- Kannada News Photo gallery Cricket photos IPL 2022: country-wise breakdown of 220 overseas players is list zp
IPL 2022: ಮೆಗಾ ಹರಾಜಿನಲ್ಲಿ 590 ಆಟಗಾರರು: ಯಾವ ದೇಶದಿಂದ ಎಷ್ಟು ಆಟಗಾರರು? ಇಲ್ಲಿದೆ ಸಂಪೂರ್ಣ ಪಟ್ಟಿ
IPL 2022 Auction: ಹಾಗೆಯೇ ಹರಾಜು ಲೀಸ್ಟ್ನಲ್ಲಿರುವ 590 ಆಟಗಾರರ ಪೈಕಿ 228 ಕ್ಯಾಪ್ಡ್ ಆಟಗಾರರು, 355 ಅನ್‌ಕ್ಯಾಪ್ಡ್ ಆಟಗಾರರಿದ್ದಾರೆ. ಜೊತೆಗೆ 7 ಅಸೋಸಿಯೇಟ್ ದೇಶಗಳ ಆಟಗಾರರಿಗೆ ಬಿಸಿಸಿಐ ಮಣೆಹಾಕಿದೆ.
Updated on: Feb 01, 2022 | 3:20 PM

ಐಪಿಎಲ್ (Indian Premier League) ಸೀಸನ್ 15 ಮೆಗಾ ಹರಾಜಿಗೆ ಆಟಗಾರರ ಶಾರ್ಟ್ ಲೀಸ್ಟ್ ಅನ್ನು ಬಿಸಿಸಿಐ (BCCI) ಪಕಟಿಸಿದೆ. ಈ ಹಿಂದೆ ಮೆಗಾ ಹರಾಜಿಗೆ ಹೆಸರು ನೋಂದಾಯಿಸಿಕೊಂಡಿದ್ದ 1214 ಆಟಗಾರರ ಶಾರ್ಟ್ ಲೀಸ್ಟ್ ಮಾಡಲಾಗಿದ್ದು, ಅದರಂತೆ ಮೆಗಾ ಹರಾಜಿನಲ್ಲಿ ಕೇವಲ 590 ಆಟಗಾರರಿಗೆ ಮಾತ್ರ ಅವಕಾಶ ಸಿಗಲಿದೆ.

590 ಆಟಗಾರರಲ್ಲಿ 370 ಭಾರತೀಯ ಕ್ರಿಕೆಟಿಗರಿದ್ದರೆ, 220 ವಿದೇಶಿ ಆಟಗಾರರಿಗೆ ಅವಕಾಶ ನೀಡಲಾಗಿದೆ. ಹಾಗೆಯೇ ಹರಾಜು ಲೀಸ್ಟ್ನಲ್ಲಿರುವ 590 ಆಟಗಾರರ ಪೈಕಿ 228 ಕ್ಯಾಪ್ಡ್ ಆಟಗಾರರು, 355 ಅನ್‌ಕ್ಯಾಪ್ಡ್ ಆಟಗಾರರಿದ್ದಾರೆ. ಜೊತೆಗೆ 7 ಅಸೋಸಿಯೇಟ್ ದೇಶಗಳ ಆಟಗಾರರಿಗೆ ಬಿಸಿಸಿಐ ಮಣೆಹಾಕಿದೆ.

ಇನ್ನು 220 ವಿದೇಶಿ ಆಟಗಾರರಲ್ಲಿ ಅತೀ ಹೆಚ್ಚು ಸ್ಥಾನ ಪಡೆದಿರುವುದು ಆಸ್ಟ್ರೇಲಿಯಾ ಆಟಗಾರರು. ಆಸ್ಟ್ರೇಲಿಯಾದ 47 ಆಟಗಾರರು ಈ ಪಟ್ಟಿಯಲ್ಲಿದ್ದರೆ, ವೆಸ್ಟ್ ಇಂಡೀಸ್ನ 34 ಆಟಗಾರರು ಈ ಲೀಸ್ಟ್ನಲ್ಲಿದ್ದಾರೆ. ಹಾಗೆಯೇ ಸೌತ್ ಆಫ್ರಿಕಾದ 33 ಆಟಗಾರರು ಮೆಗಾ ಹರಾಜು ಪಟ್ಟಿಯಲ್ಲಿದ್ದಾರೆ

ಹಾಗೆಯೇ ಇಂಗ್ಲೆಂಡ್ನ 24 ಆಟಗಾರರು, ನ್ಯೂಜಿಲೆಂಡ್ನ 24 ಆಟಗಾರರು, ಶ್ರೀಲಂಕಾದ 23 ಆಟಗಾರರು, ಅಫ್ಘಾನಿಸ್ತಾನದ 17 ಆಟಗಾರರು, ಬಾಂಗ್ಲಾದೇಶದ 5 ಆಟಗಾರರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಇವರೊಂದಿಗೆ ಐರ್ಲೆಂಡ್ನ 5 ಆಟಗಾರರು, ನಮೀಬಿಯಾದ 3 ಆಟಗಾರರು, ಸ್ಕಾಟ್ಲೆಂಡ್ನ ಇಬ್ಬರು ಆಟಗಾರರು ಸ್ಥಾನ ಪಡೆದಿದ್ದಾರೆ. ಹಾಗೆಯೇ ಯುಎಸ್ಎ, ನೇಪಾಳ, ಜಿಂಬಾಬ್ವೆಯಿಂದ ಒಬ್ಬೊಬ್ಬ ಆಟಗಾರರು ಮೆಗಾ ಹರಾಜು ಪಟ್ಟಿಯ ಅಂತಿಮ ಲೀಸ್ಟ್ನಲ್ಲಿದ್ದಾರೆ.

ಅದರಂತೆ ಐಪಿಎಲ್ 2022 ಮೆಗಾ ಮೆಗಾ ಹರಾಜು (IPL 2022 Mega Auction) ಎರಡು ದಿನಗಳ ಕಾಲ ಫೆಬ್ರವರಿ 12 ಮತ್ತು 13 ರಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆಯಲಿದ್ದು, 590 ಆಟಗಾರರಲ್ಲಿ ಯಾರಿಗೆಲ್ಲಾ ಚಾನ್ಸ್ ಸಿಗಲಿದೆ ಕಾದು ನೋಡಬೇಕಿದೆ.









