ಏರ್ ಇಂಡಿಯಾಗೆ ಆ ಹೆಸರಿಟ್ಟವರು  ಯಾರು?; 75 ವರ್ಷಗಳ ಹಿಂದೆ ಹೆಸರು ಆಯ್ಕೆ ಮಾಡಿದ ಕತೆ ಹೇಳಿದ ಟಾಟಾ ಗ್ರೂಪ್

Air India 1946ರಲ್ಲಿ ಟಾಟಾ ಏರ್ ಲೈನ್ಸ್(Tata Air Lines) ಟಾಟಾ ಸನ್ಸ್‌ನ ವಿಭಾಗದಿಂದ ಕಂಪನಿಯಾಗಿ ವಿಸ್ತರಿಸಿದಾಗ, ಹೆಸರನ್ನು ಆಯ್ಕೆ ಮಾಡಬೇಕಾಗಿತ್ತು.  ಭಾರತದ ಮೊದಲ ಏರ್‌ಲೈನ್ ಕಂಪನಿಯ ಆಯ್ಕೆಯು ಇಂಡಿಯನ್ ಏರ್‌ಲೈನ್ಸ್...

ಏರ್ ಇಂಡಿಯಾಗೆ ಆ ಹೆಸರಿಟ್ಟವರು  ಯಾರು?; 75 ವರ್ಷಗಳ ಹಿಂದೆ ಹೆಸರು ಆಯ್ಕೆ ಮಾಡಿದ ಕತೆ ಹೇಳಿದ ಟಾಟಾ ಗ್ರೂಪ್
ಏರ್ ಇಂಡಿಯಾ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Feb 06, 2022 | 8:57 PM

ದೆಹಲಿ: 75 ವರ್ಷಗಳ ಹಿಂದೆ ನಾಲ್ಕು ಹೆಸರುಗಳನ್ನು ನೀಡಿ ಅದರಲ್ಲಿ ಒಂದು ಹೆಸರು ಆಯ್ಕೆ ಮಾಡಲು ಟಾಟಾ (Tata) ಉದ್ಯೋಗಿಗಳ ಅಭಿಪ್ರಾಯ ಸಂಗ್ರಹ ಮಾಡಲಾಗಿತ್ತು. ಹಾಗೆ ಮಾಡಿದ ಅಭಿಪ್ರಾಯ ಸಂಗ್ರಹದಿಂದ ದೇಶದ ಮೊದಲ ವಿಮಾನಯಾನಕ್ಕೆ ಇಟ್ಟ ಹೆಸರು ಏರ್ ಇಂಡಿಯಾ (Air India). ಏರ್ ಇಂಡಿಯಾವನ್ನು ಔಪಚಾರಿಕವಾಗಿ ನಿಯಂತ್ರಣಕ್ಕೆ ತೆಗೆದುಕೊಂಡ 10 ದಿನಗಳ ನಂತರ, ಟಾಟಾ ಗ್ರೂಪ್ ಭಾನುವಾರ ಸಂಪೂರ್ಣ ಸೇವಾ ವಿಮಾನಯಾನ ಇತಿಹಾಸದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ. ಕಳೆದ ತಿಂಗಳು ಅದನ್ನು ಹಿಂತೆಗೆದುಕೊಳ್ಳುವ ಮೊದಲು ಸುಮಾರು ಏಳು ದಶಕಗಳ ಹಿಂದೆ ಟಾಟಾ ಏರ್ ಇಂಡಿಯಾವನ್ನು ಕಳೆದುಕೊಂಡಿತ್ತು. 1946ರಲ್ಲಿ ಟಾಟಾ ಏರ್ ಲೈನ್ಸ್(Tata Air Lines) ಟಾಟಾ ಸನ್ಸ್‌ನ ವಿಭಾಗದಿಂದ ಕಂಪನಿಯಾಗಿ ವಿಸ್ತರಿಸಿದಾಗ, ಹೆಸರನ್ನು ಆಯ್ಕೆ ಮಾಡಬೇಕಾಗಿತ್ತು.  ಭಾರತದ ಮೊದಲ ಏರ್‌ಲೈನ್ ಕಂಪನಿಯ ಆಯ್ಕೆಯು ಇಂಡಿಯನ್ ಏರ್‌ಲೈನ್ಸ್, ಪ್ಯಾನ್-ಇಂಡಿಯನ್ ಏರ್‌ಲೈನ್ಸ್, ಟ್ರಾನ್ಸ್-ಇಂಡಿಯನ್ ಏರ್‌ಲೈನ್ಸ್ ಮತ್ತು ಏರ್ ಇಂಡಿಯಾ ಎಂಬ ನಾಲ್ಕು ಹೆಸರುಗಳಲ್ಲಾಗಿತ್ತು ಎಂದು ಟಾಟಾ ಗ್ರೂಪ್ ಹೇಳಿದೆ.  ಈ ಬಗ್ಗೆ ಸರಣಿ ಟ್ವೀಟ್ ಮಾಡಿದ ಟಾಟಾ ಗ್ರೂಪ್ 1946 ರ ಟಾಟಾ ಮಾಸಿಕ ಬುಲೆಟಿನ್‌ನ ಆಯ್ದ ಭಾಗಗಳನ್ನು ಒಳಗೊಂಡಂತೆ ಎರಡು ಚಿತ್ರಗಳನ್ನು ಹಂಚಿಕೊಂಡಿದೆ. ಏರ್ ಇಂಡಿಯಾ ಟ್ವೀಟ್‌ಗಳನ್ನು ಮರುಟ್ವೀಟ್ ಮಾಡಿದೆ.  ಇದುವರೆಗೆ ಟಾಟಾ ಸನ್ಸ್ ಲಿಮಿಟೆಡ್‌ನ ವಿಭಾಗವಾಗಿ ಕಾರ್ಯನಿರ್ವಹಿಸುತ್ತಿದ್ದ ಟಾಟಾ ಏರ್‌ಲೈನ್ಸ್‌ನ ಚಟುವಟಿಕೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಮತ್ತು ವಿಸ್ತರಿಸಲು ಅವರು ರಚಿಸುತ್ತಿರುವ ಹೊಸ ಏರ್‌ಲೈನ್ ಕಂಪನಿಗೆ ಹೆಸರನ್ನು ಹುಡುಕುವ ಸಮಸ್ಯೆಯನ್ನು ಟಾಟಾದವರು ಎದುರಿಸುತ್ತಿದ್ದಾರೆ ಎಂದು ಬುಲೆಟಿನ್ ಹೇಳಿದೆ.

ಇಂಡಿಯನ್ ಏರ್ ಲೈನ್ಸ್, ಏರ್-ಇಂಡಿಯಾ ಪ್ಯಾನ್-ಇಂಡಿಯನ್ ಏರ್ ಲೈನ್ಸ್ ಮತ್ತು ಟ್ರಾನ್ಸ್-ಇಂಡಿಯನ್ ಏರ್ ಲೈನ್ಸ್ ಈ ಹೆಸರುಗಳಲ್ಲಿ ಒಂದ್ನು ಆಯ್ಕೆ ಮಾಡಬೇಕಿತ್ತು.

ಟಾಟಾ ಸಂಸ್ಥೆಯ ಮುಖ್ಯಸ್ಥರ ಸಹಜ ಪ್ರಜಾಸತ್ತಾತ್ಮಕ ಮನಸ್ಸಿಗೆ, ಬಾಂಬೆ ಹೌಸ್‌ನಲ್ಲಿ ಒಂದು ರೀತಿಯ ಗ್ಯಾಲಪ್ ಪೋಲ್ ಅಥವಾ ಮಾದರಿ ಅಭಿಪ್ರಾಯ ಸಮೀಕ್ಷೆಯ ಮೂಲಕ ಜನಪ್ರಿಯ ಅಭಿಪ್ರಾಯದಿಂದ ಆಯ್ಕೆಯನ್ನು ಮಾಡಲು ಅವಕಾಶ ನೀಡುವುದು ಒಳ್ಳೆಯದು ಎಂದು ಬುಲೆಟಿನ್ ಹೇಳಿದೆ.

ಟಾಟಾ ಉದ್ಯೋಗಿಗಳ ಅಭಿಪ್ರಾಯದ ಪ್ರಾತಿನಿಧಿಕ ವಿಭಾಗಗಳ ಅಭಿಪ್ರಾಯಗಳನ್ನು ಖಚಿತಪಡಿಸಿಕೊಳ್ಳಲು ಮತದಾನದ ಪತ್ರಗಳನ್ನು ವಿತರಿಸಲಾಯಿತು. ಅವರ ಮೊದಲ ಮತ್ತು ಎರಡನೆಯ ಆದ್ಯತೆಗಳನ್ನು ಸೂಚಿಸಲು ವಿನಂತಿಸಲಾಯಿತು.

“ಮೊದಲ ಎಣಿಕೆಯಲ್ಲಿ ಏರ್-ಇಂಡಿಯಾಗೆ 64, ಇಂಡಿಯನ್ ಏರ್ ಲೈನ್ಸ್‌ಗೆ 51, ಟ್ರಾನ್ಸ್-ಇಂಡಿಯನ್ ಏರ್ ಲೈನ್ಸ್‌ಗೆ 28 ಮತ್ತು ಪ್ಯಾನ್-ಇಂಡಿಯನ್ ಏರ್ ಲೈನ್ಸ್‌ಗೆ 19 ಮತಗಳು ಬಿದ್ದಿವೆ. ಕಡಿಮೆ ಒಲವು ಹೊಂದಿರುವ ಹೆಸರುಗಳನ್ನು ತೆಗೆದುಹಾಕಿದಾಗ, ಅಂತಿಮ ಎಣಿಕೆಯು ಏರ್-ಇಂಡಿಯಾಕ್ಕೆ 72 ಮತ್ತು ಇಂಡಿಯನ್ ಏರ್ ಲೈನ್ಸ್‌ಗೆ 58 ಮತಗಳನ್ನು ತೋರಿಸಿತು.

ಹೀಗಾಗಿ, ಹೊಸ ಕಂಪನಿಯ ಹೆಸರು ‘ಏರ್-ಇಂಡಿಯಾ’ ಎಂದಾಯಿತು ಎಂದು ಬುಲೆಟಿನ್ ಹೇಳಿದೆ.

ಹಳೆಯ ಏರ್ ಇಂಡಿಯಾದ ಚಿತ್ರದ ಹಿನ್ನೆಲೆಯಲ್ಲಿರುವ ಚಿತ್ರದಲ್ಲಿ ಏರ್ ಇಂಡಿಯಾಗೆ ಈ ಹೆಸರು ಯಾರಿಟ್ಟಿದ್ದು ಎಂದು ಟ್ವೀಟ್ ಪ್ರಶ್ನೆಗೆ ನಂತರದ ಟ್ವೀಟ್​​ನಲ್ಲಿ ಟಾಟಾ ಉತ್ತರಿಸಿದೆ.

ಅದರ ನಂತರ ಟ್ವೀಟ್‌ನಲ್ಲಿ “ಆದರೆ ಅಂತಿಮ ನಿರ್ಧಾರವನ್ನು ಯಾರು ತೆಗೆದುಕೊಂಡರು? ತಿಳಿಯಲು 1946 ರ ಟಾಟಾ ಮಾಸಿಕ ಬುಲೆಟಿನ್‌ನ ಈ ಆಯ್ದ ಭಾಗವನ್ನು ಓದಿ. #AirIndiaOnBoard #WingsOfChange #ThisIsTata” ಬುಲೆಟಿನ್‌ನಿಂದ ಆಯ್ದ ಭಾಗಗಳನ್ನು ಟ್ವೀಟ್ ಮಾಡಲಾಗಿದೆ.  ಟ್ವೀಟ್‌ಗಳನ್ನು ಟಾಟಾ ಗ್ರೂಪ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಮಾಡಲಾಗಿದೆ.

ಜನವರಿ 27 ರಂದು, ಟಾಟಾ ಏರ್ ಇಂಡಿಯಾ ಅದರ ಅಂಗಸಂಸ್ಥೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಜಂಟಿ ಉದ್ಯಮ AISATS ನಲ್ಲಿ 50 ಪ್ರತಿಶತ ಪಾಲನ್ನು ಸ್ವಾಧೀನಪಡಿಸಿಕೊಂಡಿತು. ಸ್ಪರ್ಧಾತ್ಮಕ ಹರಾಜು ಪ್ರಕ್ರಿಯೆಯ ಮೂಲಕ ಸರ್ಕಾರವು ನಷ್ಟದಲ್ಲಿರುವ ಏರ್ ಇಂಡಿಯಾವನ್ನು ತಲಾಸ್‌ಗೆ 18,000 ಕೋಟಿ ರೂ.ಗೆ ಮಾರಾಟ ಮಾಡಿತು. ಒಪ್ಪಂದದ ಭಾಗವಾಗಿ, ತಲಾಸ್ ಅವರು 2,700 ಕೋಟಿ ರೂಪಾಯಿಗಳನ್ನು ನಗದು ರೂಪದಲ್ಲಿ ಪಾವತಿಸಿದ್ದಾರೆ ಮತ್ತು ಏರ್‌ಲೈನ್‌ನ 15,300 ಕೋಟಿ ರೂಪಾಯಿ ಸಾಲವನ್ನು ವಹಿಸಿಕೊಂಡರು. ಏರ್ ಇಂಡಿಯಾದ ಉಳಿದ ಸಾಲ ಮತ್ತು ಎರವಲುಗಳನ್ನು AIAHL ಗೆ ವರ್ಗಾಯಿಸಲಾಯಿತು.

ಇದನ್ನೂ ಓದಿ: Ratan Tata: ಏರ್ ಇಂಡಿಯಾ ಪ್ರಯಾಣಿಕರಿಗೆ ರತನ್ ಟಾಟಾ ವಿಶೇಷ ಸಂದೇಶ; ಅದು ಏನೆಂದು ಪರಿಶೀಲಿಸಿ?

Published On - 7:53 pm, Sun, 6 February 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ