AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: 13 ಅಡಿ ಉದ್ದದ ಮೊಸಳೆಯ ಕೊಂದು ಬಾಡೂಟ ಮಾಡಿದ..!

ಕಾರ್ಯಾಚರಣೆಗೆ ಇಳಿದ ಮೊಸಳೆ ಬೇಟೆಗಾರ ನೊಯಿ ಬೋರಿಸ್ ಹಲವು ದಿನಗಳ ಕಾಲ ಇದರ ಬೇಟೆಗೆ ಕಾದು ಕುಳಿತರು. ಇದಕ್ಕಾಗಿ ಸರೋವರದ ಮಧ್ಯದಲ್ಲಿ ಸಣ್ಣ ದ್ವೀಪವೊಂದನ್ನು ನಿರ್ಮಿಸಿ ಅಲ್ಲೇ ದಿನಗಳನ್ನು ಕಳೆಯಲಾರಂಭಿಸಿದ್ದನು.

Viral News: 13 ಅಡಿ ಉದ್ದದ ಮೊಸಳೆಯ ಕೊಂದು ಬಾಡೂಟ ಮಾಡಿದ..!
ಬೋರಿಸ್
TV9 Web
| Updated By: ಝಾಹಿರ್ ಯೂಸುಫ್|

Updated on: Feb 07, 2022 | 9:57 PM

Share

ಮೊಸಳೆ ಎಂದರೆ ಯಾರಿಗೆ ತಾನೆ ಭಯವಿಲ್ಲ ಹೇಳಿ. ಅದರಲ್ಲೂ ಮೊಸಳೆಗಳಲ್ಲಿ ಹಲವು ವಿಧಗಳಿವೆ. ಕೆಲವು ಚಿಕ್ಕವು ಮತ್ತು ಕೆಲವು ದೊಡ್ಡವು. ಆದಾಗ್ಯೂ, ಪ್ರತಿಯೊಬ್ಬರಿಗೂ ಮೊಸಳೆ ಅಪಾಯಕಾರಿ ಎಂಬುದು ಗೊತ್ತಿರುವ ವಿಚಾರ. ಹೀಗಾಗಿಯೇ ಮೊಸಳೆಗಳಿರುವ ನದಿಗಳತ್ತ ಯಾರು ಕೂಡ ಸುಳಿಯಲ್ಲ. ಇದಾಗ್ಯೂ ಕೆಲವೊಮ್ಮೆ ಮೊಸಳೆಗಳು ತನ್ನ ಆಹಾರವನ್ನು ಹುಡುಕುತ್ತಾ ನಾಡಿಗೆ ಬರುತ್ತದೆ. ಹೀಗೆ ಕಳೆದ ಕೆಲ ವರ್ಷಗಳಿಂದ ಫ್ಲೋರಿಡಾದ ಓಕಿಚೋಬಿ ಕೌಂಟಿಯ ಸರೋವರದೊಳಗೆ ದೈತ್ಯ ಮೊಸಳೆಯೊಂದು ವಾಸಿಸುತ್ತಿತ್ತು. ಈ ಸರೋವರ ಭಾಗದಲ್ಲಿ ವಾಸಿಸುತ್ತಿದ್ದ ಈ ದೈತ್ಯಾಕಾರದ ಮೊಸಳೆ ಭೀತಿಯುಂಟು ಮಾಡಿತ್ತು. ಏಕೆಂದರೆ ಹಲವು ಬಾರಿ ಈ ಮೊಸಳೆ ದಡಕ್ಕೆ ಬಂದು ಸಾಕು ಪ್ರಾಣಿಗಳನ್ನು ಎತ್ತಿಕೊಂಡು ಹೋಗಿತ್ತು. ಅನೇಕ ಬಾರಿ ಈ ದೈತ್ಯಾಕಾರ ಮೊಸಳೆ ನೋಡಿ ಜನರು ಕೂಡ ಭಯಭೀತರಾಗಿದ್ದರು. ಹೀಗಾಗಿ ಈ ಸರೋವರದ ದಡ ನಿವಾಸಿಗಳು ವೃತ್ತಿಪರ ಮೊಸಳೆ ಬೇಟೆಗಾರನ ಮೊರೆ ಹೋಗಿದ್ದರು.

ಅದರಂತೆ ಕಾರ್ಯಾಚರಣೆಗೆ ಇಳಿದ ಮೊಸಳೆ ಬೇಟೆಗಾರ ನೊಯಿ ಬೋರಿಸ್ ಹಲವು ದಿನಗಳ ಕಾಲ ಇದರ ಬೇಟೆಗೆ ಕಾದು ಕುಳಿತರು. ಇದಕ್ಕಾಗಿ ಸರೋವರದ ಮಧ್ಯದಲ್ಲಿ ಸಣ್ಣ ದ್ವೀಪವೊಂದನ್ನು ನಿರ್ಮಿಸಿ ಅಲ್ಲೇ ದಿನಗಳನ್ನು ಕಳೆಯಲಾರಂಭಿಸಿದ್ದನು. ಅದೊಂದು ದಿನ ನೋಯಿ ಕಣ್ಣಿಗೆ ಮೊಸಳೆ ಕಾಣಿಸಿಕೊಂಡಿದೆ. ಸಿಕ್ಕ ಅವಕಾಶವನ್ನು ಬಳಸಿಕೊಂಡ ನೊಯಿ ರೈಫಲ್​​ನಲ್ಲಿ ಶೂಟ್ ಮಾಡಿದ್ದಾರೆ. ಅಲ್ಲಿಗೆ ದೈತ್ಯಾಕಾರದ ಮೊಸಳೆಯ ಕಥೆ ಮುಗಿಯಿತು. ಆದರೆ ಕೊಂದ ಮೊಸಳೆಯ ಅಳತೆ ಪರಿಶೀಲಿಸಿದಾಗ ಎಲ್ಲರೂ ದಂಗಾದರು. ಏಕೆಂದರೆ ಈ ಮೊಸಳೆಯು ಬರೋಬ್ಬರಿ 13 ಅಡಿ ಉದ್ದವಿತ್ತು. ಅಷ್ಟೇ ಅಲ್ಲದೆ ಸುಮಾರು 406 ಕೆ.ಜಿ ತೂಕ ಹೊಂದಿತ್ತು.

ಭರ್ಜರಿ ಬೇಟೆಯಾಡಿದ ಖುಷಿಯಲ್ಲಿ ನೊಯಿ ಬೋರಿಸ್ ಪಾರ್ಟಿ ಮಾಡಲು ನಿರ್ಧರಿಸಿದ. ಅದರಂತೆ ಮೊಸಳೆಯ ಚರ್ಮವನ್ನು ಸುಳಿದು ಅದರ ಮಾಂಸವನ್ನು ಬೇಯಿಸಿ ಔತಣ ಮಾಡಿದರು. ಇದೀಗ ನೊಯಿ ಅವರ ಪಾರ್ಟಿ ಫೋಟೋ ಹಾಗೂ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಷ್ಟೇ ಅಲ್ಲದೆ ಒಂದೇ ಒಂದು ಬೇಟೆಯ ಮೂಲಕ ಫ್ಲೋರಿಡಾದಲ್ಲಿ ನೊಯಿ ಬೋರಿಸ್ ಸಖತ್ ಫೇಮಸ್ ಆಗಿದ್ದಾರೆ.

ಇದನ್ನೂ ಓದಿ: Yuzvendra Chahal: ವಿಕೆಟ್​ಗಳ ಶತಕ ಪೂರೈಸಿದ ಚಹಾಲ್

ಇದನ್ನೂ ಓದಿ: Rohit Sharma: ಸಚಿನ್ ದಾಖಲೆ ಮುರಿದ ಹಿಟ್​ಮ್ಯಾನ್ ರೋಹಿತ್ ಶರ್ಮಾ

ಇದನ್ನೂ ಓದಿ: Lata Mangeshkar: ಎಲ್ಲರೂ ಕೈಬಿಟ್ಟಾಗ ಟೀಮ್ ಇಂಡಿಯಾ ಕೈ ಹಿಡಿದಿದ್ದ ಲತಾ ಮಂಗೇಶ್ಕರ್..!

(man hunts 13 feet alligator eats roasted flesh after skinning beast)

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ