ಉಕ್ರೇನ್​ನಲ್ಲಿ ಪ್ರಸ್ತುತ ಸ್ಥಿತಿ ಹೇಗಿದೆ? ಅಲ್ಲಿಂದ ಪಾರಾಗಿದ್ದು ಹೇಗೆ? ಕರ್ನಾಟಕ ವಿದ್ಯಾರ್ಥಿಗಳು ಹಂಚಿಕೊಂಡ ಮಾಹಿತಿ ಇಲ್ಲಿದೆ

Russia Ukraine War | Operation Ganga: ಉಕ್ರೇನ್​ನಿಂದ ಕರ್ನಾಟಕದ 190ಕ್ಕೂ ಅಧಿಕ ವಿದ್ಯಾರ್ಥಿಗಳು ಮರಳಿದ್ದಾರೆ. ಇತ್ತೀಚೆಗೆ ಆಗಮಿಸಿದ ವಿದ್ಯಾರ್ಥಿಗಳು ಅಲ್ಲಿನ ಸ್ಥಿತಿ ಹಾಗೂ ಗಡಿ ತಲುಪಲು ಅವರು ಪಟ್ಟ ಕಷ್ಟ, ಇನ್ನೂ ಅಲ್ಲಿ ಸಿಲುಕಿರುವ ವಿದ್ಯಾರ್ಥಿಗಳು.. ಮೊದಲಾದ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ರಷ್ಯಾದ ದಾಳಿಯಲ್ಲಿ ಮೃತಪಟ್ಟ ನವೀನ್ ಬಗ್ಗೆಯೂ ವಿದ್ಯಾರ್ಥಿಗಳು ಮಾತನಾಡಿದ್ದಾರೆ. ಈ ಕುರಿತ ವಿಸ್ತೃತ ಮಾಹಿತಿ ಇಲ್ಲಿದೆ.

ಉಕ್ರೇನ್​ನಲ್ಲಿ ಪ್ರಸ್ತುತ ಸ್ಥಿತಿ ಹೇಗಿದೆ? ಅಲ್ಲಿಂದ ಪಾರಾಗಿದ್ದು ಹೇಗೆ? ಕರ್ನಾಟಕ ವಿದ್ಯಾರ್ಥಿಗಳು ಹಂಚಿಕೊಂಡ ಮಾಹಿತಿ ಇಲ್ಲಿದೆ
ಸಾಂಕೇತಿಕ ಚಿತ್ರ
Follow us
TV9 Web
| Updated By: shivaprasad.hs

Updated on:Mar 04, 2022 | 2:05 PM

ಉಕ್ರೇನ್​ನಲ್ಲಿ (Ukraine Crisis) ಸಿಲುಕಿರುವ ಭಾರತೀಯರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಇದಕ್ಕೆ ಭಾರತೀಯ ವಾಯುಪಡೆಯೂ ಕೈಜೋಡಿಸಿದೆ. ಉಕ್ರೇನ್​ನಿಂದ ಭಾರತೀಯರನ್ನು ಕರೆತರುವ ಯೋಜನೆಗೆ ‘ಆಪರೇಷನ್ ಗಂಗಾ’ (Operation Ganga) ಎಂದು ಹೆಸರಿಡಲಾಗಿದೆ. ಇದರ ಭಾಗವಾಗಿ ಸಾವಿರಾರು ವಿದ್ಯಾರ್ಥಿಗಳು ಭಾರತಕ್ಕೆ ಆಗಮಿಸಿದ್ದಾರೆ. 190ಕ್ಕೂ ಹೆಚ್ಚು ಕನ್ನಡಿಗ ವಿದ್ಯಾರ್ಥಿಗಳು ತವರಿಗೆ ಮರಳಿದ್ದಾರೆ. ಇಂದು ಮತ್ತಷ್ಟು ಜನರು ಆಗಮಿಸಲಿದ್ದಾರೆ. ಸುಪ್ರೀಂ ಕೋರ್ಟ್​ಗೆ ಮಾಹಿತಿ ನೀಡಿರುವ ಕೇಂದ್ರ ಸರ್ಕಾರವು ಈವರೆಗೆ ಉಕ್ರೇನ್​ನಿಂದ ಒಟ್ಟಾರೆ 17,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದೆ. ಉಕ್ರೇನ್​ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಮನೆಗಳೊಂದಿಗೆ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿರಬೇಕು ಎಂದು ರಾಜ್ಯ ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಈ ಕುರಿತು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿರುವ ಅವರು, ಉಕ್ರೇನ್​ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಹೋಗಬೇಕು. ಆ ವಿದ್ಯಾರ್ಥಿಗಳ ಕುಟುಂಬದ ನಿರಂತರ ಸಂಪರ್ಕದಲ್ಲಿ ಇರಬೇಕು. ಅವರಿಂದ ವಿದ್ಯಾರ್ಥಿಗಳ ಎಲ್ಲಾ ಮಾಹಿತಿ ಪಡೆದುಕೊಳ್ಳಬೇಕು ಎಂದು ಡಿಸಿಗಳಿಗೆ ಸೂಚನೆ ಕೊಡಲಾಗಿದೆ. ಸೋಮವಾರ ಎಲ್ಲಾ ಮಾಹಿತಿಯನ್ನು ಕಂದಾಯ ಇಲಾಯಿಂದ ಕೊಡುತ್ತೇವೆ ಎಂದು ಆರ್.ಅಶೋಕ್ ಹೇಳಿದ್ದಾರೆ. ಉಕ್ರೇನ್​ನಿಂದ ಕರ್ನಾಟಕಕ್ಕೆ ಆಗಮಿಸಿರುಬವ ವಿದ್ಯಾರ್ಥಿಗಳು ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

  1. ಉಕ್ರೇನ್​ನಲ್ಲಿ ಸಿಲುಕಿದ್ದ ಬಳ್ಳಾರಿಯ ಒಂದೇ ಕುಟುಂಬದ ಮೂವರು ವಿದ್ಯಾರ್ಥಿಗಳು ಮರಳಿ ಮನೆಗೆ ಆಗಮಿಸಿದ್ದಾರೆ. ಅವರು ಮಾತನಾಡಿ, ‘‘ನಾವೂ ಬದುಕಿ ಬರುತ್ತೇವೆ ಎಂಬ ನಂಬಿಕೆ ಇರಲಿಲ್ಲ. ಯುದ್ದ ಆರಂಭವಾದ ಮೊದಲ ಮೂರು ದಿನಗಳ ಕಾಲ ಪರಿಸ್ಥಿತಿ ಸರಿಯಿತ್ತು. 4-5ನೇ ದಿನ ನಮಗೆ ಸಾಕಷ್ಟು ಭಯವಾಗಿತ್ತು. ಬಂಕರ್​ನಲ್ಲಿ ಅಶ್ರಯ ಪಡೆದುಕೊಂಡು ಬದುಕಿ ಬಂದಿದ್ದೇವೆ. ಬಂಕರ್​ನಲ್ಲಿದ್ದಾಗಲೂ ಹೊರಗೆ ಬಾಂಬ್‌, ಗುಂಡಿನ ದಾಳಿ ನಿರಂತರವಾಗಿ ಇತ್ತು. ಭಾರತದ ವಿದ್ಯಾರ್ಥಿಗಳಿಗೆ ಪಾಸ್ ಪೋರ್ಟ್ ಪರಿಶೀಲನೆ ಮಾಡಿ ಬಿಟ್ಟರು. ಯುದ್ದ ಆರಂಭಕ್ಕೂ ಮುನ್ನ ಬರಬೇಕು ಅಂದ್ರೆ, ಯೂನಿವರ್ಸಿಟಿಯವರು ಯುದ್ದ ಆಗಲ್ಲ ಅಂತಾ ಭರವಸೆ ನೀಡಿದ್ದರು. ಹೀಗಾಗಿ ಬರಲಿಲ್ಲ. ಉಕ್ರೇನ್​ನಲ್ಲಿ ಇನ್ನೂ ಸಾಕಷ್ಟು ವಿದ್ಯಾರ್ಥಿಗಳು ಸಿಲುಕಿದ್ದಾರೆ. ಅವರನ್ನು ಬೇಗ ಕರೆತರಲಿ’’ ಎಂದಿದ್ದಾರೆ.
  2. ಉಕ್ರೇನ್‌ದಿಂದ ನೂರಾರು ವಿದ್ಯಾರ್ಥಿಗಳು ಹಂಗೇರಿಗೆ ಆಗಮಿಸಿದ್ದು, ಬುಡಾಪೆಸ್ಟ್ ವಿಮಾನ ನಿಲ್ದಾಣದಲ್ಲಿ ಆಶ್ರಯ ಪಡೆದಿದ್ದಾರೆ. ಅಲ್ಲಿ ಭಾರತೀಯ ರಾಯಭಾರ ಕಚೇರಿಯಿಂದ ಆಶ್ರಯ ನೀಡಿದೆ. ಈ ಆಶ್ರಯ ತಾಣದಲ್ಲಿನ ವ್ಯವಸ್ಥೆಗಳ‌ ಬಗ್ಗೆ ಧಾರವಾಡ ಮೂಲದ ಮಂಜುನಾಥ ಹೊಸಮನಿ ವಿಡಿಯೋ ಹಂಚಿಕೊಂಡಿದ್ದಾರೆ. ಆಶ್ರಯ ತಾಣದಲ್ಲಿ ಅವರು ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದು, ಈ ವೇಳೆ ಕನ್ನಡಿಗರನ್ನು ಗುರುತಿಸಿ ಧೈರ್ಯ ತುಂಬುತ್ತಿದ್ದಾರೆ.
  3. ಉಕ್ರೇನ್​ನಲ್ಲಿ ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿದ್ದ ದಾವಣಗೆರೆ ಮೂಲದ ವಿನಯ್ ಕಲ್ಲಿಹಾಳ್ ಟಿವಿ9 ಜತೆ ಮಾತನಾಡಿ, ರಷ್ಯಾ ದಾಳಿಯಲ್ಲಿ ಮೃತಪಟ್ಟ ನವೀನ್ ಅವರನ್ನು ಸ್ಮರಿಸಿದ್ದಾರೆ. ನವೀನ್ ನನ್ನ ನಾವು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಆತ ಸಾವನ್ನಪ್ಪಿದ್ದಾಗ ನಾವು ರೈಲಿನಲ್ಲಿ ಇದ್ದೆವು. ವಿಚಾರ ಗೊತ್ತಾಗಿ ತೀವ್ರ ಬೇಸರವಾಗಿದೆ ಎಂದು ಅವರು ಹೇಳಿದ್ದಾರೆ.
  4. ಉಕ್ರೇನ್​ನಲ್ಲಿನ ಸದ್ಯದ ಪರಿಸ್ಥಿತಿಯ ಬಗ್ಗೆ ತಿಳಿಸಿದ ಅವರು, ಅಲ್ಲಿ ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ಕೇಂದ್ರ ಮಾಜಿ ಸಚಿವ ದಿವಂಗತ ಅನಂತಕುಮಾರ್ ಪುತ್ರಿ ವಿಜೇತಾ ನಮಗೆ ತುಂಬಾನೇ ಸಹಾಯ ಮಾಡಿದರು. ಭಾರತೀಯ ರಾಯಭಾರ ಕಚೇರಿ ಜೊತೆಗೆ ವಿಜೇತಾ ಅವರಿಂದ ನಾವು ಭಾರತಕ್ಕೆ ಬರುವಂತೆ ಆಗಿದೆ. ಕಳೆದ ಎಂಟು ದಿನಗಳಿಂದ ನಾವು ಅನುಭವಿಸಿದ ಯಾತನೆ ಕೊನೆಯಾಗಿದೆ. ಬೆಂಗಳೂರನಲ್ಲಿಯೇ ಇದ್ದು ಉಕ್ರೇನ್​ನಲ್ಲಿ ಇರುವ ಭಾರತೀಯ ವಿಶೇಷವಾಗಿ ಕರ್ನಾಟಕದ ವಿದ್ಯಾರ್ಥಿಗಳನ್ನ ಸ್ವದೇಶಕ್ಕೆ ಕರೆ ತರಲು ವಿಜೇತಾ ಅನಂತಕುಮಾರ ನಿರಂತರ ಪ್ರಯತ್ನ ಮಾಡಿದ್ದಾರೆ. ಅವರ ಸಹಾಯ ಮರೆಯವಂತಿಲ್ಲ ಎಂದಿದ್ದಾರೆ ವಿನಯ್.
  5. ಹಾವೇರಿ ಜಿಲ್ಲೆ ಹಾನಗಲ್ ಪಟ್ಟಣದ ವೈದ್ಯಕೀಯ ವಿದ್ಯಾರ್ಥಿನಿ ಶಿವಾನಿ ಮಡಿವಾಳರ ಮನೆಗೆ ವಾಪಸ್ಸಾಗಿದ್ದಾರೆ. ಉಕ್ರೇನ್​ನಲ್ಲಿನ‌ ಪರಿಸ್ಥಿತಿ ಬಿಚ್ಚಿಟ್ಟ ಶಿವಾನಿ, ಯುದ್ಧ ಪ್ರಾರಂಭವಾಗುವ ಮಾಹಿತಿ ಇರಲಿಲ್ಲ. ಯೂನಿವರ್ಸಿಟಿಯವರು ಕೊನೆ ಗಳಿಗೆಯಲ್ಲಿ ಮಾಹಿತಿ ನೀಡಿದ್ದರು. ನನಗೆ ಪ್ಲೈಟ್ ಬುಕ್ ಆಗಿ ಕ್ಯಾನಸಲ್ ಆಗಿತ್ತು. ವಾರ್ ಪ್ರಾರಂಭ ಆಗುತ್ತಿದ್ದಂತೆ ಪ್ಲೈಟ್ ಕ್ಯಾನ್ಸಲ್ ಆಗಿ ಭಯ ಹುಟ್ಟಿತು ಎಂದಿದ್ದಾರೆ. ನವೀನ್ ಬ್ಯಾಚ್​ಮೇಟ್ ಆಗಿದ್ದರು. ಓದಿಗೆ ಸಹಾಯ ಮಾಡುತ್ತಿದ್ದರು. ಬಹಳ ಓದುತ್ತಿದ್ದರು. ಆತ ಮೃತಪಟ್ಟಿಲ್ಲ ನಮ್ಮ ಜೊತೆಗಿದ್ದಾನೆ ಎಂದು ಶಿವಾನಿ ಹೇಳಿದ್ದಾರೆ. ಅಲ್ಲಿ ಬಾಕಿ ಉಳಿದ ವಿದ್ಯಾರ್ಥಿಗಳನ್ನು ಕರೆತರಬೇಕು ಎಂದೂ ಶಿವಾನಿ ಕೋರಿಕೊಂಡಿದ್ದಾರೆ.
  6. ಕೊಡಗಿಗೆ ಸುರಕ್ಷಿತವಾಗಿ ಆಗಮಿಸಿದ ವಿದ್ಯಾರ್ಥಿ ಕುಶಾಲನಗರ ತಾಲ್ಲೂಕಿನ ಕೂಡ್ಲೂರು ಗ್ರಾಮದ ಚಂದನ್, ‘ಬಹಳ ಕಷ್ಟದ ದಿನಗಳನ್ನ ಎದುರಿಸಿ ಬಂದಿದ್ದೇನೆ. ಜೀವಂತವಾಗಿ ಬರುತ್ತೇನೋ ಇಲ್ವೋ ಅಂತ ಭಯವಾಗಿತ್ತು. ಕೊನೆಗೂ ಸುರಕ್ಷಿತವಾಗಿ ಬಂದಿರುವುದು ಖುಷಿಯಾಗಿದೆ’ ಎಂದಿದ್ದಾರೆ. ಮೃತ ನವೀನ್ ಮತ್ತು ನಾವೆಲ್ಲಾ ಒಟ್ಟಿಗೇ ಇದ್ದೆವು. ಆತನ ಸಾವು ಬಹಳ ಆಘಾತ ತಂದಿದೆ. ಜನವಸತಿ ಪ್ರದೇಶಗಳನ್ನ ಟಾರ್ಗೆಟ್ ಮಾಡಿ ರಷ್ಯಾ ದಾಳಿ ನಡೆಸುತ್ತಿದೆ. ಉಕ್ರೇನ್ ಪರಿಸ್ಥಿತಿ ಬಹಳ ಗಂಭೀರವಾಗಿದೆ. ಖಾರ್ಕಿವ್​ನಲ್ಲಿ ಬಹಳಷ್ಟು ವಿದ್ಯಾರ್ಥಿಗಳು ಇನ್ನೂ ಅಪಾಯದಲ್ಲಿದ್ದಾರೆ. ಅವರನ್ನು ರಕ್ಷಿಸುವ ಕೆಲಸ ಆದಷ್ಟು ಬೇಗ ಆಗಲಿ ಎಂದು ಚಂದನ್ ಹೇಳಿದ್ದಾರೆ.
  7. ಉಕ್ರೇನ್​ನಲ್ಲಿ ಮೃತಪಟ್ಟ ನವೀನ್ ಜೂನಿಯರ್ ತಿಪಟೂರು ಮೂಲದ ವಿದ್ಯಾರ್ಥಿನಿ ಶೀತಲ್ ಮಾತನಾಡಿ, ನವೀನ್ ಜೂನಿಯರ್ ವಿದ್ಯಾರ್ಥಿಗಳನ್ನೆಲ್ಲರನ್ನೂ ಪ್ರೀತಿಯಿಂದ ಕಾಣುತ್ತಿದ್ದ. ನಮ್ಮ ಸೀನಿಯರ್, ಒಳ್ಳೆಯ ಸ್ನೇಹಿತನನ್ನು ಕಳೆದುಕೊಂಡಿದ್ದೇವೆ. ಎಂದಾದರೂ ಒಂದು ದಿನ ಹೊರಬರಲೇಬೇಕೆಂದು ಸ್ವಂತ ರಿಸ್ಕ್​ನಲ್ಲಿ ನಾವು ಕೀವ್ ಸಿಟಿಯಿಂದ ಗಡಿಗೆ ಬಂದೆವು ಎಂದು ಹೇಳಿದ್ದಾರೆ.
  8. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಗಡಿಗೆ ತೆರಳಲು ನೂರಾರು ಕಿ.ಮೀ.ಅಂತರ ಇದೆ. ಮಿಸೈಲ್ ದಾಳಿ ನಡುವೆ ಧೈರ್ಯ ಮಾಡಿ ಹೊರ ಬಂದಿದ್ದೇವೆ. ಕೆಲವರು ಮೆಟ್ರೋ ಸ್ಟೇಷನ್​ನಲ್ಲಿ ಟನಲ್​ನಲ್ಲಿ ನಡೆದುಕೊಂಡು ಬಂದಿದ್ದಾರೆ. ಉಕ್ರೇನ್ ‌ಸೈನಿಕರೂ ಕೂಡ ನಮಗೆ ತೊಂದರೆ ಕೊಡುತ್ತಿದ್ದರು. ಕಾರಣ, ಮೊದಲು ಅವರ ಪ್ರಜೆಗಳನ್ನು ರಕ್ಷಣೆ ಮಾಡಬೇಕು, ನಮ್ಮ ಸೈನಿಕರು ಆದರೂ ಹಾಗೇ ಮಾಡುತ್ತಿದ್ದರು ಎಂದಿದ್ದಾರೆ ಶೀತಲ್. ಒಟ್ಟಾರೆ 31 ಗಂಟೆ ಟ್ರೈನ್ ಜರ್ನಿ ಮಾಡಿದ್ದೇವೆ. ಇಂಡಿಯಾ ಎಂಬೆಸಿ ಯಾವುದೇ ಸಹಾಯ ಮಾಡಲಿಲ್ಲ. ನಾವೇ ಪ್ರೈವೇಟ್ ಟ್ಯಾಕ್ಸಿ, ಕಾರುಗಳನ್ನು ಮಾಡಿಕೊಂಡು ಬಂದೆವು. ಪೋಲಂಡ್​ನಿಂದ ಭಾರತದ ಸಹಾಯ ಸಿಕ್ಕಿತು. ಖಾರ್​ಕೀವ್​ನಲ್ಲಿ 1000ಕ್ಕೂ ಹೆಚ್ಚು ಜನರು ಸಿಲುಕಿದ್ದಾರೆ. ಯುದ್ಧಸ್ಥಳದಿಂದ ವಿದ್ಯಾರ್ಥಿಗಳನ್ನು ಕರೆತನ್ನಿ ಎಂದು ಶೀತಲ್ ಹೇಳಿದ್ದಾರೆ.
  9. ಉಕ್ರೇನ್​ನಿಂದ ಮರಳಿದ ಭೂಮಿಕಾ ಮಾತನಾಡಿ, ನಾನು ಕೀವ್​ನಲ್ಲಿ ಇದ್ದೆ. ಉಕ್ರೇನ್​ನಿಂದ ಪೋಲೆಂಡ್​ಗೆ ಬರಲು ಸರ್ಕಾರದ ಸಹಾಯ‌ ಇಲ್ಲ. ರೈಲ್ವೆ ಸ್ಟೇಷನ್​ನಲ್ಲಿ ಎರಡು ದಿನ ಕುಳಿತಿದ್ದೆವು. ಉಕ್ರೇನ್ ಬಿಟ್ಟು ಬರೋವರೆಗೂ ಯಾರು ಸಹಾಯ ಮಾಡಿಲ್ಲ. ರೈಲ್ವೆ ಸ್ಟೇಷನ್​ನಲ್ಲಿ ಭಾರತೀಯರಿಗೆ ಉಕ್ರೇನ್ ಅವರು ಅವಕಾಶ ಮಾಡಿಕೊಡಲಿಲ್ಲ. 12 ಗಂಟೆಗಳ ಕಾಲ ರೈಲ್ವೆನಲ್ಲಿ ನಿಂತಕೊಂಡು ಬಂದೆವು. ಕಾರ್ಕೀವ್​ನಲ್ಲಿ ವಿದ್ಯಾರ್ಥಿಗಳು ಇನ್ನೂ ತುಂಬಾ ಸಂಕಷ್ಟದಲ್ಲಿ ಇದ್ದಾರೆ. ಅವರನ್ನು ಅದಷ್ಟು ಬೇಗ ರಕ್ಷಣೆ ಮಾಡಿ ಎಂದು ಮನವಿ ಮಾಡಿದ್ದಾರೆ.
  10. ಉಕ್ರೇನ್ ಕೀವ್ ಸಿಟಿಯಿಂದ ಬೆಂಗಳೂರಿಗೆ ಮರಳಿದ ವಿದ್ಯಾರ್ಥಿನಿ ಐಮನ್ ಬೂಶ್ರ ಮಾತನಾಡಿ, ನಾಲ್ಕೈದು ದಿ‌ನಗಳ ಕಾಲ ಬಂಕರ್​ಗಳಲ್ಲಿ ಅವಿತಿದ್ದೆವು. ಸೈರನ್ ಕೂಗಿ ಕೇಳಿದ ತಕ್ಷಣ ಹೋಗಿ ಬಂಕರ್​ ಸೇರಬೇಕಾಗಿತ್ತು. ಒಮ್ಮೆಗೆ ನಾಲ್ಕೈದು ದಿನಕ್ಕೆ ಬೇಕಾಗುವಷ್ಟು ಆಹಾರ ಸಂಗ್ರಹಿಸಬೇಕಿತ್ತು. ಯೂನಿವರ್ಸಿಟಿ ಸಿಬ್ಬಂದಿ ಜತೆಗೆ ಜಗಳ ಮಾಡಿಕೊಂಡು ಹೊರಬಂದೆವು. ದಾಳಿ ನಡೆದರೂ ಸರಿ ಎಂದಾದರೂ ಹೊರ ಬರಲೇಬೇಕಲ್ಲ, ಹಾಗಾಗಿ ನಾವೇ ಹೊರ ಬಂದೆವು. ಪರಿಸ್ಥಿತಿ ದಿನದಿಂದ ದಿನಕ್ಕೆ ಸೂಕ್ಷ್ಮವಾಗುತ್ತಿದೆ.
  11. ಸ್ಥಳೀಯ ಕೀವ್ ನಗರ ವಾಸಿಗಳು, ಪ್ರಮುಖವಾಗಿ ಮಹಿಳೆಯರು ಮಕ್ಕಳು ನಗರವನ್ನು ತೊರೆಯುತ್ತಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಗಡಿ ಪ್ರದೇಶಗಳಿಗೆ ತೆರಳಲು ಟ್ರೈನ್ ಬಳಿ ಸ್ಥಳೀಯರೇ ಕ್ಯೂ ನಿಂತಿರುತ್ತಾರೆ. ಇನ್ನೂ ಕೂಡ ಸಾವಿರಾರು ಸಂಖ್ಯೆಯಲ್ಲಿ ನಮ್ಮ ಭಾರತೀಯ ವಿದ್ಯಾರ್ಥಿಗಳು ಕೀವ್, ಖಾರ್ಕಿವ್ ನಗರದ ಯುನಿವರ್ಸಿಟಿಗಳಿಲ್ಲಿದ್ದಾರೆ. ಅವರೆಲ್ಲರನ್ನೂ ಎಂಬೆಸಿ ರೀಚ್ ಮಾಡಲು ಆಗ್ತಿಲ್ಲ, ಬಂಕರ್​ನಲ್ಲೂ ಉಳಿಯದೆ, ಹೊರಬರಲು ಆಗದ ಪರಿಸ್ಥಿತಿ ಇದೆ. ಈ ನಿಟ್ಟಿನಲ್ಲಿ ಸರ್ಕಾರ ಕೀವ್ ಮತ್ತು ಖಾರ್ಕೀವ್ ನಗರ ಹಾಗೂ ಉಕ್ರೇನ್ ಪೂರ್ವ ಭಾಗದವರನ್ನು ಸಂಪರ್ಕಿಸಬೇಕಿದೆ. ಗಡಿಭಾಗಕ್ಕೆ ಬಂದ ಬಳಿಕವಷ್ಟೇ ನಮಗೆ ಸರ್ಕಾರ ಹಾಗೂ ಎಂಬೆಸಿ ಸ್ಪಂದಿಸುತ್ತದೆ. ಅಲ್ಲಿವರೆಗೆ ಕಿ.ಮೀಗಟ್ಟಲೇ ಅತಿ ಚಳಿಯ ವಾತಾವರಣದಲ್ಲಿ ನಡೆದು ಬರಬೇಕು ಎಂದು ಕೆಐಎಎಲ್ ಏರ್ಪೋರ್ಟ್​ನಲ್ಲಿ ಎಂಬಿಬಿಎಸ್ ವಿದ್ಯಾರ್ಥಿನಿ ಐಮನ್ ಹೇಳಿದ್ದಾರೆ.

ಇದನ್ನೂ ಓದಿ:

Russia- Ukraine Crisis: ರಷ್ಯಾ- ಉಕ್ರೇನ್ ಬಿಕ್ಕಟ್ಟಿನಿಂದಾಗಿ 13 ವರ್ಷಗಳ ನಂತರ ಅತ್ಯಧಿಕ ಮಟ್ಟಕ್ಕೆ ಏರಿದ ಗೋಧಿ ಬೆಲೆ

Russia Ukraine War: ರಷ್ಯಾ- ಉಕ್ರೇನ್ ಕದನ; ಉಕ್ರೇನಿಯನ್ನರ ಪ್ರಸ್ತುತ ಸ್ಥಿತಿಯನ್ನು ವಿವರಿಸುತ್ತಿವೆ ಈ ಫೋಟೋಗಳು

Published On - 2:01 pm, Fri, 4 March 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್