Punjab Election ಪಂಜಾಬ್‌ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆಗೆ ಕಾಂಗ್ರೆಸ್ ಸಿದ್ಧತೆ, ರಾಹುಲ್ ನಿರ್ಧಾರಕ್ಕೆ ಬದ್ಧ ಎಂದ ಸಿಧು
ಭಾನುವಾರ ಮಧ್ಯಾಹ್ನ 2 ಗಂಟೆಗೆ 'ಆವಾಜ್ ಪಂಜಾಬ್ ದಿ' ವರ್ಚುವಲ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲು ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪಂಜಾಬ್‌ಗೆ ಆಗಮಿಸಲಿದ್ದಾರೆ. ಅವರ ಭೇಟಿಯ ವೇಳೆ ಚುನಾವಣೆಗೆ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವ ನಿರೀಕ್ಷೆಯಿದೆ.
ಚಂಡೀಗಢ: ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು (Navjot Singh Sidhu) ಅವರು ರಾಹುಲ್ ಗಾಂಧಿ (Rahul Gandhi) ಅವರ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗುತ್ತಾರೆ ಎಂದು ಭಾನುವಾರ ಹೇಳಿದ್ದಾರೆ. ವಿಧಾನಸಭೆ ಚುನಾವಣೆಗೆ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಊಹಾಪೋಹ ಇಂದು ಕೊನೆಗೊಳ್ಳುವ ಸಾಧ್ಯತೆಯಿದೆ. ಭಾನುವಾರ ಮಧ್ಯಾಹ್ನ 2 ಗಂಟೆಗೆ ‘ಆವಾಜ್ ಪಂಜಾಬ್ ದಿ’ (Aawaz Punjab Di)ವರ್ಚುವಲ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲು ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪಂಜಾಬ್‌ಗೆ ಆಗಮಿಸಲಿದ್ದಾರೆ. ಅವರ ಭೇಟಿಯ ವೇಳೆ ಚುನಾವಣೆಗೆ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವ ನಿರೀಕ್ಷೆಯಿದೆ. ಮುಖ್ಯಮಂತ್ರಿ ಅಭ್ಯರ್ಥಿಯ ಆಕಾಂಕ್ಷಿಯಾಗಿರುವ ಸಿಧು, “ಪಂಜಾಬ್‌ಗೆ ಸ್ಪಷ್ಟತೆಯನ್ನು ನೀಡಲು ಬಂದಿರುವ ದಾರಿದೀಪ ರಾಹುಲ್ ಜೀ” ಎಂದು ರಾಹುಲ್ ಅವರಿಗೆ ಸ್ವಾಗತ ಕೋರಿದ್ದಾರೆ. “ನಿರ್ಧಾರದ ಕ್ರಿಯೆಯಿಲ್ಲದೆ ಏನನ್ನೂ ಸಾಧಿಸಲಾಗಿಲ್ಲ. ಪಂಜಾಬ್‌ಗೆ ಸ್ಪಷ್ಟತೆ ನೀಡಲು ಬಂದಿರುವ ನಮ್ಮ ದಾರಿದೀಪ ರಾಹುಲ್ ಜಿ ಅವರಿಗೆ ಆತ್ಮೀಯ ಸ್ವಾಗತ. ಅವರ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರುತ್ತಾರೆ” ಎಂದು ಸಿಧು ಟ್ವೀಟ್ ಮಾಡಿದ್ದಾರೆ. ಪಂಜಾಬ್ ವಿಧಾನಸಭಾ ಚುನಾವಣೆಗೆ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಸಿಧು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪಕ್ಷವು ಉನ್ನತ ಹುದ್ದೆಗೆ ಯಾರನ್ನು ಆಯ್ಕೆ ಮಾಡಿದರೂ ಅವರಿಗೆ ಸಂಪೂರ್ಣ ಅಧಿಕಾರವಿದೆ ಎಂದು ಹೇಳಿದ್ದರು.
“ಆಯ್ಕೆಯಾದ ನಾಯಕನಿಗೆ ಸಂಪೂರ್ಣ ಶಕ್ತಿ ಇರುತ್ತದೆ. ರಾಜ್ಯವು ಪಿರಮಿಡ್‌ನಂತಿದೆ. ಒಬ್ಬ ವ್ಯಕ್ತಿ ಉನ್ನತ ಸ್ಥಾನಕ್ಕೇರುತ್ತಾನೆ ಎಂದು ಸಿಧು ಹೇಳಿದರು. “ನೆನಪಿಡಿ, ಕಳ್ಳರನ್ನು ಮೇಲ್ಭಾಗದಲ್ಲಿ ಕೂರಿಸಲಾಗಿದೆ ಮತ್ತು ರಾಜ್ಯವು ದಿವಾಳಿಯಾಯಿತು. ಈ ಬಾರಿ ಪ್ರಾಮಾಣಿಕ ವ್ಯಕ್ತಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ, ದೂರದೃಷ್ಟಿಯುಳ್ಳ ವ್ಯಕ್ತಿಯನ್ನು ಮಾಡಿ ಎಂದಿದ್ದಾರೆ ಸಿಧು.
Nothing great was ever achieved without an act of decision …. Warm welcome to our leading light Rahul Ji , who comes to give clarity to Punjab …. All will abide by his decision !!!
— Navjot Singh Sidhu (@sherryontopp) February 6, 2022
60 ಶಾಸಕರು ಚುನಾವಣೆಗೆ ಸ್ಪರ್ಧಿಸಿರುವ ಬಗ್ಗೆ ಅಥವಾ ಸರ್ಕಾರ ರಚನೆಯ ಮಾರ್ಗದ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಎಂದು ಸಿಧು ಆರೋಪಿಸಿದ್ದಾರೆ.
“ನಾನು ನೀತಿಯಿಂದ ಹಿಂದೆ ಸರಿದಿದ್ದೇನೆಯೇ? ನಾನು ಬಜೆಟ್ ಹಂಚಿಕೆಯಿಂದ ಹೊರಬಂದಿದ್ದೇನೆಯೇ? ಸಿಧು ಸ್ವಂತ ಮರಳು ಗಣಿ ಅಥವಾ ಮದ್ಯದ ಅಂಗಡಿಯನ್ನು ತೆರೆದಿದ್ದಾರಾ? ನನ್ನ ಆದಾಯವು ಕೋಟಿಗಳಲ್ಲಿ ಕಡಿಮೆಯಾದ ಏಕೈಕ ವ್ಯಕ್ತಿಯಾಗಿರಬಹುದು. ಆದರೆ ನನಗೆ ತೃಪ್ತಿ ಇದೆ” ಎಂದು ಅವರು ಹೇಳಿದರು. ಪಂಜಾಬ್‌ನಲ್ಲಿ ಫೆಬ್ರವರಿ 20 ರಂದು ಮತದಾನ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.
ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣ: ಪಂಜಾಬ್ ಸಿಎಂ ಚನ್ನಿ ಸೋದರಳಿಯ ಫೆ.8ರವರೆಗೆ ಇಡಿ ಕಸ್ಟಡಿಗೆ
Published On - 10:28 am, Sun, 6 February 22