ಈ ಜೋಡಿಯ ವಯಸ್ಸಿನ ಅಂತರ 53 ವರ್ಷ; ಈರ್ವರೂ ಮೊದಲ ಬಾರಿಗೆ ಭೇಟಿಯಾಗಿದ್ದು ಎಲ್ಲಿ ಗೊತ್ತಾ?

ಈ ಜೋಡಿಯ ವಯಸ್ಸಿನ ಅಂತರ 53 ವರ್ಷ; ಈರ್ವರೂ ಮೊದಲ ಬಾರಿಗೆ ಭೇಟಿಯಾಗಿದ್ದು ಎಲ್ಲಿ ಗೊತ್ತಾ?
ಗ್ಯಾರಿ ಮತ್ತು ಅಲ್ಮೆಡಾ

Viral News: ಸದ್ಯ ಈ ಜೋಡಿ ಎಲ್ಲೆಡೆ ಸಖತ್ ಸುದ್ದಿಯಾಗುತ್ತಿದೆ. ಕಾರಣ, ಈರ್ವರ ನಡುವಿನ ವಯಸ್ಸಿನ ಅಂತರ. ಇಬ್ಬರ ನಡುವೆ 53 ವರ್ಷ ವಯಸ್ಸಿನ ಅಂತರವಿದೆ. ಮದುವೆಯಾಗಿ ಆರು ವರ್ಷಗಳಾಗಿದ್ದು, ವೈವಾಹಿಕ ಜೀವನ ಸುಂದರವಾಗಿದೆ ಎಂದು ಈರ್ವರೂ ಹೇಳಿಕೊಂಡಿದ್ದಾರೆ.

TV9kannada Web Team

| Edited By: shivaprasad.hs

Mar 06, 2022 | 1:14 PM

ಪ್ರೇಮಕ್ಕೆ ಕಣ್ಣಿಲ್ಲ ಎಂಬ ಮಾತೇ ಇದೆ. ಅದಕ್ಕೆ ನಿದರ್ಶನಗಳನ್ನೂ ಕಾಣುತ್ತಿರುತ್ತೇವೆ. ಸದ್ಯ ಎಲ್ಲೆಡೆ ಈ ಜೋಡಿಯ ಕತೆ ಸಖತ್ ವೈರಲ್ ಆಗುತ್ತಿದೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಈರ್ವರ ನಡುವೆ ಇರುವ ವಯಸ್ಸಿನ ಅಂತರ 53 ವರ್ಷ. ಮದುವೆಯಾಗಿ 6 ವರ್ಷಗಳು ಕಳೆದಿವೆ. ತಮ್ಮ ವೈವಾಹಿಕ ಜೀವನ (Marriage Life) ಅತ್ಯುತ್ತಮವಾಗಿದೆ ಎಂದು ಈರ್ವರೂ ಹೇಳಿಕೊಂಡಿದ್ದಾರೆ. ಏನಿದು ಪ್ರಕರಣ? ಈರ್ವರ ನಡುವೆ ಪ್ರೀತಿ ಹುಟ್ಟಿದ್ದು ಹೇಗೆ? ಇಲ್ಲಿದೆ ವಿವರ. ಅಮೇರಿಕಾದ ರಾಜ್ಯ ಟೆನ್ನಿಸ್ಸಿಯ ಗ್ಯಾರಿ ಹಾಗೂ ಅಲ್ಮೆಡಾ ಈಗ ಸಖತ್ ಸುದ್ದಿಯಾಗುತ್ತಿರುವ ಜೋಡಿ. ಗ್ಯಾರಿಗೆ ಈಗ 24 ವರ್ಷ ವಯಸ್ಸು. ಅವರ ಪತ್ನಿ ಅಲ್ಮೆಡಾಗೆ 77 ವರ್ಷ ವಯಸ್ಸು. 2015ರ ಅಕ್ಟೋಬರ್​ನಲ್ಲಿ ವಿವಾಹವಾಗಿರುವ ಈ ಜೋಡಿಯ ವೈವಾಹಿಕ ಜೀವನಕ್ಕೆ ಈಗ 6ರ ಪ್ರಾಯ. ಜೀವನ ಸಮನಾಗಿ, ಸುಂದರವಾಗಿದೆ ಎನ್ನುವುದು ಅವರ ಮಾತು. ಸಮಾಜದಲ್ಲಿ ಕೀಳು ಮಾತುಗಳು ಬರುತ್ತವೆ. ಅವುಗಳಿಗೆ ತಲೆಕೆಡಿಸಿಕೊಂಡಿಲ್ಲ ಎಂದೂ ಈ ಜೋಡಿ ಹೇಳಿಕೊಂಡಿದೆ.

ಗ್ಯಾರಿ ಹಾಗೂ ಅಲ್ಮೆಡಾ ಭೇಟಿಯಾಗಿದ್ದು ಎಲ್ಲಿ?

ಗ್ಯಾರಿ ಹಾಗೂ ಅಲ್ಮೆಡಾ ಭೇಟಿಯಾಗಿದ್ದು ಆರು ವರ್ಷಗಳ ಕೆಳಗೆ. ಅಲ್ಮೆಡಾ ಪುತ್ರನ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಈರ್ವರೂ ಭೇಟಿಯಾಗಿದ್ದರು. ಭೇಟಿಯಾಗಿ ಎರಡೇ ವಾರಕ್ಕೆ ಈರ್ವರೂ ವೈವಾಹಿಕ ಬಂಧನಕ್ಕೆ ಒಳಗಾದರು. ಆಗ ಗ್ಯಾರಿಗೆ ಕೇವಲ 17ರ ವಯಸ್ಸು. ಅಲ್ಮೆಡಾಗೆ 71. ‘ದಿ ಸನ್’ ಜತೆ ಮಾತನಾಡುತ್ತಾ ಗ್ಯಾರಿ, ಅಲ್ಮೆಡಾರನ್ನು ಸೋಲ್ ಮೇಟ್ ಎಂದು ಕರೆದಿದ್ದಾರೆ. ‘‘ನಾವು ಜತೆಗಿರುವುದನ್ನು, ಒಟ್ಟಿಗೆ ಸಮಯ ಕಳೆಯುವುದನ್ನು ಇಷ್ಟಪಡುತ್ತೇವೆ. ವೈವಾಹಿಕ ಜೀವನ ಸುಂದರವಾಗಿದೆ’’ ಎಂದಿದ್ದಾರೆ ಗ್ಯಾರಿ.

ಇತ್ತೀಚೆಗಷ್ಟೇ ಗ್ಯಾರಿ ಹಾಗೂ ಅಲ್ಮೆಡಾ ಹೊಸ ಕಾರನ್ನು ಖರೀದಿಸಿದ್ದಾರೆ. ಮುಂದಿನ ವರ್ಷ ಹೊಸ ಮನೆ ಖರೀದಿಸುವ ಯೋಜನೆಯನ್ನೂ ಈ ಜೋಡಿ ಹೊಂದಿದೆ. 53 ವರ್ಷಗಳ ಅಂತರದ ಬಗ್ಗೆ ಸಮಾಜದಿಂದ ಬರುವ ಪ್ರತಿಕ್ರಿಯೆಗಳನ್ನು ಹೇಗೆ ಸ್ವೀಕರಿಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಗ್ಯಾರಿ, ‘‘ಇದು ನಮ್ಮ ಬದುಕು. ನಮಗೆ ಇದರಲ್ಲಿ ಹಿಡಿತವಿದೆ. ಬೇರೆಯವರ ಅಭಿಪ್ರಾಯಗಳು ನಮ್ಮ ಜೀವನ ಹಾಳುಮಾಡಲು ನಾವು ಅವಕಾಶ ನೀಡಿಲ್ಲ’’ ಎಂದು ಹೇಳಿದ್ದಾರೆ.

ಈರ್ವರನ್ನು ನೋಡಿ ಬಹಳಷ್ಟು ಜನರು ಕಾಲೆಳೆದಿದ್ದಾರೆ. ಚುಚ್ಚಿದ್ದಾರೆ. ಆದರೆ ಈ ಜೋಡಿ ಅದಕ್ಕೆ ತಲೆಕೆಡಿಸಿಕೊಂಡಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಇವರಿಗೆ ಹೊಗಳಿಕೆ, ಬೆಂಬಲವೂ ಸಿಕ್ಕಿದೆ.

ಇದನ್ನೂ ಓದಿ:

ಶೂಟಿಂಗ್​ ವೇಳೆ ತೆರೆ ಹಿಂದೆ ರಶ್ಮಿಕಾ ಮಂದಣ್ಣ ಮಾಡುವ ತರ್ಲೆ-ತಮಾಷೆಗೆ ಈ ವಿಡಿಯೋ ಸಾಕ್ಷಿ

300 ವರ್ಷ ಹಳೆಯ ಮತ್ಸ್ಯಕನ್ಯೆ ರೂಪದ ಮಮ್ಮಿ ಪತ್ತೆ: ಅಚ್ಚರಿಗೊಂಡ ವಿಜ್ಞಾನಿಗಳು

Follow us on

Related Stories

Most Read Stories

Click on your DTH Provider to Add TV9 Kannada