AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Price Today: ಹೆಚ್ಚುತ್ತಲೇ ಇದೆ ಚಿನ್ನದ ಬೆಲೆ; 700 ರೂ. ಏರಿಕೆ ಕಂಡ ಬೆಳ್ಳಿ ದರ

ಒಂದೇ ದಿನದಲ್ಲಿ ಚಿನ್ನದ ಬೆಲೆ 10 ಗ್ರಾಂಗೆ ಮತ್ತೆ 440 ರೂ. ಏರಿಕೆಯಾಗಿದೆ. ಅತ್ತ ಬೆಳ್ಳಿ ದರದಲ್ಲಿ ಕೂಡ 2 ದಿನಗಳಿಂದ ಏರಿಕೆಯಾಗಿದ್ದು, ನಿನ್ನೆಗಿಂತ ಇಂದು ಮತ್ತೆ 700 ರೂ. ಹೆಚ್ಚಳವಾಗಿದೆ.

Gold Price Today: ಹೆಚ್ಚುತ್ತಲೇ ಇದೆ ಚಿನ್ನದ ಬೆಲೆ; 700 ರೂ. ಏರಿಕೆ ಕಂಡ ಬೆಳ್ಳಿ ದರ
ಚಿನ್ನದ ಆಭರಣ
TV9 Web
| Edited By: |

Updated on: Mar 05, 2022 | 5:55 AM

Share

Gold and Silver Rate: ಚಿನ್ನದ ಬೆಲೆಯ (Gold Rate) ಹಾವು-ಏಣಿ ಆಟ ಮುಂದುವರೆದಿದೆ. ನಿನ್ನೆ 440 ರೂ. ಇಳಿಕೆಯಾಗಿದ್ದ ಚಿನ್ನದ ಬೆಲೆ ಇದೀಗ ಇಂದು ಮತ್ತೆ ಹೆಚ್ಚಳವಾಗಿದೆ. ಭಾರತದಲ್ಲಿ ಬಂಗಾರದ ಬೆಲೆಯಲ್ಲಿ ಇಂದು ಮತ್ತೆ ಏರಿಕೆ ಕಂಡುಬಂದಿದೆ. ಇಂದು ಚಿನ್ನದ ಬೆಲೆ (Gold Price) 440 ರೂ. ಏರಿಕೆಯಾಗಿದೆ. ಒಂದೇ ದಿನದಲ್ಲಿ ಚಿನ್ನದ ಬೆಲೆ 10 ಗ್ರಾಂಗೆ ಮತ್ತೆ 440 ರೂ. ಏರಿಕೆಯಾಗಿದೆ. ಅತ್ತ ಬೆಳ್ಳಿ ದರದಲ್ಲಿ (Silver Price) ಕೂಡ 2 ದಿನಗಳಿಂದ ಏರಿಕೆಯಾಗಿದ್ದು, ನಿನ್ನೆಗಿಂತ ಇಂದು ಮತ್ತೆ 700 ರೂ. ಹೆಚ್ಚಳವಾಗಿದೆ.

ಭಾರತದ ಅನೇಕ ನಗರಗಳಲ್ಲಿ ಚಿನ್ನದ ದರ ನಿನ್ನೆ ಭಾರೀ ಇಳಿಕೆಯಾಗಿತ್ತು. ಆದರೆ, ಇದೀಗ 10 ಗ್ರಾಂ ಚಿನ್ನಕ್ಕೆ 440 ರೂ. ಏರಿಕೆಯಾಗಿದೆ. ನಿನ್ನೆ ಭಾರತದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 47,300 ರೂ. ಇದ್ದುದು ಇಂದು 47,700 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 51,600 ರೂ. ಇದ್ದುದು 52,040 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 48,830 ರೂ, ಮುಂಬೈ- 47,700 ರೂ, ದೆಹಲಿ- 47,700 ರೂ, ಕೊಲ್ಕತ್ತಾ- 47,700 ರೂ, ಬೆಂಗಳೂರು- 47,700 ರೂ, ಹೈದರಾಬಾದ್- 47,700 ರೂ, ಕೇರಳ- 47,700 ರೂ, ಪುಣೆ- 47,750 ರೂ, ಮಂಗಳೂರು- 47,700 ರೂ, ಮೈಸೂರು- 47,700 ರೂ. ಇದೆ.

ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ: ಚೆನ್ನೈ- 53,270 ರೂ, ಮುಂಬೈ- 52,040 ರೂ, ದೆಹಲಿ- 52,040 ರೂ, ಕೊಲ್ಕತ್ತಾ- 52,040 ರೂ, ಬೆಂಗಳೂರು- 52,040 ರೂ, ಹೈದರಾಬಾದ್- 52,040 ರೂ, ಕೇರಳ- 52,040 ರೂ, ಪುಣೆ- 52,110 ರೂ, ಮಂಗಳೂರು- 52,040 ರೂ, ಮೈಸೂರು- 52,040 ರೂ. ಇದೆ.

ಇಂದಿನ ಬೆಳ್ಳಿಯ ದರ: ಬೆಳ್ಳಿ ಬೆಲೆಯಲ್ಲಿ ನಿನ್ನೆಗಿಂತ ಇಂದು ಕೂಡ ಮತ್ತೆ ಏರಿಕೆಯಾಗಿದೆ. ನಿನ್ನೆಗಿಂತ ಇಂದು 1 ಕೆಜಿ ಬೆಳ್ಳಿಗೆ 700 ರೂ. ಏರಿಕೆಯಾಗಿದೆ. ಭಾರತದಲ್ಲಿ 1 ಕೆಜಿ ಬೆಳ್ಳಿ ದರ 67,300 ರೂ. ಇದ್ದುದು 68,000 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 72,500 ರೂ, ಮೈಸೂರು- 72,500 ರೂ., ಮಂಗಳೂರು- 72,500 ರೂ., ಮುಂಬೈ- 68,000 ರೂ, ಚೆನ್ನೈ- 72,500 ರೂ, ದೆಹಲಿ- 68,000 ರೂ, ಹೈದರಾಬಾದ್- 72,500 ರೂ, ಕೊಲ್ಕತ್ತಾ- 68,000 ರೂ. ಇದೆ.

ಇದನ್ನೂ ಓದಿ: Gold Price Today: ಮತ್ತೆ ಕುಸಿತ ಕಂಡ ಚಿನ್ನದ ಬೆಲೆ; ಇಂದಿನ ಬೆಳ್ಳಿ ದರ ಹೀಗಿದೆ

Karnataka Budget Highlights: ಜೋಗ ಜಲಪಾತ, ಯಾಣ, ನಂದಿ ಬೆಟ್ಟಕ್ಕೆ ರೋಪ್ ವೇ; ಬಜೆಟ್​ನಲ್ಲಿ ಪ್ರವಾಸೋದ್ಯಕ್ಕೆ ಸಿಕ್ಕ ಕೊಡುಗೆ ಇಲ್ಲಿದೆ

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್