ಒಂದೇ ದಿನ ತ್ರಿವಳಿ ಸಹೋದರಿಯರನ್ನು ಮದುವೆಯಾದ ಯುವಕ: ವೈರಲ್​ ಆಯ್ತು ಪೋಟೋ

ಒಂದೇ ದಿನ ತ್ರಿವಳಿ ಸಹೋದರಿಯರನ್ನು ಮದುವೆಯಾದ ಯುವಕ: ವೈರಲ್​ ಆಯ್ತು ಪೋಟೋ
ತ್ರಿವಳಿ ಸಹೋದರಿಯರನ್ನು ಮದುವೆಯಾದ ಯುವಕ

ಇಲ್ಲೊಬ್ಬ ಯುವಕ ಒಂದೇ ಮಂಟಪದಲ್ಲಿ ಮೂವರು ಯುವತಿಯರನ್ನು ಮದುವೆಯಾಗಿದ್ದಾನೆ. ಮೂವರು ತ್ರಿವಳಿ ಸಹೋದರಿಯರನ್ನು ಯುವಕ ಮದುವೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

TV9kannada Web Team

| Edited By: Pavitra Bhat Jigalemane

Mar 05, 2022 | 2:46 PM

ಮದುವೆ (Wedding) ಎಂದರೆ ಒಂದು ಗಂಡು ಒಂದು ಹೆಣ್ಣು ಜೊತೆಯಾಗಿ ಜೀವನ ನಡೆಸಲು ನಿರ್ಧರಿಸಿ ಹಾಕಿಕೊಳ್ಳುವ ಸುಮಧುರ ಬಂಧ. ಆದರೆ ಇಲ್ಲೊಬ್ಬ ಯುವಕ ಒಂದೇ ಮಂಟಪದಲ್ಲಿ ಮೂವರು ಯುವತಿಯರನ್ನು ಮದುವೆಯಾಗಿದ್ದಾನೆ. ಮೂವರು ತ್ರಿವಳಿ ಸಹೋದರಿಯರು (Triplets) ಒಂದೇ ಹುಡುಗನನ್ನು ಮೆಚ್ಚಿ ಪ್ರೇಮ ನಿವೇದನೆ ಮಾಡಿದ್ದು, ಆತನೂ ಒಪ್ಪಿಕೊಂಡು ಒಂದೇ ದಿನ ಮೂವರು ಸಹೋದರಿಯರನ್ನೂ ಮದುವೆಯಾಗಿದ್ದಾನೆ. ಸದ್ಯ ಈ ವಿಚಾರ ಎಲ್ಲೆಡೆ ವೈರಲ್ (Viral)​ ಆಗಿದೆ.

ಡೆಮೊಕ್ರೆಟಿಕ್​ ರಿಪಬ್ಲಿಕ್​ ಆಫ್​ ಕಾಂಗೋದ 32 ವರ್ಷದ ಲುವಿಜೊ ಎಂಬ ಹೆಸರಿನ ಯುವಕ ನಡೆಗೆ, ನತಾಶಾ ಮತ್ತು ನಟಾಲಿಯಾ ಎನ್ನುವ ಯುವತಿಯರನ್ನು ಮದುವೆಯಾಗಿದ್ದಾನೆ. ವರದಿಯ ಪ್ರಕಾರ ರಿಪಬ್ಲಿಕ್​ ಕಾಂಗೋದಲ್ಲಿ ಒಂದಕ್ಕಿಂತ ಹೆಚ್ಚು ಮದುವೆಯಾಗಬಹುದು.  ಈ ಕುರಿತು ಲುವಿಜೊ ತನಗೆ ತ್ರಿವಳಿ ಸಹೋದರಿಯರ ಪ್ರೇಮ ನಿವೇದನೆಯನ್ನು ತಿರಸ್ಕರಿಸಲಾಗಲಿಲ್ಲ. ಅದೇ ರೀತಿ ಮನೆಯವರನ್ನು ಒಪ್ಪಿಸುವುದು ಸರಳವಾಗಿರಲಿಲ್ಲ. ಹಾಗೇ ನೋಡಿದರೆ ನಮ್ಮ ಮದುವೆಗೆ ನನ್ನ ಪೋಷಕರು ಬರಲೇ ಇಲ್ಲ. ಒಂದನ್ನು ಪಡೆದುಕೊಳ್ಳಬೇಕೆಂದರೆ ಇನ್ನೊಂದನ್ನು ಕಳೆದುಕೊಳ್ಳಲೇಬೇಕು. ಆ ಬಗ್ಗೆ ನನಗೆ ಬೇಸರವಿಲ್ಲ. ತ್ರಿವಳಿ ಸಹೋದರಿಯರನ್ನು ಮದುವೆಯಾಗಿರುವುದಕ್ಕೆ ಸಂತೋಷವಿದೆ. ಬೇರೆ ಯಾರು ಏನು ಅಂದಕೊಂಡರೂ ನನಗೆ ಬೇಸರವಿಲ್ಲ ಎಂದಿದ್ದಾರೆ ಎಂದು ಇಂಡಿಯಾ ಡಾಟ್​ ಕಾಮ್​ ವರದಿ ತಿಳಿಸಿದೆ.

ಲುವಿಜೊಗೆ ಮೊದಲು ನಟಾಲಿಯಾ ಮೇಲೆ ಪ್ರೀತಿಯಾಗಿದ್ದು, ನಂತರ ಆಕೆ ಉಳಿದ ಸಹೋದರಿಯರನ್ನು ಪರಿಚಯ ಮಾಡಿಕೊಂಡ ಮೇಲೆ ಅವರ ಮೇಲೆಯೂ ಪ್ರೀತಿಯಾಗಿತ್ತು. ಈ ಬಗ್ಗೆ ತ್ರಿವಳಿ ಸಹೋದರಿಯರು ಕೇಳಿದಾಗ ಮದುವೆಯಾಗುವುದಿಲ್ಲ ಎನ್ನಲು ಸಾಧ್ಯವಾಗಲಿಲ್ಲ ಹೀಗಾಗಿ ಮದುವೆಯಾಗಿದ್ದೇನೆ ಎಂದಿದ್ದಾರೆ.

ಈ ಕುರಿತು ಮೂವರು ಸಹೋದರಿಯರು, ಚಿಕ್ಕಂದಿನಿಂದ ಎಲ್ಲವನ್ನೂ ಹೆಂಚಿಕೊಂಡಿದ್ದೇವೆ. ಇದೀಗ ಹುಡುಗನನ್ನು ಮೂವರು ಮದುವೆಯಾಗಿದ್ದೇವೆ, ಒಬ್ಬ ವ್ಯಕ್ತಿಯನ್ನು ಮೂವರು ಯುವತಿಯರು ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದಿಕೊಂಡಿದ್ದಾರೆ. ಆದರೆ ಎಲ್ಲವನ್ನೂ ಹಂಚಕೊಳ್ಳುವುದು ಚಿಕ್ಕಂದಿನಿಂದಲೇ ಬಂದ ಅಭ್ಯಾಸ ಎಂದಿದ್ದಾರೆ. ಸದ್ಯ ಇವರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿವೆ.

ಇದನ್ನೂ ಓದಿ:

27 ಸೆಕೆಂಡ್​ನಲ್ಲಿ 100 ಮೀಟರ್ ಓಟ ಪೂರ್ಣಗೊಳಿಸಿದ 102 ವರ್ಷದ ವೃದ್ಧ: ವಿಡಿಯೋ ವೈರಲ್

Follow us on

Related Stories

Most Read Stories

Click on your DTH Provider to Add TV9 Kannada