Gold Price Today: ಮತ್ತೆ ಕುಸಿತ ಕಂಡ ಚಿನ್ನದ ಬೆಲೆ; ಇಂದಿನ ಬೆಳ್ಳಿ ದರ ಹೀಗಿದೆ

Silver Rate Today: ದಾಖಲೆಯ ಮೊತ್ತಕ್ಕೇರಿದ್ದ ಚಿನ್ನದ ದರ ಎರಡು ದಿನಗಳಿಂದ ಭಾರೀ ಇಳಿಮುಖವಾಗಿತ್ತು. ನಿನ್ನೆ ಮತ್ತೆ ಹೆಚ್ಚಳವಾಗಿದ್ದ ಬಂಗಾರದ ಬೆಲೆ ಇದೀಗ ಮತ್ತೆ ಕುಸಿತ ಕಂಡಿದೆ.

Gold Price Today: ಮತ್ತೆ ಕುಸಿತ ಕಂಡ ಚಿನ್ನದ ಬೆಲೆ; ಇಂದಿನ ಬೆಳ್ಳಿ ದರ ಹೀಗಿದೆ
ಸಾಂದರ್ಭಿಕ ಚಿತ್ರ
Follow us
| Updated By: ಸುಷ್ಮಾ ಚಕ್ರೆ

Updated on: Mar 02, 2022 | 6:02 AM

Gold and Silver Rate: ಭಾರತದಲ್ಲಿ ನಿನ್ನೆ ಏರಿಕೆಯಾಗಿದ್ದ ಚಿನ್ನದ ಬೆಲೆ ಇದೀಗ ಮತ್ತೆ ಕುಸಿತ ಕಂಡಿದೆ. ಇನ್ನು ಮೇ ತಿಂಗಳವರೆಗೂ ಶುಭ ಸಮಾರಂಭಗಳು ಹೆಚ್ಚಾಗಿರುವುದರಿಂದ ಚಿನ್ನ ಕೊಳ್ಳುವವರೂ ಹೆಚ್ಚಾಗುತ್ತಾರೆ. ಇದೀಗ ಚಿನ್ನದ ಬೆಲೆ ಏರಿಕೆಯಾಗುತ್ತಿರುವುದು ಸಹಜವಾಗಿಯೇ ಜನರಿಗೆ ತಲೆನೋವು ತಂದಿಟ್ಟಿದೆ. ಒಂದೇ ದಿನದಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 300 ರೂ. ಇಳಿಕೆಯಾಗಿದೆ. ಅತ್ತ ಬೆಳ್ಳಿ ದರದಲ್ಲಿ (Silver Price) ಕೂಡ ಕುಸಿತವಾಗುತ್ತಿದ್ದು, ನಿನ್ನೆಗಿಂತ ಇಂದು 200 ರೂ. ಇಳಿಕೆಯಾಗಿದೆ.

ದಾಖಲೆಯ ಮೊತ್ತಕ್ಕೇರಿದ್ದ ಚಿನ್ನದ ದರ ಎರಡು ದಿನಗಳಿಂದ ಭಾರೀ ಇಳಿಮುಖವಾಗಿತ್ತು. ನಿನ್ನೆ ಮತ್ತೆ ಹೆಚ್ಚಳವಾಗಿದ್ದ ಬಂಗಾರದ ಬೆಲೆ ಇದೀಗ ಮತ್ತೆ ಕುಸಿತ ಕಂಡಿದೆ. ನಿನ್ನೆ ಭಾರತದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 47,000 ರೂ. ಇದ್ದುದು ಇಂದು 46,700 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 51,280 ರೂ. ಇದ್ದುದು 50,950 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 47,880 ರೂ, ಮುಂಬೈ- 46,700 ರೂ, ದೆಹಲಿ- 46,700 ರೂ, ಕೊಲ್ಕತ್ತಾ- 46,700 ರೂ, ಬೆಂಗಳೂರು- 46,700 ರೂ, ಹೈದರಾಬಾದ್- 46,700 ರೂ, ಕೇರಳ- 46,700 ರೂ, ಪುಣೆ- 46,820 ರೂ, ಮಂಗಳೂರು- 46,700 ರೂ, ಮೈಸೂರು- 46,700 ರೂ. ಇದೆ.

ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ: ಚೆನ್ನೈ- 52,230 ರೂ, ಮುಂಬೈ- 50,950 ರೂ, ದೆಹಲಿ- 50,950 ರೂ, ಕೊಲ್ಕತ್ತಾ- 50,950 ರೂ, ಬೆಂಗಳೂರು- 50,950 ರೂ, ಹೈದರಾಬಾದ್- 50,950 ರೂ, ಕೇರಳ- 50,950 ರೂ, ಪುಣೆ- 51,130 ರೂ, ಮಂಗಳೂರು- 50,950 ರೂ, ಮೈಸೂರು- 50,950 ರೂ. ಇದೆ.

ಇಂದಿನ ಬೆಳ್ಳಿಯ ದರ: ಬೆಳ್ಳಿ ಬೆಲೆಯಲ್ಲಿ ನಿನ್ನೆಗಿಂತ ಇಂದು ಇಳಿಕೆ ಕಂಡುಬಂದಿದೆ. ನಿನ್ನೆಗಿಂತ ಇಂದು 1 ಕೆಜಿ ಬೆಳ್ಳಿಗೆ 200 ರೂ. ಇಳಿಕೆಯಾಗಿದೆ. ಭಾರತದಲ್ಲಿ 1 ಕೆಜಿ ಬೆಳ್ಳಿ ದರ 65,200 ರೂ. ಇದ್ದುದು 65,000 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 70,000 ರೂ, ಮೈಸೂರು- 70,000 ರೂ., ಮಂಗಳೂರು- 70,000 ರೂ., ಮುಂಬೈ- 65,000 ರೂ, ಚೆನ್ನೈ- 70,000 ರೂ, ದೆಹಲಿ- 65,000 ರೂ, ಹೈದರಾಬಾದ್- 70,000 ರೂ, ಕೊಲ್ಕತ್ತಾ- 65,000 ರೂ. ಇದೆ.

ಇದನ್ನೂ ಓದಿ: Gold and Silver Price: ಚಿನ್ನದ ಬೆಲೆಯಲ್ಲಿ ಕುಸಿತ, ಬೆಳ್ಳಿ ಸ್ಥಿರ; ಆಭರಣ ಖರೀದಿಗೂ ಮುನ್ನ ದರ ವಿವರ ಪರಿಶೀಲಿಸಿ

Gold Price Today: ಬಂಗಾರ ಖರೀದಿಸುವವರಿಗೆ ಬಿಗ್ ಶಾಕ್; ಮೊದಲ ಬಾರಿಗೆ 51 ಸಾವಿರ ರೂ. ದಾಟಿದ ಚಿನ್ನದ ಬೆಲೆ!

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ