Viral Video: ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸಿ, ಇದು ನನ್ನ ಆದೇಶ; ಭಾರತದ ಸ್ವಾಮೀಜಿಯ ವಿಡಿಯೋ ವೈರಲ್
38 ಸೆಕೆಂಡ್‌ಗಳ ಈ ವಿಡಿಯೋ ಕ್ಲಿಪ್‌ನಲ್ಲಿ ಭಾರತೀಯ ಸ್ವಾಮೀಜಿಯೊಬ್ಬರು ರಷ್ಯಾ ರುಕ್ ಜಾಯೆ. ಉಕ್ರೇನ್ ಝುಕ್ ಜಾಯೆ. ಇದು ನನ್ನ ಆದೇಶ, ಯುದ್ಧ ನಿಲ್ಲಿಸಿ! ಎಂದು ಆದೇಶಿಸಿದ್ದಾರೆ.
ನವದೆಹಲಿ: ರಷ್ಯಾ ಮತ್ತು ಉಕ್ರೇನ್ (Ukraine) ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವಂತೆಯೇ ಜಗತ್ತಿನ ಹಲವು ರಾಷ್ಟ್ರಗಳು ಈ ಯುದ್ಧವನ್ನು ನಿಲ್ಲಿಸಲು ಪ್ರಯತ್ನಿಸುತ್ತಿವೆ. ಈ ಪಟ್ಟಿಯಲ್ಲಿ ಭಾರತ ಕೂಡ ಸೇರಿದೆ. ಉಕ್ರೇನ್ ಮತ್ತು ರಷ್ಯಾ (Russia) ನಾಯಕರು ಮುಖಾಮುಖಿಯಾಗಿ ಕುಳಿತು ಮಾತುಕತೆ ನಡೆಸಿಕೊಂಡು, ಯುದ್ಧಕ್ಕೆ ಅಂತ್ಯ ಹಾಡಬೇಕೆಂದು ಭಾರತ ಒತ್ತಾಯಿಸಿದೆ. ಹಿಂಸಾಚಾರವನ್ನು ನಿಲ್ಲಿಸಿ, ಹಗೆತನವನ್ನು ಕೊನೆಗೊಳಿಸಲು ಭಾರತ ಕರೆ ನೀಡಿದೆ. ಇದರ ನಡುವೆ ಭಾರತದ ಸ್ವಾಮೀಜಿಯೊಬ್ಬರು ಯುರೋಪ್ ದೇಶಗಳಿಗೆ ಯುದ್ಧವನ್ನು ‘ನಿಲ್ಲಿಸಿ’ ಎಂದು ‘ಆದೇಶ’ ನೀಡಿರುವ ವಿಡಿಯೋವೊಂದು ವೈರಲ್ ಆಗಿದೆ.
38 ಸೆಕೆಂಡ್‌ಗಳ ಈ ವಿಡಿಯೋ ಕ್ಲಿಪ್‌ನಲ್ಲಿ ಭಾರತೀಯ ಸ್ವಾಮೀಜಿಯೊಬ್ಬರು ರಷ್ಯಾ ರುಕ್ ಜಾಯೆ. ಉಕ್ರೇನ್ ಝುಕ್ ಜಾಯೆ. ಇದು ನನ್ನ ಆದೇಶ, ಯುದ್ಧ ನಿಲ್ಲಿಸಿ! ಎಂದು ಆದೇಶಿಸಿದ್ದಾರೆ. ರಷ್ಯಾ ಅದ್ಭುತವಾದ ದೇಶ. ಆದ್ದರಿಂದ ಅದು ಯುದ್ಧವನ್ನು ನಿಲ್ಲಿಸಬೇಕು. ಉಕ್ರೇನ್ ತಪ್ಪು ಮಾಡಿದೆ, ಆದ್ದರಿಂದ ಅದು ಕ್ಷಮೆ ಯಾಚಿಸಬೇಕು. ಇದರಿಂದ ಎಲ್ಲರಿಗೂ ಪ್ರಯೋಜನವಾಗಲಿದೆ. ಹೀಗೆ ಮಾಡಿದರೆ ಮಾತ್ರ ದುರಂತವನ್ನು ನಿಲ್ಲಿಸಬಹುದು ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.
ಟ್ವಿಟರ್ ಬಳಕೆದಾರ ಗೌರವ್ ಸಿಂಗ್ ಸೆಂಗಾರ್ ಶೇರ್ ಮಾಡಿರುವ ಈ ವೀಡಿಯೊ 1 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು, 5,200 ಲೈಕ್‌ಗಳು ಮತ್ತು 1200ಕ್ಕೂ ಹೆಚ್ಚು ರೀಟ್ವೀಟ್‌ಗಳನ್ನು ಗಳಿಸಿದೆ.
पुतिन,जेलेन्सकी सुन लें- अयोध्या से ऑर्डर हो गया है !! pic.twitter.com/bho9EFR8Og
— Gaurav Singh Sengar (@sengarlive) March 3, 2022
ಕಳೆದ ವಾರ ಉಕ್ರೇನ್‌ನಲ್ಲಿ ‘ಮಿಲಿಟರಿ ಕಾರ್ಯಾಚರಣೆ’ ಘೋಷಿಸಿದ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಒಳಗೊಂಡಿರುವ ಕೆಲವು ಮೀಮ್‌ಗಳೊಂದಿಗೆ ನೆಟ್ಟಿಗರು ಈ ವೀಡಿಯೊಗೆ ಪ್ರತಿಕ್ರಿಯಿಸಿದ್ದಾರೆ.
ಸಂಜೀವ್ ಗುಪ್ತಾ ಎಂಬುವವರು ಈ ವಿಡಿಯೋಗೆ ಕಮೆಂಟ್ ಮಾಡಿದ್ದು, ಅಂತಾರಾಷ್ಟ್ರೀಯ ನ್ಯಾಯಾಲಯದ ಆದೇಶವಿದು. ರಷ್ಯಾ ಮತ್ತು ಉಕ್ರೇನ್ ಪಾಲಿಸಲೇಬೇಕು. ಈ ಆದೇಶದ ಮುಂದೆ ಬೇರಾವ ಆದೇಶವೂ ನಿಲ್ಲುವುದಿಲ್ಲ. ಉಕ್ರೇನ್ ಅಧ್ಯಕ್ಷ ಕ್ಷಮೆ ಕೇಳಲೇಬೇಕು. ಆಗ ಮಾತ್ರ ಯುದ್ಧ ನಿಲ್ಲುತ್ತದೆ ಎಂದು ಈ ಮನುಷ್ಯ ಹೇಳಿದ ಮೇಲೆ ಎಲ್ಲರೂ ಕೇಳಲೇಬೇಕು ಎಂದು ಲೇವಡಿ ಮಾಡಿದ್ದಾರೆ.
Here’s the International Court of Justice, @UN General Assembly, Security Council… All rolled into one pronouncing his verdict ??@ZelenskyyUa must comply and apologise. ??War will end now. On a serious note, this guy seems high on something solid #UkraineRussianWar #Ukraine
— Sanjeev Gupta (@sanjg2k1) March 4, 2022
ಇದರ ಜೊತೆಗೆ, ಆಪರೇಷನ್ ಗಂಗಾ ಯೋಜನೆಯ ಅಡಿಯಲ್ಲಿ ಉಕ್ರೇನ್‌ನ ನೆರೆಯ ದೇಶಗಳಿಂದ ವಿಶೇಷ ವಿಮಾನಗಳ ಮೂಲಕ ಸುಮಾರು 10,800 ಭಾರತೀಯರನ್ನು ಮರಳಿ ಕರೆತರಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಭಾರತೀಯ ವಾಯುಪಡೆಯ ಮೂರು C-17 ವಿಮಾನಗಳು ಮತ್ತು 14 ನಾಗರಿಕ ವಿಮಾನಗಳ ಮೂಲಕ ಸ್ಥಳಾಂತರಿಸುವ ಪ್ರಕ್ರಿಯೆಯನ್ನು ನಡೆಸಲಾಯಿತು. ಶನಿವಾರ 11 ವಿಶೇಷ ನಾಗರಿಕ ವಿಮಾನಗಳು 2,200ಕ್ಕೂ ಹೆಚ್ಚು ಭಾರತೀಯರನ್ನು ಮರಳಿ ಕರೆತರುವ ನಿರೀಕ್ಷೆಯಿದೆ.
जो आज्ञा महराज ??? pic.twitter.com/rwZiOyoXAU
— Aadi♥️ (@Rayya787) March 4, 2022
ಇದನ್ನೂ ಓದಿ: Ukraine Crisis: ಆಪರೇಷನ್ ಗಂಗಾ; ಯುದ್ಧಪೀಡಿತ ಉಕ್ರೇನ್ನಿಂದ 10,800 ಭಾರತೀಯರ ಸ್ಥಳಾಂತರ
Operation Ganga: ಉಕ್ರೇನ್ ಸಂಘರ್ಷ; ಪ್ರಧಾನಿ ಮೋದಿ ನೇತೃತ್ವದಲ್ಲಿ 5ನೇ ಬಾರಿಗೆ ಉನ್ನತ ಮಟ್ಟದ ಸಭೆ