AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹವಾಮಾನ ವರದಿ ನೀಡಲು ಮೂರು ತಿಂಗಳ ಮಗುವಿನೊಂದಿಗೆ ಕ್ಯಾಮರಾ ಎದುರು ಬಂದ ಆ್ಯಂಕರ್​; ವಿಡಿಯೋ ವೈರಲ್​

ಆ್ಯಂಕರ್​ ತಮ್ಮ 3 ತಿಂಗಳ ಮಗುವನ್ನು ಎತ್ತಿಕೊಂಡು ಹವಾಮಾನ ವರದಿ ಮಾಡಿದ್ದಾರೆ. ಅದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

ಹವಾಮಾನ ವರದಿ ನೀಡಲು ಮೂರು ತಿಂಗಳ ಮಗುವಿನೊಂದಿಗೆ ಕ್ಯಾಮರಾ ಎದುರು ಬಂದ ಆ್ಯಂಕರ್​; ವಿಡಿಯೋ ವೈರಲ್​
ಮಗುವನ್ನು ಎತ್ತಿಕೊಂಡಿರುವ ಆ್ಯಂಕರ್​
TV9 Web
| Updated By: Pavitra Bhat Jigalemane|

Updated on: Feb 04, 2022 | 5:31 PM

Share

ಸಾಮಾಜಿಕ ಜಾಲತಾಣ ಆಗಾಗ ವಿವಿಧ ವಿಡಿಯೋಗಳ ಮೂಲಕ ನೆಟ್ಟಿಗರನ್ನು ಸೆಳೆಯುತ್ತಿರುತ್ತದೆ. ವಿದೇಶಗಳ ವಿಚಿತ್ರ, ಅಪರೂಪದ ಘಟನೆಗಳ ವಿಡಿಯೋಗಳು ವೈರಲ್​ ಆಗುತ್ತಿರುತ್ತವೆ. ಇದೀಗ ಟಿವಿ ಆ್ಯಂಕರ್​ ತಮ್ಮ 3 ತಿಂಗಳ ಮಗುವನ್ನು ಎತ್ತಿಕೊಂಡು ಹವಾಮಾನ ವರದಿ (Wether Report) ಮಾಡಿದ್ದಾರೆ. ಅದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಯುಎಸ್​ನ ವಿಸ್ಕೊನ್​ಸಿ (Wisconsin )ರಾಜ್ಯದ  CBS 58 ಎನ್ನುವ ಚಾನೆಲ್​ನಲ್ಲಿ ಕೆಲಸ ಮಾಡುವ ರೆಬೆಕಾ ಶುಲ್ಡ್ (Rebecca Schuld) ಎನ್ನುವ ಅ್ಯಂಕರ್​ ಮಗುವನ್ನು ಎತ್ತಿಕೊಂಡು ಹವಾಮಾನ ವರದಿ ನೀಡಿದ್ದಾರೆ. ಇದರ ವಿಡಿಯೋ ಫೇಸ್ಬುಕ್​, ಟ್ವಿಟರ್​, ಯಯುಟ್ಯೂಬ್​ಗಳಲ್ಲಿ ಸಖತ್​ ವೈರಲ್​ ಆಗಿದೆ.

ಈ ಕುರಿತು ಡೈಲಿ ಮೇಲ್​ ವರದಿ ಮಾಡಿದೆ. ವರದಿಯ ಪ್ರಕಾರ 42 ವರ್ಷದ ರೆಬೆಕಾ ಶುಲ್ಡ್, ಎನ್ನುವ ಪತ್ರಕರ್ತೆ ಕೊರೊನಾ ಕಾರಣದಿಂದ ವರ್ಕ್​ಫ್ರಾಮ್​ ಹೋಮ್​ನಲ್ಲಿದ್ದರು. ಹೆರಿಗೆ ರಜೆಯ ಬಳಿಕ ಕೆಲಸ ಆರಂಭಿಸಿದ ಅವರು ಮಗುವನ್ನು ಮನೆಯಲ್ಲಿ ಬಿಟ್ಟುಕೊಂಡು ಕೆಲಸ ಮಾಡುತ್ತಿದ್ದರು. ಆದರೆ ಅಂದು ನೇರಪ್ರಸಾರ ಆರಂಭವಾಗುವ ವೇಳೆಗೆ ಮಲಗಿದ್ದ ಮಗು ಎಚ್ಚರಗೊಂಡ ಹಿನ್ನಲೆಯಲ್ಲಿ ಮಗುವನ್ನು ಎತ್ತಿಕೊಂಡೇ ಕ್ಯಾಮಾರಾ ಎದುರು ಬಂದಿದ್ದಾರೆ. ಮೂರು ತಿಂಗಳ ಮಗಳನ್ನು ಹಿಡಿದು ನಿಂತ ಆಕೆಯನ್ನು ನೋಡಿ ಸ್ಟುಡಿಯೋದಲ್ಲಿದ್ದ ಆ್ಯಂಕರ್​ ಅಚ್ಚರಿಗೊಂಡಿದ್ದು, ಹವಾಮಾನ ವರದಿಗೆ ಹೊಸ ಅತಿಥಿ ಬಂದಿದ್ದಾರೆ ಎಂದು ಹೇಳಿದ್ದಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ.

ಈ ಕುರಿತು ಸ್ವತಃ ರೆಬೆಕಾ ಶುಲ್ಡ್ ಮಾತನಾಡಿದ್ದು, ನಾನು ಕಾರ್ಯಕ್ರಮ ಆರಂಭಿಸುವ ವೇಳೆಗೆ ಸರಿಯಾಗಿ ನನ್ನ ಮಗಳು ಎಚ್ಚರಗೊಂಡಿದ್ದಳು. ಅವಳನ್ನು ಹಾಗೆಯೇ ಬಿಡಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಅವಳನ್ನು ಎತ್ತಿಕೊಂಡೇ ವರದಿಯನ್ನು ನೀಡಲು ನಿರ್ಧರಿಸಿದೆ. ಇದಕ್ಕೆ ನಮ್ಮ ಪ್ರೊಡ್ಯೂಸರ್​ ಓಹ್​ ಮಗುವನ್ನು ಎತ್ತಿಕೊಂಡೇ ಮಾತನಾಡುತ್ತೀರಾ ಎಂದರು. ನನ್ನ ಮಗಳು ಚೆನ್ನಾಗಿ ನಿದ್ದೆ ಮಾಡಿದ್ದಾಳೆ ಹೀಗಾಗಿ ಅವಳಿಂದ ಯಾವ ಸಮಸ್ಯೆಯೂ ಆಗವುದಿಲ್ಲ. ನಾನು ವರದಿ ನೀಡಲು ತಯಾರಿದ್ದೇನೆ ಎಂದಿದ್ದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:

Viral News: ಸ್ವೀಡನ್​ನ ಬೀದಿಗಳಲ್ಲಿರುವ ಸಿಗರೇಟ್​ ಚೂರುಗಳ ಸಂಗ್ರಹಕ್ಕೆ ಕಾಗೆಗಳಿಗೆ ತರಬೇತಿ

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್