ಇದು 100 ವರ್ಷಗಳ ಹಳೆಯ ಮೊಟ್ಟೆ: ಶತಮಾನದ ಮೊಟ್ಟೆಯ ಇಂಟ್ರಸ್ಟಿಂಗ್ ಸ್ಟೋರಿ ಇಲ್ಲಿದೆ

ಥಾಯ್ ​ಮತ್ತು ಲಾವೂ ಸಂಸ್ಕೃತಿಯ ಆಹಾರ ಪದ್ಧತಿಯಲ್ಲಿ 100 ವರ್ಷದ ಹಿಂದಿನ ಮೊಟ್ಟೆಯನ್ನು ಸಂರಕ್ಷಿಸಿ ಇಡಲಾಗಿದೆ. ಸದ್ಯ ಈ ಮೊಟ್ಟೆಯ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು ಜಗತ್ತಿನಾದ್ಯಂತ ವೈರಲ್​ ಆಗಿದೆ.

ಇದು 100 ವರ್ಷಗಳ ಹಳೆಯ ಮೊಟ್ಟೆ: ಶತಮಾನದ ಮೊಟ್ಟೆಯ ಇಂಟ್ರಸ್ಟಿಂಗ್ ಸ್ಟೋರಿ ಇಲ್ಲಿದೆ
ಶತಮಾನದ ಮೊಟ್ಟೆಯನ್ನು ತೋರಿಸುತ್ತಿರುವ ಮಹಿಳೆ
Follow us
TV9 Web
| Updated By: Pavitra Bhat Jigalemane

Updated on: Feb 10, 2022 | 1:20 PM

ಜಗತ್ತಿನಾದ್ಯಂತ ಅನೇಕ ಆಹಾರ (Food) ಪದ್ಧತಿಗಳಿವೆ. ವಿವಿಧ ದೇಶಗಳಲ್ಲಿ  ವಿವಿಧ ರೀತಿಯ ಆಹಾರಗಳನ್ನು ಸೇವಿಸಲಾಗುತ್ತದೆ. ಪುರಾತನ ಪದ್ಧತಿಯ ಆಹಾರ ಶೈಲಿ ಇಂದಿಗೂ ಹಲವು ಜನಾಂಗಗಳಲ್ಲಿ ಜಾರಿಯಲ್ಲಿದೆ. ಥಾಯ್ (Thai )​ ಮತ್ತು ಲಾವೂ (Lao)  ಸಂಸ್ಕೃತಿಯ ಆಹಾರ ಪದ್ಧತಿಯಲ್ಲಿ 100 ವರ್ಷದ ಹಿಂದಿನ ಮೊಟ್ಟೆಯನ್ನು ಸಂರಕ್ಷಿಸಿ  ಸೇವಿಸಲಾಗುತ್ತದೆ ಎನ್ನು ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಸದ್ಯ ಈ ಮೊಟ್ಟೆಯ ವಿಡಿಯೋವನ್ನು ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳಲಾಗಿದ್ದು ಜಗತ್ತಿನಾದ್ಯಂತ ವೈರಲ್​ ಆಗಿದೆ. ಇದನ್ನು ಶತಮಾನದ ಮೊಟ್ಟೆ(Century Egg) ಎಂದು ಕರೆಯಲಾಗುತ್ತದೆ. ಸುಣ್ಣ , ಉಪ್ಪು, ಜೇಡಿಮಣ್ಣು ಹಾಗೂ ಬೂದಿಗಳನ್ನು ಬಳಸಿ ಈ ಮೊಟ್ಟೆಯನ್ನು ಸುರಕ್ಷಿತವಾಗಿ ಇಡಲಾಗಿದೆ ಎಂದು ವರದಿ ತಿಳಿಸಿದೆ. ಈ ಕುರಿತು ಎನ್​ಡಿಟಿವಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

View this post on Instagram

A post shared by ashley (@ashyi)

ಈ ವಿಶಿಷ್ಟ ಬಗೆಯ ಮೊಟ್ಟೆಯ ಬಳಕೆ ಏಷ್ಯನ್​ ಆಹಾರ  ಪದ್ಧತಿಯಲ್ಲಿ ಸಾಮಾನ್ಯವಾಗಿದೆ. ಇದನ್ನು ತೋಪು, ರಮೇನ್​ ಸೇರಿದಂತೆ ಹಲವು ಆಹಾರಗಳೊಂದಿಗೆ ಸೈಡ್​ ಡಿಶ್​ ಆಗಿ ಬಳಸಿಕೊಳ್ಳಲಾಗುತ್ತದೆ. ಇದರ ರುಚಿಯ ಬಗ್ಗೆ ವಿಡಿಯೋ ಹಂಚಿಕೊಂಡ ಮಹಿಳೆಯು ವಿವರಿಸಿದ್ದಾರೆ.  ಮೊಟ್ಟೆಯ ಬಿಳಿಯ ಭಾಗವು ಕಂದು ಮತ್ತು ಜಿಲಾಟಿನಸ್​ ಬಣ್ಣದಿಂದ ಕೂಡಿದೆ. ಮೊಟ್ಟೆಯ ಹಳದಿ ಭಾಗವು ಹಸಿರು ಮತ್ತು ಕೆನೆ ಬಣ್ಣದಿಂದ ಕೂಡಿದೆ. ಈ ಶತಮಾನದ ಮೊಟ್ಟೆಯ ರಚನೆ ಬಗ್ಗೆ ಇನ್ನೂ ಕುತೂಹಲವಿದೆ ಎನ್ನುತ್ತಾರೆ ಮಹಿಳೆ.

ವಿಡಿಯೋ ನೋಡಿದ ನೆಟ್ಟಿಗರು, ಅನುಮಾನ ವ್ಯಕ್ತಪಡಿಸಿ ಕಾಮೆಂಟ್​ ಮಾಡಿದ್ದಾರೆ. ಈ ಮೊಟ್ಟೆಯನ್ನು ನೂರು ವರ್ಷಗಳವರೆಗೆ ತಿನ್ನದೇ ಉಳಿಸಿಕೊಂಡ ಕಾರಣವೇನು? ಅಷ್ಟಕ್ಕೂ ಇದು ಕಪ್ಪು ಬಣ್ಣದಲ್ಲಿರಲು ಕಾರಣವೇನು , ನಂಬಲು ಅಸಾಧ್ಯ ಎಂದು ಕಾಮೆಂಟ್​ ಮಾಡಿದ್ದಾರೆ. ಇನ್ನೂ ಕೆಲವು ಕಾಮೆಂಟ್​ಗಳಲ್ಲಿ ಶತಮಾನದ ಮೊಟ್ಟೆಯಂತೆ ಕಾಣುವ ಮೊಟ್ಟೆ ಶತಮಾನಗಳ ಹಿಂದಿನದ್ದಲ್ಲ. ಅದನ್ನು ಕೆಲವು ತಿಂಗಳುಗಳ ಕಾಲ ಸಂರಕ್ಷಿಸಲಾಗುತ್ತದೆ. ಅದಕ್ಕೆ ಬಾತುಕೊಳಿಯ ಮೊಟ್ಟೆಯನ್ನು ಬಳಸಲಾಗುತ್ತದೆ ಅದಕ್ಕೆ ಆ ರೀತಿ ಕಾಣುತ್ತದೆ ಎಂದು ಕಾಮೆಂಟ್​ ಮಾಡಿದ್ದಾರೆ.

ಇನ್ನೂ ಕೆಲವು ಕಾಮೆಂಟ್​ಗಳಲ್ಲಿ ಏಷ್ಯನ್​ ಆಹಾರ ಪದ್ಧತಿಗಳಲ್ಲಿ ಸಿಗುವ ಈ ಶತಮಾನದ ಮೊಟ್ಟೆಗಳು ಅತ್ಯಂತ ರುಚಿಕರವಾಗಿರುತ್ತದೆ. ಅನ್ನದ ಜತೆ, ಸೋಯಾಗಳೊಂದಿಗೆ ಉತ್ತಮ ಕಾಂಬಿನೇಷನ್​ ಆಗಿದೆ. ಹೀಗಾಗಿ ಈ ಮೊಟ್ಟೆಯು ರುಚಿಕರ ಆಹಾರವಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ:

ಶ್ರೀವಲ್ಲಿ ಹಾಡಿಗೆ ಕೊರಿಯನ್​ ಮಹಿಳೆಯ ಸಖತ್​ ಸ್ಟೆಪ್​; ವಿಡಿಯೋ ವೈರಲ್​