- Kannada News Photo gallery Cricket photos IPL 2022: Noor Ahmad Becomes Youngest Player to Feature in Mega Auction
IPL 2022 Auction: ಐಪಿಎಲ್ ಮೆಗಾ ಹರಾಜು ಪಟ್ಟಿಯಲ್ಲಿ 17 ವರ್ಷದ ಆಟಗಾರ..!
IPL 2022 Mega Auction: ಇಂಗ್ಲೆಂಡ್ನ 24, ನ್ಯೂಜಿಲೆಂಡ್ನ 24, ಶ್ರೀಲಂಕಾದ 23 ಆಟಗಾರರು ಸ್ಥಾನ ಪಡೆದಿದ್ದಾರೆ. ಹಾಗೆಯೇ ಈ ಬಾರಿ ಅಫ್ಘಾನಿಸ್ತಾನದ 17 ಆಟಗಾರರು ಕೂಡ ಸ್ಥಾನಗಿಟ್ಟಿಸಿಕೊಂಡಿದ್ದಾರೆ.
Updated on: Feb 01, 2022 | 8:19 PM

ಐಪಿಎಲ್ ಮೆಗಾ ಹರಾಜಿನ ಸಿದ್ಧತೆ ಶುರುವಾಗಿದೆ. ಇದೀಗ ಹರಾಜಿನಲ್ಲಿ ಭಾಗವಹಿಸಲಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಅದರಂತೆ ಐಪಿಎಲ್ ಸೀಸನ್ 15 ಮೆಗಾ ಹರಾಜಿನಲ್ಲಿ ಒಟ್ಟು 590 ಆಟಗಾರರು ಅಂತಿಮ ಕಣದಲ್ಲಿದ್ದಾರೆ. ಇದರಲ್ಲಿ 370 ಭಾರತೀಯ ಆಟಗಾರರಿಗೆ ಅವಕಾಶ ಕಲ್ಪಿಸಲಾಗಿದೆ.

ಹಾಗೆಯೇ 220 ವಿದೇಶಿ ಆಟಗಾರರನ್ನು ಮೆಗಾ ಹರಾಜಿಗೆ ಆಯ್ಕೆ ಮಾಡಲಾಗಿದೆ. ಹೀಗೆ ವಿದೇಶಿ ಆಟಗಾರರ ಪಟ್ಟಿಯಲ್ಲಿ ಅತೀ ಹೆಚ್ಚು ಸ್ಥಾನ ಪಡೆದಿರುವುದು ಆಸ್ಟ್ರೇಲಿಯಾ ಪ್ಲೇಯರ್ಸ್. ಆಸ್ಟ್ರೇಲಿಯಾದ 47 ಆಟಗಾರರು ಈ ಪಟ್ಟಿಯಲ್ಲಿದ್ದರೆ, ವೆಸ್ಟ್ ಇಂಡೀಸ್ನ 34 ಹಾಗೂ ಸೌತ್ ಆಫ್ರಿಕಾದ 33 ಆಟಗಾರರು ಮೆಗಾ ಹರಾಜು ಪಟ್ಟಿಯಲ್ಲಿದ್ದಾರೆ.

ಇನ್ನು ಇಂಗ್ಲೆಂಡ್ನ 24, ನ್ಯೂಜಿಲೆಂಡ್ನ 24, ಶ್ರೀಲಂಕಾದ 23 ಆಟಗಾರರು ಸ್ಥಾನ ಪಡೆದಿದ್ದಾರೆ. ಹಾಗೆಯೇ ಈ ಬಾರಿ ಅಫ್ಘಾನಿಸ್ತಾನದ 17 ಆಟಗಾರರು ಕೂಡ ಸ್ಥಾನಗಿಟ್ಟಿಸಿಕೊಂಡಿದ್ದಾರೆ. ಅದರಲ್ಲೂ ಈ ಬಾರಿಯ ಮೆಗಾ ಹರಾಜಿನಲ್ಲಿ ಅತ್ಯಂತ ಕಿರಿಯ ಆಟಗಾರನಾಗಿ ಕಾಣಿಸಿಕೊಂಡಿರುವುದು ಅಫ್ಘಾನ್ ಆಟಗಾರ ಎಂಬುದು ವಿಶೇಷ.

ಅಫ್ಘಾನಿಸ್ತಾನ್ ಅಂಡರ್ 19 ತಂಡದ ಆಟಗಾರನಾಗಿರುವ ನೂರ್ ಅಹ್ಮದ್ ಐಪಿಎಲ್ ಮೆಗಾ ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 17 ವರ್ಷದ ನೂರ್ ಅಹ್ಮದ್ ಅಂಡರ್ 19 ವಿಶ್ವಕಪ್ನಲ್ಲಿ ಆಡುತ್ತಿದ್ದು, ಇದೇ ವೇಳೆ ಒಟ್ಟು 6 ವಿಕೆಟ್ ಪಡೆದು ಮಿಂಚಿದ್ದಾರೆ. ಎಡಗೈ ಚೈನಾಮನ್ ಸ್ಪಿನ್ನರ್ ಆಗಿರುವ ನೂರ್ ಇದುವರೆಗೆ 33 ಟಿ20 ಪಂದ್ಯಗಳನ್ನು ಆಡಿದ್ದು 33 ವಿಕೆಟ್ ಕಬಳಿಸಿದ್ದಾರೆ.

ಈಗಾಗಲೇ ಕೆರಿಬಿಯನ್ ಪ್ರೀಮಿಯರ್ ಲೀಗ್, ಪಾಕಿಸ್ತಾನ್ ಸೂಪರ್ ಲೀಗ್ ಹಾಗೂ ಬಿಗ್ ಬ್ಯಾಷ್ ಲೀಗ್ನಲ್ಲಿ ಆಡಿರುವ 17 ವರ್ಷದ ನೂರ್ ಅಹ್ಮದ್ ಕಳೆದ ವರ್ಷ ಕೂಡ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡಿದ್ದರು. 30 ಲಕ್ಷ ರೂ. ಮೂಲಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ನೂರ್ ಅಹ್ಮದ್ರನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ.

ಇದೀಗ ಐಪಿಎಲ್ನಲ್ಲಿ ಮೆಗಾ ಹರಾಜು ನಡೆಯುತ್ತಿದ್ದು, ಹೀಗಾಗಿ ಚೊಚ್ಚಲ ಬಾರಿಗೆ ಅವಕಾಶ ಸಿಗುವ ನಿರೀಕ್ಷೆಯಲ್ಲಿದ್ದಾರೆ 17 ವರ್ಷದ ಯುವ ಸ್ಪಿನ್ನರ್.

IPL 2022: Noor Ahmad Becomes Youngest Player to Feature in Mega Auction









