Adani Wilmar IPO: ಅದಾನಿ ವಿಲ್ಮರ್ ಐಪಿಒ ಇಂದಿನಿಂದ ಶುರು; ಬ್ರೋಕರೇಜ್ ಸಂಸ್ಥೆಗಳ ಸಲಹೆ ಏನು?

ಅದಾನಿ ವಿಲ್ಮರ್ ಲಿಮಿಟೆಡ್ ಐಪಿಒ ಸಬ್​ಸ್ಕ್ರಿಪ್ಷನ್ ಜನವರಿ 27ರಿಂದ ಶುರು ಆಗುತ್ತಿದೆ. ಅದರ ದರ ಬ್ಯಾಂಡ್, ಬ್ರೋಕರೇಜ್​ ಸಂಸ್ಥೆಗಳು ಏನನು ಶಿಫಾರಸು ಮಾಡುತ್ತವೆ ಎಂಬುದರ ವಿವರ ಇಲ್ಲಿದೆ.

Adani Wilmar IPO: ಅದಾನಿ ವಿಲ್ಮರ್ ಐಪಿಒ ಇಂದಿನಿಂದ ಶುರು; ಬ್ರೋಕರೇಜ್ ಸಂಸ್ಥೆಗಳ ಸಲಹೆ ಏನು?
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jan 27, 2022 | 12:30 PM

ಅದಾನಿ ವಿಲ್ಮರ್ ಲಿಮಿಟೆಡ್ (AWL) ಅನ್ನು 1999ರಲ್ಲಿ ಅದಾನಿ ಸಮೂಹ ಮತ್ತು ಸಿಂಗಾಪೂರದ ವಿಲ್ಮರ್ ಸಮೂಹದ ಮಧ್ಯೆ ಜಂಟಿ ಉದ್ಯಮವಾಗಿ ಆರಂಭಿಸಲಾಯಿತು. ಈ ಎಫ್‌ಎಂಸಿಜಿ ಕಂಪೆನಿಯ ಉತ್ಪನ್ನಗಳ ಪೋರ್ಟ್‌ಫೋಲಿಯೊ ಮೂರು ವಿಭಿನ್ನ ವಿಭಾಗಗಳಲ್ಲಿ ವ್ಯಾಪಿಸಿದೆ, (1) ಖಾದ್ಯ ತೈಲ (2) ಪ್ಯಾಕ್ ಮಾಡಲಾದ ಆಹಾರ ಮತ್ತು ಎಫ್‌ಎಂಸಿಜಿ – ಉದಾಹರಣೆಗೆ ಗೋಧಿ ಹಿಟ್ಟು, ಅಕ್ಕಿ, ಬೇಳೆಕಾಳುಗಳು ಮತ್ತು ಸಕ್ಕರೆ (3) ಉದ್ಯಮದ ಅಗತ್ಯತೆಗಳು. ಎಡಿಎಲ್ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಐದು ಪ್ಯಾಕೇಜ್ ಮಾಡಿದ ಆಹಾರ ಕಂಪೆನಿಗಳಲ್ಲಿ ಒಂದಾಗಿದ್ದು, ಫಾರ್ಚೂನ್ ಅದರ ಜನಪ್ರಿಯ ಬ್ರ್ಯಾಂಡ್ ಆಗಿದೆ. ಕಂಪೆನಿಯು 22 ಉತ್ಪಾದನಾ ಫೆಸಿಲಿಟಿಗಳನ್ನು ಹೊಂದಿದ್ದು, 10 ಪುಡಿ ಮಾಡುವ ಘಟಕಗಳು ಮತ್ತು 18 ಸಂಸ್ಕರಣಾ ಕೇಂದ್ರಗಳನ್ನು ಒಳಗೊಂಡಿದ್ದು, ಇವು ಭಾರತದ 10 ರಾಜ್ಯಗಳಲ್ಲಿ ವ್ಯಾಪಿಸಿವೆ.

ಕಂಪೆನಿಯು ತನ್ನ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ಪ್ರತಿ ಷೇರಿಗೆ ರೂ. 218ರಿಂದ ರೂ. 230ರ ಬೆಲೆಯ ಬ್ಯಾಂಡ್‌ನಲ್ಲಿ, ಜನವರಿ 27ರಿಂದ 31ರ ಆಫರ್ ಅವಧಿಯಲ್ಲಿ ರೂ. 3,600 ಕೋಟಿಗಳವರೆಗೆ ಸಂಗ್ರಹಿಸಲು ಯೋಜನೆ ರೂಪಿಸಿದೆ. ಹೂಡಿಕೆದಾರರು ಕನಿಷ್ಠ 65 ಷೇರುಗಳಿಗೆ ಬಿಡ್ ಮಾಡಬಹುದು ಮತ್ತು ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಬೇಕೆಂದಾದಲ್ಲಿ 65ರ ಗುಣಕಗಳಲ್ಲಿ ಅಪ್ಲೈ ಮಾಡಬೇಕಾಗುತ್ತದೆ. ಸುಮಾರು 15.65 ಕೋಟಿ ಈಕ್ವಿಟಿ ಷೇರುಗಳ ಹೊಸ ವಿತರಣೆಯಾಗಿದೆ. ಈ ವಿತರಣೆಯ ನಂತರ, ಪ್ರವರ್ತಕರ ಷೇರುಗಳು ಶೇ 100ರಿಂದ ಶೇ 87.92ಕ್ಕೆ ಇಳಿಯುತ್ತವೆ (ಅದಾನಿ ಮತ್ತು ವಿಲ್ಮರ್‌ನೊಂದಿಗೆ ಸರಿಸುಮಾರು ತಲಾ ಶೇ 44ರಷ್ಟಿರುತ್ತದೆ).

ಕಂಪೆನಿಗೆ ಐಪಿಒದಿಂದ ಬಂದ ಹಣವನ್ನು ಬಂಡವಾಳ ವೆಚ್ಚಕ್ಕಾಗಿ ಬಳಸಿಕೊಳ್ಳಲಾಗುತ್ತದೆ. ಸಾಲಗಳ ಮರುಪಾವತಿ/ಪೂರ್ವಪಾವತಿ, ಸ್ಟ್ರಾಟೆಟಿಜಿಕ್ (ಕಾರ್ಯತಂತ್ರದ) ಸ್ವಾಧೀನಗಳು ಮತ್ತು ಹೂಡಿಕೆಗಳಿಗೆ ಧನಸಹಾಯ ಮತ್ತು ಸಾಮಾನ್ಯ ಕಾರ್ಪೊರೇಟ್ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಷೇರುಗಳ ಹಂಚಿಕೆಯನ್ನು ಫೆಬ್ರವರಿ 3ರೊಳಗೆ ನಿರ್ಧರಿಸಲಾಗುತ್ತದೆ ಮತ್ತು ಯಶಸ್ವಿ ಬಿಡ್​ದಾರರು ತಮ್ಮ ಡಿಮ್ಯಾಟ್ ಖಾತೆಗಳಿಗೆ ಫೆಬ್ರವರಿ 7ರೊಳಗೆ ಷೇರುಗಳನ್ನು ಪಡೆಯುತ್ತಾರೆ. ಷೇರುಗಳನ್ನು ಫೆಬ್ರವರಿ 8ರಂದು ಲಿಸ್ಟ್ ಮಾಡಲಾಗುತ್ತದೆ. GMP (ಗ್ರೇ ಮಾರ್ಕೆಟ್ ಪ್ರೀಮಿಯಂ) ಪ್ರಕಾರ, ಜನವರಿ 25ಕ್ಕೆ ಅನ್ವಯಿಸಿ ಹೇಳುವುದಾದರೆ, ಐಪಿಒ ಲಿಸ್ಟಿಂಗ್​ನಲ್ಲಿ ಶೇ 15ರಿಂದ 20ರಷ್ಟು ಶೇಕಡಾ ಗಳಿಕೆಯನ್ನು ಒದಗಿಸಬಹುದು. ಅಂದಹಾಗೆ ಬಹುತೇಕ ಬ್ರೋಕರೇಜ್ ಸಂಸ್ಥೆಗಳು ಈ ಷೇರನ್ನು ಸಬ್​ಸ್ಕ್ರೈಬ್ ಮಾಡಿಕೊಳ್ಳುವಂತೆ ಶಿಫಾರಸು ಮಾಡಿದ್ದಾರೆ.

ಇದನ್ನೂ ಓದಿ: Union Budget 2022: 10 ವರ್ಷದಲ್ಲಿ ಬಜೆಟ್​ ದಿನದಂದು ಷೇರುಪೇಟೆ ಸೂಚ್ಯಂಕಗಳ ಪರ್ಫಾರ್ಮೆನ್ಸ್ ಹೇಗಿತ್ತು?

ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು