AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Price Today: ಚಿನ್ನ ಕೊಳ್ಳುವವರಿಗೆ ದೊಡ್ಡ ಶಾಕ್; ಬೆಳ್ಳಿ ಬೆಲೆಯೂ 2,200 ರೂ. ಏರಿಕೆ

Silver Price on March 3: ಒಂದೇ ದಿನದಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 1,090 ರೂ. ಏರಿಕೆಯಾಗಿದೆ. ಅತ್ತ ಬೆಳ್ಳಿ ದರದಲ್ಲಿ ಕೂಡ ಇದ್ದಕ್ಕಿದ್ದಂತೆ ಭಾರೀ ಏರಿಕೆಯಾಗಿದ್ದು, ನಿನ್ನೆಗಿಂತ ಇಂದು 2,200 ರೂ. ಹೆಚ್ಚಳವಾಗಿದೆ.

Gold Price Today: ಚಿನ್ನ ಕೊಳ್ಳುವವರಿಗೆ ದೊಡ್ಡ ಶಾಕ್;  ಬೆಳ್ಳಿ ಬೆಲೆಯೂ 2,200 ರೂ. ಏರಿಕೆ
ಚಿನ್ನ
TV9 Web
| Edited By: |

Updated on: Mar 03, 2022 | 5:52 AM

Share

Gold and Silver Rate: ಭಾರತದಲ್ಲಿ 2 ದಿನಗಳ ಹಿಂದೆ ಭಾರೀ ಕುಸಿತ ಕಂಡಿದ್ದ ಚಿನ್ನದ ಬೆಲೆ ಇದೀಗ ಮತ್ತೆ ಏರಿಕೆ ಕಂಡಿದೆ. ಈಗಾಗಲೇ ಬಂಗಾರದ ಬೆಲೆಯಲ್ಲಿ ಹೆಚ್ಚಳವಾಗಿದ್ದು, ಮೇ ತಿಂಗಳವರೆಗೂ ಶುಭ ಸಮಾರಂಭಗಳು ಹೆಚ್ಚಾಗಿರುವುದರಿಂದ ಚಿನ್ನ (Gold Rate) ಕೊಳ್ಳುವವರೂ ಹೆಚ್ಚಾಗುತ್ತಾರೆ. ಇದೀಗ ಚಿನ್ನದ ಬೆಲೆ ಏರಿಕೆಯಾಗುತ್ತಿರುವುದು ಸಹಜವಾಗಿಯೇ ಗ್ರಾಹಕರು ಕಂಗಾಲಾಗಿದ್ದಾರೆ. ಒಂದೇ ದಿನದಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 1,090 ರೂ. ಏರಿಕೆಯಾಗಿದೆ. ಅತ್ತ ಬೆಳ್ಳಿ ದರದಲ್ಲಿ (Silver Price) ಕೂಡ ಇದ್ದಕ್ಕಿದ್ದಂತೆ ಭಾರೀ ಏರಿಕೆಯಾಗಿದ್ದು, ನಿನ್ನೆಗಿಂತ ಇಂದು 2,200 ರೂ. ಹೆಚ್ಚಳವಾಗಿದೆ.

ದಾಖಲೆಯ ಮೊತ್ತಕ್ಕೇರಿದ್ದ ಚಿನ್ನದ ದರ ಎರಡು ದಿನಗಳಿಂದ ಭಾರೀ ಇಳಿಮುಖವಾಗಿತ್ತು. 2 ದಿನಗಳಿಂದ ಹೆಚ್ಚಳವಾಗಿದ್ದ ಬಂಗಾರದ ಬೆಲೆ ಇದೀಗ ಮತ್ತೆ ಕುಸಿತ ಕಂಡಿತ್ತು. ಆದರೆ, ಇದೀಗ 10 ಗ್ರಾಂ ಚಿನ್ನಕ್ಕೆ 1,090 ರೂ. ಏರಿಕೆಯಾಗಿದೆ. ನಿನ್ನೆ ಭಾರತದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 46,700 ರೂ. ಇದ್ದುದು ಇಂದು 47,700 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 50,950 ರೂ. ಇದ್ದುದು 52,040 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 48,800 ರೂ, ಮುಂಬೈ- 47,700 ರೂ, ದೆಹಲಿ- 47,700 ರೂ, ಕೊಲ್ಕತ್ತಾ- 47,700 ರೂ, ಬೆಂಗಳೂರು- 47,700 ರೂ, ಹೈದರಾಬಾದ್- 47,700 ರೂ, ಕೇರಳ- 47,700 ರೂ, ಪುಣೆ- 47,780 ರೂ, ಮಂಗಳೂರು- 47,700 ರೂ, ಮೈಸೂರು- 47,700 ರೂ. ಇದೆ.

ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ: ಚೆನ್ನೈ- 53,240 ರೂ, ಮುಂಬೈ- 52,040 ರೂ, ದೆಹಲಿ- 52,040 ರೂ, ಕೊಲ್ಕತ್ತಾ- 52,040 ರೂ, ಬೆಂಗಳೂರು- 52,040 ರೂ, ಹೈದರಾಬಾದ್- 52,040 ರೂ, ಕೇರಳ- 52,040 ರೂ, ಪುಣೆ- 52,090 ರೂ, ಮಂಗಳೂರು- 52,040 ರೂ, ಮೈಸೂರು- 52,040 ರೂ. ಇದೆ.

ಇಂದಿನ ಬೆಳ್ಳಿಯ ದರ: ಬೆಳ್ಳಿ ಬೆಲೆಯಲ್ಲಿ ನಿನ್ನೆಗಿಂತ ಇಂದು ವಿಪರೀತ ಏರಿಕೆಯಾಗಿದೆ. ನಿನ್ನೆಗಿಂತ ಇಂದು 1 ಕೆಜಿ ಬೆಳ್ಳಿಗೆ 2,200 ರೂ. ಏರಿಕೆಯಾಗಿದೆ. ಭಾರತದಲ್ಲಿ 1 ಕೆಜಿ ಬೆಳ್ಳಿ ದರ 65,000 ರೂ. ಇದ್ದುದು 67,200 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 72,100 ರೂ, ಮೈಸೂರು- 72,100 ರೂ., ಮಂಗಳೂರು- 72,100 ರೂ., ಮುಂಬೈ- 67,200 ರೂ, ಚೆನ್ನೈ- 72,100 ರೂ, ದೆಹಲಿ- 67,200 ರೂ, ಹೈದರಾಬಾದ್- 72,100 ರೂ, ಕೊಲ್ಕತ್ತಾ- 67,200 ರೂ. ಇದೆ.

ಇದನ್ನೂ ಓದಿ: Gold Price Today: ದಾಖಲೆಯ ಮಟ್ಟಕ್ಕೇರಿದ ಚಿನ್ನದ ಬೆಲೆ; ಒಂದೇ ದಿನದಲ್ಲಿ 1,700 ರೂ. ಏರಿಕೆ ಕಂಡ ಬೆಳ್ಳಿ ದರ

Gold Price Today: ಮತ್ತೆ ಕುಸಿತ ಕಂಡ ಚಿನ್ನದ ಬೆಲೆ; ಇಂದಿನ ಬೆಳ್ಳಿ ದರ ಹೀಗಿದೆ

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್