ಮೆಹಂದಿಯಲ್ಲಿ ಮೂಡಿದ ಲತಾ ಮಂಗೇಶ್ಕರ್​ ಭಾವಚಿತ್ರ: ವಿಡಿಯೋ ವೈರಲ್​

ಲತಾ ಮಂಗೇಶ್ಕರ್​ ಅವರಿಗೆ ನಮನ ಸಲ್ಲಿಸಲು ಮೆಹಂದಿ (Mehandi) ಆರ್ಟಿಸ್ಟ್​ ಒಬ್ಬರು ಮೆಹಂದಿಯಲ್ಲಿ ಲತಾ ಮಂಗೇಶ್ಕರ್​ ಚಿತ್ರ ಬಿಡಿಸಿ ಗಮನ ಸೆಳೆದಿದ್ದಾರೆ.

ಮೆಹಂದಿಯಲ್ಲಿ ಮೂಡಿದ ಲತಾ ಮಂಗೇಶ್ಕರ್​ ಭಾವಚಿತ್ರ: ವಿಡಿಯೋ ವೈರಲ್​
ಮೆಹಂದಿ
Follow us
TV9 Web
| Updated By: Pavitra Bhat Jigalemane

Updated on:Feb 11, 2022 | 1:31 PM

ಭಾರತದ ಗಾನ ಕೋಗಿಲೆ ಲತಾ ಮಂಗೇಶ್ಕರ್ (Lata Mangeshkar)​ ಅಗಲಿ ವಾರಗಳೇ ಕಳೆದಿದೆ. ಆದರೂ ಅವರ ನೆನಪು, ಧ್ವನಿ ಹಸಿರಾಗಿಯೇ ಇರುತ್ತದೆ. ಇದೀಗ ಲತಾ ಮಂಗೇಶ್ಕರ್​ ಅವರಿಗೆ ನಮನ ಸಲ್ಲಿಸಲು ಮೆಹಂದಿ (Mehandi) ಆರ್ಟಿಸ್ಟ್​ ಒಬ್ಬರು ಮೆಹಂದಿಯಲ್ಲಿ ಲತಾ ಮಂಗೇಶ್ಕರ್​ ಚಿತ್ರ ಬಿಡಿಸಿ ಗಮನ ಸೆಳೆದಿದ್ದಾರೆ. ದೆಹಲಿಯ ಮೆಹಂದಿ ಆರ್ಟಿಸ್ಟ್​ ಕೈಚಳಕಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರ ವಿಡಿಯೋವನ್ನು ಇನ್ಸ್ಟಾಗ್ರಾಮ್​ (Instagram) ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.  ವಿಡಿಯೋ ಸಖತ್​ ವೈರಲ್​ ಆಗಿದೆ. ವಿಜಯ್​ ಬ್ರೈಡಲ್​ ಮೆಹಂದಿ ಎನ್ನು ಇನ್ಸ್ಟಾಗ್ರಾಮ್​ ಖಾತೆ ವಿಡಿಯೋವನ್ನು ಹಂಚಿಕೊಂಡಿದೆ.

ಈ ಕುರಿತು ಮೆಹಂದಿ ಆರ್ಟಿಸ್ಟ್​, ನಾನು ಲತಾ ಮಂಗೇಶ್ಕರ್​ ಅಭಿಮಾನಿ, ಚಿಕ್ಕಂದಿನಿಂದಲೂ ಅವರ ಗೀತೆಗೆಳನ್ನು ಕೇಳಿಕೊಂಡು ಬೆಳೆದಿದ್ದೇನೆ. ಇದೀಗ ನನ್ನ ಕಲೆಯ ಮೂಲಕ ಅವರಿಗೆ ನಮನವನ್ನು ಸಲ್ಲಿಸುತ್ತಿದ್ದೇನೆ ಎಂದಿದ್ದಾರೆ.  22 ವರ್ಷದಿಂದ ಮೆಹಂದಿ ಆರ್ಟಿಸ್ಟ್​ ಆಗಿರುವ ವ್ಯಕ್ತಿ ಹಂಚಿಕೊಂಡಿರುವ ವಿಡಿಯೋ ವೈರಲ್​ ಆಗಿದೆ.

ಇನ್ನೊಂದು ವೈರಲ್​ ವಿಡಿಯೋದಲ್ಲಿ ದೆಹಲಿಯ ಖ್ಯಾತ ಮೇಕಪ್​ ಆರ್ಟಿಸ್ಟ್​ ದಿಕ್ಷಿತಾ  ತನ್ನ ಮುಖವನ್ನು ಲತಾ ಮಂಗೇಶ್ಕರ್​ ಮುಖದಂತೆ ಮೇಕಪ್​ ಮಾಡಿಕೊಂಡು ವಿಭಿನ್ನ ರೀತಿಯಲ್ಲಿ ನಮನ ಸಲ್ಲಿಸಿದ್ದಾರೆ. ಈ ವಿಡಿಯೋ ಕೂಡ ವೈರಲ್​ ಆಗಿದೆ. ಈ ಹಿಂದೆ ಶಾರೂಖಾನ್​ ಸೇರಿದಂತೆ ಹಲವು ಗಣ್ಯರಂತೆ ಕಾಣುವ ರೀತಿ ಮೇಕಪ್​ ಮಾಡಿಕೊಂಡು ಸುದ್ದಿಯಾಗಿದ್ದಾರೆ.

ಇದನ್ನೂ ಓದಿ:

ಜೆಆರ್​ಡಿ ಟಾಟಾ ಮೊದಲ ಬಾರಿಗೆ ಪೈಲಟ್​ ಪರವಾನಗಿ ಪತ್ರ ಪಡೆದ ಪೋಸ್ಟ್​ ಹಂಚಿಕೊಂಡ ಟಾಟಾ ಗ್ರುಪ್​

Published On - 1:30 pm, Fri, 11 February 22