Shocking Video: ಉದ್ಯಮಿಗೆ ಡಿಕ್ಕಿ ಹೊಡೆದು ಬಾನೆಟ್ ಮೇಲೆ ಎಳೆದುಕೊಂಡು ಹೋದ ಕಾರು; ಮಾಜಿ ಐಎಎಸ್ ಅಧಿಕಾರಿ, ಮಗನ ಬಂಧನ
Viral Video: ಕಾರು ಡಿಕ್ಕಿ ಹೊಡೆದಿದ್ದರಿಂದ ಬಾನೆಟ್ ಮೇಲೆ ಬಿದ್ದ ವ್ಯಕ್ತಿಯೊಂದಿಗೆ ಎಸ್‌ಯುವಿ ವೇಗವಾಗಿ ಚಲಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಕಾರಿನ ರಭಸಕ್ಕೆ ರಸ್ತೆಗೆ ಬಿದ್ದು ನರಳಾಡುತ್ತಿದ್ದ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದೆ.
ನವದೆಹಲಿ: ದೆಹಲಿಯ ಗ್ರೇಟರ್ ಕೈಲಾಶ್‌ನಲ್ಲಿ ಕಾರೊಂದು ಹಿಟ್ ಆ್ಯಂಡ್ ರನ್ ಆಗಿದ್ದು, ಕಾರು ಚಾಲಕ ವ್ಯಕ್ತಿಯೊಬ್ಬನಿಗೆ ಡಿಕ್ಕಿ ಹೊಡೆದು ಆತ ಬಾನೆಟ್ ಮೇಲೆ ಬಿದ್ದರೂ ಕಾರನ್ನು ಚಲಿಸಿಕೊಂಡು ಹೋಗಿದ್ದಾನೆ. ಕಾರು ಡಿಕ್ಕಿ ಹೊಡೆದು ಆತ ನೆಲಕ್ಕೆ ಬಿದ್ದು ಗಂಭೀರ ಗಾಯಗೊಂಡಿದ್ದರೂ ಆತನನ್ನು ಅಲ್ಲೇ ಬಿಟ್ಟು ಹೋಗಿರುವ ಘಟನೆಯ ಸಿಸಿಟಿವಿ ದೃಶ್ಯಾವಳಿ ವೈರಲ್ ಆಗಿದೆ. ಅಂದಹಾಗೆ, ಆ ಕಾರನ್ನು ಚಲಾಯಿಸುತ್ತಿದ್ದ ವ್ಯಕ್ತಿ ಮಾಜಿ ಐಎಎಸ್ ಅಧಿಕಾರಿಯ ಮಗ ಎಂಬುದು ಬಯಲಾಗಿದೆ. ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಾಗೇ, ಅಪಘಾತ ನಡೆದ ಸ್ಥಳದಿಂದ ಪರಾರಿಯಾಗಿದ್ದ ಮಗನಿಗೆ ತನ್ನ ಮನೆಯಲ್ಲಿ ಆಶ್ರಯ ಕೊಟ್ಟು, ಬಚ್ಚಿಟ್ಟುಕೊಳ್ಳಲು ಸಹಾಯ ಮಾಡಿದ್ದಕ್ಕೆ ಮಾಜಿ ಐಎಎಸ್ ಅಧಿಕಾರಿಯನ್ನು ಕೂಡ ಬಂಧಿಸಲಾಗಿದೆ.
ದಕ್ಷಿಣ ದೆಹಲಿಯಲ್ಲಿ ಸಿಸಿಟಿವಿ ಕ್ಯಾಮೆರಾಗಳಲ್ಲಿ ಈ ದೃಶ್ಯ ಸೆರೆಯಾಗಿದೆ. ಕಾರು ಡಿಕ್ಕಿ ಹೊಡೆದಿದ್ದರಿಂದ ಬಾನೆಟ್ ಮೇಲೆ ಬಿದ್ದ ವ್ಯಕ್ತಿಯೊಂದಿಗೆ ಎಸ್‌ಯುವಿ ವೇಗವಾಗಿ ಚಲಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. SUV ವೇಗವಾಗಿ ಹೋಗುತ್ತಿದ್ದಂತೆಯೇ ಬಾನೆಟ್ ಮೇಲಿದ್ದ ವ್ಯಕ್ತಿ ರಸ್ತೆಗೆ ಬೀಳುತ್ತಾನೆ. ತೀವ್ರವಾಗಿ ಗಾಯಗೊಂಡಿದ್ದ ಆತ ಏಳಲು ಸಾಧ್ಯವಾಗದೆ ಅಲ್ಲೇ ಬಿದ್ದಿದ್ದಾನೆ. ಆಗ ದಾರಿಹೋಕರು ಅವನಿಗೆ ಸಹಾಯ ಮಾಡುತ್ತಾರೆ. ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಗಾಯಗೊಂಡಿದ್ದ 37 ವರ್ಷದ ಆನಂದ್ ವಿಜಯ್ ಮಂಡೇಲಿಯಾ ಎಂಬ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಆ ವ್ಯಕ್ತಿ ಸದ್ಯಕ್ಕೆ ಮಾಂಡೇಲಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ತಾನು ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಕಾರೊಂದು ಡಿಕ್ಕಿ ಹೊಡೆದು ಮುಂದೆ ಸಾಗಿದೆ ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ. ಡಿಕ್ಕಿ ಹೊಡೆದ ಕಾರನ್ನು ಚಲಾಯಿಸುತ್ತಿದ್ದ ಯುವಕ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರ ಮಗ ಎಂಬುದು ಗೊತ್ತಾಗಿದೆ. ಸಿಸಿಟಿವಿ ದೃಶ್ಯಾವಳಿಯಿಂದ ಪೊಲೀಸರು ಚಾಲಕನನ್ನು ಗುರುತಿಸಿದ್ದಾರೆ.
Shocking #CCTV visuals of a man being dragged on bonnet of a car in South Delhi. Delhi police arrested Rtd IAS and his son. @DCPSouthDelhi @CPDelhi @DelhiPolice pic.twitter.com/hw23FlcCpM
— PURUSHOTTAM SINGH (@singhpuru2202) February 11, 2022
ಆ ಘಟನೆ ನಡೆದ ಎರಡು ದಿನಗಳ ನಂತರ ಮಾಜಿ ಐಎಎಸ್ ಅಧಿಕಾರಿಯ ಮಗ 27 ವರ್ಷದ ರಾಜ್ ಸುಂದರಂ ಎಂಬಾತನನ್ನು ಗುರುಗಾಂವ್ನ ಲಿ-ಮೆರಿಡಿಯನ್ ಹೊಟೇಲ್‌ನ ಹೊರಗೆ ಬಂಧಿಸಲಾಯಿತು. 27 ವರ್ಷದ ಕಾನೂನು ವಿದ್ಯಾರ್ಥಿಯು ಕೊಲೆಯ ಯತ್ನ ಸೇರಿದಂತೆ ಅನೇಕ ಆರೋಪಗಳನ್ನು ಹೊರಿಸಲಾಗಿದೆ. ಮಾಂಡೇಲಿಯಾ ಅವರ ಹೇಳಿಕೆಯನ್ನು ಪೊಲೀಸರೊಂದಿಗೆ ದಾಖಲಿಸುವ ಮೊದಲು, ಸ್ಥಳದ ಪರಿಶೀಲನೆ ಮತ್ತು ವೈದ್ಯಕೀಯ-ಕಾನೂನು ಪ್ರಕರಣದ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ಸಂಜೆ 6 ಗಂಟೆಗೆ ಈ ಘಟನೆ ನಡೆದಿದ್ದು, 37 ವರ್ಷದ ಉದ್ಯಮಿ ಆನಂದ್ ವಿಜಯ್ ಮಾಂಡೇಲಿಯಾ ಅವರಿಗೆ ಕಾರು ಡಿಕ್ಕಿ ಹೊಡೆದು ತೀವ್ರವಾಗಿ ಗಾಯಗೊಂಡಿದ್ದಾರೆ. ಅವರ ತಲೆಗೆ ಹಲವು ಗಾಯಗಳಾಗಿದ್ದು, ಸಾಕೇತ್‌ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸಪೋರ್ಟ್‌ನಲ್ಲಿದ್ದಾರೆ.
ಇದನ್ನೂ ಓದಿ: Shocking Video: ಹೋಟೆಲ್ ಊಟದಲ್ಲಿ ಶಿಶ್ನದ ತುಂಡು ಪತ್ತೆ!; ತಿನ್ನೋ ಆಹಾರದಲ್ಲಿ ಗುಪ್ತಾಂಗ ಕಂಡು ಮಹಿಳೆ ಶಾಕ್
Shocking News: ಹೆಂಡತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದವರನ್ನು ಕೊಲ್ಲಲು ಗಂಡ ಮಾಡಿದ ಪ್ಲಾನ್ ಅಂತಿಂಥದ್ದಲ್ಲ!