ಜಾಮೂನ್​ ಪರೋಟ ತಿಂದಿದ್ದೀರಾ? ಫುಡ್​ ಬ್ಲಾಗರ್​ ಹಂಚಿಕೊಂಡ ವಿಡಿಯೋ ನೋಡಿ ಬಾಯಲ್ಲಿ ನೀರೂರಿಸಿಕೊಂಡ ನೆಟ್ಟಿಗರು

ಜಾಮೂನ್​ ಪರೋಟ ತಿಂದಿದ್ದೀರಾ? ಫುಡ್​ ಬ್ಲಾಗರ್​ ಹಂಚಿಕೊಂಡ ವಿಡಿಯೋ ನೋಡಿ ಬಾಯಲ್ಲಿ ನೀರೂರಿಸಿಕೊಂಡ ನೆಟ್ಟಿಗರು
ಜಾಮೂನ್​ ಪರೋಟ

ರಸ್ತೆ ಬದಿ ವ್ಯಾಪಾರಿಯೊಬ್ಬರು ಜಾಮೂನ್​ ಹಾಕಿ ಪರೋಟ  ಮಾಡಿದ್ದಾರೆ. ಇದರ ವಿಡಿಯೋವನ್ನು ಫುಡ್​ ಬ್ಲಾಗರ್​ ಒಬ್ಬರು ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಇದರ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ.

TV9kannada Web Team

| Edited By: Pavitra Bhat Jigalemane

Mar 06, 2022 | 9:47 AM

ಸಾಮಾಜಿಕ ಜಾಲತಾಣದಲ್ಲಿ ಫುಡ್​ ಬ್ಲಾಗರ್ (Food Blogger)​ ಗಳು ಹಂಚಿಕೊಳ್ಳುವ ಚಿತ್ರ ವಿಚಿತ್ರ ಆಹಾರ ಪದಾರ್ಥಗಳು ಆಗಾಗ ನೆಟ್ಟಿಗರಲ್ಲಿ ಅಚ್ಚರಿಯನ್ನು ಉಂಟು ಮಾಡುತ್ತವೆ. ಈ ಹಿಂದೆ ಕುರ್​ಕುರೆ ಮಿಲ್ಕ್​ಶೇಕ್​, ದೋಸೆಯ ಐಸ್​ಕ್ರೀಮ್​ ಹೀಗೆ ಹಲವು ವಿಧದ ಫುಡ್​ಗಳನ್ನು ದೇಶದ ಹಲವೆಡೆ ಟೇಸ್ಟ್​ ಮಾಡುವ ಮೂಲಕ ಸಾಮಾಜಿಕ ಜಾಲತಾಣ ಬಳಕೆದಾರರೊಂದಿಗೆ ಫುಡ್​ ಬ್ಲಾಗರ್​ಗಳು ಹಂಚಿಕೊಂಡಿದ್ದಾರೆ. ಅದನ್ನು ಹಲವರು ಮೆಚ್ಚಿಕೊಂಡರೆ ಇನ್ನೂ ಕೆಲವರು ಮೂಗು ಮುರಿದಿದ್ದಾರೆ. ಇದೀಗ ರಸ್ತೆ ಬದಿ ವ್ಯಾಪಾರಿಯೊಬ್ಬರು ಜಾಮೂನ್​ ಹಾಕಿ ಪರೋಟ (Jamun Paratha) ಮಾಡಿದ್ದಾರೆ. ಇದರ ವಿಡಿಯೋವನ್ನು ಫುಡ್​ ಬ್ಲಾಗರ್​ ಒಬ್ಬರು ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಇದರ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಇದನ್ನು ನೋಡಿ ನೆಟ್ಟಿಗರು ಇದೇನು ತಿಂಡಿ ಎಂದು ಉದ್ಘಾರವೆಳೆದಿದ್ದಾರೆ.

View this post on Instagram

A post shared by SONIA NEGI (@taste_bird)

ಇನ್ಸ್ಟಾಗ್ರಾಮ್​ನಲ್ಲಿ ಸೋನಿಯಾ ನೇಗಿ ಎನ್ನುವ ಫುಡ್​ ಬ್ಲಾಗರ್​ ಒಬ್ಬರು ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ  ಪರೋಟ ಹಿಟ್ಟಿನೊಳಗೆ ಎರಡು ಜಾಮೂನ್​ ಹಾಕಿ ಪರೋಟ ಲಟ್ಟಿಸಲಾಗಿದೆ. ನಂತರ ಅದನ್ನು ಬೇಯಿಸಿ ಅದಕ್ಕೆ ಜಾಮೂನಿನ ಸಿಹಿ ರಸವನ್ನು ಹಾಕಲಾಗಿದೆ. ವಿಡಿಯೋ ಹಂಚಿಕೊಂಡ ಫುಡ್​ ಬ್ಲಾಗರ್​, ನಿಜಕ್ಕೂ ಇದು ರುಚಿಯಾಗಿದೆ ಎಂದಿದ್ದಾರೆ.

ವಿಡಿಯೋ ನೋಡಿದ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.,ಕೆಲವರು ಇದನ್ನು ಒಮ್ಮೆಯ ಟೇಸ್ಟ್​ ಮಾಡಬೇಕು ಎಂದರೆ ಇನ್ನೂ ಕೆಲವರು ಪಾಲ್ತೂ ಎಕ್ಸ್​ಪೆರಿಮೆಂಟ್​ ಎಂದಿದ್ದಾರೆ. ಒಟ್ಟಿನಲ್ಲಿ ಮತ್ತೊಂದು ಹೊಸ ತರಹದ ಫುಡ್​ ನೊಡಿ ನೆಟ್ಟಗರು  ಖುಷಿಗೊಂಡಿದ್ದಾರೆ. ಸದ್ಯ ವಿಡಿಯೋ 44  ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದು, 300 ಕ್ಕೂ ಅಧಿಕ ಮಂದಿ ಕಾಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ:

ಅಳುತ್ತಿದ್ದ ಪ್ರಯಾಣಿಕರ ಮಗುವನ್ನು ಎತ್ತಿಕೊಂಡು ಸಮಾಧಾನಿಸಿದ ಗಗನಸಖಿ: ವಿಡಿಯೋ ವೈರಲ್​

Follow us on

Related Stories

Most Read Stories

Click on your DTH Provider to Add TV9 Kannada