ಮನೆಯ ಬಳಿ ಬಂದ ಹಾವನ್ನು ಹಿಡಿದು ರಕ್ಷಿಸಿದ ಮಹಿಳಾ ಅಧಿಕಾರಿ: ಧೈರ್ಯಕ್ಕೆ ಮೆಚ್ಚಿದ ಜನ
ವಿಡಿಯೋದಲ್ಲಿ ರೋಶನಿ ಅವರು ಒಂದು ಚೂರು ದೃತಿಗೆಡದೆ ಸರಾಗವಾಗಿ ಹಾವನ್ನು ಎತ್ತಿ ಚೀಲದಲ್ಲಿ ಹಾಕಿ ಗಂಟಿಕ್ಕುವುದುನ್ನು ಕಾಣಬಹುದು. ಈ ದೃಶ್ಯದ ವಿಡಿಯೋವನ್ನು ಐಎಫ್ಎಸ್ ಅಧಿಕಾರಿ ಸುಧಾ ರಮೇನ್ ಎನ್ನುವವರು ಹಂಚಿಕೊಂಡಿದ್ದಾರೆ.
ಮಹಿಳಾ ಅರಣ್ಯ ಅಧಿಕಾರಿಯೊಬ್ಬರು (Woman Forest Officer) ಹಾವನ್ನು (Snake) ಹಿಡಿದು ರಕ್ಷಣೆ ಮಾಡಿದ ಘಟನೆ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೇರಳದ ತಿರುವನಂತಪುರಂನ ಕಟ್ಟಕದ ಎನ್ನುವ ಗ್ರಾಮದಲ್ಲಿ ಘಟನೆ ನಡೆದಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಅಧಿಕಾರಿಯನ್ನು ರೋಶನಿ ಜಿ ಎಸ್ (Roshani GS) ಎಂದು ಗುರುತಿಸಲಾಗಿದೆ. ಊರಿನ ಹತ್ತಿರ ಬಂದಿದ್ದ ಹಾವನ್ನು ಆರಾಮಾದಲ್ಲಿ ಎತ್ತಿ ಚೀಲದೊಳಗೆ ಹಾಕಿದ ಮಹಿಳಾ ಅಧಿಕಾರಿಯ ಧೈರ್ಯವನ್ನು ಕಂಡು ನೆಟ್ಟಿಗರು ಅಚ್ಚರಿ ವ್ಯಕ್ತಿಪಡಿಸಿದ್ದಾರೆ. ಅಲ್ಲದೆ ಅವರ ಧೈರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.
A brave Forest staff Roshini rescues a snake from the human habitations at Kattakada. She is trained in handling snakes.
Women force in Forest depts across the country is growing up in good numbers. VC @jishasurya pic.twitter.com/TlH9oI2KrH
— Sudha Ramen ?? (@SudhaRamenIFS) February 3, 2022
ವಿಡಿಯೋದಲ್ಲಿ ರೋಶನಿ ಅವರು ಒಂದು ಚೂರು ದೃತಿಗೆಡದೆ ಸರಾಗವಾಗಿ ಹಾವನ್ನು ಎತ್ತಿ ಚೀಲದಲ್ಲಿ ಹಾಕಿ ಗಂಟಿಕ್ಕುತ್ತಾರೆ. ಈ ದೃಶ್ಯದ ವಿಡಿಯೋವನ್ನು ಐಎಫ್ಎಸ್ ಅಧಿಕಾರಿ ಸುಧಾ ರಮೇನ್ ಎನ್ನುವವರು ಹಂಚಿಕೊಂಡಿದ್ದು, ಧೈರ್ಯಶಾಲಿ ಅಧಿಕಾರಿಯಾಗಿರುವ ರೋಶನಿ ಅವರು ಹಾವನ್ನು ರಕ್ಷಿಸಿದ್ದಾರೆ. ಅವರು ಹಾವನ್ನು ಹಿಡಿಯುವ ಬಗ್ಗೆ ತರಬೇತಿಯನ್ನೂ ಪಡೆದಿದ್ದಾರೆ. ಭಾರತದ ಅರಣ್ಯ ಇಲಾಖೆಯಲ್ಲಿ ಮಹಿಳಾ ಅಧಿಕಾರಿಗಳ ಸಂಖ್ಯೆ ಉತ್ತಮ ರೀತಿಯಲ್ಲಿ ಏರಿಕೆಯಾಗುತ್ತಿದೆ ಎಂದು ಕ್ಯಾಪ್ಷನ್ ನೀಡಿದ್ದಾರೆ. ಸದ್ಯ ಈ ವಿಡಿಯೋ ನೆಟ್ಟಿಗರು ಹುಬ್ಬೇರಿಸುವಂತೆ ಮಾಡಿದೆ.
ವರದಿಯ ಪ್ರಕಾರ 33 ವರ್ಷದ ಮಹಿಳಾ ಅಧಿಕಾರಿ ರೋಶನಿ ಅವರು ಹಾವನ್ನು ಹಿಡಿಯುವ ತರಬೇತಿಯನ್ನೂ ಪಡೆದಿದ್ದಾರೆ. ಈ ಬಗ್ಗೆ ರೋಶನಿ ಅವರು ನನಗೆ ಹಾವನ್ನು ಹಿಡಿಯಲು ಯಾವುದೇ ಭಯವಿಲ್ಲ. ತರಬೇತಿಯ ವೇಳೆ ವೈಜ್ಞಾನಿಕವಾಗಿ ಹಾವನ್ನು ಹಿಡಿಯುವ ತರಬೇತಿಯನ್ನು ನೀಡಿದ್ದಾರೆ. ಹಾವನ್ನು ಹಿಡಿಯುವ ವೇಳೆ ಸರಿಯಾದ ಮುಂಜಾಗೃತ ಕ್ರಮ ಪಾಲಿಸದಿದ್ದರೆ ಹಾವು ಹಿಡಿಯಾವ ಗಾಯಗಳಾಗಿ ಸಾವನ್ನಪ್ಪಬಹುದು ಎನ್ನುತ್ತಾರೆ.
ಇದನ್ನೂ ಓದಿ:
Viral News: 13 ಅಡಿ ಉದ್ದದ ಮೊಸಳೆಯ ಕೊಂದು ಬಾಡೂಟ ಮಾಡಿದ..!
Published On - 9:47 am, Tue, 8 February 22