ಪಂಜಾಬ್: ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಚರಣ್​​ಜಿತ್ ಸಿಂಗ್ ಚನ್ನಿ ಎಂದು ಘೋಷಿಸಿದ ರಾಹುಲ್ ಗಾಂಧಿ

Charanjit Singh Channi ಪಂಜಾಬ್ ಸಿಎಂ ಬಡ ಕುಟುಂಬದವರು, ಮುಂಬರುವ ಪಂಜಾಬ್ ವಿಧಾನಸಭೆ ಚುನಾವಣೆಗೆ ಚನ್ನಿ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಪಂಜಾಬ್: ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಚರಣ್​​ಜಿತ್ ಸಿಂಗ್ ಚನ್ನಿ ಎಂದು ಘೋಷಿಸಿದ ರಾಹುಲ್ ಗಾಂಧಿ
ಚರಣ್​​ಜಿತ್ ಸಿಂಗ್ ಚನ್ನಿ
Follow us
| Updated By: ರಶ್ಮಿ ಕಲ್ಲಕಟ್ಟ

Updated on:Feb 06, 2022 | 5:51 PM

ಲುಧಿಯಾನ: ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ (Congress)  ತಮ್ಮ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಪಂಜಾಬ್ ಮುಖ್ಯಮಂತ್ರಿ ಚರಣ್​​ಜಿತ್ ಸಿಂಗ್ ಚನ್ನಿ(Charanjit Singh Channi) ಅವರೇ ಕಾಂಗ್ರೆಸ್ ನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಲುಧಿಯಾನದಲ್ಲಿ ನಡೆದ ಸಮಾವೇಶದಲ್ಲಿ ರಾಹುಲ್ ಗಾಂಧಿ (Rahul Gandhi) ಘೋಷಣೆ ಮಾಡಿದ್ದಾರೆ. ಫೆಬ್ರವರಿ 20ರಂದು ಪಂಜಾಬ್​ ವಿಧಾನಸಭಾ ಚುನಾವಣೆಯಲ್ಲಿ  2 ಕ್ಷೇತ್ರಗಳಲ್ಲಿ  ಚರಣ್​ಜಿತ್​ ಸಿಂಗ್ ಚನ್ನಿ ಸ್ಪರ್ಧಿಸಲಿದ್ದಾರೆ. ಪಂಜಾಬ್ ಚುನಾವಣೆಯಲ್ಲಿ ಪಂಜಾಬ್​ ಕಾಂಗ್ರೆಸ್​ ಸಮಿತಿ ಅಧ್ಯಕ್ಷ ನವಜೋತ್  ಸಿಂಗ್ ಸಿಧು ಮುಖ್ಯಮಂತ್ರಿ ಸ್ಥಾನಕ್ಕೆ ಸ್ಪರ್ಧಿಸಲು ಒಲವು ತೋರಿದ್ದು, ಚನ್ನಿ ಹೆಸರು ಘೋಷಣೆ ಮಾಡಿದ್ದಕ್ಕೆ ಸಿಧುಗೆ ತೀವ್ರ ನಿರಾಸೆ ಆಗಿದೆ.  ಪಂಜಾಬ್ ಸಿಎಂ ಬಡ ಕುಟುಂಬದವರು, ಮುಂಬರುವ ಪಂಜಾಬ್ ವಿಧಾನಸಭೆ ಚುನಾವಣೆಗೆ ಚನ್ನಿ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಹೆಸರು ಘೋಷಣೆ ಆದ ನಂತರ ಎಎನ್ಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಚನ್ನಿ ಎಲ್ಲರಿಗೂ ಧನ್ಯವಾದಗಳು. ಇದು ನಾನು ಒಬ್ಬಂಟಿಯಾಗಿ ಹೋರಾಡಲು ಸಾಧ್ಯವಾಗದ ದೊಡ್ಡ ಯುದ್ಧ. ನನ್ನಲ್ಲಿ ಹಣವಿಲ್ಲ, ಹೋರಾಡಲು ಧೈರ್ಯವಿಲ್ಲ. ಪಂಜಾಬ್‌ನ ಜನರು ಈ ಯುದ್ಧದಲ್ಲಿ ಹೋರಾಡುತ್ತಾರೆ ಎಂದು ಹೇಳಿದ್ದಾರೆ.

ಪಂಜಾಬ್‌ನ ಮುಖ್ಯಮಂತ್ರಿ ಅಭ್ಯರ್ಥಿಯ ನಿರ್ಧಾರ ನನ್ನ ನಿರ್ಧಾರವಲ್ಲ ಎಂದು ಹೇಳಿದ ರಾಹುಲ್. “ನಾನು ಅದರ ಬಗ್ಗೆ ನಿರ್ಧರಿಸಿಲ್ಲ, ನಾನು ಇದನ್ನು ಪಂಜಾಬ್‌ನ ಜನರು, ಯುವಕರು, ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ಕೇಳಿದೆ. ನನಗೆ ಅಭಿಪ್ರಾಯವಿರಬಹುದು ಆದರೆ ನನ್ನ ಅಭಿಪ್ರಾಯಕ್ಕಿಂತ ನಿಮ್ಮ ಅಭಿಪ್ರಾಯ ಮುಖ್ಯ. ಬಡವರನ್ನು ಅರ್ಥಮಾಡಿಕೊಳ್ಳಬಲ್ಲ ವ್ಯಕ್ತಿಯೊಬ್ಬರು ನಮಗೆ ಬೇಕು ಎಂದು ಅವರು ಹೇಳಿದ್ದರು ಎಂದು ಚನ್ನಿ ಹೆಸರು ಘೋಷಣೆ ಮಾಡಿ ಭಾಷಣ ಮಾಡಿದ ರಾಹುಲ್ ಹೇಳಿದ್ದಾರೆ.

ಟೆಲಿಪೋಲ್ ಮತ್ತು ನಂತರದ ಘೋಷಣೆಯು ಮುಖ್ಯಮಂತ್ರಿ ಮತ್ತು ರಾಜ್ಯ ಪಕ್ಷದ ಮುಖ್ಯಸ್ಥ ನವಜೋತ್ ಸಿಧು ನಡುವಿನ ಜಗಳದ ಫಲಿತಾಂಶವಾಗಿದೆ. ಅವರು 2017 ರಲ್ಲಿ ರಾಜ್ಯ ಚುನಾವಣೆಗೆ ಮುಂಚಿತವಾಗಿ ಬಿಜೆಪಿಯಿಂದ ಕಾಂಗ್ರೆಸ್‌ಗೆ ಸೇರಿದಾಗಿನಿಂದ ತಮ್ಮ ಮಹತ್ವಾಕಾಂಕ್ಷೆಗಳನ್ನು ಸ್ಪಷ್ಟಪಡಿಸಿದ್ದಾರೆ.

ಜನವರಿ 27 ರಂದು ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ರಾಹುಲ್ ಸಾಮಾನ್ಯವಾಗಿ, ನಾವು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವುದಿಲ್ಲ ಆದರೆ ಕಾಂಗ್ರೆಸ್ ಕಾರ್ಯಕರ್ತರು ಬಯಸಿದರೆ, ನಾವು ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತೇವೆ. ನಾವು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಸಮಾಲೋಚಿಸುತ್ತೇವೆ, ಅವರು ನಿರ್ಧರಿಸುತ್ತಾರೆ ಎಂದು ಹೇಳಿದ್ದರು.

ಇದಾದ ನಂತರವೂ ಸಿಧು ಚನ್ನಿ ಮೇಲೆ ತಮ್ಮ ದಾಳಿಯನ್ನು ಮುಂದುವರೆಸಿದರು. ಶುಕ್ರವಾರ, ಮುಖ್ಯಮಂತ್ರಿಯ ಸಂಬಂಧಿಕರ ಮೇಲಿನ ದಾಳಿಗಳನ್ನು ಉಲ್ಲೇಖಿಸುವಾಗ, ಪಕ್ಷವು “ಪ್ರಾಮಾಣಿಕ ಮತ್ತು ಕ್ಲೀನ್ ಟ್ರ್ಯಾಕ್ ರೆಕಾರ್ಡ್” ಅನ್ನು ಆಯ್ಕೆ ಮಾಡಬೇಕು ಎಂದು ಹೇಳಿದರು. ಯಾವುದೇ ಮುಖ್ಯಮಂತ್ರಿ ಆಯ್ಕೆಗೆ ಕನಿಷ್ಠ 60 ಶಾಸಕರ ಬೆಂಬಲ ಇರಬೇಕು ಎಂದು ಅವರು ಹೇಳಿದರು.

ಕಳೆದ ವರ್ಷ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಸಿಧು ನೇತೃತ್ವದ ಬಂಡಾಯ ಶಾಸಕರ ಗುಂಪಿನೊಂದಿಗೆ ಒಂದು ವರ್ಷದ ಜಗಳದ ನಂತರ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ ಸಿಧು ಅವರು ತಮ್ಮ ಅಪೇಕ್ಷಿತ ಗುರಿಯನ್ನು ತಲುಪಿದರು. ಆದರೆ ಪಕ್ಷವು ಪರಿಶಿಷ್ಟ ಜಾತಿ ಸಮುದಾಯದ ನಾಯಕ ಚರಣ್‌ಜಿತ್ ಸಿಂಗ್ ಚನ್ನಿ ಅವರನ್ನು ಆಯ್ಕೆ ಮಾಡಿದೆ. ಏಳು ದಶಕಗಳ ಕಾಲ ಬೆಳ್ಳಿತೆರೆಯನ್ನು ಆಳಿದ ಅಪ್ರತಿಮ ಕಲಾವಿದೆ ಲತಾ ಮಂಗೇಶ್ಕರ್ ಅವರನ್ನು ದೇಶ ಕಳೆದುಕೊಂಡ ದಿನದಂದು ಕಾಂಗ್ರೆಸ್ ಆ ನಿರ್ಧಾರ ಪ್ರಕಟಿಸಿದೆ . ಗೋವಾದಲ್ಲಿ ಪ್ರಧಾನಿಯವರ ವರ್ಚುವಲ್ ರ್ಯಾಲಿ ಮತ್ತು ಉತ್ತರ ಪ್ರದೇಶದಲ್ಲಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವುದನ್ನು ಲತಾ ದೀದಿಗೆ ಗೌರವ ಸೂಚಕವಾಗಿ ಬಿಜೆಪಿ ರದ್ದುಗೊಳಿಸಿದೆ.

ಇದನ್ನೂ ಓದಿ: ನಮ್ಮ ಮೇಲಿನ ನಾಯಕರು ದುರ್ಬಲ ಮುಖ್ಯಮಂತ್ರಿಯನ್ನು ಬಯಸುತ್ತಾರೆ; ರಾಹುಲ್ ಗಾಂಧಿ ವಿರುದ್ಧ ನವಜೋತ್ ಸಿಧು ಟೀಕೆ

Published On - 5:16 pm, Sun, 6 February 22

ವಿಡಿಯೋ: ವೀಕೆಂಡ್​ನಲ್ಲಿ ಅಭಿಮಾನಿಗಳ ಭೇಟಿ ಮಾಡಿದ ಧ್ರುವ ಸರ್ಜಾ
ವಿಡಿಯೋ: ವೀಕೆಂಡ್​ನಲ್ಲಿ ಅಭಿಮಾನಿಗಳ ಭೇಟಿ ಮಾಡಿದ ಧ್ರುವ ಸರ್ಜಾ
ರೀಲ್ಸ್​ ಹುಚ್ಚು, 10ಮೀ. ಎತ್ತರದ ಸೈನ್‌ಬೋರ್ಡ್ ಮೇಲೆ ಯುವಕನ ಸಾಹಸ
ರೀಲ್ಸ್​ ಹುಚ್ಚು, 10ಮೀ. ಎತ್ತರದ ಸೈನ್‌ಬೋರ್ಡ್ ಮೇಲೆ ಯುವಕನ ಸಾಹಸ
ಬಿಜೆಪಿಯಲ್ಲಿ ತೀವ್ರಗೊಂಡ ವಿಜಯೇಂದ್ರ ಹಠಾವೋ ಹೋರಾಟ
ಬಿಜೆಪಿಯಲ್ಲಿ ತೀವ್ರಗೊಂಡ ವಿಜಯೇಂದ್ರ ಹಠಾವೋ ಹೋರಾಟ
CPL 2024: ಫಾಫ್ ಡುಪ್ಲೆಸಿಸ್ ಸ್ಪೋಟಕ ಬ್ಯಾಟಿಂಗ್: ಆದರೂ ಸೋತರು..!
CPL 2024: ಫಾಫ್ ಡುಪ್ಲೆಸಿಸ್ ಸ್ಪೋಟಕ ಬ್ಯಾಟಿಂಗ್: ಆದರೂ ಸೋತರು..!
ನೇರ ಪ್ರಸಾರದಲ್ಲಿ ಅಳುತ್ತಾ ಸುದ್ದಿ ಓದಿದ​​ ಆ್ಯಂಕರ್​; ಕಾರಣ ಏನು ಗೊತ್ತಾ?
ನೇರ ಪ್ರಸಾರದಲ್ಲಿ ಅಳುತ್ತಾ ಸುದ್ದಿ ಓದಿದ​​ ಆ್ಯಂಕರ್​; ಕಾರಣ ಏನು ಗೊತ್ತಾ?
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ