ವಿಮಾನದಲ್ಲಿ ಪತ್ನಿಯನ್ನು ಎಕನಾಮಿಕ್​ ಕ್ಲಾಸ್​ನಲ್ಲಿ ಕೂರಿಸಿ ತನ್ನ ಸೀಟನ್ನು ಅಪ್​ಗ್ರೇಡ್​ ಮಾಡಿಕೊಂಡ ಪತಿ: ಮುಂದೇನಾಯ್ತು ಗೊತ್ತಾ?

ವಿಮಾನ ಸಿಬ್ಬಂದಿ ಬ್ಯಸಿನೆಸ್​ ಕ್ಲಾಸ್​ನಲ್ಲಿ ಒಂದೇ ಸೀಟನ್ನು ನೀಡಿದ ಕಾರಣ ಪತ್ನಿಯನ್ನು ಎಕನಾಮಿಕ್​ ಕ್ಲಾಸ್​ನಲ್ಲಿ ಕುಳಿತುಕೊಳ್ಳುವಂತೆ ಹೇಳಿದ್ದಾನೆ ಎಂದ ಪತಿಯ ವಿರುದ್ಧ ನೆಟ್ಟಿಗರು ಅಸಮಧಾನ ವ್ಯಕ್ತಪಡಿಸಿದ್ದಾರೆ.

ವಿಮಾನದಲ್ಲಿ ಪತ್ನಿಯನ್ನು ಎಕನಾಮಿಕ್​ ಕ್ಲಾಸ್​ನಲ್ಲಿ ಕೂರಿಸಿ ತನ್ನ ಸೀಟನ್ನು ಅಪ್​ಗ್ರೇಡ್​ ಮಾಡಿಕೊಂಡ ಪತಿ: ಮುಂದೇನಾಯ್ತು ಗೊತ್ತಾ?
ಸಾಂಕೇತಿಕ ಚಿತ್ರ
Follow us
TV9 Web
| Updated By: Pavitra Bhat Jigalemane

Updated on:Feb 11, 2022 | 3:44 PM

ವಿಮಾನದಲ್ಲಿ ಪತ್ನಿಯನ್ನು ಎಕನಾಮಿಕ್​​ ಕ್ಲಾಸ್ (Economic Class) ​ನಲ್ಲಿ ಬಿಟ್ಟು ಪತಿಯೊಬ್ಬ ಬ್ಯಸಿನೆಸ್​ ಕ್ಲಾಸ್​(Business class) ನಲ್ಲಿ ಕುಳಿತು ಪ್ರಯಾಣಿಸಲು ನಿರ್ಧಿರಿಸಿದ್ದನು. ಇದಕ್ಕೆ ಕಾರಣ ವಿಮಾನ (Flight) ಸಿಬ್ಬಂದಿ ಬ್ಯಸಿನೆಸ್​ ಕ್ಲಾಸ್​ನಲ್ಲಿ ಒಂದೇ ಸೀಟನ್ನು ನೀಡಿದ ಕಾರಣ ಪತ್ನಿಯನ್ನು ಎಕನಾಮಿಕ್​ ಕ್ಲಾಸ್​ನಲ್ಲಿ ಕುಳಿತುಕೊಳ್ಳುವಂತೆ ಹೇಳಿದ್ದು, ಈ ಕುರಿತು ರೆಡ್ಡಿಟ್​ನಲ್ಲಿ ಹಂಚಿಕೊಂಡಿದ್ದನು. ಇದರಿಂದ ಕೋಪಗೊಂಡ ನೆಟ್ಟಿಗರು ವ್ಯಕ್ತಿಯನ್ನು ತರಾಟಗೆ ತೆಗೆದುಕೊಂಡಿದ್ದಾರೆ. ದಂಪತಿ ರಜಾ ದಿನಗಳನ್ನು ಕಳೆಯಲು ಜಪಾನ್​ನಿಂದ ಯುಎಸ್​ಗೆ ತೆರಳುತ್ತಿದ್ದು 12 ಗಂಟೆಗಳ ಪ್ರಯಾಣವಾಗಿತ್ತು. ಈ ವೇಳೆ ಪತ್ನಿ ಪತಿ ಜೊತೆ ಕೂರಲು ಬಯಸಿದ್ದರು ಆದರೆ ವಿಮಾನ ಸಿಬ್ಬಂದಿ ಸೀಟನ್ನು ಕೊಡದ ಕಾರಣ ಬೇರೆ ಬೇರೆಯಾಗಿ ಪ್ರಯಾಣಿಸಲು ನಿರ್ಧರಿಸಿದ್ದರು. ಈ ಬಗ್ಗೆ ವ್ಯಕ್ತಿ ತಮ್ಮ ನಿರ್ಧಾರವನ್ನು ರಡ್ಡಿಟ್​ನಲ್ಲಿ ಹಂಚಿಕೊಂಡಿದ್ದು ನೆಟ್ಟಿಗರು ಕಿಡಿಕಾರಿದ್ದಾರೆ.

ಈ ಕುರಿತು ಆತ ನಾವು ರಜಾ ದಿನಗಳನ್ನು ಕಳೆಯಲು ಯುಎಸ್​ಗೆ ಹೊರಡಬೇಕು ಎಂದುಕೊಂಡು ಟಿಕೆಟ್​ ಬುಕ್​ ಮಾಡಿದ್ದೆವು. ಎರಡೂ ಟಿಕೆಟ್​ಗಳೂ ಕೂಡ ಬ್ಯುಸಿನೆಸ್​ ಕ್ಲಾಸ್​​ಗೆ ಬುಕ್​ ಆಗಿದೆ ಎಂದುಕೊಂಡಿದ್ದೆವು ಆದರೆ ಬೇರೆ ಬೇರೆಯಾಗಿತ್ತು. ಸಿಬ್ಬಂದಿ ಬಳೆ ಕೇಳಿದಾಗ ನಿಷ್ಟುರವಾಗಿ ಸೀಟನ್ನು ಕೊಡಲು ಸಾಧ್ಯವಿಲ್ಲ ಎಂದು ಹೇಳಿದರು. ಈ ಕುರಿತು ನಾನು ನನ್ನ ಹೆಂಡತಿಗೆ ತಿಳಿಸಿದಾಗ ತೀವ್ರ ಅಸಮಧಾನಗೊಂಡಳು.ಆದರೂ ಆಕೆಗೆ ಮನವರಿಕೆ ಮಾಡಿಸಿ ಎಕನಾಮಿಕ್​ ಕ್ಲಾಸ್​ನಲ್ಲಿ ಪ್ರಯಾಣ ಮಾಡುವಂತೆ ಒಪ್ಪಿಸದ್ದೇನೆ ಎಂದಿದ್ದಾರೆ.

ಈ ವಿಚಾರ ಕೇಳಿ ನೆಟ್ಟಿಗರು ಪತಿಯ ವಿರುದ್ಧ ಕಿಡಿಕಾರಿದ್ದು ಸ್ವಾರ್ಥಿ ಪತಿ ಎಂದು ದೂಷಿಸಿದ್ದಾರೆ.  ಇನ್ನೂ ಕೆಲವರು ಎರಡೂ ಸೀಟನ್ನು ಅಪ್​ಗ್ರೇಡ್​ ಮಾಡಬೇಕಿತ್ತು, ಇಲ್ಲವಾದರೆ ನೀವೂ ಎಕನಾಮಿಕ್​ ಕ್ಲಾಸ್​ನಲ್ಲಿಯೇ ಪ್ರಯಾಣಿಸಬೇಕಿತ್ತು ಅದನ್ನು ಬಿಟ್ಟು 12 ತಾಸು ಪತ್ನಿಯನ್ನು ಇನ್ನೆಲ್ಲೋ ಕೂರಿಸಿ ಪ್ರಯಾಣ ಮಾಡಲು ನಿರ್ಧರಿಸಿದ್ದೀರಿ ಎಂದರೆ ಇದು ಸರಿಯಲ್ಲ ಎಂದಿದ್ದಾರೆ ರೆಡ್ಡಿಟ್​ನಲ್ಲಿ ಹಂಚಿಕೊಂಡ ಬಳಿಕ ಕಾಮೆಂಟ್​​ಗಳನ್ನು ನೋಡಿ ಪತಿ ಕೊನೆಗೆ ಸೀಟ್​ಅನ್ನು ಅಪ್​ಗ್ರೇಡ್ ಮಾಡಿಸಿ ಪ್ರಯಾಣ ಮುಂದುವರೆಸಿದ್ದಾನೆ ಎಂದು ವರದಿಯಾಗಿದೆ.

ಇದನ್ನೂ ಓದಿ:

ಮೆಹಂದಿಯಲ್ಲಿ ಮೂಡಿದ ಲತಾ ಮಂಗೇಶ್ಕರ್​ ಭಾವಚಿತ್ರ: ವಿಡಿಯೋ ವೈರಲ್​

Published On - 3:43 pm, Fri, 11 February 22