Lata Mangeshkar: ಎಲ್ಲರೂ ಕೈಬಿಟ್ಟಾಗ ಟೀಮ್ ಇಂಡಿಯಾ ಕೈ ಹಿಡಿದಿದ್ದ ಲತಾ ಮಂಗೇಶ್ಕರ್..!

Lata Mangeshkar: ಕ್ರಿಕೆಟ್ ನಿರ್ವಾಹಕ ರಾಜ್ ಸಿಂಗ್ ಡುಂಗರ್ಪುರ್ ಟೀಮ್ ಇಂಡಿಯಾ ಆಟಗಾರರಿಗೆ ಗೌರವ ಧನ ನೀಡಲು ಮತ್ತು ಅಭಿನಂದನಾ ಕಾರ್ಯಕ್ರಮ ನಡೆಸಲು ಹಣ ಸಂಗ್ರಹಿಸಲು ಪ್ಲ್ಯಾನ್ ರೂಪಿಸಿದರು.

Lata Mangeshkar: ಎಲ್ಲರೂ ಕೈಬಿಟ್ಟಾಗ ಟೀಮ್ ಇಂಡಿಯಾ ಕೈ ಹಿಡಿದಿದ್ದ ಲತಾ ಮಂಗೇಶ್ಕರ್..!
Lata Mangeshkar
Follow us
TV9 Web
| Updated By: ಝಾಹಿರ್ ಯೂಸುಫ್

Updated on:Feb 06, 2022 | 3:49 PM

ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರು ಭಾರತದ ಶ್ರೇಷ್ಠ ಗಾಯಕಿಯರಲ್ಲಿ ಒಬ್ಬರು ಎಂಬುದರಲ್ಲಿ ಅನುಮಾನವೇ ಇಲ್ಲ. ಗಾಯಕಿಯಲ್ಲದೆ ಲತಾ ಮಂಗೇಶ್ಕರ್ ಕ್ರಿಕೆಟ್ ಪ್ರೇಮಿ ಕೂಡ ಆಗಿದ್ದರು ಎಂಬುದು ಅನೇಕರಿಗೆ ಗೊತ್ತಿರದ ವಿಚಾರ. ಲತಾ ಜಿ ಹಲವಾರು ಸಂದರ್ಭಗಳಲ್ಲಿ ತಮ್ಮ ಕ್ರಿಕೆಟ್ ಹುಚ್ಚಿನ ಬಗ್ಗೆ ಮಾತನಾಡಿದ್ದರು. ಅನೇಕ ಬಾರಿ ಸ್ಟೇಡಿಯಂಗಳಲ್ಲೂ ಕಾಣಿಸಿಕೊಂಡಿದ್ದರು. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಕ್ರಿಕೆಟ್ ತಂಡದ ವಿಜಯಗಳ ಬಗ್ಗೆ ಟ್ವೀಟ್ ಮಾಡಿ ಅಭಿನಂದಿಸುತ್ತಿದ್ದರು. ಹೀಗೆ ಕ್ರಿಕೆಟ್​ ಪ್ರೇಮಿಗಳಲ್ಲಿ ಒಬ್ಬರಾಗಿದ್ದ ಲತಾ ಜಿ ಭಾರತೀಯ ಕ್ರಿಕೆಟ್​ ಈ ಮಟ್ಟಕ್ಕೆ ಬೆಳೆಯಲು ಕೂಡ ಕಾರಣಕರ್ತರು ಎಂದರೆ ತಪ್ಪಾಗಲಾರದು. ಏಕೆಂದರೆ ಎಲ್ಲರಿಗೂ ಗೊತ್ತಿರುವಂತೆ ಭಾರತದಲ್ಲಿ ಕ್ರಿಕೆಟ್ ಕ್ರಾಂತಿ ಆರಂಭವಾಗಿದ್ದು 1983 ರ ವಿಶ್ವಕಪ್ ವಿಜಯದ ಬಳಿಕ…ಆದರೆ ಆ ಬಳಿಕ ಏನಾಯ್ತು ಎಂಬುದರ ಬಗ್ಗೆ ಯಾರಿಗೂ ಗೊತ್ತಿಲ್ಲ.

ಕಪಿಲ್ ದೇವ್ ನೇತೃತ್ವದ ಟೀಮ್ ಇಂಡಿಯಾ 1983 ರಲ್ಲಿ ವಿಶ್ವಕಪ್‌ನ ಫೈನಲ್‌ನಲ್ಲಿ ಬಲಿಷ್ಠ ವೆಸ್ಟ್ ಇಂಡೀಸ್ ಅನ್ನು ಸೋಲಿಸಿ ಲಾರ್ಡ್ಸ್​ ಮೈದಾನದಲ್ಲಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ಇತ್ತ ಈ ಅಭೂತಪೂರ್ವ ಗೆಲುವನ್ನು ಸಂಭ್ರಮಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ನಿರ್ಧರಿಸಿತು. ಇಂಗ್ಲೆಂಡ್​ನಿಂದ ಆಗಮಿಸುವ ತಂಡವನ್ನು ಅಭಿನಂದಿಸಲು ಮತ್ತು ಗೌರವಿಸಲು ಬಯಸಿತು. ಆದರೆ, ಅಂದು ಬಿಸಿಸಿಐ ಅಷ್ಟೊಂದು ಶ್ರೀಮಂತವಾಗಿರಲಿಲ್ಲ. ಇದಕ್ಕೆಲ್ಲಾ ಬೇಕಾದ ಹಣದ ಕೊರತೆಯನ್ನು ಎದುರಿಸಿತು.

ಆಗ ಕ್ರಿಕೆಟ್ ನಿರ್ವಾಹಕ ರಾಜ್ ಸಿಂಗ್ ಡುಂಗರ್ಪುರ್ ಟೀಮ್ ಇಂಡಿಯಾ ಆಟಗಾರರಿಗೆ ಗೌರವ ಧನ ನೀಡಲು ಮತ್ತು ಅಭಿನಂದನಾ ಕಾರ್ಯಕ್ರಮ ನಡೆಸಲು ಹಣ ಸಂಗ್ರಹಿಸಲು ಪ್ಲ್ಯಾನ್ ರೂಪಿಸಿದರು. ಅನೇಕರ ಬಳಿ ಸಹಾಯ ಯಾಚಿಸಿದರು. ಕೆಲವರು ಕಡಿಮೆ ಮೊತ್ತದ ದೇಣಿಗೆ ನೀಡುವುದಾಗಿ ತಿಳಿಸಿದ್ದರು. ಯಾರೂ ಕೂಡ ಭಾರತ ತಂಡವನ್ನು ಗೌರವಿಸುವ ಅಥವಾ ನೆರವು ನೀಡುವ ಬಗ್ಗೆ ಪರಿಪೂರ್ಣ ಬೆಂಬಲ ನೀಡುತ್ತಿರಲಿಲ್ಲ. ಇದರಿಂದ ಬಿಸಿಸಿಐ ಇಕ್ಕಟಿಗೆ ಸಿಲುಕಿತು. ಇದೇ ವೇಳೆ ಡುಂಗರ್ಪುರ್ ದೆಹಲಿಯಲ್ಲಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲು ಪ್ಲ್ಯಾನ್ ರೂಪಿಸಿದರು. ಈ ಬಗ್ಗೆ ಲತಾ ಮಂಗೇಶ್ಕರ್ ಅವರ ಸಹಾಯ ಯಾಚಿಸಿದರು. ಈ ಸಂಗೀತ ಕಾರ್ಯಕ್ರಮ ನಡೆಸಿಕೊಡುವಂತೆ ಮನವಿ ಮಾಡಿದರು. ಇದಕ್ಕೆ ಲತಾ ಜಿ ಕೂಡ ಒಪ್ಪಿಕೊಂಡರು.

ರೇಡಿಯೊ ಸ್ಟೇಷನ್‌ಗೆ ನೀಡಿದ ಹಳೆಯ ಸಂದರ್ಶನದಲ್ಲಿ, ಲತಾ ಜಿ ಘಟನೆಯನ್ನು ಸ್ಮರಿಸಿದ್ದರು. ” ಅಂದು ಡುಂಗರ್ಪುರ್ ನನ್ನಲ್ಲಿ ಮನವಿ ಮಾಡಿದಾಗ, ಖಂಡಿತವಾಗಿಯೂ ಮಾಡುತ್ತೇನೆ ಎಂದು ಹೇಳಿದ್ದೆ. ಆಗಸ್ಟ್ 17 ರಂದು ದೆಹಲಿ ತಲುಪಿ ವಿಶೇಷ ಸಂಗೀತ ಕಾರ್ಯಕ್ರಮ ನೀಡಿದ್ದೆ. ಸುರೇಶ್ ವಾಡೇಕರ್ ಮತ್ತು ಮುಖೇಶ್ ಭಯ್ಯಾ ಅವರ ಪುತ್ರ ನಿತಿನ್ ಮುಖೇಶ್ ಕೂಡ ಈ ಕಾರ್ಯಕ್ರಮಕ್ಕೆ ಬೆಂಬಲ ನೀಡಿದ್ದರು. ಆ ಕಾರ್ಯಕ್ರಮದಲ್ಲಿ ರಾಜೀವ್ ಗಾಂಧಿ ಕೂಡ ಇದ್ದರು ಎಂದು ಲತಾ ಮಂಗೇಶ್ಕರ್ ಹಿಂದೊಮ್ಮೆ ಈ ಕಾರ್ಯಕ್ರಮದ ಬಗ್ಗೆ ಮಾತನಾಡಿದ್ದರು.

ಅದರಂತೆ ಲತಾ ಮಂಗೇಶ್ಕರ್ ಅವರ ಸಹೋದರ ಸಂಗೀತ ಸಂಯೋಜಕ ಪಂಡಿತ್ ಹೃದಯನಾಥ್ ಮಂಗೇಶ್ಕರ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಅಂದು ಪಂಡಿತ್ ಹೃದಯನಾಥ್ ಅವರು ರಚಿಸಿದ ಭಾರತ್ ವಿಶ್ವ ವಿಜೇತ… ವಿಶೇಷ ಗೀತೆ ಹೈಲೈಟ್ ಆಗಿತ್ತು. ಈ ಹಾಡನ್ನು ಅಂದು ವೇದಿಕೆಯಲ್ಲಿದ್ದ ಕ್ರಿಕೆಟಿಗರು ಸಹ ಹಾಡಿದರು. ಕೊನೆಯಲ್ಲಿ ಈ ಸಂಗೀತ ಕಾರ್ಯಕ್ರಮದಿಂದಾಗಿ ಬರೋಬ್ಬರಿ 20 ಲಕ್ಷ ರೂ. ಸಂಗ್ರಹವಾಯಿತು. ಅಂದಿನ ಕಾಲದಲ್ಲಿ ಅದು ಕೋಟಿಗಿಂತ ಹೆಚ್ಚಿನ ಮೊತ್ತವಾಗಿತ್ತು. ಈ ಮೊತ್ತದಿಂದ ಟೀಮ್ ಇಂಡಿಯಾ ಆಟಗಾರರಿಗೆ ತಲಾ ಒಂದೊಂದು ಲಕ್ಷ ರೂ. ಬಹುಮಾನ ಮೊತ್ತವಾಗಿ ನೀಡಲಾಯಿತು. ಆದರೆ ಇಡೀ ಕಾರ್ಯಕ್ರಮ ನಡೆಸಿದ ಲತಾ ಮಂಗೇಶ್ಕರ್ ಮಾತ್ರ ಒಂದೇ ಒಂದು ಪೈಸೆಯನ್ನೂ ಕೂಡ ಸಂಭಾವನೆಯಾಗಿ ಸ್ವೀಕರಿಸಿಲ್ಲ. ಬಂದಿದೆಲ್ಲವನ್ನೂ 1983 ರ ವಿಶ್ವಕಪ್ ವಿಜೇತ ಭಾರತ ತಂಡಕ್ಕೆ ನೀಡಿದರು.

ಬಿಸಿಸಿಐ ಅವರ ಕೊಡುಗೆಯನ್ನು ಮರೆಯಲಿಲ್ಲ. ಅವರ ಈ ನಡೆಯ ಗೌರವಾರ್ಥವಾಗಿ, ಭಾರತದಲ್ಲಿ ನಡೆಯುವ ಪ್ರತಿ ಅಂತರರಾಷ್ಟ್ರೀಯ ಪಂದ್ಯಗಳಿಗೆ ಎರಡು ವಿಐಪಿ ಪಾಸ್‌ಗಳನ್ನು ಗಾನ ಕೋಗಿಲೆಗೆ ಕಾಯ್ದಿರಿಸಲಾರಂಭಿಸಿದರು. ಭಾರತದಲ್ಲಿ ಎಲ್ಲೇ ಪಂದ್ಯ ನಡೆದರೂ ಲತಾಜಿ ಅವರಿಗೆ ಎರಡು ಟಿಕೆಟ್​ಗಳನ್ನು ವಿಐಪಿ ಪಾಸ್ ಆಗಿ ಕಾಯ್ದಿರಿಸಲಾಗುತ್ತಿತ್ತು. ಏಕೆಂದರೆ ಕ್ರಿಕೆಟ್ ಅಭಿಮಾನಿಯಾಗಿದ್ದ ಲತಾ ಮಂಗೇಶ್ಕರ್ ಅವರು ಪಂದ್ಯವನ್ನು ವೀಕ್ಷಿಸುತ್ತಿದ್ದರು. ಒಂದು ವೇಳೆ ಅವರು ಸ್ಟೇಡಿಯಂ ಬಂದಿದ್ದರೆ ಅಥವಾ ಅವರ ಕುಟುಂಬಸ್ಥರಿಗೆ ವಿಐಪಿ ಎಂಟ್ರಿ ನೀಡಲಾಗುತ್ತಿತ್ತು.

ಈ ಬಗ್ಗೆ ಮಾತನಾಡಿರುವ ಮುಂಬೈನ ಹಿರಿಯ ಕ್ರೀಡಾ ಪತ್ರಕರ್ತ ಮಕರಂದ್ ವೈಂಗಾಂಕರ್, ಲತಾ ಮಂಗೇಶ್ಕರ್ ಅವರು ಸಿಸಿಐ ಸ್ಟೇಡಿಯಂಗೆ ನಿಯಮಿತವಾಗಿ ಬರುತ್ತಿದ್ದರು. ನಂತರ 80 ರ ದಶಕದಲ್ಲಿ ಅವರು ವಾಂಖೆಡೆ ಕ್ರೀಡಾಂಗಣಕ್ಕೆ ಬಂದು ಪಂದ್ಯ ವೀಕ್ಷಿಸುತ್ತಿದ್ದರು. ‘ಲತಾಜಿ ಮತ್ತು ಅವರ ಸಹೋದರ ಹೃದಯನಾಥ್ ಮಂಗೇಶ್ಕರ್ ಯಾವಾಗಲೂ ಟೆಸ್ಟ್ ಪಂದ್ಯಗಳನ್ನು ವೀಕ್ಷಿಸಲು ಬ್ರಬೋರ್ನ್ ಕ್ರೀಡಾಂಗಣಕ್ಕೆ ಬರುತ್ತಿದ್ದರು. ಎಷ್ಟೇ ಬ್ಯುಸಿ ಇದ್ದರೂ ಅವರು ಪ್ರತಿ ಪಂದ್ಯ ನೋಡಲು ಬರುತ್ತಿದ್ದರು. ಇದನ್ನು ಪರಿಗಣಿಸಿ ಬಿಸಿಸಿಐ 1983 ರ ವಿಶ್ವಕಪ್​ ನಂತರ ಬಿಸಿಸಿಐ ಲತಾಜಿ ಗೌರವಾರ್ಥಕವಾಗಿ ಎರಡು ವಿಐಪಿ ಟಿಕೆಟ್​ಗಳನ್ನು ಕಾಯ್ದಿರಿಸಿ ಟೀಮ್ ಇಂಡಿಯಾಗೆ ಅವರು ನೀಡಿದ ಕೊಡುಗೆಯನ್ನು ಸದಾ ಕಾಲ ಗೌರವಿಸುತ್ತಾ ಬಂದಿದ್ದರು. ಹೀಗೆ ಭಾರತದಲ್ಲಿ ಕ್ರಿಕೆಟ್​ ಕ್ರಾಂತಿಗೆ ಪರೋಕ್ಷ ಕಾರಣವಾಗಿದ್ದ ಲತಾ ಮಂಗೇಶ್ಕರ್ ಅವರು ಟೀಮ್ ಇಂಡಿಯಾದ 1000ನೇ ಏಕದಿನ ಪಂದ್ಯದ ದಿನದಂದೇ ನಿಧನರಾಗಿದ್ದು ದುಖಃಕರ ಸಂಗತಿ.

ಇದನ್ನೂ ಓದಿ: IPL 2022 auction: ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 590 ಆಟಗಾರರ ಹೆಸರು ಇಲ್ಲಿದೆ

ಇದನ್ನೂ ಓದಿ: IPL 2022: ಮೆಗಾ ಹರಾಜಿನಲ್ಲಿ 590 ಆಟಗಾರರು: ಯಾವ ದೇಶದಿಂದ ಎಷ್ಟು ಆಟಗಾರರು? ಇಲ್ಲಿದೆ ಸಂಪೂರ್ಣ ಪಟ್ಟಿ

ಇದನ್ನೂ ಓದಿ: Jason Holder: ಡಬಲ್ ಹ್ಯಾಟ್ರಿಕ್ ಪಡೆದು ವಿಶ್ವ ದಾಖಲೆ ನಿರ್ಮಿಸಿದ ಜೇಸನ್ ಹೋಲ್ಡರ್

(Lata Mangeshkar passes away When Nightingale of India rescued BCCI post 1983 world cup win)

Published On - 3:46 pm, Sun, 6 February 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್