viral video: ಜಿಂಕೆಯನ್ನು ಗಾಳಿಯಲ್ಲಿ ಹಾರಿ ಬೇಟೆಯಾಡಿದ ಚಿರತೆ; ಇಲ್ಲಿದೆ ಅಪರೂಪದ ದೃಶ್ಯ
ಚಿರತೆ ಗಾಳಿಯಲ್ಲಿ ಹಾರಿ ಜಿಂಕೆ (deer)ಯನ್ನು ಬೇಟೆಯಾಡಿರುವುದನ್ನು ನೀವು ಎಲ್ಲಿಯಾದರೂ ಅಥವಾ ಎಂದಾದರೂ ನೋಡಿದ್ದೀರಾ? ಇಂದು ನಾವು ನಿಮಗಾಗಿ ಅಂತಹ ಒಂದು ಅಪರೂಪದ ಮತ್ತು ಎದೆ ಜಲ್ಲ್ ಎನ್ನುವಂತಹ ವಿಡಿಯೋ ಇಲ್ಲಿದೆ ನೊಡಿ.
ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚಿರತೆ (leopard) ಬೇಟೆಯಾಡುವ ಹಲವು ವೈರಲ್ ವಿಡಿಯೋಗಳನ್ನು ನಾವು ನೀವು ನೋಡುತ್ತಿರುತ್ತೇವೆ. ಆದರೆ ಚಿರತೆ ಗಾಳಿಯಲ್ಲಿ ಹಾರಿ ಜಿಂಕೆ (deer)ಯನ್ನು ಬೇಟೆಯಾಡಿರುವುದನ್ನು ನೀವು ಎಲ್ಲಿಯಾದರೂ ಅಥವಾ ಎಂದಾದರೂ ನೋಡಿದ್ದೀರಾ? ಇಂದು ನಾವು ನಿಮಗಾಗಿ ಅಂತಹ ಒಂದು ಅಪರೂಪದ ಮತ್ತು ಎದೆ ಜಲ್ಲ್ ಎನ್ನುವಂತಹ ವಿಡಿಯೋವನ್ನು ತಂದಿದ್ದೇವೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಕೂಡ ಆಗಿದೆ. ಇದನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತ ನಂದಾ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದುವರೆಗೆ 42 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.
Flying catch? ?life & Nature pic.twitter.com/39ATvCyVck
— Susanta Nanda IFS (@susantananda3) February 11, 2022
ಚಿರತೆಯೊಂದು ಬೇಟೆಯಾಡಲು ಹಿಂಬಾಲಿಸುತ್ತಿರುವುದರಿಂದ ಜಿಂಕೆಗಳ ಹಿಂಡು ಪೊದೆಗಳ ಮೂಲಕ ಓಡುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಜಿಂಕೆಗಳ ಹಿಂಡು ತನ್ನ ಜೀವವನ್ನು ಉಳಿಸಿಕೊಳ್ಳಲು ಓಡುತ್ತಿರುವಾಗ, ಅವುಗಳಲ್ಲಿ ಒಂದು ಜಿಂಕೆ ಗಾಳಿಯಲ್ಲಿ ಹಾರುತ್ತದೆ. ಜಿಂಕೆಯ ಹಿಂದೆಯೇ ಇದ್ದ ಚಿರತೆ ಕೂಡ ಗಾಳಿಯಲ್ಲಿ ಹಾರಿ ತನ್ನ ಬೇಟೆಯನ್ನು ಹಿಡಿಯುತ್ತದೆ. ಹೀಗೆ ಚಿರತೆ ಗಾಳಿಯಲ್ಲಿ ಹಾರಿ ಬೇಟೆಯಾಡುವ ದೃಶ್ಯ ರೋಮಾಂಚನಕಾರಿಯಾಗಿದ್ದು, ನೋಡುಗರನ್ನು ವ್ಹಾವ್ ಎನ್ನುವಂತೆ ಮಾಡುತ್ತದೆ.
ಚಿರತೆ ಆ ಜಿಂಕೆಯನ್ನು ಗಾಳಿಯಲ್ಲಿಯೇ ಬೇಟೆಯಾಡುತ್ತದೆ. ನೆಟಿಗರು ಈ ಅದ್ಬುತ ವಿಡಿಯೋವನ್ನು ಸಾಕಷ್ಟು ಶೇರ್ ಮಾಡುತ್ತಿದ್ದು, ವಿಡಿಯೋ ನೋಡಿದ ಬಳಿಕ ತಮ್ಮ ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಒಬ್ಬ ನೆಟ್ಟಿಗರು ಎಂತಹ ಪಾಠ ಇದು. ಕೆಲವೊಮ್ಮೆ ನಾವು ಸಹ ನಮ್ಮ ಗುರಿಯನ್ನು ಅನುಸರಿಸಬೇಕು, ಕೇವಲ ಮನ್ನಿಸುವಿಕೆಗಳಿಗೆ ಅವಕಾಶ ನೀಡಬಾರದು ಎಂದು ಬರೆದರೆ, ಇನ್ನೊಬ್ಬರು ವಾವ್ ಅದು ಮಿಲಿಯನ್ ಡಾಲರ್ ಶಾಟ್ ಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ:
ಜಾಮೂನ್ ಪರೋಟ ತಿಂದಿದ್ದೀರಾ? ಫುಡ್ ಬ್ಲಾಗರ್ ಹಂಚಿಕೊಂಡ ವಿಡಿಯೋ ನೋಡಿ ಬಾಯಲ್ಲಿ ನೀರೂರಿಸಿಕೊಂಡ ನೆಟ್ಟಿಗರು
ಒಂದೇ ದಿನ ತ್ರಿವಳಿ ಸಹೋದರಿಯರನ್ನು ಮದುವೆಯಾದ ಯುವಕ: ವೈರಲ್ ಆಯ್ತು ಪೋಟೋ