AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

viral video: ಮಾರುಕಟ್ಟೆಗೆ ಬಂತು ಪುಷ್ಪ ಚಿತ್ರದ ಪೋಸ್ಟ್​ರ ಮುದ್ರಿತ ಸೀರೆಗಳು

ಈಗ ಅನೇಕ ಫ್ಯಾಷನ್ ಡಿಸೈನರ್‌ಗಳು ಸಹ ಚಿತ್ರದ ಪೋಸ್ಟರ್‌ಗಳ ಮುದ್ರಿತ ಸೀರೆಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಚಿತ್ರದ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ.

viral video: ಮಾರುಕಟ್ಟೆಗೆ ಬಂತು ಪುಷ್ಪ ಚಿತ್ರದ ಪೋಸ್ಟ್​ರ ಮುದ್ರಿತ ಸೀರೆಗಳು
ಸೀರೆ ಮೇಲೆ ಮುದ್ರಿತಗೊಂಡ ಪುಷ್ಪ ಚಿತ್ರದ ಪೋಸ್ಟ್​ರ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Feb 14, 2022 | 4:02 PM

Share

ಸೂರತ್: ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ: ದಿ ರೈಸ್ ಚಿತ್ರವೂ ಭಾರತದಲ್ಲಿ ಅಮೋಘ ಯಶಸ್ಸನ್ನು ಗಳಿಸಿ, ಕೋಟಿ ಕೋಟಿ ಹಣ ಬಾಚಿಕೊಂಡಿದೆ. ಪುಷ್ಪ ಚಿತ್ರದ ಪ್ರಭಾವಶಾಲಿ ಸಂಭಾಷಣೆಗಳು, ಉತ್ತಮ ಹಾಡುಗಳು ಚಲನಚಿತ್ರವು ಎಲ್ಲರನ್ನೂ ಮೆಚ್ಚಿಸುವಲ್ಲಿ ಯಶಸ್ವಿಯಾಗಿದೆ. ಬಿಡುಗೆಡೆಯಾಗಿ ಬಹಳ ದಿನಗಳಾಗಿದ್ದರು ಯಾವುದೋ ಒಂದು ವಿಷಯಕ್ಕೆ ಪುಷ್ಪ ಚಿತ್ರ ಮತ್ತೆ ಸುದ್ದಿಯಲ್ಲಿದ್ದು, ತನ್ನ ಕ್ರೇಜ್​ನ್ನು ಹಾಗೆಯೇ ಉಳಿಸಿಕೊಳ್ಳುತ್ತಿದೆ. ಶ್ರೀವಲ್ಲಿ ಮತ್ತು ಸಾಮಿ-ಸಾಮಿ ಸಾಂಗ್​ಗೆ ಫಿದಾ ಆಗದವರೇ ಇಲ್ಲ. ಇನ್‌ಸ್ಟಾಗ್ರಾಮ್ ರೀಲ್ ವೀಡಿಯೊಗಳನ್ನು ಮಾಡುವ ಸೆಲೆಬ್ರಿಟಿಗಳಿಂದ ಹಿಡಿದು ಜನರು ಅದರ ಡೈಲಾಗ್‌ಗಳನ್ನು ಲಿಪ್ ಸಿಂಕ್ ಮಾಡುವವರೆಗೆ, ಪುಷ್ಪ ಜ್ವರವು ಇಡೀ ರಾಷ್ಟ್ರವನ್ನು ಆವರಿಸಿದೆ. ಈಗ ಅನೇಕ ಫ್ಯಾಷನ್ ಡಿಸೈನರ್‌ಗಳು ಸಹ ಚಿತ್ರದ ಪೋಸ್ಟರ್‌ಗಳ ಮುದ್ರಿತ ಸೀರೆಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಚಿತ್ರದ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ.

ಗುಜರಾತ್‌ನ ಸೂರತ್‌ನಲ್ಲಿ ಚಿತ್ರದ ಪೋಸ್ಟರ್‌ಗಳೊಂದಿಗೆ ಮುದ್ರಿತವಾಗಿರುವ ಸೀರೆಗಳನ್ನು ಮಾರಾಟ ಮಾಡಲಾಗುತ್ತಿದ್ದು, ಈ ಕುರಿತಾದ ಒಂದು ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದೆ. ಚರಂಜೀತ್ ಕ್ರಿಯೇಷನ್ ​​ಎಂಬ ಹೆಸರಿನ ಸ್ಥಳೀಯ ಅಂಗಡಿಯವರು ವಿಶಿಷ್ಟವಾದ ಸೀರೆಯನ್ನು ತಯಾರಿಸಿದ್ದಾರೆ. ಇದು ಈಗ ನಗರದಲ್ಲಿ ಚರ್ಚೆಯಾಗುತ್ತಿದೆ. ಪುಷ್ಪಾ ಪೋಸ್ಟರ್‌ಗಳನ್ನು ಬಳಸಿಕೊಂಡು ಸೀರೆಗಳನ್ನು ತಯಾರಿಸಿದ ಕಲ್ಪನೆಯನ್ನು ಮಾಲೀಕ ಚರಣ್‌ಪಾಲ್ ಸಿಂಗ್ ಪರಿಚಯಿಸಿದರು. ಅವರು ಮುದ್ರಿತ ಸೀರೆಗಳ ಹಲವಾರು ಮಾದರಿಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಅದು ವೈರಲ್ ಆಗಿದೆ. ಶೀಘ್ರದಲ್ಲೇ, ಗ್ರಾಹಕರಿಗೆ ಈ ಸೀರೆ ಲಭ್ಯವಾಗಲಿದ್ದು ಮತ್ತು ಮಾಲೀಕರು ದೇಶಾದ್ಯಂತದ ಜವಳಿ ವ್ಯಾಪಾರಿಗಳಿಂದ ಭಾರಿ ಬೇಡಿಕೆಗಳನ್ನು ಪಡೆದುಕೊಂಡಿದ್ದಾರೆ. ರಾಜಸ್ಥಾನ, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಛತ್ತೀಸ್‌ಗಢ ಸೇರಿದಂತೆ ಪ್ರಮುಖ ರಾಜ್ಯಗಳ ಜನರು ಅವರ ‘ಪುಷ್ಪ’ ಸೀರೆಗಳನ್ನು ಆರ್ಡರ್ ಮಾಡುತ್ತಿದ್ದಾರೆ.

ಇದನ್ನೂ ಓದಿ:

Viral Video: ‘ಕೆ ಹೆಂಡಿ ಹುಂಡಿ ಸಿ’ ಹಾಡಿಗೆ ನೃತ್ಯ ಮಾಡಿದ ಗಗನಸಖಿ; ವಿಡಿಯೋ ಕಂಡು ನೆಟ್ಟಿಗರು ಹೇಳಿದ್ದೇನು ಗೊತ್ತಾ?​