ಜೆಆರ್ಡಿ ಟಾಟಾ ಮೊದಲ ಬಾರಿಗೆ ಪೈಲಟ್ ಪರವಾನಗಿ ಪತ್ರ ಪಡೆದ ಪೋಸ್ಟ್ ಹಂಚಿಕೊಂಡ ಟಾಟಾ ಗ್ರುಪ್
929ರಲ್ಲಿ ಜೆಆರ್ಡಿ ಟಾಟಾ ಮೊದಲ ಬಾರಿಗೆ ಏರ್ ಇಂಡಿಯಾಗೆ (Air India) ಪೈಲಟ್ ಆಗಿ ವಿಮಾನ ಸೇವೆ ಆರಂಭಿಸಿದ್ದರು. ಇದೀಗ ಟಾಟಾ ಗ್ರುಪ್ ಆ ಹಳೆಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಭಾರತ ಕೈಗಾರಿಕೋದ್ಯಮಮದಲ್ಲಿ ಅಚ್ಚಳಿಯದೆ ಇರುವ ಹೆಸರು ಜೆಆರ್ಡಿ ಟಾಟಾ (JRD TATA). ಭಾರತಕ್ಕೆ ವಿಮಾನ ಸೇವೆಯನ್ನು ಒದಗಿಸಿ ಬರೋಬ್ಬರಿ 53 ವರ್ಷಗಳ ಕಾಲ ಯಶಸ್ವಿಯಾಗಿ ಮುನ್ನಡೆಸಿ ಭಾರತದ ಕೈಗಾರಿಕಾ ನಕ್ಷೆಯಲ್ಲಿ ಮಹತ್ವದ ಛಾಪನ್ನು ಮೂಡಿಸಿದ ಭಾರತೀಯರಲ್ಲೊಬ್ಬರು. ಇವರು ಮೊದಲ ಬಾರಿಗೆ ವಾಣಿಜ್ಯ ಏವಿಯೇಟರ್ ಪ್ರಮಾಣ ಪತ್ರವನ್ನು(commercial aviator’s certificate) ಗಳಿಸಿದ ಭಾರತದ ಮೊದಲ ಕೈಗಾರಿಕೋದ್ಯಮಿ. 1929ರಲ್ಲಿ ಜೆಆರ್ಡಿ ಟಾಟಾ ಮೊದಲ ಬಾರಿಗೆ ಏರ್ ಇಂಡಿಯಾಗೆ (Air India) ಪೈಲಟ್ ಆಗಿ ವಿಮಾನ ಸೇವೆ ಆರಂಭಿಸಿದ್ದರು. ಇದೀಗ ಟಾಟಾ ಗ್ರುಪ್ ಆ ಹಳೆಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಸದ್ಯ ಈ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ.
View this post on Instagram
ಟಾಟಾ ಸಂಸ್ಥೆ ಹಂಚಿಕೊಂಡಿರುವ ಪೋಸ್ಟ್ನಲ್ಲಿ ಹಳೆಯ ಕತೆಯನ್ನು ಸಂಕ್ಷಿಪ್ತವಾಗಿ ಶೇರ್ ಮಾಡಲಾಗಿದೆ. 1929ರಲ್ಲಿ ಜೆಆರ್ಡಿ ಟಾಟಾ ಮೊದಲ ಬಾರಿಗೆ ಪೀಲೆಟ್ ಆಗಿದ್ದರ ಬಗ್ಗೆ ಗೊತ್ತಾ? ಎಂದು ಆರಂಭವಾಗುವ ಪೋಸ್ಟ್ನ ಶೀರ್ಷಿಕೆ 1929ರ ಫೆ.10ರಂದು ಜೆಆರ್ಡಿ ಟಾಟಾ ಪೈಲೆಟ್ ಆಗುವ ಮೂಲಕ ವಾಣಿಜ್ಯ ಏವಿಯೇಟರ್ ಪ್ರಮಾಣ ಪತ್ರ ಪಡೆದ ಭಾರತದ ಮೊದಲ ಪೈಲೆಟ್ ಎನಿಸಿಕೊಂಡಿದ್ದಾರೆ. ಈ ಮೊದಲು ಏರ್ ಇಂಡಿಯಾ ಟಾಟಾ ಏರ್ ಸರ್ವಿಸ್ ಎನ್ನುವ ಹೆಸರಿನಲ್ಲಿ ಸೇವೆ ಸಲ್ಲಿಸುತ್ತಿತ್ತು. 1932ರಲ್ಲಿ ಮೊದಲ ಬಾರಿಗೆ ಕರಾಚಿಯಿಂದ ಹಾರಾಟ ಆರಂಭಿಸಿದ ವಿಮಾನ ತಾಸಿಗೆ 100 ಮೈಲಿ ದೂರವನ್ನು ಕ್ರಮಿಸಿತ್ತು ಎಂದು ಮಾಹಿತಿ ನೀಡುವ ಮೂಲಕ ಎರಡು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.
ನಿನ್ನೆ ಹಂಚಿಕೊಂಡ ಈ ಫೋಟೋ 5 ಸಾವಿರಕ್ಕೂ ಹೆಚ್ಚು ಲೈಕ್ಸ್ಗಳಿಸಿದೆ. ಭಾರತೀಯ ಕೈಗಾರಿಕೋದ್ಯಮದಲ್ಲಿ ಇತಿಹಾಸವನ್ನೇ ಸೃಷ್ಟಿಸಿದ ಜೆಆರ್ಡಿ ಟಾಟಾಅ ಅವರ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ:
ಅಲೆಕ್ಸಾದಿಂದ ಬಂದ ಹಾಡಿಗೆ ಕ್ಯೂಟ್ ಸ್ಟೆಪ್ ಹಾಕಿದ ಮಗು: ವಿಡಿಯೋ ವೈರಲ್
Published On - 11:08 am, Fri, 11 February 22