Air India: ಟಾಟಾ ಸಮೂಹಕ್ಕೆ ಏರ್​ ಇಂಡಿಯಾ ಹಸ್ತಾಂತರಿಸುವ ಕಾರ್ಯ ಸಂಪೂರ್ಣ ಎಂದು ಘೋಷಿಸಿದ ತುಹಿನ್ ಕಾಂತ್ ಪಾಂಡೆ

ಏರ್​ ಇಂಡಿಯಾದ ಷೇರುಗಳನ್ನು ಟಾಟಾ ಸಮೂಹಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ಸಂಪೂರ್ಣಗೊಂಡಿದೆ ಎಂದು ಕೇಂದ್ರ ಸರ್ಕಾರದ ಪರವಾಗಿ ಸಂಬಂಧಪಟ್ಟ ಇಲಾಖೆ ಕಾರ್ಯದರ್ಶಿ ತುಹಿನ್ ಕಾಂತ್ ಪಾಂಡೆ ಘೋಷಿಸಿದ್ದಾರೆ.

Air India: ಟಾಟಾ ಸಮೂಹಕ್ಕೆ ಏರ್​ ಇಂಡಿಯಾ ಹಸ್ತಾಂತರಿಸುವ ಕಾರ್ಯ ಸಂಪೂರ್ಣ ಎಂದು ಘೋಷಿಸಿದ ತುಹಿನ್ ಕಾಂತ್ ಪಾಂಡೆ
ತುಹಿನ್ ಕಾಂತ್​ ಪಾಂಡೆ (ಸಂಗ್ರಹ ಚಿತ್ರ- ಚಿತ್ರ ಕೃಪೆ ಎಎನ್​ಐ)
Follow us
TV9 Web
| Updated By: Srinivas Mata

Updated on:Jan 27, 2022 | 5:02 PM

ಪೂರ್ಣಗೊಳ್ಳಬೇಕಾಗಿದ್ದ ನಿಯಮಾವಳಿಗಳನ್ನು ಸಂಪೂರ್ಣಗೊಳಿಸಲಾಗಿದೆ. ಏರ್​ಇಂಡಿಯಾದ (Air India) ಬಂಡವಾಳ ಹಿಂತೆಗೆತ ಪ್ರಕ್ರಿಯೆ ಮುಗಿದಿದೆ. ಷೇರುಗಳನ್ನು ಟಾಲೇಸ್ ಪ್ರೈವೇಟ್ ಲಿಮಿಟೆಡ್​ಗೆ ವರ್ಗಾವಣೆ ಮಾಡಲಾಗಿದೆ. ಇದು ಏರ್​ಇಂಡಿಯಾದ ಹೊಸ ಮಾಲೀಕ ಎಂದು ಹೂಡಿಕೆ ಹಾಗೂ ಸಾರ್ವಜನಿಕ ಆಸ್ತಿ ನಿರ್ವಹಣೆ (DIPAM) ಇಲಾಖೆಯ ಕಾರ್ಯದರ್ಶಿ ತುಹಿನ್ ಕಾಂತ್ ಪಾಂಡೆ ಹೇಳಿದ್ದಾರೆ. ಕೇಂದ್ರ ಸರ್ಕಾರವು ಕಳೆದ ವರ್ಷದ ಅಕ್ಟೋಬರ್​ನಲ್ಲಿ ಷೇರು ಖರೀದಿ ಮೊತ್ತವನ್ನು ಅಂತಿಮಗೊಳಿತ್ತು. ಟಾಟಾ ಸಮೂಹವು 2700 ಕೋಟಿ ರೂಪಾಯಿ ನಗದು ನೀಡುತ್ತದೆ ಮತ್ತು ಏರ್​ಲೈನ್ಸ್​ನ ಸಾಲದ ಮೊತ್ತ 15,300 ಕೋಟಿ ರೂಪಾಯಿ ವಹಿಸಿಕೊಳ್ಳುತ್ತದೆ. ಈ ವ್ಯವಹಾರದಲ್ಲಿ ಏರ್​ ಇಂಡಿಯಾ ಎಕ್ಸ್​ಪ್ರೆಸ್ ಮತ್ತು AISATS ಒಳಗೊಂಡಿದೆ. ಈ ವ್ಯವಹಾರ 2021ರ ಡಿಸೆಂಬರ್​ಗೆಮುಗಿಯಬೇಕಾಗಿತ್ತು. ಆ ನಂತರ 2022ರ ಜನವರಿಗೆ ವಿಸ್ತರಣೆ ಆಯಿತು,

ರಾಷ್ಟ್ರೀಕರಣಗೊಂಡ 69 ವರ್ಷಗಳ ನಂತರ, ಇದೀಗ ಅಂತಿಮವಾಗಿ “ಮಹಾರಾಜ” ಭಾರತದ ಅತಿ ದೊಡ್ಡ ಗುಂಪಾದ ಟಾಟಾ ಸಮೂಹಕ್ಕೆ ಮರಳಿದೆ. ಇಪ್ಪತ್ತು ವರ್ಷಗಳು ಹಾಗೂ ಮೂರು ಪ್ರಯತ್ನಗಳ ನಂತರದಲ್ಲಿ ಕೇಂದ್ರ ಸರ್ಕಾರವು ಏರ್​ ಇಂಡಿಯಾವನ್ನು ಅಂತಿಮವಾಗಿ ಹಸ್ತಾಂತರ ಮಾಡಿದೆ. ಕಳೆದ ಎರಡು ದಶಕದಲ್ಲಿ ಇದು ದೇಶದ ಮೊದಲ ಪ್ರಮುಖ ಖಾಸಗೀಕರಣ ಪ್ರಕ್ರಿಯೆಯ ಯಶಸ್ವಿ ಮುಕ್ತಾಯ ಆಗಿದೆ. ಇದನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪಡೆದ ಅತಿ ದೊಡ್ಡ ವಿಜಯ ಎನ್ನಲಾಗುತ್ತಿದೆ. ಸಾಲದ ಸುಳಿಯಲ್ಲಿ ಸಿಲುಕಿದ್ದ ಏರ್​ ಇಂಡಿಯಾ ಮತ್ತೆ ಮೂಲ ಮಾಲೀಕರ ತೆಕ್ಕೆಗೆ ಬಂದಂತಾಗಿದೆ. ಇದನ್ನು 1932ನೇ ಇಸವಿಯಲ್ಲಿ ಟಾಟಾ ಸಮೂಹದ ಮಾಜಿ ಅಧ್ಯಕ್ಷರಾದ ಜೆಆರ್​ಡಿ ಟಾಟಾ ಆರಂಭಿದರು. ಇದು ದೇಶದ ಮೊದಲ ವಿಮಾನಯಾನ ಸಂಸ್ಥೆ. ಇದರ ವಿಮಾನಗಳು ಆಗಿನ ಬ್ರಿಟಿಷ್ ಆಳ್ವಿಕೆಯ ಅವಿಭಜಿತ ಭಾರತದ ಕರಾಚಿ ಮತ್ತು ಬಾಂಬೆ ಮಧ್ಯೆ ಹಾರಾಟ ನಡೆಸುತ್ತಿತ್ತು.

ಏರ್​ ಇಂಡಿಯಾವನ್ನು ಹಸ್ತಾಂತರ ಮಾಡಿದ ನಂತರ ಮಾತನಾಡಿರುವ ಟಾಟಾ ಸನ್ಸ್​ನ ಅಧ್ಯಕ್ಷರಾದ ಎನ್. ಚಂದ್ರಶೇಖರನ್, ಈ ಪ್ರಕ್ರಿಯೆ ಪೂರ್ಣಗೊಂಡಿದ್ದರಿಂದ ನಮಗೆ ಸಂಪೂರ್ಣವಾಗಿ ಸಂತೋಷವಾಗಿದೆ ಮತ್ತು ಟಾಟಾ ಸಮೂಹದಲ್ಲಿ ಮತ್ತೆ ಏರ್​ ಇಂಡಿಯಾವನ್ನು ಪಡೆದಿರುವುದಕ್ಕೆ ಖುಷಿಯಾಗಿದೆ. ವಿಶ್ವ ದರ್ಜೆಯ ವಿಮಾನಯಾನ ಸಂಸ್ಥೆಯಾಗಿ ಸೃಷ್ಟಿಸಲು ನಾವು ಎಲ್ಲರೊಂದಿಗೆ ಹೆಜ್ಜೆ ಹಾಕುವುದನ್ನು ಎದುರು ನೋಡುತ್ತೇವೆ ಎಂದಿದ್ದಾರೆ. ಟಾಟಾ ಸಮೂಹದಿಂದ ದೊಡ್ಡ ಬದಲಾವಣೆಗಳನ್ನು ಮಾಡಲಾಗುತ್ತದೆ. ಸರಿಯಾದ ಸಮಯಕ್ಕೆ ಕಾರ್ಯಾಚರಣೆ ಉತ್ತಮಗೊಳಿಸುವ ಕಡೆಗೆ ಗಮನ ಕೇಂದ್ರೀಕರಿಸಲಾಗುವುದು. ಗರಿಷ್ಠ ಮಟ್ಟದ ಗಮನವನ್ನು ಸಮಯಕ್ಕೆ ಸರಿಯಾಗಿ ಏರ್​ ಇಂಡಿಯಾ ವಿಮಾನಗಳು ಹಾರಾಟ ನಡೆಸುತ್ತಿರುವ ಬಗ್ಗೆ ನೀಡಲಾಗುವುದು.

ಟಾಟಾ ಸಮೂಹದಿಂದ ಹಲವಾರು ಇತರ ಬದಲಾವಣೆಗಳನ್ನು ಯೋಜಿಸಲಾಗಿದೆ. ಆಸನೆ ವ್ಯವಸ್ಥೆಗಳಲ್ಲೂ ಬದಲಾವಣೆಗಳಾಗಲಿವೆ. ಸಿಬ್ಬಂದಿ ಸಮವಸ್ತ್ರ ಬದಲಾಗಲಿದೆ. ಹೋಟೆಲ್ ಉದ್ಯಮದಲ್ಲಿ ಟಾಟಾ ಪ್ರಮುಖ ಸಂಸ್ಥೆ ಮತ್ತು ಅದು ವಿಮಾನ ಯಾನದ ವೇಳೆ ಆಹಾರದ ಗುಣಮಟ್ಟ ಸುಧಾರಿಸುವ ಕಡೆಗೂ ಗಮನ ನೀಡಲಿದೆ ಎಂದು ವರದಿಗಳು ತಿಳಿಸಿವೆ. ಉದ್ಯಮಿ ರತನ್​ ಟಾಟಾ ಅವರ ಮುದ್ರಿತ ಧ್ವನಿಯ ಸಂದೇಶವನ್ನು ಸಹ ಹಾಕಲಾಗುವುದು.

ಏರ್ ಇಂಡಿಯಾದ ಸಂಕ್ಷಿಪ್ತ ಇತಿಹಾಸ:

-ಅಕ್ಟೋಬರ್ 8, 2021- 180 ಶತಕೋಟಿ ರೂಪಾಯಿ ಬಿಡ್ ಮಾಡಿದ ನಂತರ, ಏರ್ ಇಂಡಿಯಾದಲ್ಲಿ ಶೇ 100ರಷ್ಟು ಪಾಲನ್ನು ಗೆದ್ದ ಬಿಡ್ಡರ್ ಎಂದು ಸರ್ಕಾರವು ಟಾಟಾ ಸನ್ಸ್ ಅನ್ನು ಘೋಷಿಸಿತು.

– ಸೆಪ್ಟೆಂಬರ್ 15, 2021 – ಟಾಟಾ ಸನ್ಸ್ ಮತ್ತು ಬಜೆಟ್ ಏರ್‌ಲೈನ್ ಸ್ಪೈಸ್‌ಜೆಟ್‌ನ ಪ್ರವರ್ತಕ ಅಜಯ್ ಸಿಂಗ್ ಅವರಿಂದ ಏರ್ ಇಂಡಿಯಾ ಹಣಕಾಸಿನ ಬಿಡ್‌ಗಳನ್ನು ಸ್ವೀಕರಿಸಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿತ್ತು.

– ಅಕ್ಟೋಬರ್ 29, 2020 – ಗಡುವನ್ನು ಹಲವಾರು ಬಾರಿ ವಿಸ್ತರಿಸಿದ ನಂತರ ಸರ್ಕಾರವು ಎರಡು ಬಿಡ್‌ಗಳನ್ನು ಪಡೆಯಿತು.

– ಆಗಸ್ಟ್ 7, 2020 – ಬಜೆಟ್ ಅಂಗ ಸಂಸ್ಥೆಯಾದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ಗೆ ಸೇರಿದ ವಿಮಾನವು ದಕ್ಷಿಣ ಭಾರತದ ನಗರದ ಸಮೀಪ ರನ್‌ವೇಯಲ್ಲಿ ಅಪಘಾತಕ್ಕೆ ಈಡಾದ ನಂತರ ಕನಿಷ್ಠ 17 ಜನರು ಸಾವನ್ನಪ್ಪಿದರು ಮತ್ತು 100ಕ್ಕೂ ಹೆಚ್ಚು ಜನರು ಗಾಯಗೊಂಡರು.

– ಜನವರಿ 27, 2020 – ಭಾರತ ಸರ್ಕಾರವು ಏರ್​ ಇಂಡಿಯಾ ಷೇರಿನ ಪಾಲನ್ನು ಮಾರಾಟ ಮಾಡಲು ಗಡುವನ್ನು ಮುಂದಕ್ಕೆ ಹಾಕಿತು.

– ಡಿಸೆಂಬರ್ 12, 2019 – ಶೇ 76ರಷ್ಟು ಷೇರಿನ ಪಾಲು ಮತ್ತು ಕಂಪೆನಿಯ ಸಂಪೂರ್ಣ ಸಾಲದ ಆಫರ್ ತೆಗೆದುಕೊಳ್ಳುವವರನ್ನು ಹುಡುಕಲು ವಿಫಲವಾದ ನಂತರ ಸರ್ಕಾರವು ತನ್ನ ಶೇ 100ರಷ್ಟು ಪಾಲನ್ನು ಮಾರಾಟ ಮಾಡಲು ನಿರ್ಧರಿಸುತ್ತದೆ. ಒಂದಿಷ್ಟು ಹೊಂದಾಣಿಕೆಯ ಸಾಲ ನಿಯಮಾವಳಿಗಳನ್ನು ಒದಗಿಸುತ್ತದೆ.

– ಜೂನ್ 20, 2018 – ಬಿಡ್​ದಾರರಿಂದ ಆಸಕ್ತಿಯ ಕೊರತೆಯಿಂದಾಗಿ ಶೇ 76ರಷ್ಟು ಪಾಲನ್ನು ಮಾರಾಟ ಮಾಡುವ ಯೋಜನೆಯನ್ನು ಭಾರತವು ಸ್ಥಗಿತಗೊಳಿಸಿತು.

– ಮೇ 31, 2018 – ಏರ್ ಇಂಡಿಯಾದಲ್ಲಿ ಪಾಲನ್ನು ಮಾರಾಟ ಮಾಡುವ ಭಾರತದ ಪ್ರಸ್ತಾವವು ಗಡುವಿನೊಳಗೆ ಒಬ್ಬ ಬಿಡ್ಡರ್ ಅನ್ನು ಸಹ ಆಕರ್ಷಿಸಲು ವಿಫಲವಾಗಿ, ಸಂಭಾವ್ಯ ಖರೀದಿದಾರರು ಗಂಭೀರ ಪರಿಸ್ಥಿತಿಗಳನ್ನು ಉಲ್ಲೇಖಿಸುತ್ತಾರೆ.

– ಮಾರ್ಚ್ 28, 2018 – ಭಾರತವು ಏರ್​ ಇಂಡಿಯಾ ಸಾಲದ ಸರಿಸುಮಾರು 5.1 ಬಿಲಿಯನ್ ಡಾಲರ್ ಜೊತೆಗೆ ನಿಯಂತ್ರಿತ ಪಾಲನ್ನು ಮಾರಾಟ ಮಾಡಲು ಯೋಜಿಸುತ್ತದೆ.

– ಏಪ್ರಿಲ್ 2012 – ಭಾರತವು ಏರ್ ಇಂಡಿಯಾಕ್ಕೆ 5.8 ಬಿಲಿಯನ್ ಡಾಲರ್ ಬೇಲ್‌ಔಟ್ ಅನ್ನು ಅನುಮೋದಿಸಿತು, ಇದನ್ನು 2020ರ ವೇಳೆಗೆ ಸ್ವೀಕರಿಸಬೇಕಾಗಿತ್ತು.

– ಜುಲೈ 2009 – ಸರ್ಕಾರದ ನಿಯಂತ್ರಣದಲ್ಲಿ ವರ್ಷಗಳ ನಷ್ಟದ ನಂತರ ಮತ್ತು ಹೊಸ ಕಂಪೆನಿಗಳ ಹೊರಹೊಮ್ಮುವಿಕೆ ನಂತರ ಏರ್‌ಲೈನ್‌ನ ಚೇತರಿಕೆಗೆ ಮಾರ್ಗಸೂಚಿಯನ್ನು ತಯಾರಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವನ್ನು ನೇಮಿಸುತ್ತದೆ.

– 1953 – ಏರ್-ಇಂಡಿಯಾ ರಾಷ್ಟ್ರೀಕರಣ; ಎರಡು ಭಾಗಗಳಾಗಿ ವಿಭಜಿಸುತ್ತದೆ – ದೇಶೀಯ ವಿಮಾನಯಾನ ಮತ್ತು ಅಂತರರಾಷ್ಟ್ರೀಯ ವಿಮಾನಯಾನ.

– 1946 – ಟಾಟಾ ಏರ್‌ಲೈನ್ಸ್ ಅನ್ನು ಸಾರ್ವಜನಿಕ ಕಂಪೆನಿಯಾಗಿ ಪರಿವರ್ತಿಸಲಾಯಿತು ಮತ್ತು ಏರ್-ಇಂಡಿಯಾ ಲಿಮಿಟೆಡ್ ಎಂದು ಮರುನಾಮಕರಣ ಮಾಡಲಾಯಿತು. ಅದೇ ವರ್ಷದಲ್ಲಿ ಏರ್‌ಲೈನ್ಸ್ ತನ್ನ ವ್ಯಾಪಕವಾಗಿ ಗುರುತಿಸಲ್ಪಟ್ಟ ‘ಮಹಾರಾಜ’ ಹೆಸರನ್ನು ಅಳವಡಿಸಿಕೊಂಡಿತು.

– 1932 – ಏರ್ ಇಂಡಿಯಾವನ್ನು ಜೆಆರ್‌ಡಿ ಟಾಟಾ ಅವರು ಟಾಟಾ ಏರ್‌ಲೈನ್ಸ್ ಎಂದು ಸ್ಥಾಪಿಸಿದರು. ಇದು ಭಾರತದ ಮೊದಲ ವಿಮಾನಯಾನ ಸಂಸ್ಥೆಯಾಗಿದೆ. ಆ ಸಮಯದಲ್ಲಿ ಅದು ದೇಶೀಯ ವಿಮಾನಗಳನ್ನು ಮಾತ್ರ ನಿರ್ವಹಿಸುತ್ತಿತ್ತು.

ಇದನ್ನೂ ಓದಿ: ಉತ್ಕೃಷ್ಟ ಭೋಜನ, ರತನ್ ಟಾಟಾ ಅವರಿಂದ ವಿಶೇಷ ಸಂದೇಶ: ಹೊಸ ಏರ್ ಇಂಡಿಯಾ ಪ್ರಯಾಣಿಕರಿಗೆ ಏನೇನು ನೀಡಲಿದೆ?

Published On - 4:59 pm, Thu, 27 January 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್