AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಬಾಂಬ್​ ಶೆಲ್ಟರ್​​ನಲ್ಲಿ ಲೆಟ್ ಇಟ್ ಗೋ ಹಾಡು ಹಾಡಿದ ಉಕ್ರೇನ್ ಬಾಲಕಿ; ವಿಡಿಯೋ ವೈರಲ್

Russia- Ukraine War: . ಉಕ್ರೇನಿಯನ್ ಪಡೆಗಳು ರಷ್ಯಾದ ಆಕ್ರಮಣದಿಂದ ಹೋರಾಡುತ್ತಿರುವ ಬೆನ್ನಲ್ಲೇ ಉಕ್ರೇನ್ ಬಾಲಕಿಯ ಈ ವಿಡಿಯೋ ವೈರಲ್ ಆಗಿದೆ.

Viral Video: ಬಾಂಬ್​ ಶೆಲ್ಟರ್​​ನಲ್ಲಿ ಲೆಟ್ ಇಟ್ ಗೋ ಹಾಡು ಹಾಡಿದ ಉಕ್ರೇನ್ ಬಾಲಕಿ; ವಿಡಿಯೋ ವೈರಲ್
ಲೆಟ್ ಇಟ್ ಗೋ ಹಾಡು ಹಾಡಿದ ಬಾಲಕಿ
TV9 Web
| Edited By: |

Updated on: Mar 07, 2022 | 3:02 PM

Share

ನವದೆಹಲಿ: ‘ಫ್ರೋಜನ್’ (Frozen) ಎಂಬ ಅನಿಮೇಟೆಡ್ ಸಿನಿಮಾದ ಸೂಪರ್ ಹಿಟ್ ಹಾಡು ‘ಲೆಟ್ ಇಟ್ ಗೋ’ ಇತ್ತೀಚೆಗೆ ಹೊಸ ಅರ್ಥವನ್ನು ಪಡೆದುಕೊಂಡಿದೆ. ಈ ಹಾಡನ್ನು ಕೀವ್‌ನ ಬಾಂಬ್ ಶೆಲ್ಟರ್‌ನಲ್ಲಿ ಪುಟ್ಟ ಹುಡುಗಿ ಹಾಡಿದ್ದಾಳೆ. ಈ ಶೋ ನೋಡಿದ ಜನರು ಕಣ್ತುಂಬಿಕೊಂಡಿದ್ದಾರೆ. ಅಲ್ಲದೆ, ಈ ಹಾಡನ್ನು ಕೇಳಿದ ಆ ಶೆಲ್ಟರ್​​ನಲ್ಲಿದ್ದ ಜನರು ಭಾವಕರಾಗಿದ್ದಾರೆ. ಉಕ್ರೇನಿಯನ್ ಪಡೆಗಳು (Ukraine Force) ರಷ್ಯಾದ ಆಕ್ರಮಣದಿಂದ ಹೋರಾಡುತ್ತಿರುವ ಬೆನ್ನಲ್ಲೇ ಈ ವಿಡಿಯೋ ವೈರಲ್ (Video Viral) ಆಗಿದೆ. ಅಮೆಲಿಯಾ ಎಂಬ ಹುಡುಗಿಯ ಅಭಿನಯದ ವೀಡಿಯೊ ವೈರಲ್ ಆಗಿದೆ ಮತ್ತು ಟ್ವಿಟರ್‌ನಲ್ಲಿ 1.9 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.

ಹಲವಾರು ಜನರು ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ಕ್ಲಿಪ್ ಅನ್ನು ಹಂಚಿಕೊಂಡು, ಈ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ ಮತ್ತು ಲೈಕ್ ಕೂಡ ಮಾಡಿದ್ದಾರೆ. ವೈರಲ್ ಆಗಿರುವ ಈ ವಿಡಿಯೋದಲ್ಲಿ, ಬಂಕರ್‌ನಲ್ಲಿ ಆಶ್ರಯ ಪಡೆಯುತ್ತಿರುವ ಜನರಿಗಾಗಿ ಅಮೆಲಿಯಾ ‘ಲೆಟ್ ಇಟ್ ಗೋ’ ಹಾಡನ್ನು ಹಾಡಿದ್ದಾಳೆ.

ಆ ಶೆಲ್ಟರ್​ನಲ್ಲಿ ಕೆಲವರು ನೆಲದ ಮೇಲೆ ಮಲಗಿರುವುದನ್ನು ಕಾಣಬಹುದು. ಇತರರು ಅಮೆಲಿಯಾ ಸುತ್ತಲೂ ನಿಂತು ಮತ್ತು ಕುಳಿತುಕೊಂಡು ಆಕೆಯ ಹಾಡನ್ನು ಕೇಳುತ್ತಿದ್ದಾರೆ. ಹಾಡಿನ ಕೊನೆಯಲ್ಲಿ ಜನರೆಲ್ಲರೂ ಹರ್ಷೋದ್ಗಾರ ಮತ್ತು ಚಪ್ಪಾಳೆ ತಟ್ಟಿದ್ದಾರೆ.

ಇದನ್ನು ಮೊದಲು ಗುರುವಾರ ಫೇಸ್‌ಬುಕ್‌ನಲ್ಲಿ ಮಾರ್ಟಾ ಸ್ಮೆಖೋವಾ ಅವರು ಪೋಸ್ಟ್ ಮಾಡಿದ್ದಾರೆ. ಅವರು ಹುಡುಗಿಯ ತಾಯಿಯ ಅನುಮತಿ ಪಡೆದು ಆ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ. ಎಲ್ಲರೂ ತಮ್ಮ ಕೆಲಸಗಳನ್ನು ಬದಿಗಿಟ್ಟು ಆ ಹುಡುಗಿಯ ಹಾಡನ್ನು ಕೇಳಿದರು. ಕೀವ್​ನಲ್ಲಿ ಈ ಘಟನೆ ನಡೆದ ಸ್ಥಳ ಅಥವಾ ವೀಡಿಯೊ ತೆಗೆದ ದಿನಾಂಕ ತಿಳಿದಿಲ್ಲ.

ಇದನ್ನೂ ಓದಿ: Russia-Ukraine War: 12ನೇ ದಿನಕ್ಕೆ ಕಾಲಿಟ್ಟ ರಷ್ಯಾ-ಉಕ್ರೇನ್ ಯುದ್ಧ; ಪುಟಿನ್ ಜೊತೆ ಪ್ರಧಾನಿ ಮೋದಿ ಮಾತುಕತೆ

Russia-Ukraine Crisis: 12ನೇ ದಿನಕ್ಕೆ ಕಾಲಿಟ್ಟ ರಷ್ಯಾ-ಉಕ್ರೇನ್​ ಯುದ್ಧ; ಇಂದು 3ನೇ ಸುತ್ತಿನ ಮಾತುಕತೆ ಫಲಪ್ರದವಾಗಬಹುದೇ?