ಪಂಜಾಬ್ ಚುನಾವಣೆ: ಕಾಂಗ್ರೆಸ್ ನಾಯಕ ಸುನೀಲ್ ಜಾಖರ್ ಸಕ್ರಿಯ ರಾಜಕೀಯ ತೊರೆದಿದ್ದಾರೆ ಎಂದ ಎಎಪಿ ಶಾಸಕ

ತಮ್ಮ ಕಾಂಗ್ರೆಸ್ ಸಹೋದ್ಯೋಗಿಗಳ ಅನಗತ್ಯ, ಬೇಜವಾಬ್ದಾರಿ ಕಾಮೆಂಟ್‌ಗಳಿಂದಾಗಿ ಸುನೀಲ್ ಜಾಖರ್ ಅವರು  ಪಕ್ಷವನ್ನು ತೊರೆಯುತ್ತಿದ್ದಾರೆ ಎಂದು ಈಗಷ್ಟೇ ಸುದ್ದಿಯೊಂದನ್ನು ಕೇಳಿದೆ ಎಂದು ಟ್ವೀಟ್ ಮಾಡಿದ ಆಪ್ ಶಾಸಕ.

ಪಂಜಾಬ್ ಚುನಾವಣೆ: ಕಾಂಗ್ರೆಸ್ ನಾಯಕ ಸುನೀಲ್ ಜಾಖರ್ ಸಕ್ರಿಯ ರಾಜಕೀಯ ತೊರೆದಿದ್ದಾರೆ ಎಂದ ಎಎಪಿ ಶಾಸಕ
ಸುನೀಲ್ ಜಾಖರ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Feb 06, 2022 | 2:05 PM

ದೆಹಲಿ:  ಪಂಜಾಬ್ ವಿಧಾನಸಭಾ ಚುನಾವಣೆಗೆ(Punjab Assembly Elections) ಕಾಂಗ್ರೆಸ್ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಲು ಸಿದ್ಧತೆ ನಡೆಸುತ್ತಿದ್ದಂತೆ ಆಮ್ ಆದ್ಮಿ ಪಕ್ಷದ (AAP) ಬಂಡಾಯ ಶಾಸಕರೊಬ್ಬರು ಕಾಂಗ್ರೆಸ್ ನಾಯಕ ಸುನೀಲ್ ಜಾಖರ್ (Sunil Jakhar) ಅವರು ರಾಜಕೀಯದಿಂದ ನಿವೃತ್ತರಾಗಿದ್ದಾರೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷವು ಹಾಲಿ ಸಿಎಂ ಚರಣ್​​ಜಿತ್ ಸಿಂಗ್ ಚನ್ನಿ ಅಥವಾ ರಾಜ್ಯ ಘಟಕದ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸುವ ನಿರೀಕ್ಷೆ ಇದೆ. ಪಂಜಾಬ್‌ನಿಂದ ಬಹಳಷ್ಟು ದುರದೃಷ್ಟಕರ ಸುದ್ದಿಗಳು ಹೊರಹೊಮ್ಮುತ್ತಿವೆ. ತಮ್ಮ ಕಾಂಗ್ರೆಸ್ ಸಹೋದ್ಯೋಗಿಗಳ ಅನಗತ್ಯ, ಬೇಜವಾಬ್ದಾರಿ ಕಾಮೆಂಟ್‌ಗಳಿಂದಾಗಿ ಸುನೀಲ್ ಜಾಖರ್ ಅವರು  ಪಕ್ಷವನ್ನು ತೊರೆಯುತ್ತಿದ್ದಾರೆ ಎಂದು ಈಗಷ್ಟೇ ಕೇಳಿದೆ. ಸಜ್ಜನ ರಾಜಕಾರಣಿಯೊಬ್ಬರು ನಿರ್ಣಾಯಕ ಘಟ್ಟದಲ್ಲಿ ಹೊರಗೆ ಹೋಗುವುದನ್ನು ನೋಡಿದಾಗ ಬೇಸರವಾಗುತ್ತಿದೆ ಎಂದು ಖರಾರ್ ವಿಧಾನಸಭಾ ಕ್ಷೇತ್ರದ ಶಾಸಕ ಕನ್ವರ್ ಸಂಧು ಟ್ವೀಟ್ ಮಾಡಿದ್ದಾರೆ.  ಜಖರ್ ಅವರು ತಮ್ಮ ನಿರ್ಧಾರವನ್ನು ಮರುಪರಿಶೀಲಿಸುತ್ತಾರೆ ಎಂಬ ಭರವಸೆ ಇದೆ ಎಂದು ಸಂಧು ಹೇಳಿದ್ದಾರೆ. “ಪತ್ರಕರ್ತರಾಗಿರುವ ಸುನೀಲ್ ಜಾಖರ್ , ಸಂಭಾವಿತ ವ್ಯಕ್ತಿ ಮತ್ತು ದೀರ್ಘಕಾಲ ಸ್ನೇಹಿತ. ಅವರು ಸಕ್ರಿಯ ರಾಜಕೀಯವನ್ನು ತೊರೆಯುವ ಅವರ ನಿರ್ಧಾರವನ್ನು ಮರುಪರಿಶೀಲಿಸುತ್ತಾರೆ ಮತ್ತು ಅವರ ಹಾಸ್ಯದ ಒನ್ ಲೈನರ್‌ಗಳೊಂದಿಗೆ ಮತ್ತೆ ನಮ್ಮನ್ನು ನಗಿಸುತ್ತಾರೆ. ನಾವು ಅವರ ಕಾವ್ಯಾತ್ಮಕ ಬುದ್ಧಿವಂತಿಕೆಯ ಲಾಭವನ್ನು ಪಡೆಯುವುದನ್ನು ಮುಂದುವರಿಸುತ್ತೇವೆ ಎಂದು ಭಾವಿಸುತ್ತೇವೆ ಎಂದು ಸಂಧು ಟ್ವೀಟ್ ಮಾಡಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆ ನೀಡಿದ ನಂತರ ಮುಖ್ಯಮಂತ್ರಿಯಾಗಲು ಬಯಸಿದ್ದ ಜಾಖರ್, 79 ಪಂಜಾಬ್ ಕಾಂಗ್ರೆಸ್ ಶಾಸಕರಲ್ಲಿ 42 ಜನರು ಸಿಂಗ್ ಅವರ ಉತ್ತರಾಧಿಕಾರಿಯಾಗಬೇಕೆಂದು ಬಯಸಿದ್ದರು, ಇಬ್ಬರು ಮಾತ್ರ ಚನ್ನಿಗೆ ಒಲವು ತೋರಿದರು ಎಂದು ಹೇಳಿದ ಕೆಲವೇ ದಿನಗಳಲ್ಲಿ ಸಂಧು ಅವರ ಟ್ವೀಟ್‌ಗಳು ಬಂದಿವೆ.

ಕಳೆದ ವರ್ಷ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ (ಪಿಪಿಸಿಸಿ) ಅಧ್ಯಕ್ಷರಾಗಿದ್ದ ಸಿಧುಗೆ ದಾರಿ ಮಾಡಿಕೊಡಲು ಜಖರ್ ಪಕ್ಕಕ್ಕೆ ಸರಿದಿದ್ದು, ಸಿಧು ಜತೆಗಿನ ಜಗಳದ ನಂತರ ಅಮರಿಂದರ್ ಸಿಂಗ್ ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷ ತೊರೆದು ಪಂಜಾಬ್ ಲೋಕ ಕಾಂಗ್ರೆಸ್ (PLC) ಅನ್ನು ಸ್ಥಾಪಿಸಿದ್ದರು.

ಪಂಜಾಬ್‌ನಲ್ಲಿ ಅಸೆಂಬ್ಲಿ ಚುನಾವಣೆಗಳು ಫೆಬ್ರವರಿ 20 ರಂದು ಒಂದೇ ಹಂತದಲ್ಲಿ ನಡೆಯಲಿವೆ. ದಿನಾಂಕವನ್ನು ಫೆಬ್ರವರಿ 14 ರಿಂದ ಪರಿಷ್ಕರಿಸಲಾಗಿದೆ. ಎಲ್ಲಾ 117 ಕ್ಷೇತ್ರಗಳ ಮತ ಎಣಿಕೆ ಮಾರ್ಚ್ 10 ರಂದು ನಡೆಯಲಿದೆ.

ಇದನ್ನೂ ಓದಿ: Punjab Election ಪಂಜಾಬ್​​ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆಗೆ ಕಾಂಗ್ರೆಸ್ ಸಿದ್ಧತೆ, ರಾಹುಲ್ ನಿರ್ಧಾರಕ್ಕೆ ಬದ್ಧ ಎಂದ ಸಿಧು