Jason Holder: ಡಬಲ್ ಹ್ಯಾಟ್ರಿಕ್ ಪಡೆದು ವಿಶ್ವ ದಾಖಲೆ ನಿರ್ಮಿಸಿದ ಜೇಸನ್ ಹೋಲ್ಡರ್
List of T20I bowlers with 4 wickets in 4 balls: ಇಂಗ್ಲೆಂಡ್ ವಿರುದ್ದ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಜೇಸನ್ ಹೋಲ್ಡರ್ 2.5 ಓವರ್ ಮಾಡಿ 27 ರನ್ ನೀಡಿ 5 ವಿಕೆಟ್ ಪಡೆದಿದ್ದಾರೆ.
Updated on: Jan 31, 2022 | 5:12 PM

ಕ್ರಿಕೆಟ್ನಲ್ಲಿ ಹಲವು ದಾಖಲೆಗಳು ನಿರ್ಮಾಣವಾಗಿದೆ. ಅದರಲ್ಲೂ ಬೌಲರುಗಳ ಹೆಸರಿನಲ್ಲಿ ಅತ್ಯುತ್ತಮ ಎನಿಸುವ ಕೆಲ ದಾಖಲೆಗಳಿವೆ. ಇಂತಹ ದಾಖಲೆಗಳಲ್ಲಿ ಡಬಲ್ ಹ್ಯಾಟ್ರಿಕ್ ದಾಖಲೆ ಕೂಡ ಒಂದು. ಏಕೆಂದರೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಡಬಲ್ ಹ್ಯಾಟ್ರಿಕ್ ವಿಕೆಟ್ ಪಡೆದಿರುವುದು ಕೇವಲ 4 ಬೌಲರುಗಳು ಮಾತ್ರ.

ಇಂಗ್ಲೆಂಡ್ ವಿರುದ್ದ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಜೇಸನ್ ಹೋಲ್ಡರ್ 2.5 ಓವರ್ ಮಾಡಿ 27 ರನ್ ನೀಡಿ 5 ವಿಕೆಟ್ ಪಡೆದಿದ್ದಾರೆ. ವಿಶೇಷ ಎಂದರೆ ಈ ಐದು ವಿಕೆಟ್ಗಳಲ್ಲಿ ನಾಲ್ಕು ವಿಕೆಟ್ಗಳು ಸತತವಾಗಿ ಉರುಳಿಸಿದ್ದರು. ಅದರಂತೆ ಮೂರನೇ ಓವರ್ನಲ್ಲಿ ಹೋಲ್ಡರ್ ಕ್ರಿಸ್ ಜೋರ್ಡಾನ್, ಸ್ಯಾಮ್ ಬಿಲ್ಲಿಂಗ್ಸ್, ಆದಿಲ್ ರಶೀದ್ ಮತ್ತು ಸಾಕಿಬ್ ಮಹಮೂದ್ ಪಡೆಯುವ ಮೂಲಕ 4 ಎಸೆತಗಳಲ್ಲಿ 4 ವಿಕೆಟ್ ಪಡೆದರು. ಈ ಮೂಲಕ ಡಬಲ್ ಹ್ಯಾಟ್ರಿಕ್ ಪಡೆದ ನಾಲ್ಕನೇ ಬೌಲರ್ ಎನಿಸಿಕೊಂಡರು.

ಇದಕ್ಕೂ ಮುನ್ನ ಐರ್ಲೆಂಡ್‌ನ ಬೌಲರ್ ಕುರ್ಟಿಸ್ ಕ್ಯಾಂಪ್‌ಫರ್ T20 ವಿಶ್ವಕಪ್‌ನಲ್ಲಿ ನೆದರ್‌ಲ್ಯಾಂಡ್‌ನ ವಿರುದ್ಧ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್ ಪಡೆದು ಸಾಧನೆ ಮಾಡಿದ್ದರು.

ಹಾಗೆಯೇ 2019 ರಲ್ಲಿ ಶ್ರೀಲಂಕಾದ ಲಸಿತ್ ಮಾಲಿಂಗ ನ್ಯೂಜಿಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ 4 ಎಸೆತಗಳಲ್ಲಿ ಕಾಲಿನ್ ಮುನ್ರೊ, ರುದರ್‌ಫೋರ್ಡ್, ಗ್ರಾಂಡ್‌ಹೋಮ್ ಮತ್ತು ರಾಸ್ ಟೇಲರ್ ವಿಕೆಟ್ ಉರುಳಿಸಿ ಡಬಲ್ ಹ್ಯಾಟ್ರಿಕ್ ಪಡೆದಿದ್ದರು.

ಇನ್ನು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಮೊದಲ ಬಾರಿಗೆ 4 ಎಸೆತಗಳಲ್ಲಿ 4 ವಿಕೆಟ್ ಪಡೆದ ದಾಖಲೆ ಆಫ್ಘಾನಿಸ್ತಾನ ಸ್ಪಿನ್ನರ್ ರಶೀದ್ ಖಾನ್ ಹೆಸರಿನಲ್ಲಿದೆ. ರಶೀದ್ ಖಾನ್ 2019ರಲ್ಲಿ ಐರ್ಲೆಂಡ್ ವಿರುದ್ಧ ರಶೀದ್ ಈ ಸಾಧನೆ ಮಾಡಿದ್ದರು. ಇದೀಗ ಡಬಲ್ ಹ್ಯಾಟ್ರಿಕ್ ಪಡೆದ ಬೌಲರುಗಳ ಪಟ್ಟಿಗೆ ಜೇಸನ್ ಹೋಲ್ಡರ್ ಕೂಡ ಸೇರ್ಪಡೆಯಾಗಿದ್ದಾರೆ.



















