AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shocking News: ಸೂಪರ್ ಹೀರೋ ಕಾಪಾಡುತ್ತಾನೆಂಬ ನಂಬಿಕೆಯಿಂದ ಟೆರೇಸ್​ನಿಂದ ಕೆಳಗೆ ಜಿಗಿದು ಸಾವನ್ನಪ್ಪಿದ ಬಾಲಕ

Crime News: ಬಿರಾಜ್ ಪಚಿಜಿಯಾ ಎಂಬ 12 ವರ್ಷದ ಬಾಲಕ ಕುಟುಂಬದ ಇತರ ಸದಸ್ಯರು ಪೂಜೆಯಲ್ಲಿ ನಿರತರಾಗಿದ್ದಾಗ ಟೆರೇಸ್​ನ ಮೇಲೆ ಹೋಗಿದ್ದ. ಆಗ ತನ್ನನ್ನು ಏಂಜೆಲ್ ಅಥವಾ ಸೂಪರ್ ಹೀರೋ ಬಂದು ಕಾಪಾಡುತ್ತಾನೆ ಎಂಬ ನಂಬಿಕೆಯಿಂದ ಆತ ಕೆಳಗೆ ಹಾರಿದ್ದ.

Shocking News: ಸೂಪರ್ ಹೀರೋ ಕಾಪಾಡುತ್ತಾನೆಂಬ ನಂಬಿಕೆಯಿಂದ ಟೆರೇಸ್​ನಿಂದ ಕೆಳಗೆ ಜಿಗಿದು ಸಾವನ್ನಪ್ಪಿದ ಬಾಲಕ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Feb 08, 2022 | 6:52 PM

Share

ಕೊಲ್ಕತ್ತಾ: ಕೆಲವೊಮ್ಮೆ ನಾವು ನೋಡುವ ದೃಶ್ಯಗಳು, ಕೇಳುವ ಕತೆಗಳು ನಮ್ಮ ಮನಸಿನ ಮೇಲೆ ಬಹಳ ಪರಿಣಾಮ ಬೀರುತ್ತವೆ. ಅದರಲ್ಲೂ ಟಿವಿಗಳಲ್ಲಿ ಬರುವ ಶೋಗಳು ಮಕ್ಕಳ ಮೇಲೆ ಬಹಳ ಪರಿಣಾಮ ಬೀರುತ್ತವೆ. ಸೂಪರ್​ ಹೀರೋ ಕತೆಗಳನ್ನು ಟಿವಿಯಲ್ಲಿ ನೋಡಿ ಪ್ರಭಾವಿತನಾಗಿದ್ದ 12 ವರ್ಷದ ಬಾಲಕನೊಬ್ಬ ಸೂಪರ್ ಹೀರೋ ಬಂದು ತನ್ನನ್ನು ಕಾಪಾಡುತ್ತಾನೆ ಎಂಬ ನಂಬಿಕೆಯಲ್ಲಿ ಉತ್ತರ ಕೊಲ್ಕತ್ತಾದಲ್ಲಿನ ಅಪಾರ್ಟ್‌ಮೆಂಟ್‌ನ 11ನೇ ಮಹಡಿಯಿಂದ ಹಾರಿ ಸಾವನ್ನಪ್ಪಿದ್ದಾನೆ. ಈ ಕುರಿತು ಸುದ್ದಿ ಸಂಸ್ಥೆ ಐಎಎನ್‌ಎಸ್ ವರದಿ ಮಾಡಿದ್ದು, ‘ಪ್ಲಾಟಿನಂ ಎಂಡ್’ ಎಂಬ ವೆಬ್-ಸೀರೀಸ್‌ನಲ್ಲಿ ತೋರಿಸಿರುವಂತೆ ‘ಏಂಜೆಲ್’ ತನ್ನನ್ನು ರಕ್ಷಿಸುತ್ತಾರೆಂಬ ನಂಬಿಕೆಯಲ್ಲಿ ಬಾಲಕ ಮಹಡಿಯಿಂದ ಕೆಳಗೆ ಹಾರಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ಪೊಲೀಸರಿಗೆ ತಿಳಿದುಬಂದಿದೆ.

ಜಪಾನಿನ ಶೋ ‘ಪ್ಲಾಟಿನಂ ಎಂಡ್’ ಒಂದು ಕಾಲ್ಪನಿಕ ಕಥೆಯನ್ನು ಆಧರಿಸಿ ವೆಬ್​ ಸೀರೀಸ್ ಆಗಿದೆ. ಆ ಶೋನಲ್ಲಿ ಹದಿಹರೆಯದ ಯುವಕನೊಬ್ಬ ಕಟ್ಟಡದ ಟೆರೇಸ್​ನಿಂದ ಹಾರಿದ್ದ. ಆದರೆ ಏಂಜೆಲ್​ ಬಂದು ಆತನನ್ನು ಕೆಳಗೆ ಬೀಳದ ಹಾಗೆ ಕಾಪಾಡಿದ್ದಳು. ಆ ಹುಡುಗ ಮಾಂತ್ರಿಕ ಶಕ್ತಿಯನ್ನು ಬೆಳೆಸಿಕೊಂಡಿದ್ದ. ಅದನ್ನು ನೋಡಿ 12 ವರ್ಷದ ಬಾಲಕ ಕೂಡ ಪ್ರಭಾವಿತನಾಗಿದ್ದ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಶನಿವಾರದಂದು ಪಾರ್ಕ್ ಸರ್ಕಸ್‌ನ ಫುಲ್‌ಬಗಾನ್ ಪ್ರದೇಶದ ಕೆನಾಲ್ ಸರ್ಕ್ಯುಲರ್ ರಸ್ತೆಯಲ್ಲಿರುವ ಅಪಾರ್ಟ್​ಮೆಂಟ್​ನಲ್ಲಿ ಪೂಜೆಯ ದಿನ ಈ ಘಟನೆ ನಡೆದಿದೆ. ಬಿರಾಜ್ ಪಚಿಜಿಯಾ ಎಂಬ 12 ವರ್ಷದ ಬಾಲಕ ಕುಟುಂಬದ ಇತರ ಸದಸ್ಯರು ಪೂಜೆಯಲ್ಲಿ ನಿರತರಾಗಿದ್ದಾಗ ಟೆರೇಸ್​ನ ಮೇಲೆ ಹೋಗಿದ್ದ. ಆಗ ತನ್ನನ್ನು ಏಂಜೆಲ್ ಅಥವಾ ಸೂಪರ್ ಹೀರೋ ಬಂದು ಕಾಪಾಡುತ್ತಾನೆ ಎಂಬ ನಂಬಿಕೆಯಿಂದ ಆತ ಕೆಳಗೆ ಹಾರಿದ್ದ.

ಆತ ಕೆಳಗೆ ಬಿದ್ದ ಶಬ್ದ ಕೇಳಿದ ಅಪಾರ್ಟ್​ಮೆಂಟ್​ನ ಜನರು ಓಡಿಬಂದು ನೋಡಿದಾಗ ಆ ಬಾಲಕ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿದರು. ತಕ್ಷಣ ಆತನ ಮನೆಯವರಿಗೆ ವಿಷಯ ತಿಳಿಸಿ, ಆತನನ್ನು ಹತ್ತಿರದ ನರ್ಸಿಂಗ್ ಹೋಮ್‌ಗೆ ಕರೆದೊಯ್ಯಲಾಯಿತು. ಆದರೆ, ಅಷ್ಟರಲ್ಲಿ ಆತ ಸಾವನ್ನಪ್ಪಿದ್ದ.

ಆ ವಿದ್ಯಾರ್ಥಿಗೆ ಆನ್‌ಲೈನ್ ತರಗತಿಗಳಿಗಾಗಿ ಇತ್ತೀಚೆಗೆ ಗೆಜೆಟ್ ಕೊಡಿಸಲಾಗಿತ್ತು. ಅದರಲ್ಲಿ ಆತ ವೆಬ್ ಸೀರೀಸ್, ಸಿನಿಮಾಗಳನ್ನು ನೋಡುತ್ತಿದ್ದ. ಆತ ‘ಪ್ಲಾಟಿನಂ ಎಂಡ್’ ವೆಬ್ ಸೀರೀಸ್​ಗೆ ಅಡಿಕ್ಟ್​ ಆಗಿದ್ದ. ಅದರ ಪ್ರಭಾವದಿಂದಲೇ ಆತ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Shocking News: ಪೊಲೀಸರು ತಂದ ಕೈದಿಯ ಶವ ಪೋಸ್ಟ್​ ಮಾರ್ಟಂ ವೇಳೆ ಎದ್ದು ಕುಳಿತಿತ್ತು!

Shocking News: ಹೆಂಡತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದವರನ್ನು ಕೊಲ್ಲಲು ಗಂಡ ಮಾಡಿದ ಪ್ಲಾನ್ ಅಂತಿಂಥದ್ದಲ್ಲ!

ಗಿಲ್ಲಿ ಪಕ್ಕ ರಕ್ಷಿತಾ ಅಲ್ಲ, ನಾನು ಇರಬೇಕಿತ್ತು: ಕಾವ್ಯಾ ಅಸಮಾಧಾನದ ಮಾತು
ಗಿಲ್ಲಿ ಪಕ್ಕ ರಕ್ಷಿತಾ ಅಲ್ಲ, ನಾನು ಇರಬೇಕಿತ್ತು: ಕಾವ್ಯಾ ಅಸಮಾಧಾನದ ಮಾತು
ಬಿಗ್​​ಬಾಸ್​​ ಸಂಭಾವನೆ, ಆದ ಖರ್ಚು ಮತ್ತು ಪಿಆರ್ ಬಗ್ಗೆ ಕಾವ್ಯಾ ಮಾತು
ಬಿಗ್​​ಬಾಸ್​​ ಸಂಭಾವನೆ, ಆದ ಖರ್ಚು ಮತ್ತು ಪಿಆರ್ ಬಗ್ಗೆ ಕಾವ್ಯಾ ಮಾತು
ಬಿಗ್​​ಬಾಸ್​​ಗೆ ಹೋಗಿದ್ದು ಏಕೆ? ಕಾವ್ಯಾ ಕೊಟ್ಟರು ಕಾರಣ
ಬಿಗ್​​ಬಾಸ್​​ಗೆ ಹೋಗಿದ್ದು ಏಕೆ? ಕಾವ್ಯಾ ಕೊಟ್ಟರು ಕಾರಣ
ಬಿಗ್​​ಬಾಸ್ ಬಳಿಕ ರಕ್ಷಿತಾ ಶೆಟ್ಟಿಯ ಮುಂದಿನ ಯೋಜನೆಗಳೇನು?
ಬಿಗ್​​ಬಾಸ್ ಬಳಿಕ ರಕ್ಷಿತಾ ಶೆಟ್ಟಿಯ ಮುಂದಿನ ಯೋಜನೆಗಳೇನು?
ಶಾಲಾ ಬಾಲಕಿಯನ್ನು ಹಿಂಬಾಲಿಸಿ ಮನೆ ಬಾಗಿಲಿಗೆ ಬಂದ ಆಗಂತುಕ!
ಶಾಲಾ ಬಾಲಕಿಯನ್ನು ಹಿಂಬಾಲಿಸಿ ಮನೆ ಬಾಗಿಲಿಗೆ ಬಂದ ಆಗಂತುಕ!
ಗಿಲ್ಲಿ ಬಗ್ಗೆ ಜನರಿಗೆ ಇರುವ ಕ್ರೇಜ್ ನೋಡಿ ಫಸ್ಟ್ ರಿಯಾಕ್ಷನ್ ಕೊಟ್ಟ ಕಾವ್ಯಾ
ಗಿಲ್ಲಿ ಬಗ್ಗೆ ಜನರಿಗೆ ಇರುವ ಕ್ರೇಜ್ ನೋಡಿ ಫಸ್ಟ್ ರಿಯಾಕ್ಷನ್ ಕೊಟ್ಟ ಕಾವ್ಯಾ
ಅಧಿಕಾರ ಬಿಟ್ಟಕೊಡಿ ಎಂದು ಕೇಳೋದು ಕಷ್ಟ: ಸಿಎಂಗೆ ಟಾಂಗ್ ಕೊಟ್ರಾ ಡಿಕೆಸು!
ಅಧಿಕಾರ ಬಿಟ್ಟಕೊಡಿ ಎಂದು ಕೇಳೋದು ಕಷ್ಟ: ಸಿಎಂಗೆ ಟಾಂಗ್ ಕೊಟ್ರಾ ಡಿಕೆಸು!
ನಿತಿನ್ ನಬಿನ್ ನನ್ನ ಬಾಸ್, ನಾನು ಕೇವಲ ಪಕ್ಷದ ಕಾರ್ಯಕರ್ತ: ಪ್ರಧಾನಿ ಮೋದಿ
ನಿತಿನ್ ನಬಿನ್ ನನ್ನ ಬಾಸ್, ನಾನು ಕೇವಲ ಪಕ್ಷದ ಕಾರ್ಯಕರ್ತ: ಪ್ರಧಾನಿ ಮೋದಿ
ಲಕ್ಕುಂಡಿ: ಉತ್ಖನನ ವೇಳೆ ಮನೆಯೊಂದರಲ್ಲಿ ಪುರಾತನ ದೇವಸ್ಥಾನ ಪತ್ತೆ!
ಲಕ್ಕುಂಡಿ: ಉತ್ಖನನ ವೇಳೆ ಮನೆಯೊಂದರಲ್ಲಿ ಪುರಾತನ ದೇವಸ್ಥಾನ ಪತ್ತೆ!
ಶ್ರೀಕೃಷ್ಣಮಠದಲ್ಲಿ ವಸ್ತ್ರಸಂಹಿತೆ ಜಾರಿ: ಇಲ್ಲಿದೆ ಭಕ್ತರಿಗೆ ಕೆಲ ಸೂಚನೆ
ಶ್ರೀಕೃಷ್ಣಮಠದಲ್ಲಿ ವಸ್ತ್ರಸಂಹಿತೆ ಜಾರಿ: ಇಲ್ಲಿದೆ ಭಕ್ತರಿಗೆ ಕೆಲ ಸೂಚನೆ