ಡೆಲಿವರಿ ನೀಡಲು ಬಂದು ಆಭರಣ ಕದ್ದ ಮಹಿಳೆ; ಮರಳುವ ಮುನ್ನ ಹೇಳಿದ್ದೇನು ಗೊತ್ತಾ? ಇಲ್ಲಿದೆ ಸಿಸಿಟಿವಿ ವಿಡಿಯೋ

Viral Video: ಪಾರ್ಸಲ್ ಒಂದನ್ನು ಡೆಲಿವರಿ ನೀಡಲು ಬಂದ ಮಹಿಳೆಯೋರ್ವರು ಸದ್ದಿಲ್ಲದೇ ಅಂಗಡಿಯೊಂದರಿಂದ ಆಭರಣವನ್ನು ಜೇಬಿಗಿಳಿಸಿದ್ದಾರೆ. ಇದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ.

ಡೆಲಿವರಿ ನೀಡಲು ಬಂದು ಆಭರಣ ಕದ್ದ ಮಹಿಳೆ; ಮರಳುವ ಮುನ್ನ ಹೇಳಿದ್ದೇನು ಗೊತ್ತಾ? ಇಲ್ಲಿದೆ ಸಿಸಿಟಿವಿ ವಿಡಿಯೋ
ವಿಡಿಯೋದಿಂದ ಸೆರೆ ಹಿಡಿಯಲಾಗಿರುವ ದೃಶ್ಯ
Follow us
| Updated By: shivaprasad.hs

Updated on: Feb 15, 2022 | 1:22 PM

ಅಂತರ್ಜಾಲದಲ್ಲಿ ವಿವಿಧ ರೀತಿಯ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಅಪರೂಪದ ಘಟನೆಗಳು, ಮಾನವೀಯ ವಿಡಿಯೋಗಳಿಂದ ಹಿಡಿದು, ಜಗತ್ತು ಹೀಗೂ ಇರುತ್ತದಾ ಎಂಬಂತಹ ಅಚ್ಚರಿಯ ಘಟನೆಗಳ ವಿಡಿಯೋಗಳು ನೆಟ್ಟಿಗರ ಗಮನ ಸೆಳೆಯುತ್ತವೆ. ಇದರಲ್ಲಿ ವಸ್ತುಗಳನ್ನು ತಲುಪಿಸುವ ಡೆಲಿವರ್ ವ್ಯಕ್ತಿಗಳ ವಿಡಿಯೋಗಳೂ ಸೇರಿವೆ. ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿದ ಡೆಲಿವರಿ ಬಾಯ್​ಗಳು, ಕಷ್ಟಪಟ್ಟು ಜೀವನ ಸಾಗಿಸುವ ಡೆಲಿವರಿ ವ್ಯಕ್ತಿಗಳ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಹಾಗೆಯೇ ವಸ್ತುಗಳನ್ನು ತಲುಪಿಸುವಾಗ ಡೆಲಿವರಿ ಮಾಡುವ ವ್ಯಕ್ತಿ ಮಾಡಿರುವ ತಪ್ಪು ಕೆಲಸಗಳ ವಿಡಿಯೋಗಳು ಸುದ್ದಿಯಾಗುತ್ತವೆ. ಸದ್ಯ ಅಂತರ್ಜಾಲದಲ್ಲಿ ಇಂಥದ್ದೇ ಒಂದು ವಿಡಿಯೋ ವೈರಲ್ (Viral Video) ಆಗಿದೆ. ಅದರಲ್ಲಿ ಅಮೇರಿಕಾದ ಮಹಿಳೆಯೊಬ್ಬರು ಪಾರ್ಸಲ್ ತಲುಪಿಸುವಾಗ ಅಂಗಡಿಯೊಂದರಿಂದ ವಸ್ತುವನ್ನು ಕದ್ದಿದ್ದಾರೆ. ಈ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮರಳುವ ಮುನ್ನ ಮಹಿಳೆ ಹೇಳಿದ್ದೇನು? ಇಲ್ಲಿದೆ ಘಟನೆಯ ವಿವರ

ಆರ್ಡರ್ ಮಾಡಿದ್ದ ಪಾರ್ಸಲ್ ತಲುಪಿಸಲು ಕ್ಯಾಲಿಫೋರ್ನಿಯಾದ ಪಿಸ್ಮೋ ಬೀಚ್‌ನಲ್ಲಿರುವ ಬ್ಯೂಟಿ ಸಲೂನ್‌ ಒಂದಕ್ಕೆ ಡೋರ್‌ಡ್ಯಾಶ್ ಡೆಲಿವರಿಯ ಡ್ರೈವರ್ ಓರ್ವರು ತೆರಳಿರುತ್ತಾರೆ. ಬೂದು ಬಣ್ಣದ ಶರ್ಟ್ ಧರಿಸಿರುವ ಮಹಿಳಾ ಡ್ರೈವರ್, ಅಂಗಡಿಯಲ್ಲಿರುವ ಯುವತಿಗೆ ಪಾರ್ಸಲ್ ಹಸ್ತಾಂತರಿಸುತ್ತಾರೆ. ನಂತರ ಸಮಯ ನೋಡಿ ಅಂಗಡಿಯಲ್ಲಿದ್ದ ವಸ್ತುವೊಂದನ್ನು ಜೇಬಿಗೆ ಹಾಕಿಕೊಂಡಿದ್ದಾರೆ. ವರದಿಗಳ ಪ್ರಕಾರ ನೆಕ್ಲೇಸ್ ಒಂದನ್ನು ಮಹಿಳೆ ಕದ್ದಿದ್ದಾರೆ. ಅಂಗಡಿಯಿಂದ ಮರಳುವ ಮುನ್ನ ಮಹಿಳೆ ಸಂಭಾವಿತರಂತೆ ‘ಧನ್ಯವಾದ, ಶುಭದಿನ’ ಎಂದು ಅಂಗಡಿಯ ಮಾಲಕಿಗೆ ಹೇಳಿದ್ದಾರೆ. ಇದೂ ಕೂಡ ವಿಡಿಯೋದಲ್ಲಿ ದಾಖಲಾಗಿದೆ.

ಘಟನೆಯ ನಂತರ ಅಂಗಡಿಯ ಮಾಲಕಿ ಮೆಲಿಯಾನಾ ಸೊಡರ್‌ಕ್ವಿಸ್ಟ್ ಅವರು ತಮ್ಮ ಟಿಕ್‌ಟಾಕ್ ಖಾತೆಯಲ್ಲಿ ಸಿಸಿಟಿವಿ ಕ್ಲಿಪ್ ಅನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಮಿಲಿಯನ್​ಗಟ್ಟಲೆ ವೀಕ್ಷಣೆ ಪಡೆದಿದೆ. ಪಾರ್ಸಲ್ ತಲುಪಿಸಲು ಬಂದವರ ಹೆಸರು ಕಾರ್ಸನ್ ಎಂದಾಗಿದ್ದು, ಕೊರೊನಾ ಸಂದರ್ಭದಲ್ಲಿಯೂ ಆಕೆ ಮಾಸ್ಕ್ ಧರಿಸಿರಲಿಲ್ಲ ಹಾಗೂ ಅಂಗಡಿಯಲ್ಲಿ ಚಲಿಸುವುದು ತಿಳಿಯಬಾರದೆಂದು ಶೂ ಕೂಡ ಧರಿಸಿರಲಿಲ್ಲ ಎಂದು ಮಾಲಕಿ ತಿಳಿಸಿದ್ದಾರೆ. ಅಲ್ಲದೇ ಹೊರ ಹೋಗುವಾಗ ಡ್ರೈವರ್ ಆಭರಣ ಕದ್ದಿದ್ದಕ್ಕೆ ಸಿಸಿಟಿವಿ ವಿಡಿಯೋ ಸಾಕ್ಷಿಯನ್ನು ಮಾಲಕಿ ನೀಡಿದ್ದಾರೆ. ವಸ್ತುವನ್ನು ಕದ್ದಿದ್ದ ಮಹಿಳೆಯನ್ನು ಸಿಸಿಟಿವಿ ಆಧಾರದಲ್ಲಿ ಬಂಧಿಸಲಾಗಿದೆ ಎಂದು ವರದಿಗಳು ಹೇಳಿವೆ.

ವೈರಲ್ ಆಗಿರುವ ವಿಡಿಯೋ ಇಲ್ಲಿದೆ:

ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಡೋರ್​ಡ್ಯಾಶ್ ಸಂಸ್ಥೆ ಡ್ರೈವರ್ ಖಾತೆಯನ್ನು ನಿಷ್ಕ್ರಿಯ ಮಾಡಲಾಗಿದೆ ಎಂದು ತಿಳಿಸಿದೆ. ಅಲ್ಲದೇ ಕಂಪನಿಯ ನಿಲುವುಗಳಿಗೆ ವಿರುದ್ಧವಾಗಿ ಕೆಲಸ ಮಾಡಿದ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟನೆ ನೀಡಿದೆ. ಇದಕ್ಕೆ ಸಂಬಂಧಪಟ್ಟಂತೆ ಹೆಚ್ಚುವರಿ ತನಿಖೆಯನ್ನೂ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ:

WhatsApp: ವಾಟ್ಸ್​ಆ್ಯಪ್ ಗ್ರೂಪ್ ಕಾಲ್​ನಲ್ಲಿ ಬರುತ್ತಿದೆ ಅಚ್ಚರಿ ಫೀಚರ್: ಹೊಸ ಲುಕ್ ಹೇಗಿದೆ ನೋಡಿ

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ 425 ಕೋಟಿ ರೂಪಾಯಿ ದಾನ ನೀಡಿದ ದಂಪತಿಗಳು; ಮೆಚ್ಚುಗೆ ವ್ಯಕ್ತಪಡಿಸಿದ ಸಾರ್ವಜನಿಕರು

ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?