Gold Price Today: ಬಂಗಾರ ಖರೀದಿಸುವವರಿಗೆ ಬಿಗ್ ಶಾಕ್; ಮೊದಲ ಬಾರಿಗೆ 51 ಸಾವಿರ ರೂ. ದಾಟಿದ ಚಿನ್ನದ ಬೆಲೆ!

TV9 Digital Desk

| Edited By: Sushma Chakre

Updated on:Feb 15, 2022 | 3:28 PM

Gold Rate Today: ಇಂದು ಚಿನ್ನದ ಬೆಲೆಯಲ್ಲಿ ಇದ್ದಕ್ಕಿದ್ದಂತೆ ಭಾರೀ ಏರಿಕೆಯಾಗಿದ್ದು, ಬೆಳ್ಳಿ ದರವೂ ಹೆಚ್ಚಳವಾಗಿದೆ. ಇದೇ ಮೊದಲ ಬಾರಿಗೆ ಚಿನ್ನದ ಬೆಲೆ 51 ಸಾವಿರದ ಗಡಿ ದಾಟಿದೆ.

Gold Price Today: ಬಂಗಾರ ಖರೀದಿಸುವವರಿಗೆ ಬಿಗ್ ಶಾಕ್; ಮೊದಲ ಬಾರಿಗೆ 51 ಸಾವಿರ ರೂ. ದಾಟಿದ ಚಿನ್ನದ ಬೆಲೆ!
ಚಿನ್ನ


ಮುಂಬೈ: ಚಿನ್ನದ ಬೆಲೆ(Gold Rate) ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಇಂದು 10 ಗ್ರಾಂ ಬಂಗಾರದ ಬೆಲೆ 51,960 ರೂ. ಆಗುವ ಮೂಲಕ ಹೊಸ ದಾಖಲೆ ಬರೆದಿದೆ. ಈ ಮೂಲಕ ಚಿನ್ನದ ಬೆಲೆಯ ಏರಿಕೆ ಬಂಗಾರ ಖರೀದಿಸುವವರಿಗೆ ಬಿಗ್ ಶಾಕ್ ನೀಡಿದೆ. ಇನ್ನೇನು ಮದುವೆ ಸೀಸನ್ ಶುರುವಾಗುವುದರಿಂದ ಚಿನ್ನ ಖರೀದಿಸುವರ ಸಂಖ್ಯೆಯೂ ಹೆಚ್ಚುತ್ತದೆ. ಆದರೆ, ಇದೀಗ 10 ಗ್ರಾಂ ಚಿನ್ನದ ಬೆಲೆ 51 ಸಾವಿರದ ಗಡಿ ದಾಟಿರುವುದರಿಂದ ಕೆಳ ಮತ್ತು ಮಧ್ಯಮ ವರ್ಗದವರಿಗೆ ಮತ್ತಷ್ಟು ಹೊರೆಯಾಗಲಿದೆ. ಬೆಂಗಳೂರಿನಲ್ಲಿ ಇಂದು 10 ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ 51,960 ರೂ. ಆಗಿದೆ.

ಭಾರತದಲ್ಲಿ ಚಿನ್ನದ ಬೆಲೆ ಇಂದು ಕಳೆದೊಂದು ವರ್ಷದಲ್ಲೇ ಅತಿ ಹೆಚ್ಚಿನ ಏರಿಕೆ ಕಂಡಿದೆ. ಜನವರಿ 2021ರಲ್ಲಿ ಇದೇ ರೀತಿಯಾಗಿ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿತ್ತು. ಅದಾದ ನಂತರ ಇದೇ ಮೊದಲ ಬಾರಿಗೆ ಚಿನ್ನದ ದರ 51 ಸಾವಿರದ ಗಡಿ ದಾಟಿದೆ. ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ ಚಿನ್ನದ ಏಪ್ರಿಲ್ ಫ್ಯೂಚರ್ಸ್ ಬೆಲೆ 327 ರೂ. ಇತ್ತು. ನಂತರ 10 ಗ್ರಾಂಗೆ 50,243 ರೂ. ತಲುಪಿತು. ಹಿಂದಿನ ಬೆಲೆಯಾದ 49,916 ರೂ.ಗೆ ಹೋಲಿಸಿದರೆ ಈ ಏರಿಕೆಯೇ ಹೆಚ್ಚಾಗಿತ್ತು. ಇದೀಗ 51,960ಕ್ಕೆ ಏರಿಕೆಯಾಗಿದೆ.

ಇಂದು ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ 51,960 ರೂ. ದಾಖಲಾಗಿದೆ. ಹಾಗೇ, ಚೆನ್ನೈನಲ್ಲಿ 10 ಗ್ರಾಂ ಚಿನ್ನಕ್ಕೆ 52,000 ರೂ, ಅಹಮದಾಬಾದ್​ನಲ್ಲಿ 52,000 ರೂ, ಮುಂಬೈನಲ್ಲಿ 52,010 ರೂ, ಕೊಯಮತ್ತೂರಿನಲ್ಲಿ 52,050 ರೂ, ದೆಹಲಿಯಲ್ಲಿ 51,950 ರೂ, ಗುರುಗ್ರಾಮದಲ್ಲಿ 51,200 ರೂ, ಹೈದರಾಬಾದ್​ನಲ್ಲಿ 51,960 ರೂ, ಜೈಪುರದಲ್ಲಿ 51,950 ರೂ, ಕೊಲ್ಕತ್ತಾದಲ್ಲಿ 51,920 ರೂ. ದರ ದಾಖಲಾಗಿದೆ.

ಅತ್ತ ಬೆಳ್ಳಿಯ ಬೆಲೆಯೂ ಹೆಚ್ಚಳವಾಗುತ್ತಿದ್ದು, ಪ್ರತಿ ಗ್ರಾಂ ಬೆಳ್ಳಿಯ ಬೆಲೆ 645 ರೂ. ಆಗಿದೆ. 1 ಕೆಜಿ ಬೆಳ್ಳಿಗೆ 64,500 ರೂ. ಆಗಿದೆ. ಬೆಂಗಳೂರಿನಲ್ಲಿ 1 ಕೆಜಿ ಬೆಳ್ಳಿಯ ಬೆಲೆ 69,200 ರೂ. ಆಗಿದೆ.

ಭಾರತದ ಪ್ರಮುಖ ನಗರಗಳಲ್ಲಿ ಬಂಗಾರದ ಬೆಲೆಯಲ್ಲಿ ಏರಿಕೆ – ಇಳಿಕೆ ಆಗುತ್ತಲೇ ಇರುತ್ತದೆ. ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಸೇರಿ ಹಲವು ಕಾರಣಗಳಿಂದ ಆಯಾ ದಿನದ ಚಿನ್ನ ಹಾಗೂ ಬೆಳ್ಳಿಯ ಬೆಲೆಗಳು ನಿರ್ಧಾರವಾಗುತ್ತದೆ. ಇದೀಗ ಉಕ್ರೇನ್- ರಷ್ಯಾ ಬಿಕ್ಕಟ್ಟು ಕೂಡ ಚಿನ್ನದ ಬೆಲೆಯ ಏರಿಕೆಗೆ ಕಾರಣವಾಗಿದೆ.

ಇದನ್ನೂ ಓದಿ: Gold and Silver Rate: ಬೆಂಗಳೂರು, ಚೆನ್ನೈ ಸೇರಿ ಭಾರತದ ಪ್ರಮುಖ ನಗರಗಳಲ್ಲಿ ಫೆಬ್ರವರಿ 14ರ ಚಿನ್ನ, ಬೆಳ್ಳಿ ದರಗಳು ಇಲ್ಲಿದೆ

Gold and Silver Rate: ಆಭರಣ ಕೊಳ್ಳುವವರಿಗೆ ಶಾಕ್! ಚಿನ್ನ, ಬೆಳ್ಳಿ ದರ ಭಾರಿ ಏರಿಕೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada