Gold Price Today: ಗಗನಕ್ಕೇರುತ್ತಿರುವ ಚಿನ್ನದ ಬೆಲೆ; ಬೆಳ್ಳಿ ದರ ಒಂದೇ ದಿನದಲ್ಲಿ 1,100 ರೂ. ಹೆಚ್ಚಳ
ಒಂದೇ ದಿನದಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 660 ರೂ. ಏರಿಕೆಯಾಗಿದೆ. ಅತ್ತ ಬೆಳ್ಳಿ ದರದಲ್ಲಿ ಕೂಡ ಭಾರೀ ಹೆಚ್ಚಳವಾಗುತ್ತಿದ್ದು, ನಿನ್ನೆಗಿಂತ ಇಂದು 1,100 ರೂ. ಏರಿಕೆಯಾಗಿದೆ.
Gold and Silver Rate: ಭಾರತದಲ್ಲಿ 2 ದಿನಗಳಿಂದ ಕಡಿಮೆಯಾಗಿದ್ದ ಚಿನ್ನದ ಬೆಲೆ ಇದೀಗ ಮತ್ತೆ ಏರಿಕೆಯಾಗುತ್ತಿದೆ. ರಷ್ಯಾ-ಉಕ್ರೇನ್ ಯುದ್ಧದಿಂದ ಚಿನ್ನದ ಬೆಲೆ (Gold Rate) ಇನ್ನೂ ಹೆಚ್ಚಾಗುವ ಆತಂಕ ಎದುರಾಗಿದೆ. ಮಾರ್ಚ್ನಿಂದ ಮೇ ತಿಂಗಳವರೆಗೂ ಶುಭ ಸಮಾರಂಭಗಳು ಹೆಚ್ಚಾಗಿರುವುದರಿಂದ ಚಿನ್ನ ಕೊಳ್ಳುವವರೂ ಹೆಚ್ಚಾಗುತ್ತಾರೆ. ಇದೀಗ ಚಿನ್ನದ ಬೆಲೆ ಏರಿಕೆಯಾಗುತ್ತಿರುವುದು ಸಹಜವಾಗಿಯೇ ಜನರಿಗೆ ದೊಡ್ಡ ಹೊರೆಯಾಗಿದೆ. ಒಂದೇ ದಿನದಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 660 ರೂ. ಏರಿಕೆಯಾಗಿದೆ. ಅತ್ತ ಬೆಳ್ಳಿ ದರದಲ್ಲಿ (Silver Price) ಕೂಡ ಭಾರೀ ಹೆಚ್ಚಳವಾಗುತ್ತಿದ್ದು, ನಿನ್ನೆಗಿಂತ ಇಂದು 1,100 ರೂ. ಏರಿಕೆಯಾಗಿದೆ.
ದಾಖಲೆಯ ಮೊತ್ತಕ್ಕೇರಿದ್ದ ಚಿನ್ನದ ದರ ಎರಡು ದಿನಗಳಿಂದ ಭಾರೀ ಇಳಿಮುಖವಾಗಿತ್ತು. ಇದೀಗ ಮತ್ತೆ ಬಂಗಾರದ ಬೆಲೆ ಏರಿಕೆಯಾಗುತ್ತಿದ್ದು, ಇದೇ ಪರಿಸ್ಥಿತಿ ಮುಂದುವರೆದರೆ ಈ ವರ್ಷಾಂತ್ಯದ ವೇಳೆಗೆ ಚಿನ್ನದ ಬೆಲೆ 60,000 ರೂ. ಗಡಿ ದಾಟುವ ಸಾಧ್ಯತೆಯಿದೆ. ನಿನ್ನೆ ಭಾರತದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 46,340 ರೂ. ಇದ್ದುದು ಇಂದು 47,000 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 50,560 ರೂ. ಇದ್ದುದು 51,280 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ನಿರ್ಣಾಯಕವಾಗುತ್ತದೆ.
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 47,820 ರೂ, ಮುಂಬೈ- 47,000 ರೂ, ದೆಹಲಿ- 47,000 ರೂ, ಕೊಲ್ಕತ್ತಾ- 47,000 ರೂ, ಬೆಂಗಳೂರು- 47,000 ರೂ, ಹೈದರಾಬಾದ್- 47,000 ರೂ, ಕೇರಳ- 47,000 ರೂ, ಪುಣೆ- 47,100 ರೂ, ಮಂಗಳೂರು- 47,000 ರೂ, ಮೈಸೂರು- 47,000 ರೂ. ಇದೆ.
ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ: ಚೆನ್ನೈ- 52,170 ರೂ, ಮುಂಬೈ- 51,280 ರೂ, ದೆಹಲಿ- 51,280 ರೂ, ಕೊಲ್ಕತ್ತಾ- 51,280 ರೂ, ಬೆಂಗಳೂರು- 51,280 ರೂ, ಹೈದರಾಬಾದ್- 51,280 ರೂ, ಕೇರಳ- 51,280 ರೂ, ಪುಣೆ- 51,300 ರೂ, ಮಂಗಳೂರು- 51,280 ರೂ, ಮೈಸೂರು- 51,280 ರೂ. ಇದೆ.
ಇಂದಿನ ಬೆಳ್ಳಿಯ ದರ: ಬೆಳ್ಳಿ ಬೆಲೆಯಲ್ಲಿ ನಿನ್ನೆಗಿಂತ ಇಂದು ಭಾರೀ ಏರಿಕೆ ಕಂಡುಬಂದಿದೆ. ನಿನ್ನೆಗಿಂತ ಇಂದು 1 ಕೆಜಿ ಬೆಳ್ಳಿಗೆ 1,100 ರೂ. ಏರಿಕೆಯಾಗಿದೆ. ಭಾರತದಲ್ಲಿ 1 ಕೆಜಿ ಬೆಳ್ಳಿ ದರ 64,100 ರೂ. ಇದ್ದುದು 65,200 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 69,900 ರೂ, ಮೈಸೂರು- 69,900 ರೂ., ಮಂಗಳೂರು- 69,900 ರೂ., ಮುಂಬೈ- 65,200 ರೂ, ಚೆನ್ನೈ- 69,900 ರೂ, ದೆಹಲಿ- 65,200 ರೂ, ಹೈದರಾಬಾದ್- 69,900 ರೂ, ಕೊಲ್ಕತ್ತಾ- 65,200 ರೂ. ಇದೆ.
ಇದನ್ನೂ ಓದಿ: Gold Price Today: ಭಾರೀ ಕುಸಿತಗೊಂಡ ಚಿನ್ನದ ದರ; 1,500 ರೂ. ಕುಸಿತಗೊಂಡ ಬೆಳ್ಳಿ ಬೆಲೆ
Gold Price Today: ದಾಖಲೆಯ ಮಟ್ಟಕ್ಕೇರಿದ ಚಿನ್ನದ ಬೆಲೆ; ಒಂದೇ ದಿನದಲ್ಲಿ 1,700 ರೂ. ಏರಿಕೆ ಕಂಡ ಬೆಳ್ಳಿ ದರ