AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PSU Privatisation: ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳ ಖಾಸಗೀಕರಣ ಪ್ರಸ್ತಾವಕ್ಕೆ ಷೇರು ಮಾರ್ಕೆಟ್ ಪ್ರತಿಕ್ರಿಯೆ ಹೇಗಿದೆ?

ಕೇಂದ್ರ ಬಜೆಟ್ 2022ರಲ್ಲಿ ಸಾರ್ವಜನಿಕ ಸಂಸ್ಥೆಗಳ ಖಾಸಗೀಕರಣದ ಘೋಷಣೆಗೆ ಷೇರುಪೇಟೆಯಲ್ಲಿನ ಪಿಎಸ್​ಯು ಸೂಚ್ಯಂಕವು ಪ್ರತಿಕ್ರಿಯೆ ನೀಡಿದ್ದು ಹೇಗೆ ಎಂಬ ಮಾಹಿತಿ ಇಲ್ಲಿದೆ.

PSU Privatisation: ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳ ಖಾಸಗೀಕರಣ ಪ್ರಸ್ತಾವಕ್ಕೆ ಷೇರು ಮಾರ್ಕೆಟ್ ಪ್ರತಿಕ್ರಿಯೆ ಹೇಗಿದೆ?
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Feb 01, 2022 | 11:33 AM

Share

ಕೇಂದ್ರ ಬಜೆಟ್​ 2022ರ ಮಂಡನೆ ವೇಳೆ ಹಣಕಾಸು ಸಚಿವೆ ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳ ಖಾಸಗೀಕರಣದ (Privatisation) ಬಗ್ಗೆ ಪ್ರಸ್ತಾವ ಮಾಡಿದ್ದಾರೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಎಲ್​ಐಸಿ ಐಪಿಒ ಮತ್ತು ಇಸ್ಪಾತ್ ನೀಲಾಂಚಲ್ ಅನ್ನು ಟಾಟಾ ಸ್ಟೀಲ್​ಗೆ ವಹಿಸುವ ಬಗ್ಗೆ ಕೂಡ ತಿಳಿಸಿದ್ದಾರೆ. ಇದರಿಂದಾಗಿ ಷೇರು ಮಾರುಕಟ್ಟೆಯಲ್ಲಿ ಸಾರ್ವಜನಿಕ ಸ್ವಾಮ್ಯದ ಕಂಪೆನಿಗಳ ಷೇರಿನ ಬೆಲೆಯಲ್ಲಿ ಹೆಚ್ಚಳವಾಗಿದೆ. ಬಿಎಸ್​ಇ ಪಿಎಸ್​ಯು ಸೂಚ್ಯಂಕವು ಈ ಹಿಂದಿನ ಟ್ರೇಡಿಂಗ್ ಸೆಷನ್​ನಲ್ಲಿ 9020.21 ಪಾಯಿಂಟ್ಸ್​​ನೊಂದಿಗೆ ವಹಿವಾಟು ಮುಕ್ತಾಯಗೊಳಿಸಿತ್ತು. ಇಂದು ಆರಂಭವಾಗಿದ್ದು 9113.04 ಪಾಯಿಂಟ್ಸ್​​ಗೆ. ಆ ನಂತರ ದಿನದ ಗರಿಷ್ಠ ಮಟ್ಟ 9114.15 ಪಾಯಿಂಟ್ಸ್ ತಲುಪಿತು.

ಅಂದ ಹಾಗೆ ಬಿಎಸ್​ಇ ಪಿಎಸ್​ಯು ಸೂಚ್ಯಂಕದ ವಾರ್ಷಿಕ ಕನಿಷ್ಠ ಮಟ್ಟ 5724.42 ಪಾಯಿಂಟ್ಸ್​ ಆಗಿದ್ದು, ಗರಿಷ್ಠ ಮಟ್ಟ 9,358.78 ಪಾಯಿಂಟ್ಸ್ ಆಗಿದೆ. ಇತ್ತೀಚೆಗೆ ಏರ್​ ಇಂಡಿಯಾವನ್ನು ಯಶಸ್ವಿಯಾಗಿ ಟಾಟಾ ಸಮೂಹಕ್ಕೆ ವರ್ಗಾವಣೆ ಮಾಡಿ ಮುಗಿಸಿರುವುದು ದೊಡ್ಡ ಮಟ್ಟದ ಆತ್ಮವಿಶ್ವಾಸ ನೀಡಿದೆ. ಸಾಲದ ಸುಳಿಯಲ್ಲಿ ಸಿಲುಕಿದ್ದ ಏರ್​ ಇಂಡಿಯಾದ ಷೇರಿನ ಪಾಲನ್ನು ಮಾರಾಟ ಮಾಡಿದ್ದು, ಇದೀಗ ಎಲ್​ಐಸಿ ಐಪಿಒ ಪ್ರಸಕ್ತ ಹಣಕಾಸು ವರ್ಷದಲ್ಲಿ ಅತಿ ದೊಡ್ಡ ನಿರೀಕ್ಷೆ ಆಗಿದೆ.

ಎಲ್​ಐಸಿ ಐಪಿಒ ಭಾರತದ ಇತಿಹಾಸದಲ್ಲೇ ಅತಿ ದೊಡ್ಡ ಐಪಿಒ ಆಗಿದೆ. ಇದರ ಜತೆಗೆ ಇತರ ಸಾರ್ವಜನಿಕ ಸ್ವಾಮ್ಯದ ಷೇರುಗಳ ಮಾರಾಟ ಕೂಡ 2022-23ರ ಹಣಕಾಸು ವರ್ಷದಲ್ಲಿ ಮಾಡಲಾಗುವುದು. ಈ ಲೇಖನವನ್ನು ಸಿದ್ಧ ಮಾಡುವ ಹೊತ್ತಿಗೆ ಅಲ್ಪ ಪ್ರಮಾಣದ ಇಳಿಕೆಯೊಂದಿಗೆ 9,019.46 ಪಾಯಿಂಟ್ಸ್​ನಲ್ಲಿ ವಹಿವಾಟು ನಡೆಸುತ್ತಿತ್ತು.

ಇದನ್ನೂ ಓದಿ: Air India: ಟಾಟಾ ಸಮೂಹಕ್ಕೆ ಏರ್​ ಇಂಡಿಯಾ ಹಸ್ತಾಂತರಿಸುವ ಕಾರ್ಯ ಸಂಪೂರ್ಣ ಎಂದು ಘೋಷಿಸಿದ ತುಹಿನ್ ಕಾಂತ್ ಪಾಂಡೆ

ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್