ಅಲೆಕ್ಸಾದಿಂದ ಬಂದ ಹಾಡಿಗೆ ಕ್ಯೂಟ್​ ಸ್ಟೆಪ್​ ಹಾಕಿದ ಮಗು: ವಿಡಿಯೋ ವೈರಲ್​

ಇಲ್ಲೊಂದು ಪುಟ್ಟ ಮಗು ಅಲೆಕ್ಸಾ ಬಳಿ ತನ್ನಿಷ್ಟದ ಹಾಡನ್ನು ಹಾಕುವಂತೆ ಕೇಳಿದೆ. ಧ್ವನಿಯನ್ನು ಗುರುತಿಸಿದ ವರ್ಚುವಲ್​ ಅಸಿಸ್ಟಂಟ್​ ತಂತ್ರಜ್ಞಾನವಾದ ಅಲೆಕ್ಸಾವು ಹಾಡೊಂದು ಪ್ಲೇ ಮಾಡಿದೆ.

ಅಲೆಕ್ಸಾದಿಂದ ಬಂದ ಹಾಡಿಗೆ ಕ್ಯೂಟ್​ ಸ್ಟೆಪ್​ ಹಾಕಿದ ಮಗು: ವಿಡಿಯೋ ವೈರಲ್​
ಮಗು
TV9kannada Web Team

| Edited By: Pavitra Bhat Jigalemane

Feb 11, 2022 | 10:30 AM

ತಂತ್ರಜ್ಞಾನ(Technology) ಬದಲಾದಂತೆ, ಬೆಳೆದಂತೆ ಅವುಗಳ ಉಪಯೋಗ ಕೂಡ ಹೆಚ್ಚುತ್ತಿದೆ. ಇಂದಿನ ಕಾಲದ ಎಳೆಯ ಮಕ್ಕಳೂ ಕೂಡ ತಂತ್ರಜ್ಞಾನದ ಬಳಕೆಯ ಬಗ್ಗೆ ತಿಳಿದಿರುತ್ತಾರೆ. ಹೀಗಿದ್ದಾಗ ಇಲ್ಲೊಂದು ಪುಟ್ಟ ಮಗು ಅಲೆಕ್ಸಾ (Alexa) ಬಳಿ ತನ್ನಿಷ್ಟದ ಹಾಡನ್ನು ಹಾಕುವಂತೆ ಕೇಳಿದೆ. ಧ್ವನಿಯನ್ನು ಗುರುತಿಸಿದ ವರ್ಚುವಲ್​ ಅಸಿಸ್ಟಂಟ್​ ತಂತ್ರಜ್ಞಾನವಾದ ಅಲೆಕ್ಸಾವು ಹಾಡೊಂದು ಪ್ಲೇ ಮಾಡಿದೆ. ಇದರಿಂದ ಸಂತಸಗೊಂಡು ಪುಟ್ಟ ಮಗು ಖುಷಿಯಿಂದ ಡ್ಯಾನ್ಸ್(Dance)​ ಮಾಡಿದೆ. ಇದರ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

View this post on Instagram

A post shared by Dirty Heads (@dirtyheads)

ಇನ್ಸ್ಟಾಗ್ರಾಮ್​ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು ಪುಟ್ಟ ಮಗುವಿನ ಕ್ಯೂಟ್​​ ರಿಯಾಕ್ಷನ್​ ನೋಡಿ ನೆಟ್ಟಿಗರು ಮನಸೋತಿದ್ದಾರೆ,  ಡರ್ಟಿ ಹೆಡ್ಸ್​ ಎನ್ನುವ ಇನ್ಸ್ಟಾಗ್ರಾಮ್​ ಖಾತೆ ಈ ವಿಡಿಯೋವನ್ನು ಹಂಚಿಕೊಂಡಿದೆ. ವಿಡಿಯೋದಲ್ಲಿ ಪುಟ್ಟ ಮಗು Hey Alexa, play A-a-aye ಎನ್ನುವುದನ್ನು ಕೇಳಬಹುದು. ಈ ಧ್ವನಿಯನ್ನು ಗುರುತಿಸಿದ ಅಲೆಕ್ಸಾವು ವೆಕೆಷನ್​ ಎನ್ನುವ ಹಾಡನ್ನು ಪ್ಲೇ ಮಾಡಿದೆ. ತಕ್ಷಣ ಮಗು ಅಚ್ಚರಿಯಿಂದ ಕಣ್ಣರಳಿಸಿ ಖುಷಿಯಿಂದ ಡ್ಯಾನ್ಸ್​​ ಮಾಡಿದೆ. ಪುಟ್ಟ ಮಗುವು ಡ್ಯಾನ್ಸ್​​ ಮಾಡುವ ವಿಡಿಯೋವನ್ನು ಮಗುವಿನ ತಾಯಿ ರೆಕಾರ್ಡ್​ ಮಾಡಿದ್ದಾರೆ. ಸದ್ಯ ವಿಡಿಯೋ ಎಲ್ಲರನ್ನೂ ಸೆಳೆದಿದೆ.  ಇನ್ಸ್ಟಾಗ್ರಾಮ್​ನಲ್ಲಿ ವೈರಲ್​ ಅದ ವಿಡಿಯೋ 2 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ.

ವಿಡಿಯೋದಲ್ಲಿ ಕೇಳುವ ವೆಕೇಷನ್​​ ಹಾಡು ಡರ್ಟಿ ಹೆಡ್ಸ್​​ ಯುಟ್ಯೂಬ್​ ಖಾತೆಯಲ್ಲಿ 2017ರಲ್ಲಿ ಬಿಡುಗಡೆಯಾಗಿದೆ. ಈ ಹಾಡು ಎಲ್ಲರನ್ನೂ ಸೆಳೆದು 6 ಮಿಲಿಯನ್​ಗೂ ಅಧಿಕ  ವೀಕ್ಷಣೆ ಪಡೆದಿತ್ತು. ಇಂದಿಗೂ ಈ ಹಾಡು ಕೇಳುಗರ ನೆಚ್ಚಿನ ಗೀತೆಯಾಗಿಯೇ ಇದೆ.

ಇದನ್ನೂ ಓದಿ:

Viral Video: ರೆಸ್ಟೋರೆಂಟ್‌ನಲ್ಲಿ ಉಡ ಪ್ರತ್ಯಕ್ಷ; ಭಯಗೊಂಡ ಮಹಿಳೆ ಉಡದಂತೆ ಕುರ್ಚಿ ಹಿಡಿದು, ಮಾಡಿದ್ದೇನು ಗೊತ್ತಾ?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada