AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುದ್ಧನಾಡು ಉಕ್ರೇನ್​ನ ಎಲ್ವಿವ್ ರೈಲ್ವೇ ನಿಲ್ದಾಣದ ಹೊರಗೆ ಕುಳಿತು ಪಿಯಾನೋ ನುಡಿಸಿದ ಯುವತಿ: ವಿಡಿಯೋ ವೈರಲ್​

ಯುದ್ಧದ ಆತಂಕ, ಭಯ, ನೋವಿನ ನಡುವೆ ಯುವತಿಯೊಬ್ಬಳು ರೈಲ್ವೆ ನಿಲ್ದಾಣದ ಹೊರಗೆ ಕುಳಿತು ಜಗತ್ತು ಎಷ್ಟು ಸುಂದರ ಎಂದು ಪಿಯಾನೋ ನುಡಿಸಿದ ವಿಡಿಯೋ ಸಖತ್​ ವೈರಲ್​ ಆಗಿದೆ.

ಯುದ್ಧನಾಡು ಉಕ್ರೇನ್​ನ ಎಲ್ವಿವ್ ರೈಲ್ವೇ ನಿಲ್ದಾಣದ ಹೊರಗೆ ಕುಳಿತು ಪಿಯಾನೋ ನುಡಿಸಿದ ಯುವತಿ: ವಿಡಿಯೋ ವೈರಲ್​
ಪಿಯಾನೋ ನುಡಿಸುತ್ತಿರುವ ಯುವತಿ
TV9 Web
| Edited By: |

Updated on:Mar 06, 2022 | 4:00 PM

Share

ಉಕ್ರೇನ್​ ಮೇಲಿನ ರಷ್ಯಾ ಯುದ್ಧ (Ukraine Russia War)  11 ನೇ ದಿನಕ್ಕೆ ಕಾಲಿರಿಸಿದೆ. ಐದುವರೆ ಗಂಟೆಗಳ ಕದನವಿರಾಮದ ಬಳಿಕ ಮತ್ತೆ ರಷ್ಯಾ ಯುದ್ಧ ಮುಂದುವರೆಸಿದೆ. ಜನಜೀವನ ಅಕ್ಷರಶಃ ನಲುಗಿಹೋಗಿದೆ.  ಎಲ್ಲಿ ಯಾವ ಹೊತ್ತಿಗೆ ಬಾಂಬ್​ ಸ್ಫೋಟದ ಸದ್ದು ಕೇಳಿಸಲಿದೆ ಎನ್ನುವ ಅರಿವಿಲ್ಲದೆ ಕ್ಷಣಕ್ಷಣಕ್ಕೂ ಭಯದಲ್ಲೇ  ಬದುಕುತ್ತಿದ್ದಾರೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ನೆಟ್ಟಿಗರ ಮನ ಗೆದ್ದಿದೆ. ಯುದ್ಧನಾಡು ಉಕ್ರೇನ್​ನ ಎಲ್ವಲ್ ​(Lviv Train Station) ರೈಲು ನಿಲ್ದಾಣದಲ್ಲಿ ಕುಳಿತು ಯುವತಿಯೊಬ್ಬಳು ಪಿಯಾನೋ (Piano) ನುಡಿಸಿದ್ದಾಳೆ. ಯುದ್ಧದ ಆತಂಕ, ಭಯ, ನೋವಿನ ನಡುವೆ ಯುವತಿ ‘ಜಗತ್ತು ಎಷ್ಟು ಸುಂದರ’ ಎಂದು ಪಿಯಾನೋ ನುಡಿಸಿದ್ದು, ಅದರ ವಿಡಿಯೋ ಸಖತ್​ ವೈರಲ್​ ಆಗಿದೆ.

ಜನನಿಬಿಡ ಪ್ರದೇಶದಲ್ಲಿ ಭಾರೀ ಗಾತ್ರದ ಪಿಯಾನೋ ಇಟ್ಟುಕೊಂಡು ಲೋಯಸ್ ಆರ್ಮ್ಸ್ಟ್ರಾಂಗ್ ಅವರ ಹಾಡು What A Wonderful World ಹಾಡನ್ನು ನುಡಿಸಿದ್ದಾಳೆ.  ಆಕೆಯ ಸುತ್ತಲೂ ಬ್ಯಾಗ್​ಗಳನ್ನು ಹಿಡಿದುಕೊಂಡು ವಿವರಿಸಲಾಗದ ಭಯದಲ್ಲಿ ರೈಲಿಗಾಗಿ ಕಾಯುತ್ತಿರುವ ಜನರು ಓಡಾಡುತ್ತಿರುವ ದೃಶ್ಯವನ್ನು ಕಾಣಬಹುದು. ಅದೆಲ್ಲವನ್ನು ಕಡೆಗಣಿಸಿ ತನ್ನದೇ ಪ್ರಪಂಚದಲ್ಲಿ ಭಯದ ನಡುವೆಯೂ ಪಿಯಾನೋ ನುಡಿಸಿದ್ದಾಳೆ.

ವಿಡಿಯೋ ನೋಡಿದ ನೆಟ್ಟಿಗರು ಕಣ್ಣಾಲಿಗಳಲ್ಲಿ ನೀರು ತುಂಬುತ್ತಿದೆ ಎಂದು ಕಾಮೆಂಟ್​ ಮಾಡಿದ್ದಾರೆ. ವಿಡಿಯೋವನ್ನು ಆ್ಯಂಡ್ರೂ ಮಾರ್ಶಲ್​ ಎನ್ನುವವರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು 85 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಯುದ್ಧದ ನಡುವೆಯೂ ಜಗತ್ತು ಎಷ್ಟು ಸುಂದರ ಎನ್ನುವುದನ್ನು ಕಂಡು ಬಳಕೆದಾರರು ಅಚ್ಚರಿಗೊಂಡಿದ್ದಾರೆ.

ಇದನ್ನೂ ಓದಿ:

Viral Video: ಹೆಪ್ಪುಗಟ್ಟಿದ ನದಿಯಲ್ಲಿ ಸಿಲುಕಿದ್ದ ನಾಯಿಯ ರಕ್ಷಣೆ: ಅಗ್ನಿಶಾಮಕ ಸಿಬ್ಬಂದಿ ಕೆಲಸಕ್ಕೆ ವ್ಯಾಪಕ ಮೆಚ್ಚುಗೆ

Published On - 3:56 pm, Sun, 6 March 22

48 ಗಂಟೆಗಳಲ್ಲಿ ಅಭಿಷೇಕ್ ದಾಖಲೆ ಮುರಿದ ಇಶಾನ್ ಕಿಶನ್
48 ಗಂಟೆಗಳಲ್ಲಿ ಅಭಿಷೇಕ್ ದಾಖಲೆ ಮುರಿದ ಇಶಾನ್ ಕಿಶನ್
ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ