Tata Steel: ಟಾಟಾ ಸ್ಟೀಲ್ ಅಕ್ಟೋಬರ್ನಿಂದ ಡಿಸೆಂಬರ್ ಮೂರನೇ ತ್ರೈಮಾಸಿಕ ಲಾಭ ಶೇ 159ರಷ್ಟು ಹೆಚ್ಚಳ
ಟಾಟಾ ಸ್ಟೀಲ್ ಕಂಪೆನಿಯ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಶೇ 159ರಷ್ಟು ಹೆಚ್ಚಳವಾಗಿ 9573 ಕೋಟಿ ರೂಪಾಯಿ ಕ್ರೋಡೀಕೃತ ನಿವ್ವಳ ಲಾಭ ಬಂದಿದೆ.
ಟಾಟಾ ಸ್ಟೀಲ್ (Tata Steel) ಲಿಮಿಟೆಡ್ನಿಂದ ಫೆಬ್ರವರಿ 4ರ ಶುಕ್ರವಾರದಂದು 2021-22ನೇ ಹಣಕಾಸಿನ ವರ್ಷದ ಅಕ್ಟೋಬರ್ನಿಂದ ಡಿಸೆಂಬರ್ ತಿಂಗಳ ಮೂರನೇ ತ್ರೈಮಾಸಿಕ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಕ್ರೋಡೀಕೃತ ನಿವ್ವಳ ಲಾಭ 9,573 ಕೋಟಿ ರೂಪಾಯಿ ಬಂದಿದೆ. ಒಂದು ವರ್ಷದ ಹಿಂದಿನ ಇದೇ ಅವಧಿಯಲ್ಲಿ ದಾಖಲಾಗಿದ್ದ 3,697 ಕೋಟಿ ರೂಪಾಯಿಗೆ ಹೋಲಿಸಿದಲ್ಲಿ ಶೇ 159ರಷ್ಟು ಹೆಚ್ಚಳವಾಗಿದೆ. ಕಳೆದ ತ್ರೈಮಾಸಿಕದಲ್ಲಿ ಕಂಪೆನಿಯು ತೆರಿಗೆ ನಂತರದ ಲಾಭವಾಗಿ 11,918 ರೂಪಾಯಿ ಗಳಿಸಿದೆ.
ಈ ಖಾಸಗಿ ಕಂಪೆನಿಯ ಕ್ರೋಡೀಕೃತ ಆದಾಯವು 60,783 ಕೋಟಿ ರೂಪಾಯಿ ಬಂದಿದ್ದು, ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಬಂದಿದ್ದ 41,935 ಕೋಟಿಗೆ ಹೋಲಿಸಿದರೆ ಶೇ 45ರಷ್ಟು ಹೆಚ್ಚಾಗಿದೆ. ಕಳೆದ ತ್ರೈಮಾಸಿಕದಲ್ಲಿ 60,387 ಕೋಟಿ ರೂಪಾಯಿ ಬಂದಿದೆ. ಇಂಥ ಉತ್ತಮ ಪರ್ಫಾರ್ಮೆನ್ಸ್ ಎಲ್ಲ ಭೌಗೋಳಿಕ ಭಾಗದಲ್ಲೂ ಹೆಚ್ಚಿರುವ ವ್ಯಾಲ್ಯೂಮ್ನಿಂದ ಬಂದಿದೆ.
ಟಾಟಾ ಸ್ಟೀಲ್ ಷೇರು ಫೆಬ್ರವರಿ 4ರಂದು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ದಿನಾಂತ್ಯಕ್ಕೆ 9.70 ರೂಪಾಯಿ ಏರಿಕೆಯಾಗಿ, ರೂ. 1,176.30ಕ್ಕೆ ಕೊನೆಯಾಗಿದೆ. ಕಳೆದ ಒಂದು ವರ್ಷದಲ್ಲಿ ಈ ಸ್ಟಾಕ್ ಶೇ 79ರಷ್ಟು ರಿಟರ್ನ್ ನೀಡಿದೆ. ಕಳೆದ ಒಂದು ತಿಂಗಳಲ್ಲಿ ಶೇ 2.3ರಷ್ಟು ರಿಟರ್ನ್ ನೀಡಿದೆ.
ಇದನ್ನೂ ಓದಿ: Tata Steel Recruitment: ತೃತೀಯ ಲಿಂಗಿಗಳಿಗಾಗಿ ಉದ್ಯೋಗ ಸ್ಥಾನಕ್ಕೆ ಅರ್ಜಿ ಆಹ್ವಾನಿಸಿದ ಟಾಟಾ ಸ್ಟೀಲ್
Published On - 8:04 pm, Fri, 4 February 22