ಬೋರ್ ಆಗಿದೆ ಎಂದು 7 ಕೋಟಿ ಬೆಲೆ ಬಾಳುವ ಪೇಂಟಿಂಗ್ ಮೇಲೆ ಕಣ್ಣಿನ ಚಿತ್ರ ಬಿಡಿಸಿ ಪೇಚಿಗೆ ಸಿಲುಕಿದ ಸೆಕ್ಯುರಿಟಿ ಗಾರ್ಡ್
ಬೋರ್ ಆಗಿದೆ ಎಂದು ಮುಖವಿರದ ಪೇಂಟಿಂಗ್ ಒಂದಕ್ಕೆ ಸೆಕ್ಯುರಿಟಿ ಕಾರ್ಡ್ ಒಬ್ಬ ಪೇಂಟಿಂಗ್ ಮೇಲೆ ಕಣ್ಣನ್ನು ಚಿತ್ರಿಸಿದ್ದಾನೆ. ಸದ್ಯ ಈತನನ್ನು ಚಿತ್ರವನ್ನು ವಿರೂಪಗೊಳಿಸಿದ್ದಾನೆ ಎಂದು ಕೆಲಸದಿಂದ ವಜಾಗೊಳಿಸಲಾಗಿದೆ.
ಕೆಲಸಕ್ಕೆ ಬಂದ ಸೆಕ್ಯುರಿಟಿ ಗಾರ್ಡ್ (Security Guard) ಒಬ್ಬ ಮಾಡಲು ಏನೂ ಕೆಲಸವಿಲ್ಲದೆ ಬೋರ್ ಬಂದಿದೆ ಎಂದು ರಷ್ಯಾದ ಆರ್ಟ್ ಗ್ಯಾಲರಿಯಲ್ಲಿ (Art Gallery) 7 ಕೋಟಿ ರೂ. ಬೆಲೆಬಾಳುವ ಮುಖದ ಭಾಗಗಳನ್ನು ಬಿಡಿಸದ ವರ್ಣಚಿತ್ರದ (Painting) ಮೇಲೆ ಕಣ್ಣನ್ನು ಬಿಡಿಸಿದ್ದಾನೆ. ವರ್ಣಚಿತ್ರಗಳು ಅಥವಾ ಆರ್ಟ್ ಗ್ಯಾಲರಿಯಲ್ಲಿರುವ ಚಿತ್ರಗಳು ಅದರದ್ದೇ ಆದ ಅರ್ಥವನ್ನು ಹೊಂದಿರುತ್ತದೆ. ಮುಖವಿರಲಿ, ಇಲ್ಲದೆ ಇರಲಿ, ಬಿಳಿ ಹಾಳೆಯ ಮೇಲೆ ಒಂದು ಗೆರೆ ಎಳೆದಿದ್ದರೂ ಆ ಪೇಂಟಿಗ್ ಕೋಟಿ ರೂಗಳಿಗೆ ಮಾರಾಟವಾದ ಉದಾಹರಣೆಗಳಿವೆ. ಹೀಗಿದ್ದಾಗ ಬೋರ್ ಆಗಿದೆ ಎಂದು ಮುಖವಿರದ ಪೇಂಟಿಂಗ್ ಒಂದಕ್ಕೆ ಸೆಕ್ಯುರಿಟಿ ಕಾರ್ಡ್ ಒಬ್ಬ ಪೇಂಟಿಂಗ್ ಮೇಲೆ ಕಣ್ಣನ್ನು ಚಿತ್ರಿಸಿದ್ದಾನೆ. ಸದ್ಯ ಈತನನ್ನು ಚಿತ್ರವನ್ನು ವಿರೂಪಗೊಳಿಸಿದ್ದಾನೆ ಎಂದು ಕೆಲಸದಿಂದ ವಜಾಗೊಳಿಸಲಾಗಿದೆ.
Artist Anna leporskaya’s $1million painting named ‘Three Figures’ was ruined after a security guard drew pair of eyes on the faceless figures in the painting. On being asked he is said to have become bored on the first day of his duty.@MailOnline pic.twitter.com/36lTMEzHcB
— Illuminate- The Learning Hub of MAIMS (@IlluminateMaims) February 10, 2022
ರಷ್ಯಾದ ಯೆಕಟೆರಿನ್ಬರ್ಗ್ ಪ್ರದೇಶದ ಯೆಲ್ಟ್ಸಿನ್ ಎನ್ನುವ ಆರ್ಟ್ ಗ್ಯಾಲರಿಲ್ಲಿ ಈ ಘಟನೆ ನಡೆದಿದೆ. ಚಿತ್ರದ ಮೇಲೆ ಕಣ್ಣನ್ನು ಬಿಡಿಸಿದ ಸೆಕ್ಯುರಿಟಿ ಗಾರ್ಡ್ ಅನ್ನು ವಜಾಗೊಳಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆತ ವಿರೂಪಗೊಳಿಸಿದ ಚಿತ್ರವನ್ನು 1930ರಲ್ಲಿ ರಚಿಸಲಾಗಿತ್ತು ಎನ್ನಲಾಗಿದ್ದು ಸುಮಾರು 7.5 ಕೋಟಿ ರೂಗಳಿಗೆ ಇನ್ಸುರೆನ್ಸ್ ಮಾಡಿಸಲಾಗಿದ್ದು, ಪ್ರದರ್ಶನಕ್ಕೆ ಇರಿಸಲಾಗಿತ್ತು ಎಂದು ವರದಿ ತಿಳಿಸಿದೆ.
ಸದ್ಯ ಸೆಕ್ಯುರಿಟಿ ಗಾರ್ಡ್ ಬಗ್ಗೆ ಯಾವುದೇ ಮಾಹಿತಿ ಹೊರಹಾಕಿಲ್ಲ. ಆದರೆ ಆರೋಪ ಸಾಬೀತಾದರೆ ಶಿಕ್ಷೆ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಆತ ಚಿತ್ರದ ಮೇಲೆ ಕಣ್ಣುಗಳನ್ನು ಬಿಡಿಸಲು ಬಾಲ್ ಪೆನ್ಗಳನ್ನು ಬಳಕೆ ಮಾಡಿದ್ದು, ಎರಡು ಚಿತ್ರಗಳಿಗೆ ಕಣ್ಣನ್ನು ಬಿಡಿಸಿದ್ದಾನೆ ಎಂದು ಹೇಳಲಾಗಿದೆ. ಚಿತ್ರಬಿಡಿಸಿದ ಕಣ್ಣುಗಳ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.
ಇದನ್ನೂ ಓದಿ:
ಪ್ರಯಾಣಿಕನೊಂದಿಗೆ ಬಂದ ಹುಂಜಕ್ಕೂ 30 ರೂ. ಟಿಕೆಟ್ ನೀಡಿದ ಕಂಡಕ್ಟರ್: ಆಮೇಲಾಗಿದ್ದೇನು ಗೊತ್ತಾ?
Published On - 4:08 pm, Thu, 10 February 22