮಾರಾಟ ಮಾಡವ ದೃಶ್ಯವನ್ನು @thefoodiehat ಎಂಬ ಇನ್ಸ್ಟಾಗ್ರಾಮ್ ಖಾತೆ ಸಾರ್ವಜನಿಕವಾಗಿ ಹಂಚಿಕೊಂಡಿದೆ. 85 ವಯಸ್ಸಿನ ವೃದ್ಧನೊಬ್ಬ ಆ ಚಳಿಯಲ್ಲೂ ತಲೆಯ ಮೇಲೆ ಒಂದು ಬುಟ್ಟಿಯಲ್ಲಿ ಚಿಕ್ಕಿ, ಗಜಕ, ಇನ್ನೂ ಕೆಲವೊಂದು ಖಾದ್ಯಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದರು, ಇದನ್ನು ಕಂಡ ಸಾಮಾಜಿಕ ಜಾಲತಾಣ ತಂಡವು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವೃದ್ದ ಮಾರಾಟ ಮಾಡುತ್ತಿರುವ ವಿಡಿಯೋವನ್ನು  ಹರಿಬಿಟ್ಟಿದ್ದಾರೆ. 

viral video : ರಸ್ತೆಯಲ್ಲಿ ಚಿಕ್ಕಿ, ಗಜಕ ಮಾರುತ್ತಿದ್ದ ಅಜ್ಜನಿಗೆ ಬಂತು 4.3 ಮಿಲಿಯನ್ ಮೆಚ್ಚುಗೆ
ಸಾಮಾಜಿಕ ಜಾಲತಾಣ ವೈರಲ್ ಪೋಟೋ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Feb 09, 2022 | 4:33 PM

ಸಾಮಾಜಿಕ ಜಾಲತಾಣದಲ್ಲಿ ಈ ಒಂದು ವಿಡಿಯೋ ಭಾರೀ ಸುದ್ದಿ ಮಾಡುತ್ತಿದೆ. ಈ ವಿಡಿಯೋವನ್ನು ನೋಡಿದ್ದರೆ ಏನೋ ಮನಸ್ಸಿಗೆ ಉಲ್ಲಾಸವನ್ನು ನೀಡುತ್ತದೆ. ಜಗತ್ತಿನಲ್ಲಿ  ಹಸಿವಿಗಾಗಿ ಹಂಬಲಿಸುವ ಜೀವಗಳು ಇಂದಿಗೂ ಇದೆ. ಒಂದು ತುತ್ತಿಗಾಗಿ ಒದ್ದಾಡುವ ಅದೆಷ್ಟೋ ಜನ ಸಮೂಹ ಇಂದಿಗೂ ನಮ್ಮ ನಡುವೆ ಇದೆ. ಎಂದರೆ ನಂಬಲು ಸಾಧ್ಯವಿಲ್ಲ. ಆದರೆ ವಾಸ್ತವಿಕಾವಾಗಿ ನೋಡಿದ್ದಾರೆ, ಇದನ್ನು ನಂಬಲೆ ಬೇಕು. ಸಾಕಷ್ಟು ಕುಟುಂಬಗಳು ಇತಂಹ ಪರಿಸ್ಥಿತಿಯಲ್ಲಿ ಸಿಲುಕಿ, ಜೀವನ ಎಂಬ ಯುದ್ಧದಲ್ಲಿ ಹೋರಾಡುತ್ತಿದ್ದಾರೆ. ಹೌದು ಉಳ್ಳವರು ಅನ್ನವನ್ನು ತಿನ್ನದೆ ವಿದೇಶಿ ಆಹಾರಗಳಿಗೆ ಸೋತು ಹೋಗಿದ್ದಾರೆ. ಅದನ್ನು ಯಾವುದೇ ಕಾರಣಕ್ಕೂ ಇನ್ನೂ ಬದಲಾವಣೆ ಮಾಡಲು ಸಾಧ್ಯವಿಲ್ಲ ಎನ್ನಷ್ಟು ಅದಕ್ಕೆ ಆಂಟಿಕೊಂಡಿದ್ದೇವೆ. ಇದರ ಮಧ್ಯೆ ನಮ್ಮ ಜೀವನಕ್ಕೆ ಒಂದು ಆಧಾರ ಬೇಕು, ಬದುಕಿನಲ್ಲಿ ಏನೇನಾದರೂ ಸಾಧಿಸಬೇಕು ಎಂಬ ಹಂಬಲವನ್ನು ಇಟ್ಟುಕೊಂಡು, ಜೀವನದ ಜೊತೆಗೆ ಗುದ್ದಾಡುತ್ತಿದ್ದರಲ್ಲ ಆ ಮುದ್ದು ಜೀವಕ್ಕೆ ಸಹಾಯ ಮಾಡುವ ಮನಸ್ಥಿತಿಯಲ್ಲಿ ಇರಬೇಕು ಎಂಬುದನ್ನು ಈ ವೈರಲ್ ವಿಡಿಯೋದಲ್ಲಿ  ತಿಳಿಸಿದ್ದಾರೆ.

ಸಾಮಾಜಿಕ ಜಾಲದಲ್ಲಿ ಇಂತಹ ವಿಡಿಯೋಗಳನ್ನು ಹಾಕಿದಾಗ ಲಕ್ಷಾಂತರ ಜನರಿಗೆ ಅದು ತಲುಪಿದಾಗ ಅದಕ್ಕೆ ಬರುವ ಸ್ಫಂದನೆ ಅದ್ಭುತವಾಗಿರುತ್ತದೆ. ಸಾಮಾಜಿಕ ಜಾಲತಾಣಕ್ಕೆ ಇಂತಹ ಘಟನೆಗಳಿಗೆ ಸಾಕ್ಷಿಯಾದರೆ ಅನೇಕ ಬದಲಾವಣೆಯನ್ನು ಈ ಸಮಾಜದಲ್ಲಿ ಮಾಡಬಹುದು. ಹೌದು ನಮ್ಮ ಸಾಮಾಜಿಕ ಜಾಲತಾಣದಲ್ಲಿ ಇಂತಹ ವಿಡಿಯೋಗಳನ್ನು ಸಾಕಷ್ಟು ನೋಡಿರಬಹುದು ಅದಕ್ಕೆ ಪೂರಕವಾಗಿ ದೆಹಲಿಯಲ್ಲಿ ಒಬ್ಬ ವೃದ್ಧ ವ್ಯಾಪಾರಿ, ತನ್ನ ಒಂದು ಹೊತ್ತಿನ ಊಟಕ್ಕಾಗಿ ಜನರಲ್ಲಿ ತನ್ನಲ್ಲಿರುವ ಆಹಾರಗಳನ್ನು ಮಾರಾಟ ಮಾಡವ ದೃಶ್ಯವನ್ನು @thefoodiehat ಎಂಬ ಇನ್ಸ್ಟಾಗ್ರಾಮ್ ಖಾತೆಯು ಸಾರ್ವಜನಿಕವಾಗಿ ಹಂಚಿಕೊಂಡಿದೆ.  85 ವಯಸ್ಸಿನ ವೃದ್ಧನೊಬ್ಬ ಆ ಚಳಿಯಲ್ಲೂ ತಲೆಯ ಮೇಲೆ ಒಂದು ಬುಟ್ಟಿಯಲ್ಲಿ ಚಿಕ್ಕಿ, ಗಜಕ, ಇನ್ನೂ ಕೆಲವೊಂದು ಖಾದ್ಯಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದರು, ಇದನ್ನು ಕಂಡ @thefoodiehat ತಂಡವು ಸಾಮಾಜಿಕ ಜಾಲತಾಣದಲ್ಲಿ ಅವರು ಮಾರಾಟ ಮಾಡುತ್ತಿರುವ ವಿಡಿಯೋವನ್ನು  ಹರಿಬಿಟ್ಟಿದ್ದಾರೆ.

ಈ ವಿಡಿಯೋ ಆ ವ್ಯಕ್ತಿಗೆ ಸಹಾಯವನ್ನು ಮಾಡಿ ಎಂದು ಮನವಿ ಮಾಡಿದ್ದಾರೆ.  ವೃದ್ಧ  ಜೀವನಕ್ಕೆ ಆಸರೆಯಾಗುವಂತೆ  ಕೇಳಿಕೊಂಡಿದ್ದಾರೆ.  ಚಳಿ, ಮಳೆ, ಬಿಸಲು ಎನ್ನದೇ ದುಡಿಯುತ್ತಿರುವ ಆ ಮುಗ್ದ ಜೀವಕ್ಕೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾರೆ.  ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಲಕ್ಷಾಂತರ ಜನ ಇದಕ್ಕೆ ಸ್ಪಂದನೆ ನೀಡದ್ದಾರೆ. ಈ ವಿಡಿಯೋ ನೋಡಿ ಲಕ್ಷಾಂತರ ಜನ ಅವರು ಇರುವ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಜೊತೆಗೆ ಅವರು ಮಾರಾಟ ಮಾಡುತ್ತಿದ್ದ  ಆಹಾರವನ್ನು ಖರೀದಿ ಮಾಡಿದ್ದಾರೆ. ಈ ಬಗ್ಗೆ ಬಾಲಿವುಡ್ ನ ಖ್ಯಾತ ನಟಿ ಪರಿಣಿತಿ ಚೋಪ್ರಾ ಸಹಾಯ ಮಾಡುವಂತೆ ಸ್ಪಂದನೆ ನೀಡಿದ್ದಾರೆ. ಈ ವಿಡಿಯೋವನ್ನು 555 ಸಾವಿರ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ 4.3 ಮಿಲಿಯನ್ ವಿಕ್ಷಣೆಯನ್ನು ಪಡೆದುಕೊಂಡಿದೆ.  ಒಟ್ಟಿನಲ್ಲಿ ಈ ವಿಡಿಯೋ ನೋಡಿದ ಜನ ಮೆಚ್ಚುಗೆಯ ಜೊತೆಗೆ ವೃದ್ಧನಿಗೆ ಸಹಾಯವನ್ನು ಮಾಡಿದ್ದಾರೆ.

Published On - 4:17 pm, Wed, 9 February 22

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ